ಪತ್ನಿಯ ಕತ್ತು ಸೀಳಿ ಕೊ*ಲೆ ಮಾಡಿದ ಪತಿ

ಮೈಸೂರು: ನಗರದ ಹೊರವಲಯದ ಇಲವಾಲ ಬಳಿಯ ಜಟ್ಟಿಹುಂಡಿಯಲ್ಲಿ ಪಾಪಿ ಪತಿಯ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಸವಿತಾ(35) ಕೊಲೆಯಾದ ದುರ್ದೈವಿ

ಸವಿತಾ ಜಟ್ಟಿಹುಂಡಿ ಸಂತ ಜೋಸೆಫ್‌ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದರು. ಆಶ್ರಮದ ಗೇಟ್‌ ಬಳಿ ಆಕೆಯ ಪತಿ ದೇವರಾಜ್‌ ಜಗಳ ಮಾಡಿ ಕೋಪದಲ್ಲಿ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ,ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಪತ್ನಿಯ ಕತ್ತು ಸೀಳಿ ಕೊ*ಲೆ ಮಾಡಿದ ಪತಿ Read More

ಕೊಡಲಿಯಿಂದ ಕೊಚ್ಚಿ ಪತ್ನಿಯ‌ ಕೊಂ*ದ ಪಾಪಿ ಪತಿ

ಸುರಪುರ: ಪತ್ನಿ ತನಗೆ ಗೌರವ ಕೊಡುತ್ತಿಲ್ಲ ಎಂದು ಕೋಪಗೊಂಡ ಪತಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸುರಪುರದಲ್ಲಿ ನಡೆದಿದೆ‌.

ಪಟ್ಟಣದ ಬಿ ಎಸ್ ಎನ್ ಎಲ್ ಕಚೇರಿ ಬಳಿಯ ಡೊಣ್ಣಿಗೇರಾದಲ್ಲಿ ಈ ಘಟನೆ ನಡೆದಿದ್ದು, ಸಂಗಪ್ಪ ಕಕ್ಕೇರಾ ಎಂಬಾತ‌ ಈ ಕೃತ್ಯ ಎಸಗಿದ್ದಾನೆ.ಮರಿಯಮ್ಮ ಕೊಲೆಯಾದ ದುರ್ದೈವಿ.

ಭಾನುವಾರ ತಡರಾತ್ರಿ ಮನೆಯಲ್ಲಿ ಸಂಗಪ್ಪ ಪತ್ನಿಯೊಂದಿಗೆ ಜಗಳ ಮಾಡಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ನಂತರ ಕೊಡಲಿಯನ್ನು ಹಿಡಿದುಕೊಂಡೆ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಕೊಲೆ ಮಾಡಿರುವ ಸಂಗಪ್ಪ ಕಕ್ಕೇರಾ ಮದ್ಯ ವ್ಯಸನಿಯಾಗಿದ್ದ,ಮೂಲತಃ ಕಕ್ಕೇರಾ ಪಟ್ಟಣದ ಬಳಿಯ ದೊಡ್ಡಿ ಒಂದರ ನಿವಾಸಿ.

ಆದರೆ ಮರಿಯಮ್ಮ ಗಂಡ ಸರಿಯಾಗಿಲ್ಲದ ಕಾರಣ ಬೇಸರಗೊಂಡು ಕಳೆದ ಒಂದು ವರ್ಷದಿಂದ ಸುರಪುರದ ಡೊಣ್ಣಿಗೇರಾದಲ್ಲಿನ ತಮ್ಮ ಹೆತ್ತವರ ಮನೆಯಲ್ಲಿ ವಾಸವಾಗಿದ್ದಳು.

ತವರು ಮನೆಯಲ್ಲಿದ್ದ ಮರೆಮ್ಮನ ನೋಡಲು ಸಂಗಪ್ಪ ಬಂದು ಹೋಗಿ ಮಾಡುತ್ತಿದ್ದ.

