ಹುಣಸೂರಿನಲ್ಲಿರೈತ ಮುಖಂಡ ಚಂದ್ರು ಅವರಿಗೆ ಶ್ರದ್ಧಾಂಜಲಿ

ಹುಣಸೂರು: ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಹುಣಸೂರಿನ ಎಪಿಎಂಸಿ ಆವರಣದಲ್ಲಿ ರೈತ ಸಂಘದ ಗಾಗೇನಹಳ್ಳಿ ಗ್ರಾಮದ ರೈತ ಮುಖಂಡರಾದ ಚಂದ್ರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷ ಹೊಸೂರ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಅಧ್ಯಕ್ಷ ಬೆಂಕಿಪೂರ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಅಗ್ರ ರಾಮೇಗೌಡ, ಗ್ರಾಮ ಘಟಕದ ಅಧ್ಯಕ್ಷರುಗಳು ಪದಾಧಿಕಾರಿಗಳ ಸಮ್ಮುಖದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ
ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಹೊಸೂರು ಕುಮಾರ್ ಅವರು ಮಾತನಾಡಿ ಮೃತಪಟ್ಟ ಚಂದ್ರು ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಹಾಗೂ ಮೃತಪಟ್ಟ ಚಂದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು
ಪ್ರಾರ್ಥಿಸಿದರು.

ನಂತರ ಒಂದು ನಿಮಿಷ ಕಾಲ ಮೌನಾಚರಣೆ ಮಾಡಿ, ಚಂದ್ರು ಅವರೆಗೆ ಶಾಂತಿ ಕೋರಲಾಯಿತು.

ಹುಣಸೂರಿನಲ್ಲಿರೈತ ಮುಖಂಡ ಚಂದ್ರು ಅವರಿಗೆ ಶ್ರದ್ಧಾಂಜಲಿ Read More

ಹುಣಸೂರಿನ‌ ಯಮಗುಂಬ ಗ್ರಾಮದಲ್ಲಿಒಂದು ವರ್ಷದಲ್ಲೇ ಕಿತ್ತು ಹೋದ ರಸ್ತೆ!

ಮೈಸೂರು, ಜು.1: ಜಿಲ್ಲೆಯ ಹುಣಸೂರು ತಾಲೂಕಿನ ಯಮಗುಂಬ ಗ್ರಾಮದಲ್ಲಿ
ಕಾಮಗಾರಿ ನಡೆದ ಒಂದೇ ವರ್ಷಕ್ಕೆ ಡಾಂಬರು ಕಿತ್ತುಹೋಗಿ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು‌ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳಪೆ ಕಾಮಗಾರಿ ಎಂದು ಆರೋಪಿಸಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ

ಗಣಿಗೆ ಸಂಬಂಧಿಸಿದ ಭಾರಿ ವಾಹನ ಓಡಾಡಿದ ಪರಿಣಾಮ ರಸ್ತೆ ಹದಗೆಟ್ಟಿದೆ ಎಂದು ಗ್ರಾಮದ ಜನ ದೂರಿದ್ದಾರೆ.

ಕೂಡಲೇ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿ ಮಾಡಿ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಯಮಗುಂಬ ಗ್ರಾಮದ ಜನತೆ ಆಗ್ರಹಿಸಿದ್ದಾರೆ.

ರಸ್ತೆ ಸರಿಪಡಿಸದಿದ್ದಲ್ಲಿ ಪ್ರತಿಭಟನೆ ನಡೆಸು ವುದಾಗಿ ಎಚ್ಚರಿಸಿದ್ದಾರೆ.

ಹುಣಸೂರು ತಾಲೂಕು ಹೊಸಕೊಪ್ಪಲು ಯಮಗುಂಬ ಗ್ರಾಮದ ಮಾರ್ಗವಾಗಿ ಹಬ್ಬನಕುಪ್ಪೆಗೆ ತೆರಳುವ ರಸ್ತೆಗೆ ಕಳೆದ ವರ್ಷ ಡಾಂಬರೀಕರಣ ಮಾಡಿ ಅಭಿವೃದ್ದಿಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಲಾಗಿತ್ತು.

ಸಮೀಪದಲ್ಲಿ ಗಣಿಯೊಂದರ ಭಾರಿ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿರುವ ಕಾರಣ‌ ಡಾಂಬರು ಕಿತ್ತು ರಸ್ತೆ ಕಿತ್ತುಬಂದಿದೆ.
ಇದಕ್ಕೆಲ್ಲಾ ಗಣಿಗೆ ಸೇರಿದ ಭಾರಿವಾಹನಗಳ ಓಡಾಟ ಎಂದು ಜನತೆ ಕಿಡಿಕಾರಿದ್ದಾರೆ.

ಈ ಬಗ್ಗೆ ಪ್ರಶ್ನಿಸಿದರೆ ಗಣಿ ಮಾಲೀಕರು ಈ ರಸ್ತೆ ಇರುವುದೇ ನಮಗಾಗಿ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೂಡಲೇ ದುರಸ್ತಿಗೊಳಿಸಿ ಭಾರಿ ವಾಹನಗಳಿಗೆ ನಿರ್ಬಂಧ ಹೇರದಿದ್ದಲ್ಲಿ ಜಿಲ್ಲಾಡಳಿತದ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಹುಣಸೂರಿನ‌ ಯಮಗುಂಬ ಗ್ರಾಮದಲ್ಲಿಒಂದು ವರ್ಷದಲ್ಲೇ ಕಿತ್ತು ಹೋದ ರಸ್ತೆ! Read More