ಬೆಳೆಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಸ್ಪರ್ಷಿಸಿ ತಾಯಿ ಮಗ ಸಾವು

ಹುಣಸೂರು: ಬೆಳೆಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಸ್ಪರ್ಷಿಸಿ ತಾಯಿ ಮಗ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಹುಣಸೂರು ತಾಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ತಾಯಿ ನೀಲಮ್ಮ ಮಗ ಹರೀಶ್ ಮೃತಪಟ್ಟ ದುರ್ದೈವಿಗಳು.

ತಾಯಿ ಮಗ ತಮ್ಮದೇ ಜಮೀನಿನಲ್ಲಿ ಬೆಳೆಗೆ ಔಷಧಿ ಸಿಂಪಡಿಸುತ್ತಿದ್ದರು.ಜಮೀನಿಗೆ ಹೊಂದಿಕೊಂಡಿರುವ ಸ್ಮಶಾನದಲ್ಲಿ ಹೈಟೆನ್ಷನ್ ವಿದ್ಯುತ್ ಸಂಪರ್ಕಕ್ಕೆ ಗ್ರೌಂಡಿಂಗ್ ಮಾಡಲಾಗಿದೆ.ಸ್ಮಶಾನಕ್ಕೆ ಅಳವಡಿಸಿರುವ ಬೇಲಿಗೆ ಗ್ರೌಂಡಿಂಗ್ ವೈರ್ ಸಂಪರ್ಕಿಸಿದೆ.

ಔಷಧಿ ಸಿಂಪಡಿಸುವ ವೇಳೆ ಬೇಲಿ ಬಳಿ ಬಂದಾಗ ನೀಲಮ್ಮಗೆ ವಿದ್ಯುತ್ ಸ್ಪರ್ಷಿಸಿದೆ.ತಾಯಿಯ ನೆರವಿಗೆ ಧಾವಿಸಿದ ಹರೀಶ್ ಗೂ ವಿದ್ಯುತ್ ಸ್ಪರ್ಷಿಸಿದೆ.ತಾಯಿ ಮಗ ಇಬ್ಬರೂ ಸಾವನ್ನಪ್ಪಿದ್ದಾರೆ.

ರಾತ್ರಿ 8 ಗಂಟೆ ಆದರೂ ತಾಯಿ ಮಗ ಮನೆಗೆ ಹಿಂದಿರುಗದ ಕಾರಣ ಮನೆಯವರು ಜಮೀನಿಗೆ ತೆರಳಿ ಪರಿಶೀಲಿಸಿದಾಗ ತಾಯಿ ಮಗನ ಮೃತದೇಹ ಕಂಡುಬಂದಿದೆ.

ಸ್ಥಳಕ್ಕೆ ವಿದ್ಯುತ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೆಳೆಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಸ್ಪರ್ಷಿಸಿ ತಾಯಿ ಮಗ ಸಾವು Read More

ಹುಣಸೂರು ತಾಲೂಕು ಕಚೇರಿಯಲ್ಲಿ ‌ಕಿತ್ತೂರು ರಾಣಿ‌ ಚನ್ನಮ್ಮ ಜಯಂತಿ

ಹುಣಸೂರು: ಹುಣಸೂರು ತಾಲೂಕು ಕಚೇರಿಯಲ್ಲಿ ಅಕ್ಟೋಬರ್ 23 ಗುರುವಾರದಂದು ಕಿತ್ತೂರು ರಾಣಿ ಚೆನ್ನಮ್ಮ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಯಿತು

ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮಹಾನ್ ರಾಷ್ಟ್ರಪ್ರೇಮಿ ಕಿತ್ತೂರು ರಾಣಿ ಚೆನ್ನಮ್ಮ ಬೆಳಗಾವಿಯ ಕಿತ್ತೂರಿನಲ್ಲಿ ಅಕ್ಟೋಬರ್ 23,1778 ರಂದು ಜನಿಸಿದರೆಂದು ಇತಿಹಾಸ ಹೇಳುತ್ತದೆ.