ಹಾಗೆಯೇ ಭಾನುವಾರ ತಡರಾತ್ರಿ ಒಂದು ಗಂಟೆಯ ವೇಳೆಗೆ ಮನೆಗೆ ಬಂದ ಸಂಗಪ್ಪ ಪತ್ನಿಯೊಂದಿಗೆ ಜಗಳ ತೆಗೆದು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಕೊಡಲಿ ಹಿಡಿದುಕೊಂಡೇ ಪೊಲೀಸ್ ಠಾಣೆಗೆ‌‌ ಬಂದಿದ್ದಾನೆ.

ಸ್ಥಳಕ್ಕೆ ಸುರಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್ ನಾಯಕ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ಮಹಿಳೆಯ ಅಣ್ಣ ನೀಡಿದ ದೂರಿನ ಮೇರೆಗೆ ಸುರಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೊಡಲಿಯಿಂದ ಕೊಚ್ಚಿ ಪತ್ನಿಯ‌ ಕೊಂ*ದ ಪಾಪಿ ಪತಿ Read More

ಪತ್ನಿ ಎದುರು ಕತ್ತು ಕುಯ್ದುಕೊಂಡು ಪತಿ ಆತ್ಮಹತ್ಯೆ

ಬೆಳಗಾವಿ: ಪತ್ನಿ ಹಾಗೂ ಅಳಿಯನ ಮುಂದೆಯೇ ಕತ್ತು ಕೊಯ್ದುಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ನಡೆದಿದೆ.

ಮಲ್ಲಪ್ಪ ಕಟಬುಗೋಳ(34) ಆತ್ಮಹತ್ಯೆ ಮಾಡಿಕೊಂಡವ.

ನಿನ್ನೆಯಷ್ಟೇ ಮನೆಯಲ್ಲಿದ್ದ ಅಕ್ಕಿ ಮಾರಿ ಸಾರಾಯಿ ಕುಡಿದು ಬಂದು ಮಲ್ಲಪ್ಪ ಗಲಾಟೆ ಮಾಡಿದ್ದ,ಇಡೀ ರಾತ್ರಿ ಹೆಂಡತಿ ರೇಖಾ ಜೊತೆಗೆ ಗಲಾಟೆ ಮಾಡಿದ್ದಲ್ಲದೆ ಹಲ್ಲೆ ಕೂಡಾ ಮಾಡಿದ್ದ.

ರೇಖಾ ಸಹೋದರನನ್ನು ಕರೆಯಿಸಿ ಬುದ್ದಿ ಹೇಳಿದ್ದಳು.ಆಗ ರೇಖಾ ಸಹೋದರ ಮಲ್ಲಿಕಾರ್ಜುನ ಕಟ್ಟಿಗೆಯಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ,
ನೀನು ಸತ್ತರೆ ಅಕ್ಕ ಚೆನ್ನಾಗಿ ಇರುತ್ತಾಳೆ ಎಂದು ಬೈದಿದ್ದಾನೆ.

ಆಗ ಮಲ್ಲಪ್ಪ ಕತ್ತು ಕೊಯ್ದುಕೊಂಡಿದ್ದಾನೆ ತೀವ್ರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ.

ಮಲ್ಲಪ್ಪ ಸಾಯುತ್ತಿದ್ದಂತೆ ಸ್ಥಳದಲ್ಲಿದ್ದ ಅಳಿಯ ಮಲ್ಲಿಕಾರ್ಜುನ ಓಡಿಹೋಗಿದ್ದಾನೆ.

ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.

ಪತ್ನಿ ಎದುರು ಕತ್ತು ಕುಯ್ದುಕೊಂಡು ಪತಿ ಆತ್ಮಹತ್ಯೆ Read More

ಕರ್ನಾಟಕ ಬ್ಯಾಂಕ್ ಗೆ ವಂಚಿಸಿದ ಕತರ್ನಾಕ್ದಂಪತಿ

ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಕರ್ನಾಟಕ ಬ್ಯಾಂಕ್ ಗೆ ಕತರ್ನಾಕ್ ದಂಪತಿ 26 ಲಕ್ಷ ವಂಚಿಸಿದ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.

ಕಾನೂನು ಕ್ರಮ ಕೈಗೊಳ್ಳುವಂತೆ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದಂಪತಿ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ.

