ಒಕ್ಕಲಿಗರ ಕ್ಷೇಮಾಬಿವೃದ್ದಿ ಸಂಘದಿಂದ ರಾಜ್ಯೋತ್ಸವ ಆಚರಣೆ

ಮೈಸೂರು:ಮೈಸೂರಿನ ಹೂಟಗಳ್ಳಿ ಒಕ್ಕಲಿಗರ ಕ್ಷೇಮಾಬಿವೃದ್ದಿ ಸಂಘದ ವತಿಯಿಂದ ಕೆ.ಹೆಚ್.ಬಿ. ಬಡಾವಣೆ ಒವೆಲ್ ಉದ್ಯಾನವನದಲ್ಲಿ 70 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಸಂಘದ ಅಧ್ಯಕ್ಷ ರಾದ ಎನ್.ಟಿ. ದಾಸೇಗೌಡ ಅವರ ಅಧ್ಯಕ್ಷತೆಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮುಖ್ಯ ಅತಿಥಿಯಾಗಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡರು ಭಾಗವಹಿಸಿ ಧ್ವಜಾರೋಹಣ ಮಾಡಿದರು.

ಮತ್ತೊಬ್ಬ ಮುಖ್ಯ ಅತಿಥಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಿಕಾ ಸುರೇಶ್, ಜೆ.ಡಿ.ಎಸ್ ಮುಖಂಡರಾದ ಸುರೇಶ, ತಾಲೂಕು ಪಂಚಾಯಿತಿ ಸದಸ್ಯರಾದ ವಿಜಯಕುಮಾರ, ಪಂಚಾಯ್ತಿ ಸದಸ್ಯರಾದ ಸಿದ್ದರಾಜು (ಡೈರಿ )ಹಾಗೂ ಸಂಘದ ಎಲ್ಲಾ ಮಾಜಿ ಅಧ್ಯಕ್ಷರು, ಮಾಜಿ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು, ಸಂಘದ ಹಾಲಿ ಪದಾಧಿಕಾರಿಗಳು ಕೆ. ಹೆಚ್.ಬಿ.ಬಡಾವಣೆಯ ನಿವಾಸಿಗಳು ಹಾಗೂ ಕನ್ನಡ ಅಭಿಮಾನಿಗಳು ಭಾಗವಹಿಸಿದರು.

ಕಾರ್ಯಕ್ರಮದ ವೇಳೆ ಎಲ್ಲರಿಗೂ ಸಿಹಿ ವಿತರಣೆ ಮಾಡಲಾಯಿತು.

ಒಕ್ಕಲಿಗರ ಕ್ಷೇಮಾಬಿವೃದ್ದಿ ಸಂಘದಿಂದ ರಾಜ್ಯೋತ್ಸವ ಆಚರಣೆ Read More

ನೂತನ ಅಧ್ಯಕ್ಷರಾಗಿ ದಾಸೇಗೌಡ ಆಯ್ಕೆ

ಮೈಸೂರು: ಮೈಸೂರಿನ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಕೆ ಎಚ್‌ ಬಿ ಬಡಾವಣೆ ಹೂಟಗಳ್ಳಿ ಸಂಘದ ನೂತನ ಅಧ್ಯಕ್ಷರಾಗಿ ಎನ್ ಟಿ. ದಾಸೇಗೌಡರು ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರಾದ ದಾಸೇಗೌಡ ಅವರಿಗೆ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತಿತರಯ ಶುಭ ಕೋರಿದ್ದಾರೆ‌

ನೂತನ ಅಧ್ಯಕ್ಷರಾಗಿ ದಾಸೇಗೌಡ ಆಯ್ಕೆ Read More

ಸುದರ್ಶನ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮೈಸೂರು: ಮೈಸೂರಿನ ಹೂಟಗಳ್ಳಿಯ ಕೆ ಹೆಚ್ ಬಿ ಕಾಲೋನಿಯಲ್ಲಿರುವ ಸುದರ್ಶನ ವಿದ್ಯಾಸಂಸ್ಥೆಯಲ್ಲಿ 79 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಆಚರಿಸಿ ಧ್ವಜಾರೋಹಣ ನೆರವೇರಿಸಿ ನಂತರ
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎನ್.ಶ್ರೀನಿವಾಸನ್,ಸಮಾಜ ಸೇವಕರಾದ ಪುಷ್ಪ ಅಯ್ಯಂಗಾರ್,ವೈದೇಹಿ ಅಯ್ಯಂಗಾರ್ , ಪ್ರಕಾಶ್ ಎಂ.ಹೆಚ್ ಸೇರಿದಂತೆ ಶಾಲಾ ಆಡಳಿತ ಮಂಡಳಿ ಸದಸ್ಯರು,ಮಕ್ಕಳು ಉಪಸ್ಥಿತರಿದ್ದರು.