ಸರ್ಕಾರದ ಆದೇಶದಂತೆ ಅಕ್ಟೋಬರ್ 23ರಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಿತ್ತೂರು ಚೆನ್ನಮ್ಮ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಿ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.

ಅದರಂತೆ ಇಂದು ಹುಣಸೂರು ತಾಲೂಕು ಕಚೇರಿಯಲ್ಲಿ ತಾಸಿಲ್ದಾರ್ ಅವರ ಸಮ್ಮುಖದಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡು ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರ ಇಟ್ಟು ಪೂಜೆ ಮಾಡಿ ಗೌರವ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಸೇರಿದಂತೆ ತಾಲೂಕಿನ ವಿವಿಧ ಪಕ್ಷಗಳ ಮುಖಂಡರು ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.

ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ‌ ರಾಷ್ಟ್ರ ಪ್ರೇಮಿ ರಾಣಿ‌ ಚೆನ್ನಮ್ಮನವರ ತ್ಯಾಗ,ಬಲಿದಾನವನ್ನು ಸ್ಮರಿಸಲಾಯಿತು.

ಹುಣಸೂರು ತಾಲೂಕು ಕಚೇರಿಯಲ್ಲಿ ‌ಕಿತ್ತೂರು ರಾಣಿ‌ ಚನ್ನಮ್ಮ ಜಯಂತಿ Read More

ಕೊಳಚೆ ನೀರು ರಸ್ತೆಗೆ ಹರಿಯ ಬಿಡುತ್ತಿರುವ ಹೋಟೆಲ್ ಲೈಸನ್ಸ್ ರದ್ದುಪಡಿಸಲು ಆಗ್ರಹ

ಹುಣಸೂರು: ಹೋಟೇಲ್‌ನಿಂದ ತ್ಯಾಜ್ಯ ನೀರು ರಸ್ತೆಗೆ ಬಿಟ್ಟಿರುವ ಹೋಟೇಲ್ ಮಾಲೀಕನ ವಿರುದ್ಧ ಕ್ರಮ ಕೈಗೊಂಡು ಲೈಸೆನ್ಸ್ ರದ್ದುಪಡಿಸಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾ.ಅಧ್ಯಕ್ಷ ಚೆಲುವರಾಜು ಆಗ್ರಹಿಸಿದ್ದಾರೆ.

ಈ ಕುರಿತು ನಗರಸಭಾ ಆಯುಕ್ತರಿಗೆ ಅವರು ಪತ್ರ ಬರೆದಿದ್ದಾರೆ.

ಹುಣಸೂರು ನಗರದ ಬೈಪಾಸ್ ರಸ್ತೆಯಲ್ಲಿರುವ ಡಿ. ದೇವರಾಜ ಅರಸು ಅವರ ಪ್ರತಿಮೆ ಹಿಂಭಾಗದಲ್ಲಿ ಚೆಟಾಯಿಸ್ ಫ್ಯಾಮಿಲಿ ರೆಸ್ಟೋರೆಂಟ್ ಎಂಬ ಹೋಟೆಲನ್ನು ಇತ್ತೀಚೆಗೆ‌ ತೆರೆಯಲಾಗಿದೆ.ಅದು ಸರಿ. ಆದರೆ ಈ ಹೋಟೇಲಿನಿಂದ ಬರುವ ತ್ಯಾಜ್ಯ ನೀರು ಚರಂಡಿಗೆ ಹೋಗದೆ ರಸ್ತೆಯ ಮೇಲೆಯೇ ಹರಿಯುತ್ತಿದೆ ಎಂದು ಚೆಲುವರಾಜು ಆರೋಪಿಸಿದ್ದಾರೆ‌.

ಇದರಿಂದಾಗಿ ರಸ್ತೆಯೆಲ್ಲಾ ಗಬ್ಬು ನಾರುತ್ತಿದೆ. ಬೆಳಗಿನ ಸಮಯದಲ್ಲಿ ವಾಯುವಿಹಾರಕ್ಕೆ ಹೋಗುವ ಜನರಿಗಂತೂ ಈ ಗಬ್ಬು ವಾಸನೆಯಿಂದ ತಿರುಗಾಡುವುದೇ ಬಹಳ ಕಷ್ಟವಾಗಿದೆ.