ಮೀನಾಕ್ಷಿ ಹಾಗೂ ಗಣೇಶ್ ಬಾಬು ಎಂಬ ದಂಪತಿ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.

2019 ರಲ್ಲಿ ಮೈಸೂರಿನ ಸರಸ್ವತಿಪುರಂ ನಲ್ಲಿರುವ ಕರ್ನಾಟಕ ಬ್ಯಾಂಕ್ ನಲ್ಲಿ ವ್ಯಾಪಾರದ ಉದ್ದೇಶಕ್ಕಾಗಿ ಗಣೇಶ್ ಬಾಬು ಅವರ ಪತ್ನಿ ಮೀನಾಕ್ಷಿ ಹೆಸರಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಲಾಗಿತ್ತು.

ಸಾಲಕ್ಕಾಗಿ ಬೋಗಾದಿಯ ರಾಜರಾಜೇಶ್ವರಿ ನಗರ ಬಡಾವಣೆಯ ನಿವೇಶನ ಸಂಖ್ಯೆ 28/ಬಿ ಗೆ ಸಂಭಂಧಿಸಿದ ದಾಖಲೆ ನೀಡಿದ್ದಾರೆ.26 ಲಕ್ಷ ರೂ ಸಾಲ ಮಂಜೂರಾಗಿ ಮೀನಾಕ್ಷಿ ಯವರ ಖಾತೆಗೆ ವರ್ಗಾವಣೆ ಆಗಿದೆ.

ನಂತರ ಸಾಲ ಮರುಪಾವತಿಸುವಲ್ಲಿ ಮೀನಾಕ್ಷಿ ವಿಫಲವಾಗಿದ್ದಾರೆ.ನಿವೇಶನ ಹರಾಜು ಹಾಕಲು ಮುಂದಾದಾಗ ನಕಲಿ ದಾಖಲೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದ್ದು, ದಂಪತಿ ವಿರುದ್ದ ಪ್ರಕರಣ ದಾಖಲಾಗಿದೆ.

ಕರ್ನಾಟಕ ಬ್ಯಾಂಕ್ ಗೆ ವಂಚಿಸಿದ ಕತರ್ನಾಕ್ದಂಪತಿ Read More

ಪತ್ನಿಯ ಅರೆನಗ್ನಗೊಳಿಸಿ ಹಲ್ಲೆ ಮಾಡಿ ಮೆರವಣಿಗೆ ಮಾಡಿದ ಪತಿ

ಮೈಸೂರು: ಪೊಲೀಸ್ ಠಾಣೆ ಹಾಗೂ ಕೌಟುಂಬಿಕ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನ ಹಿಂದಕ್ಕೆ ಪಡೆಯದ ಪತ್ನಿಯನ್ನ ಪತಿ ಅರೆನಗ್ನಗೊಳಿಸಿ ಹಲ್ಲೆ ನಡೆಸಿದ ವಿಲಕ್ಷಣ ಘಟನೆ‌ ಮೈಸೂರಿನಲ್ಲಿ ನಡೆದಿದೆ.

ಪತ್ನಿಯನ್ನ ಪತಿ ಮಹೇಶ್
ಬಲವಂತವಾಗಿ ಕೂಡಿ ಹಾಕಿ,ನಡುರಸ್ತೆಯಲ್ಲಿ ಅರೆನಗ್ನಗೊಳಿಸಿ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾರೆ.

ಹಾಗಾಗಿ ಪತಿ, ಮಾವ ಮತ್ತು ಪತಿಯ ಅಣ್ಣನ ವಿರುದ್ದ ಪತ್ನಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪಲ್ಲವಿ (24) ಎಂಬುವರೇ ಕಿರುಕುಳಕ್ಕೆ ಒಳಗಾದ ಗೃಹಿಣಿ.

ಪತಿ ಮಹೇಶ್, ಮಾವ ಮಲ್ಲಯ್ಯ ಹಾಗೂ ಪತಿ ಅಣ್ಣ ಶಿವು ವಿರುದ್ದ ಎಫ್ ಐ ಆರ್ ದಾಖಲಾಗಿದೆ.