ಸುದರ್ಶನ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ Read More

ಹುಚ್ಚು ನಾಯಿತರವರ್ತಿಸುವ ದೇವರ ಬಸವನಿಗೆ ಬೇಕಿದೆ ಚಿಕಿತ್ಸೆ!

ಮೈಸೂರು: ಹುಚ್ಚು ನಾಯಿ ದೇವಾಲಯದ ಬಸವನಿಗೆ ಕಡಿದಿದ್ದು ಈಗ ಬಸವ ಕೂಡಾ ಅದೇ ವರ್ತಿಸುತ್ತಿದ್ದು,ಜನ ಹೊರ ಬರಲು ಹೆದರುತ್ತಿದ್ದಾರೆ.

ಇದು ಎಲ್ಲಿ ಅಂತೀರಾ,
ಮೈಸೂರಿನ ಮೇಟಗಳ್ಳಿಯಲ್ಲಿ ಜನರಿಗೆ ಇಂತಹ ಆತಂಕ ಎದುರಾಗಿಬಿಟ್ಟಿದೆ.

ಹೂಟಗಳ್ಳಿಯ ಮಹಾಲಿಂಗೇಶ್ವರ ದೇವಾಲಯಕ್ಕೆ ಸೇರಿದ ಬಸವನಿಗೆ ಹಾಗೂ ಇಲ್ಲಿನ ಜನತೆಗೆ ರಕ್ಷಣೆ ಬೇಕಿದೆ.

ಅಲ್ಲದೆ ಬಸವನಿಗೆ ಸೂಕ್ತ ವೈದ್ಯೋಪಚಾರವೂ ಬೇಕಿದೆ.

ಬಸವನಿಗೆ ಕೆಲ ದಿನಗಳ ಹಿಂದೆ ಹುಚ್ಚುನಾಯಿ ಕಡಿದಿದ್ದು,ಅದೂ ಕೂಡಾ ಹುಚ್ಚುನಾಯಿಯಂತೆ ವರ್ತಿಸುತ್ತಾ ಬೊಗಳುತ್ತಾ ಓಡಾಡುತ್ತಿದೆ.ಇದರಿಂದ‌ ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ಹೆದರಿತ್ತಿದ್ದಾರೆ.

ಬಸವನ ಹುಚ್ಚು ವರ್ತನೆ ಹೆಚ್ಚಾದ ಹಿನ್ನಲೆ ಸ್ಥಳೀಯರು ಅಪಾಯವನ್ನ ಲೆಕ್ಕಿಸದೆ ಹಿಡಿದು ಕಟ್ಟಿಹಾಕಿದ್ದಾರೆ.

ಹುಚ್ಚಾಗಿ ವರ್ತಿಸುತ್ತಿರುವ ಬಸವನಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಬೇಕಿದೆ

ಅದಕ್ಕಾಗಿ ಸ್ಥಳೀಯರು ಪಶು ವೈದ್ಯರ ನೆರವಿಗಾಗಿ ಹುಡುಕುತ್ತಿದ್ದಾರೆ.ವೈದ್ಯರು ಸಿಗದೆ,ಬಸವನ ಸ್ಥಿತಿಯನ್ನು ನೋಡಲಾಗದೆ ಮರುಗುತ್ತಿದ್ದಾರೆ‌

ಹುಚ್ಚುನಾಯಿಯಿಂದ ಕಡಿಸಿಕೊಂಡು ನಾಯಿಯಂತೆ ವರ್ತಿಸುತ್ತಿರುವ ಬಸವನಿಗೆ ಸೂಕ್ತ ಚಿಕಿತ್ಸೆ ಬೇಕಿದೆ.ಕೂಡಲೇ ಪಶು ವೈದ್ಯಕೀಯ ಇಲಾಖೆ ಇತ್ತ ಗಮನ ಹರಿಸಲಿ

ಓಓಓರೊಓಒಓಓಓಓ

ಹುಚ್ಚು ನಾಯಿತರವರ್ತಿಸುವ ದೇವರ ಬಸವನಿಗೆ ಬೇಕಿದೆ ಚಿಕಿತ್ಸೆ! Read More

ಸುದರ್ಶನ್ ವಿದ್ಯಾಸಂಸ್ಥೆಯ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಣೆ

ಮೈಸೂರು: ಮೈಸೂರಿನ ಕೆ ಹೆಚ್ ಬಿ ಕಾಲೋನಿ ಹೂಟಗಳ್ಳಿಯಲ್ಲಿರುವ ಸುದರ್ಶನ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಿಸಲಾಯಿತು.

ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾ.ಶ್ರೀನಿವಾಸ್ ಅವರು ವಿಧ್ಯಾರ್ಥಿಗಳಿಗೆ ತಲಾ 2000 ರೂ ವಿಧ್ಯಾರ್ಥಿ ವೇತನ ವಿತರಿಸಿದರು.

8 ನೇ ತರಗತಿಯ ವಿದ್ಯಾರ್ಥಿಗಳಾದ
ವಿಕಾಸ್ ಸಿ,ಸಹನಾ ವೈ.
9 ನೇ ತರಗತಿ ಯ ರತೇಶ್ ಎಂ,ತೇಜಸ್ವಿನಿ,
10 ನೇ ತರಗತಿಯ ರೋಹಿತ್ ಎಸ್,
ಸಾನಿತ್ಯ ಎಲ್ ಆರ್ ಅವರುಗಳು ವಿಧ್ಯಾರ್ಥಿ ವೇತನ ಪಡೆದುಕೊಂಡರು.

ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಣ ತಜ್ಞರಾದ ಮೇ ಹಾ ಪ್ರಕಾಶ್, ಹಾಗೂ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಹಾಜರಿದ್ದರು.

ಸುದರ್ಶನ್ ವಿದ್ಯಾಸಂಸ್ಥೆಯ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಣೆ Read More

ಮಕ್ಕಳಲ್ಲಿ ಯಾವುದೇ ಕಲ್ಮಶ ಇರಲ್ಲ:ಡಾ.ಎನ್.ಶ್ರೀನಿವಾಸನ್

ಮೈಸೂರು: ಮೈಸೂರಿನ ಹೂಟಗಳ್ಳಿಯ ಕೆ ಹೆಚ್ ಬಿ ಕಾಲೋನಿಯಲ್ಲಿರುವ ಸುದರ್ಶನ ವಿದ್ಯಾ ಸಂಸ್ಥೆಯಲ್ಲಿ ಶಾಲಾ ವಾರ್ಷಿಕ ದಿನಾಚರಣೆ ಹಮ್ಮಿಕೊಳ್ಳಲಾಯಿತು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ.ಎನ್.ಶ್ರೀನಿವಾಸನ್ ಅವರು ಮಾತಾಡಿ, ಮಕ್ಕಳೇ ದೇವರು ಅವರಲ್ಲಿ ಯಾವುದೇ ತರದ ಕಲ್ಮಶ ಇರುವುದಿಲ್ಲ ಎಂದು ತಿಳಿಸಿದರು.

ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡುವುದು ನಮ್ಮ ಉದ್ದೇಶವಾಗಿದೆ, ಮಕ್ಕಳಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಲು ಈ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕ್ರೀಡೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಮಕ್ಕಳೆಲ್ಲ ಭಾಗವಹಿಸುತ್ತಿರುವುದು ನೋಡಿ ತುಂಬಾ ಖುಷಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗುರುರಾಜ್ ರವಿ, ಶ್ರೀಮತಿ ಪುಷ್ಪಾ ಅಯ್ಯಂಗಾರ್, ವೈದೇಹಿ ಅಯ್ಯಂಗಾರ್, ಶಾಲಾ ಮುಖ್ಯೋಪಧ್ಯಾಯರಾದ ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.

ಮಕ್ಕಳಲ್ಲಿ ಯಾವುದೇ ಕಲ್ಮಶ ಇರಲ್ಲ:ಡಾ.ಎನ್.ಶ್ರೀನಿವಾಸನ್ Read More

ಪೌರಕಾರ್ಮಿಕರು ಆರೋಗ್ಯವಾಗಿದ್ದರೆ ಇಡೀ ನಗರ ಆರೋಗ್ಯ- ಜಿ ಟಿ ಡಿ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ಎಂದು ಶಾಸಕ ಜಿ ಟಿ ದೇವೇಗೌಡ ಹೇಳಿದರು.