ಸಾವಿರಾರು ಜನ ಸಾರ್ವಜನಿಕರು, ಶಾಲಾ ಮಕ್ಕಳು, ವಾಹನಗಳು ಓಡಾಡುವ ರಸ್ತೆಯಲ್ಲಿ ವಾಹನಗಳು ರಭಸದಿಂದ ಓಡಾಡುವ ಸಂದರ್ಭದಲ್ಲಿ ಈ ಕೊಳಕು ನೀರು ಮಕ್ಕಳು ಸಾರ್ವಜನಿಕರಿಗೆ ಎರಚಿ ಬಹಳ ಸಮಸ್ಯೆಯಾಗುತ್ತಿದೆ ಎಂದು ಚೆಲುವರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹೊಟೇಲ್ ಪಕ್ಕದಲ್ಲಿಯೇ ಟ್ರ್ಯಾಕ್ಟರ್ ಶೋರೂಮ್ ಹಾಗೂ ಅಂಗಡಿಗಳು ಇದ್ದು, ಇವರಿಗೂ ಈ ಗಬ್ಬು ವಾಸನೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನಾನೇ ಖುದ್ದಾಗಿ ಪರಿಶೀಲಿಸಿ ಹೋಟೇಲ್‌ನವರ ಗಮನಕ್ಕೆ ತಂದರೆ ನಾವು ಲೈಸೆನ್ಸ್ ತೆಗೆದುಕೊಂಡು ಹೋಟೇಲ್ ಉದ್ಯಮ ನಡೆಸುತ್ತಿದ್ದೇವೆ. ಚರಂಡಿ ಸರಿಪಡಿಸುವುದು ನಗರಸಭೆಯವರ ಕರ್ತವ್ಯ ಎಂದು ನನಗೆ ಧಮ್ಮಿ ಹಾಕುತ್ತಿದ್ದಾರೆ ಎಂದು ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಇವರು ಹೋಟೇಲ್ ಉದ್ಯಮ ನಡೆಸಲು ಲೈಸೆನ್ಸ್ ನೀಡುವುದಾದರೆ ಹುಣಸೂರು ನಗರಾದ್ಯಂತ ಗಬ್ಬು ನಾರುವುದರಲ್ಲಿ ಸಂಶಯವೇ ಇಲ್ಲ. ಆದ್ದರಿಂದ ಕೂಡಲೇ ನಗರಸಭೆಯ ಆಯುಕ್ತರು ಹಾಗೂ ಹೆಲ್ತ್ ಇನ್ಸ್‌ಪೆಕ್ಟರ್, ಪರಿಸರ ನಿಯಂತ್ರಣಾಧಿಕಾರಿಗಳು, ಸಿಬ್ಬಂಧಿಗಳು ಪರಿಶೀಲಿಸಿ ಚೆಟಾಯಿಸ್ ಹೋಟೇಲ್ ಉದ್ಯಮದ ಲೈಸೆನ್ಸ್ ಮುಟ್ಟುಗೋಲು ಹಾಕಿಕೊಂಡು ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು, ಕೂಡಲೇ ಚರಂಡಿ ವ್ಯವಸ್ಥೆ ಸರಿಪಡಿಸಿ ನಾಗರೀಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಚೆಲುವರಾಜು ಒತ್ತಾಯಿಸಿದ್ದಾರೆ.

ಕೊಳಚೆ ನೀರು ರಸ್ತೆಗೆ ಹರಿಯ ಬಿಡುತ್ತಿರುವ ಹೋಟೆಲ್ ಲೈಸನ್ಸ್ ರದ್ದುಪಡಿಸಲು ಆಗ್ರಹ Read More

ಕಡೆಗೂ ಹುಣಸೂರು ನಗರಸಭೆ ಮೈದಾನದಿಂದ ವಸ್ತುಪ್ರದರ್ಶನ ಎತ್ತಂಗಡಿ

ಹುಣಸೂರು: ಹುಣಸೂರು ನಗರಸಭಾ ಮೈದಾನದಲ್ಲಿ ನಡೆಯುತ್ತಿದ್ದ ಮನರಂಜನಾ ವಸ್ತುಪ್ರದರ್ಶನದ ಅವಧಿ ಮುಗಿದಿದ್ದರೂ, ಇನ್ನೂ ತೆರವುಗೊಳಿಸಿಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾ. ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಕಡೆಗೂ ಜಯ ಸಿಕ್ಕಿದೆ.

ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ದವರು ಪ್ರತಿಭಟನೆ ಮಾಡಿ ವಸ್ತುಪ್ರದರ್ಶನ ತೆರವಿಗೆ ಪಟ್ಟು ಹಿಡಿದರು.

ಹಾಗಾಗಿ ನಗರಸಭೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ವಸ್ತುಪ್ರದರ್ಶನ ತೆರವಿಗೆ ಆದೇಶಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರಿಂದ ಗುರುವಾರ ಸಂಜೆವರೆಗೂ ವಸ್ತುಪ್ರದರ್ಶನ ಎತ್ತಂಗಡಿ ಕಾರ್ಯ ಮುಂದುವರಿಯಿತು.

ನಗರಸಭೆ ಆಟದ ಮೈದಾನವನ್ನು ಮನರಂಜನ ವಸ್ತು ಪ್ರದರ್ಶನ ಮಾಡಿಕೊಂಡಿದ್ದರಿಂದ ಶಾಲಾ ಮಕ್ಕಳಿಗೆ ಆಟವಾಡಲು ತೊಂದರೆಯಾಗಿದೆ ಮತ್ತು ಸುತ್ತಮುತ್ತಲ ವ್ಯಾಪಾರಿಗಳಿಗೂ ನಷ್ಟವಾಗಿದೆ.ವಾಯುವಿಹಾರಿಗಳಿಗೂ ತೊಂದರೆಯಾಗುತ್ತಿದೆ ಎಂಬ ಬಗ್ಗೆ ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಸುದ್ದಿ ಪ್ರಸಾರ‌ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.

ಈ ವಸ್ತುಪ್ರದರ್ಶನ ದಿಂದಾಗಿ ಇಡೀ ಆಟದ ಮೈದಾನ ಗಬ್ಬೆದ್ದು ಹೋಗಿದೆ. ಎಲ್ಲೆಂದರಲ್ಲಿ ಕಸದ ರಾಶಿ ರಾಶಿ ರಾರಾಜಿಸುತ್ತಿದೆ. ಜೊತೆಗೆ ಶೌಚಾಲಯ ವ್ಯವಸ್ಥೆ ಮಾಡಿರದ ಕಾರಣ ಇಡೀ ಆಟದ ಮೈದಾನ ಗಬ್ಬೆದ್ದು ಹೋಗಿದೆ ಎಲ್ಲಾ ಕಡೆ ಕೆಟ್ಟ ವಾಸನೆ ಬರುತ್ತಿದೆ ಹಾಗಾಗಿ ಶಾಲಾ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ಮೈದಾನದಲ್ಲಿ ಸಂಚರಿಸುವುದೇ ದುಸ್ತರವಾಗಿದೆ ಎಂದು ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ಅಷ್ಟೇ ಅಲ್ಲ ವಸ್ತುಪ್ರದರ್ಶನ ತೆರವುಗೊಳಿಸುವ ವೇಳೆ ಪ್ಲಾಸ್ಟಿಕ್ ಕವರ್ ಗಳು ಮತ್ತಿತರ ಪದಾರ್ಥಗಳನ್ನು ಮೈದಾನದಲ್ಲೇ ಬಿಟ್ಟಿದ್ದು ಬಡಪಾಯಿ ಹಸುಗಳು ತಿನ್ನುತ್ತಿವೆ ಇದರಿಂದ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಮುಂದೆ ಯಾರಿಗೆ ಆಗಲಿ ನಗರಸಭೆಯು ವಸ್ತು ಪ್ರದರ್ಶನವನ್ನು ಬಾಡಿಗೆಗೆ ನೀಡುವಾಗ ಕಡ್ಡಾಯವಾಗಿ ಶೌಚಾಲಯ ವ್ಯವಸ್ಥೆ ಮಾಡಲೇ ಬೇಕೆಂದು ಆದೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ

ಕಡೆಗೂ ಹುಣಸೂರು ನಗರಸಭೆ ಮೈದಾನದಿಂದ ವಸ್ತುಪ್ರದರ್ಶನ ಎತ್ತಂಗಡಿ Read More

ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ಉಚ್ಛಾಟನೆ ಖಂಡಿಸಿ ಪ್ರತಿಭಟನೆ

ಹುಣಸೂರು: ಸಚಿವ ಸಂಪುಟದಿಂದ ಸಹಕಾರ‌ ಸಚಿವ ರಾಜಣ್ಣ ಅವರನ್ನು ವಜಾ ಮಾಡಿದ್ದನ್ನು ಖಂಡಿಸಿ ಇಂದು ಹುಣಸೂರಿನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಹುಣಸೂರಿನ ಸಂವಿಧಾನ ವೃತ್ತದಲ್ಲಿ ಹುಣಸೂರು ತಾಲೂಕು ನಾಯಕ ಸಮಾಜದ ನೇತೃತ್ವದಲ್ಲಿ ದಲಿತ ಸಂಘಟನೆ ಗಳು, ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಸೇರಿದಂತೆ ಹಲವು ಸಂಘಟನೆಗಳವರು ಪ್ರತಿಭಟನೆ ನಡೆಸಿದರು.

ನಾಯಕ ಸಮಾಜದ ಹಿರಿಯ ಮುಖಂಡರು ಹಾಗೂ ನೇರ ನುಡಿಯ ರಾಜಕಾರಣಿ ಕೆ ಎನ್ ರಾಜಣ್ಣ ಅವರನ್ನು ಉಚ್ಚಾಟನೆ ಮಾಡಿರುವುದು ಸರಿಯಲ್ಲ ಕೂಡಲೇ ವಾಪಸು ಪಡೆಯಬೇಕು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನಂತರ ತಾಲೂಕು ಕಚೇರಿಗೆ ತೆರಳಿ ಎಸಿ ಅವರಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ‌ ರವಾನಿಸುವಂತೆ ಕೋರಲಾಯಿತು.

ಪ್ರತಿಭಟನೆಯಲ್ಲಿ ಅಣ್ಣಯ್ಯ ನಾಯಕ್, ಸೋಮಶೇಖರ್, ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾ.ಅಧ್ಯಕ್ಷ ಚೆಲುವರಾಜು ಸೇರಿದಂತೆ ನಾಯಕ ಸಮಾಜದ ಮುಖಂಡರು, ದಲಿತ ಸಂಘಟನೆಗಳ ಮುಖಂಡರು ಮತ್ತು ಇತರ ಸಂಘಟನೆಗಳವರು ಪಾಲ್ಗೊಂಡಿದ್ದರು.

ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ಉಚ್ಛಾಟನೆ ಖಂಡಿಸಿ ಪ್ರತಿಭಟನೆ Read More

ಉಮ್ಮತ್ತೂರು ಗ್ರಾಪಂ ಪಿಡಿಒ ವಿರುದ್ಧಕ್ರಮಕ್ಕೆ ಕೆಪಿಪಿ ರೈತಪರ್ವ ಚೆಲುವರಾಜು ಆಗ್ರಹ

ಹುಣಸೂರು,ಆ.2: ಹುಣಸೂರು ತಾಲೂಕು ಉಮ್ಮತ್ತೂರು ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಿಸುವ ಬಗ್ಗೆ ವಿಚಾರಿಸಲು ಹೋದಾಗ ಪಿಡಿಒ ಅಸಭ್ಯವಾಗಿ ವರ್ತಿಸಿದ್ದಾರೆಂದು ಕರ್ನಾಟಕ ಪ್ರಜಾಪಾರ್ಟಿ ರೈತ ಪರ್ವ ಹುಣಸೂರು ತಾ.ಅಧ್ಯಕ್ಷ ಚಲುವರಾಜು ಆರೋಪಿಸಿದ್ದಾರೆ.