ಮಹೇಶ್ ವಿರುದ್ದ ಪಲ್ಲವಿ ಪೊಲೀಸ್ ಠಾಣೆಯಲ್ಲಿ, ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ವಿಚಾರಣೆ ಹಂತದಲ್ಲಿದೆ.

ಕೆಲವು ದಿನಗಳ ಹಿಂದೆ ಪತ್ನಿಯನ್ನ ಭೇಟಿ ಮಾಡಿ ಅನ್ಯೋನ್ಯವಾಗಿ ಇರೋಣವೆಂದು ನಂಬಿಸಿ ಪಲ್ಲವಿಯನ್ನ ಮಹೇಶ್ ಕರೆತಂದು ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ಇರಿಸಿದ್ದಾನೆ.ಎರಡು ದಿನ ಸರಿ ಇದ್ದ ಮಹೇಶ್ ಮತ್ತೆ ಕ್ಯಾತೆ ತೆಗೆದು ಪತ್ನಿ ಮೇಲೆ ದರ್ಪ ತೋರಿಸಿದ್ದಾನೆ.

ಪ್ರಕರಣಗಳನ್ನ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ, ಆಕೆಯ ಯಾವ ಭಾಗವನ್ನೂ ನೋಡದೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಇದನ್ನ ಪ್ರಶ್ನಿಸಲು ಮಾವ ಮಲ್ಲಯ್ಯನ ಬಳಿ ಬಂದಾಗ ಪತಿ ಹಾಗೂ ಅಣ್ಣ ಶಿವು ಸೇರಿದಂತೆ ಮೂವರು ನಡುರಸ್ತೆಯಲ್ಲಿ ಅರೆನಗ್ನಗೊಳಿಸಿ ಹಲ್ಲೆ ನಡೆಸಿದ್ದಾರೆಂದು ಪಲ್ಲವಿ ದೂರಿನಲ್ಲಿ ತಿಳಿಸಿದ್ದಾರೆ.

ಕೊಲೆ ಮಾಡುವ ಉದ್ದೇಶದಿಂದಲೇ ಪತಿ ಹಾಗೂ ಮಾವ ಪತಿಯ ಅಣ್ಣ ಹಲ್ಲೆ ನಡೆಸಿದ್ದಾರೆಂದು ಪಲ್ಲವಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪತ್ನಿಯ ಅರೆನಗ್ನಗೊಳಿಸಿ ಹಲ್ಲೆ ಮಾಡಿ ಮೆರವಣಿಗೆ ಮಾಡಿದ ಪತಿ Read More

ಅಕ್ರಮ ಸಂಬಂಧ ವಿರೋಧಿಸಿದ ಪತ್ನಿ:ಪ್ರಿಯತಮೆಯೊಂದಿಗೆ ಹಲ್ಲೆ ನಡೆಸಿದ ಪತಿ

ಮೈಸೂರು: ಅಕ್ರಮ ಸಂಬಂಧ ವಿರೋಧಿಸಿ ಪ್ರಶ್ನಿಸಿದ ಪತ್ನಿ ಮತ್ತು ಮಗಳ ಮೇಲೆ ಪ್ರಿಯತಮೆ ಜೊತೆ ಸೇರಿ ಪಾಪಿ ಪತಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹೇಯ ಘಟನೆ ನಡೆದಿದ್ದು,ಬೆಂಗಳೂರಿನ ಶ್ವೇತಾ ಎಂಬುವರು ತಮ್ಮ ಪತಿ ಸಂತೋಷ್ ಕುಮಾರ್ ಹಾಗೂ ಆತನ ಪ್ರಿಯತಮೆ ಶಿಲ್ಪಾ ವಿರುದ್ದ ಎನ್.ಆರ್.ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಕೆಂಗೇರಿ ಸಮೀಪದ ಲಿಂಗಧೀರನಹಳ್ಳಿ ನಿವಾಸಿಗಳಾದ ಶ್ವೇತಾ ಹಾಗೂ ಸಂತೋಷ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ,ಇಬ್ಬರು ಅನ್ಯೋನ್ಯವಾಗಿದ್ದರು.ಅಷ್ಟರಲ್ಲಿ ಸಂತೋಷ್ ಗೆ ಶಿಲ್ಪಾ ಪರಿಚಯವಾಗಿ ಸ್ನೇಹವಾಗಿದೆ.