ಈ ವಿಷಯದಲ್ಲಿ ನಿರ್ಲಕ್ಷ್ಯ ತೋರದೇ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರದ ಹೂಟಗಳ್ಳಿ ನಗರ ಸಭೆ ಆವರಣದಲ್ಲಿ
ಸಮೃದ್ಧಿ ಟ್ರಸ್ಟ್ , ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಎನ್ ಪಿ ಆಸ್ಪತ್ರೆ ಹಾಗೂ ಬಯೋ ಸ್ನೇಹಿ ಅವರ ಸಹಯೋಗದಲ್ಲಿ ಆಯೋಜಿಸಿದ್ದ
ಪೌರ ಕಾರ್ಮಿಕರಿಗೆ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಜಿಟಿಡಿ ಮಾತನಾಡಿದರು.

ಪೌರಕಾರ್ಮಿಕರು ನಗರವನ್ನು ಸ್ವಚ್ಛವಾಗಿಡುತ್ತಿರುವುದರಿಂದ ನಮ್ಮೆಲ್ಲರ ಆರೋಗ್ಯ ಉತ್ತಮವಾಗಿದೆ. ಪೌರ ಕಾರ್ಮಿಕರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದೆ, ಕೆಲಸದ ಒತ್ತಡ ದಲ್ಲಿ ಮಾಡುವ ಕೆಲವೊಂದು ನಿರ್ಲಕ್ಷ್ಯತನದಿಂದ ನಮ್ಮ ಆರೋಗ್ಯ ಹಾಳಾಗುತ್ತಿದೆ. ಪೌರಕಾರ್ಮಿಕರು ಆರೋಗ್ಯ ತಪಾ ಸಣೆ ಶಿಬಿರ ಗಳಿಗೆ ಸೀಮಿತವಾಗದೇ ನಿತ್ಯ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಹೇಳಿದರು.

ಪೌರಕಾರ್ಮಿಕರು ಆರೋಗ್ಯವಾಗಿದ್ದರೆ ಇಡೀ ನಗರ ಆರೋಗ್ಯ ವಾಗಿರುತ್ತದೆ. ಪೌರಕಾರ್ಮಿಕರು ಆರೋಗ್ಯವಂತರಾಗಿದ್ದರೆ ನಗರದ ಸ್ವಚ್ಛತೆಯನ್ನು ಕಾಪಾಡಿ ಎಲ್ಲರ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ. ಆದುದರಿಂದ ಅವರು ಇಂತಹ ಆರೋಗ್ಯ ಶಿಬಿರಗಳನ್ನು ಸದುಪಯೋಗ ಪಡೆದು ಕೊಳ್ಳಬೇಕು ಎಂದು ಜಿ.ಟಿ.ದೇವೇಗೌಡ ತಿಳಿಸಿದರು.

ನಗರಸಭೆ ಆಯುಕ್ತ ಚಂದ್ರಶೇಖರ್. B.N, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗಿರಿಜಾ, ಸಮೃದ್ಧಿ ವಾರ್ತೆ ಪತ್ರಿಕೆಯ ಸಂಪಾದಕಿ ಸಹನಗೌಡ, ಒಂದು ಹೆಜ್ಜೆ ರಕ್ತದಾನಿಗಳ ಬಳಗದ ಅಧ್ಯಕ್ಷ ರಕ್ತದಾನಿ ಮಂಜು,ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಎಂಡಿ ಅಶ್ವತ್ ಕುಮಾರ್,ಎನ್‌.ಪಿ ಆಸ್ಪತ್ರೆಯ ವಿರಪ್ಪ, ಹೆಲ್ತ್ ಇನ್ಸ್ಪೆಕ್ಟರ್ ಗಳಾದ ಶಂಕರ್ ಲಿಂಗೇಗೌಡರು, ಶಿವಪ್ರಸಾದ್, ನೇತ್ರಾವತಿ, ಪುಷ್ಪಲತಾ ಹಾಗೂ ಬಯೋಸ್ನೇಹಿ ಮನು
ಮತ್ತಿತರರು ಹಾಜರಿದ್ದರು.

ಪೌರಕಾರ್ಮಿಕರು ಆರೋಗ್ಯವಾಗಿದ್ದರೆ ಇಡೀ ನಗರ ಆರೋಗ್ಯ- ಜಿ ಟಿ ಡಿ Read More