ಆಗಸ್ಟ್ 1 ರಂದು ಉಮ್ಮತ್ತೂರು ಗ್ರಾಮ ಪಂಚಾಯಿತಿಗೆ ಕಾರ್ಯನಿಮಿತ್ತ ಸಂಜೆ 5-34 ರ ಸಮಯದಲ್ಲಿ ಹೋಗಿದ್ದಾಗ ಈ ಪಂಚಾಯಿತಿಯ ಪಿಡಿಒ ಅವರಿಗೆ ನೀವು ಸಾರ್ವಜನಿಕರ ಕೆಲಸವನ್ನು ಮಾಡುತ್ತಿದ್ದೀರಿ, ಇಲ್ಲಿನ ಪಿ.ಡಿ.ಪಿ. ಅವರು ಕೆಲವು ವ್ಯಕ್ತಿಗಳಿಗೆ ಯಾವುದೇ ದಾಖಲೆಗಳು ಇಲ್ಲದಿದ್ದರೂ (ವಂಶವೃಕ್ಷ ಸಹ ಇರುವುದಿಲ್ಲ) ಕಾನೂನು ಬಾಹಿರವಾಗಿ ಹಾಗೂ ಆಕ್ರಮವಾಗಿ ಖಾತೆ ಮಾಡಿದ್ದಾರೆ ಪರಿಶೀಲಿಸಿ ಎಂದು ಮನವಿ ಮಾಡಿದೆ.ಜತೆಗೆ ಅಕ್ರಮವಾಗಿರುವುದು ನಮ್ಮ ಗಮನಕ್ಕೆ ಕಂಡುಬಂದಿದೆ ಎಂದು ತಿಳಿಸಿದೆ,ಆಗ ಪಿ.ಡಿ.ಒ. ಹಾಗೂ ಅವರ ಸಿಬ್ಬಂದಿ ವರ್ಗದವರು ನನಗೆ ಏಕವಚನದಿಂದ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಚಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ಜತೆಗೆ ನನ್ನನ್ನು ಎಳೆದಾಡಿ ದೈಹಿಕ ಹಲ್ಲೆಗೆ ಯತ್ನಿಸಿ ಕಚೇರಿಯಿಂದ ಹೊರಗೆ ಕಳುಹಿಸಿದ್ದಾರೆ,ಅಲ್ಲದೆ ಯಾರಿಗೆ ದೂರು ನೀಡಿದರೂ ನಾನು ಹೆದರುವುದಿಲ್ಲ ಏನೂ ಮಾಡಲಾಗುವುದಿಲ್ಲ ಎಂದು ಕೇವಲವಾಗಿ ಮಾತನಾಡಿದ್ದಾರೆ ಎಂದು ಚಲುವರಾಜು ದೂರಿದ್ದಾರೆ.

ಈ ಹಿಂದೆ ಸದರಿ ಪಿ.ಡಿ.ಒ ಅವರು ಹೆಗ್ಗಂದೂರು ಗ್ರಾಮ ಪಂಚಾಯಿತಿಯಲ್ಲಿ ಪಿ.ಡಿ.ಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೂ ಇದೇ ರೀತಿ ವರ್ತಿಸಿದ್ದರೆಂದು ಆರೋಪಿಸಿರುವ ಚಲುವರಾಜು, ಇವರಿಂದಾಗಿ ಪಂಚಾಯಿತಿಯಲ್ಲಿ ಸಾರ್ವಜನಿಕರ ಕೆಲಸಗಳು ಆಗದೆ ಬಹಳ ತೊಂದರೆಯಾಗುತ್ತಿದೆ. ಆದ್ದರಿಂದ ಈಗ ಇರುವ ಪಿ.ಡಿ.ಒ ಅವರನ್ನು ಕೂಡಲೇ ಸೇವೆಯಿಂದ ಅಮಾನತ್ತುಗೊಳಿಸಿ ಅವರ ವಿರುದ್ಧ ಇಲಾಖಾ ಕಾನೂನು ಕ್ರಮವಹಿಸಿ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ಆಗಲು ಸಹಕರಿಸಬೇಕೆಂದು ಹುಣಸೂರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಉಮ್ಮತ್ತೂರು ಗ್ರಾಪಂ ಪಿಡಿಒ ವಿರುದ್ಧಕ್ರಮಕ್ಕೆ ಕೆಪಿಪಿ ರೈತಪರ್ವ ಚೆಲುವರಾಜು ಆಗ್ರಹ Read More

ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರಿದ್ದರೂ ಮಿಷನ್ ಗಳಿಗೆ ಗ್ರಹಣ!

ಹುಣಸೂರು: ಹುಣಸೂರಿನ ಹೃದಯ ಭಾಗದಲ್ಲಿರುವ ಸಾರ್ವಜನಿಕ ಆಸ್ಪತ್ರೆಯನ್ನು ಹಿಂದೆ ದಿವಂಗತ ಡಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಜನರ ಆರೋಗ್ಯ ಭಾಗ್ಯಕ್ಕಾಗಿ ನಿರ್ಮಿಸಿದ್ದರು.

ಈ ಹುಣಸೂರಿನ ಸರ್ಕಾರಿ ಆಸ್ಪತ್ರೆ ಹುಣಸೂರು ಪಟ್ಟಣ ಹಾಗೂ ಸುತ್ತಮುತ್ತಲ ಬಹಳಷ್ಟು ಗ್ರಾಮಗಳ ಜನರಿಗೆ ಆರೋಗ್ಯ ಭಾಗ್ಯ ನೀಡುತ್ತಾ ಸಂಜೀವಿನಿ ಯಾಗಿದೆ.

ಈ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯರು, ಉತ್ತಮ ಸಿಬ್ಬಂದಿಗಳು, ನರ್ಸ್ ಗಳು ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಹಾಗಾಗಿ ಈ ಆಸ್ಪತ್ರೆ ಹುಣಸೂರು ತಾಲೂಕಿನಲ್ಲೇ ಬಹಳ ಪ್ರಸಿದ್ಧಿ ಪಡೆದಿದೆ.

ಉತ್ತಮ ವೈದ್ಯರಿಗೆ ತಕ್ಕಂತೆ ಉತ್ತಮ ಸಲಕರಣೆಗಳು ಮತ್ತು ಸೌಲಭ್ಯಗಳು ಈ ಆಸ್ಪತ್ರೆಯಲ್ಲಿ ಸಿಕ್ಕಿದ್ದಿದ್ದರೆ ಇನ್ನು ಅದೆಷ್ಟೋ ಮಂದಿಗೆ ಕಾಯಿಲೆಗಳು ಶೀಘ್ರವಾಗಿ ಉಚಿತವಾಗಿ ಗುಣವಾಗುತ್ತಿತ್ತು.

ಆದರೆ ಈ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಿಷನ್, ಎಕ್ಸರೇ ಮಿಷನ್ ಮತ್ತಿತರ ಉಪಕರಣಗಳು ಕೆಟ್ಟುಹೋಗಿವೆ. ಈ ಮಿಷನ್ ಗಳು ಕೆಟ್ಟು ಮೂರ್ನಾಲ್ಕು ತಿಂಗಳುಗಳಾಗಿದ್ದು,ಗ್ರಹಣ ಹಿಡಿದಿದೆ.

ಈ ಯಂತ್ರಗಳು ಕೆಟ್ಟು ನಿಂತಿರುವುದರಿಂದ ಅನಿವಾರ್ಯವಾಗಿ ಇಲ್ಲಿನ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ಬರೆದುಕೊಡುತ್ತಿದ್ದಾರೆ.