ಸುಮಾರು 6 ತಿಂಗಳ ಹಿಂದೆ ಸಂತೋಷ್ ಕುಮಾರ್ ಜೀವನಕ್ಕೆ ಶಿಲ್ಪಾ ಎಂಟ್ರಿಕೊಟ್ಟಿದ್ದರಿಂದ ಇವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ.

ಆಗಾಗ ಮೊಬೈಲ್ ನಲ್ಲಿ ಸಂತೋಷ್ ಕುಮಾರ್ ಜೊತೆ ಮಾತನಾಡುವುದು, ಅಶ್ಲೀಲ ಮೆಸೇಜ್ ಗಳನ್ನ ಹಾಕುವುದು ಹೀಗೆ ಶಿಲ್ಪಾ ಕ್ರಮೇಣ ದಂಪತಿಯ ಜೀವನಕ್ಕೆ ಮುಳ್ಳಾಗಿದ್ದಾಳೆ.

ಶಿಲ್ಪಾ ಹೇಳಿದಂತೆ ಕೇಳತೊಡಗಿದ ಸಂತೋಷ್ ಕುಮಾರ್ ಆಗಾಗ ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸಿ ರಂಪಾಟ ಮಾಡುತ್ತಿದ್ದ.ಈ ಬಗ್ಗೆ ಈ ಹಿಂದೆ ಶ್ವೇತಾ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ದ ದೂರು ದಾಖಲಿಸಿದ್ದರು.ಈ ಬೆಳವಣಿಗೆ ಇಬ್ಬರು ಮಕ್ಕಳ ಮೇಲೆ ಪರಿಣಾಮ ಬೀರಿತು.

ಕಿರಿ ಮಗಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಮೈಸೂರಿನ ತಾಯಿ ಮನೆಯಲ್ಲಿ ಉಳಿದುಕೊಂಡಿದ್ದಳು.ಮಗಳನ್ನ ನೋಡಲು ಶ್ವೇತಾ ತನ್ನ ಹಿರಿ ಮಗಳ ಜೊತೆ ಮೈಸೂರಿಗೆ ಬಂದಾಗ ಬನ್ನಿಮಂಟಪದ ಎಲ್.ಐ.ಸಿ.ಸರ್ಕಲ್ ಬಳಿ ಸಂತೋಷ್ ಕುಮಾರ್ ಹಾಗೂ ಪ್ರಿಯತಮೆ ಶಿಲ್ಪಾ ಎದುರಾಗಿ ಶ್ವೇತಾ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ.

ಹಲ್ಲೆಗೊಳಗಾದ ಶ್ವೇತಾ ಘಟನೆಯಿಂದ ಚೇತರಿಸಿಕೊಂಡ ನಂತರ ಎನ್.ಆರ್.ಠಾಣೆಯಲ್ಲಿ ಪತಿ ಹಾಗೂ ಆತನ ಪ್ರಿಯತಮೆ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಅಕ್ರಮ ಸಂಬಂಧ ವಿರೋಧಿಸಿದ ಪತ್ನಿ:ಪ್ರಿಯತಮೆಯೊಂದಿಗೆ ಹಲ್ಲೆ ನಡೆಸಿದ ಪತಿ Read More

ಕೌಟುಂಬಿಕ ಕಲಹದಿಂದ ಆಕ್ರೋಶಗೊಂಡು ಪತ್ನಿಯ ಕೊಂದ ಪತಿ

ಮೈಸೂರು: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತಿರಾಯನೊಬ್ಬ ಪತ್ನಿಯ ಕತ್ತು ಕತ್ತರಿಸಿ ಹತ್ಯೆ ಮಾಡಿರುವ ಘಟನೆ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ.

ಮೈಸೂರಿನ ಲಕ್ಷ್ಮಿಕಾಂತ ನಗರದಲ್ಲಿ ಈ ಹೇಯ ಘಟನೆ ನಡೆದಿದ್ದು,ಶೃತಿ (28) ಕೊಲೆಯಾದ ಪತ್ನಿ.ಮನು(27) ಹತ್ಯೆ ಮಾಡಿದ ಪತಿ.ಪತ್ನಿಯ ಕೊಂದ ನಂತರ ಈತ ಪೊಲೀಸರಿಗೆ ಶರಣಾಗಿದ್ದಾನೆ.

ಬನುಮಯ್ಯ ಕಾಲೇಜಿನಲ್ಲಿ ಬಿಕಾಂ ನಲ್ಲಿದ್ದ ವೇಳೆ ಶೃತಿ,ಮನು ಪರಸ್ಪರ ಪ್ರೀತಿಸಿ,5 ವರ್ಷಗಳ ಹಿಂದೆ ಮದುವೆ ಆಗಿದ್ದಾರೆ.

ಇಬ್ಬರದು ಅಂತರ್ಜಾತಿ ವಿವಾಹ, ಲಕ್ಷ್ಮಿಕಾಂತ ನಗರದಲ್ಲಿ ಮನೆ ಮಾಡಿ ವಾಸವಿದ್ದರು.ಆಗಾಗ ದಂಪತಿ ನಡುವೆ ಕ್ಷುಲ್ಲಕ ಕಾರಣಗಳಿಗೆ ಜಗಳ ನಡೆಯುತ್ತಲೆ ಇತ್ತು.

ಗುರುವಾರ ಕೂಡಾ ಮುಂಜಾನೆ ಜಗಳವಾಗಿದೆ.ಈ ವೇಳೆ ಅದು ವಿಕೋಪಕ್ಕೆ ತಿರುಗಿ ಕೋಪದಲ್ಲಿ ಪತ್ನಿಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿ ನಂತರ ಮನು ಸೀದಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಈ ಸಂಬಂಧ ಹೆಬ್ಬಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೌಟುಂಬಿಕ ಕಲಹದಿಂದ ಆಕ್ರೋಶಗೊಂಡು ಪತ್ನಿಯ ಕೊಂದ ಪತಿ Read More

ಪತ್ನಿಯ ಮೇಲೆ‌ ಬೇರೊಬ್ಬ ಅತ್ಯಾಚಾರಕ್ಕೆ ಯತ್ನ: ಚಿತ್ರೀಕರಿಸಿದ ಪಾಪಿ ಪತಿ

ಮೈಸೂರು: ಪತ್ನಿಯ ಮೇಲೆ ಬೇರೆ ವ್ಯಕ್ತಿ ಅತ್ಯಾಚಾರಕ್ಕೆ ಯತ್ನಿಸಿದ ದೃಶ್ಯಗಳನ್ನ ಪತಿಯೇ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಅಸಹ್ಯಕರ ಪ್ರಕರಣ ಮೈಸೂರಿನಲ್ಲಿ ನಡೆದಿದೆ.

ಇಂತಹ ಹೇಯ ಘಟನೆ ಮೈಸೂರಿನ ಕಲ್ಯಾಣಗಿರಿಯಲ್ಲಿ ನಡೆದಿದೆ

ಘಟನೆ ಸಂಬಂಧ ಪತ್ನಿ ಮುನ್ನಿ(ಹೆಸರು ಬದಲಿಸಲಾಗಿದೆ) ಪತಿ ಅಬ್ದುಲ್ ಫಾರೂಖ್,ನಜೀರ್ ಮಹಮದ್ ಹನೀಫಾ ಸೇರಿದಂತೆ 9 ಮಂದಿ ವಿರುದ್ದ ದೂರು ನೀಡಿದ್ದು‌ ಎಪ್ಐಆರ್ ದಾಖಲಾಗಿದೆ.

19 ವರ್ಷಗಳ ಹಿಂದೆ ಮುನ್ನಿ ಹಾಗೂ ಅಬ್ದುಲ್ ಫಾರೂಖ್ ವಿವಾಹವಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಅಬ್ದುಲ್ ಫಾರೂಖ್ ಮತ್ತೊಬ್ಬ ಮಹಿಳೆ ಜೊತೆ ಸಂಭಂಧ ಬೆಳೆಸಿ ಪತ್ನಿಯನ್ನ ನಿರ್ಲಕ್ಷಿಸಿದ್ದಾನೆ.

ಜೀವನೋಪಾಯಕ್ಕಾಗಿ ಮುನ್ನಿ ಹೈದರಾಬಾದ್ ಗೆ ತೆರಳಿ ನಂತರ ಮೈಸೂರಿಗೆ ಹಿಂದಿರುಗಿ ಕಲ್ಯಾಣಗಿರಿಯಲ್ಲಿ ಮನೆ ಬಾಡಿಗೆ ಪಡೆದು ಜೀವಿಸುತ್ತಿದ್ದಾರೆ.

ಜೀವನಾಂಶಕ್ಕಾಗಿ ಮುನ್ನಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಜೀವನಾಂಶ ನೀಡುವಂತೆ ನ್ಯಾಯಾಲಯ ಆದೇಶ ನೀಡಿದ್ದರೂ ಅಬ್ದುಲ್ ಫಾರೂಖ್ ಪಾಲಿಸಿಲ್ಲ.

ಜೀವನೋಪಾಯಕ್ಕಾಗಿ ಮುನ್ನಿ ಸಾಕಷ್ಟು ಸಾಲ ಮಾಡಿದ್ದು,ಎರಡು ತಿಂಗಳ ಹಿಂದೆ ಸಾಲದ ಹಣ ಪಡೆಯಲು ಹರ್ಷದ್ ಖಾನ್ ಎಂಬಾತ ಮನೆಗೆ ಬಂದಿದ್ದಾನೆ.

ಈ ವೇಳೆ ಮನೆಗೆ ನುಗ್ಗಿದ ಅಬ್ದುಲ್ ಫಾರೂಖ್,ನಾಸಿರ್,ಮಹಮದ್ ಹನೀಫ್ ಹಾಗೂ ಇತರರು ಮುನ್ನಿ ಹಾಗೂ ಹರ್ಷದ್ ಖಾನ್ ಮೇಲೆ ಹಲ್ಲೆ ನಡೆಸಿದ್ದಾರೆ.

ನಂತರ ಮುನ್ನಿಯ ಬಟ್ಟೆಗಳನ್ನ ಹರಿದುಹಾಕಿ ವಿಡಿಯೋ ಚಿತ್ರೀಕರಿಸಿದ್ದಾರೆ.ಅಬ್ದುಲ್ ಫಾರೂಖ್ ಜೊತೆ ಬಂದಿದ್ದ ನಾಜಿರ್ ಎಂಬಾತ ಮುನ್ನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಈ ದೃಶ್ಯಗಳನ್ನ ಪತಿ ಅಬ್ದುಲ್ ಫಾರೂಖ್ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾನೆ.

ಕೆಲ ಸಮಯದಲ್ಲಿ ವಿಡಿಯೋ ಡಿಲೀಟ್ ಮಾಡಿ ನಂತರ ಎಡಿಡ್ ಮಾಡಿ ಮತ್ತೆ ಅಪ್ ಲೋಡ್ ಮಾಡಿ ಪತ್ನಿಯನ್ನ ತೇಜೋವಧೆ ಮಾಡಿದ್ದಾನೆ.

ಇದೆಲ್ಲದರಿಂದ ನೊಂದ ಮುನ್ನಿ ಉದಯಗಿರಿ ಠಾಣೆಗೆ ದೂರು ನೀಡಿದ್ದಾರೆ.
ಉದಯಗಿರಿ ಠಾಣೆ ಪೊಲೀಸರು ಅಬ್ದುಲ್ ಫಾರೂಕ್, ನಾಜೀರ್,ಮಹಮದ್ ಹನೀಫ್ ಸೇರಿ 6 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಪತ್ನಿಯ ಮೇಲೆ‌ ಬೇರೊಬ್ಬ ಅತ್ಯಾಚಾರಕ್ಕೆ ಯತ್ನ: ಚಿತ್ರೀಕರಿಸಿದ ಪಾಪಿ ಪತಿ Read More