ಹಳ್ಳಿಯ ಜನರಿಗೆ ಉಪಯೋಗವಾಗಲಿ ಎಂದು ಮಾಜಿ ಮುಖ್ಯಮಂತ್ರಿಗಳು ಈ ಆಸ್ಪತ್ರೆಯನ್ನು ಕಟ್ಟಿಸಿದ್ದರು.ಆದರೆ ಯಂತ್ರೋಪಕರಣಗಳ ಸೌಲಭ್ಯ ಲಭ್ಯವಾಗದೆ ಜನರು ದುಡ್ಡು ತೆತ್ತು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾಗಿದೆ.

ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರ ಹಣ ಮತ್ತು ಸಮಯ ಎರಡು ವ್ಯರ್ಥವಾಗುತ್ತಿದೆ ಅಲ್ಲದೆ ಬಹಳಷ್ಟು ಜನ ಬಡವರೇ ಇರುವುದರಿಂದ ಕಾಯಿಲೆ ಗುಣಪಡಿಸಿಕೊಳ್ಳಲು ಬೇರೆ ಸರ್ಕಾರಿ ಆಸ್ಪತ್ರೆಗೆ ‌ಅಥವಾ ಮೈಸೂರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲ್ಲೂಕು ಅಧ್ಯಕ್ಷ ಚೆಲುವರಾಜು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಹುಣಸೂರಿನ ಜನಪ್ರತಿನಿಧಿಗಳು ಅದರಲ್ಲೂ ಮುಖ್ಯವಾಗಿ ಇಲ್ಲಿನ ಶಾಸಕರು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಸ್ಥಳೀಯ ಜನರಿಗೆ ಜರೂರಾಗಿ ಬೇಕಾಗಿರುವ ಸ್ಕ್ಯಾನಿಂಗ್ ಮಿಷನ್, ಎಕ್ಸರೆ ಮಿಷನ್ ಮತ್ತಿತರ ಉಪಕರಣಗಳನ್ನು ಹೊಸದಾಗಿ ತರಿಸಿಕೊಟ್ಟು ಪುಣ್ಯ ಕಟ್ಟಿಕೊಳ್ಳಲಿ ಎಂದು ಚೆಲುವರಾಜು ಒತ್ತಾಯಿಸಿದ್ದಾರೆ.

ಸ್ಕ್ಯಾನಿಂಗ್ ಮಿಷನ್, ಎಕ್ಸರೆ ಮಿಷನ್
ಗಳು ಆಗಾಗ ಕೆಡುತ್ತಲೇ ಇರುತ್ತವೆ, ಹಲವು ಬಾರಿ ರಿಪೇರಿ ಮಾಡಿಸಿ ಅದನ್ನೇ ತಂದು ಇಲ್ಲಿ ಹಾಕಲಾಗಿದೆ.ಹೀಗೆ ಪದೇ,ಪದೇ ರಿಪೇರಿ ಮಾಡಿಸುವ‌ ಬದಲು ಹೊಸದಾದ ಮಿಷನ್ ಗಳನ್ನು ಸರ್ಕಾರಕ್ಕೆ ಮಾಹಿತಿ ನೀಡಿ ಇಲ್ಲಿನ ಜನ ಪ್ರತಿನಿಧಿಗಳು ತರಿಸಿ ಹಾಕಿದರೆ ಗ್ರಾಮೀಣ ಪ್ರದೇಶದ ಜನರಿಗೆ ಬಹಳ ಉಪಕಾರವಾಗುತ್ತದೆ. ಖಾಸಗಿ ಆಸ್ಪತ್ರೆಗೆ ಹಣ ತೆರುವುದು ತಪ್ಪುತ್ತದೆ ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲೇ ಉತ್ತಮ ಸೌಲಭ್ಯ ಸಿಗುತ್ತದೆ.

ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರಿದ್ದರೂ ಮಿಷನ್ ಗಳಿಗೆ ಗ್ರಹಣ! Read More

ಹೆಣ್ಣು ಮಕ್ಕಳ ಉಚಿತ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಬೇಕು ರಕ್ಷಣೆ

ಹುಣಸೂರು: ಸರ್ಕಾರಗಳೇನೊ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿ ಎಂಬ‌ ಉದ್ದೇಶದಿಂದ ಉಚಿತ ವಿದ್ಯಾರ್ಥಿ ನಿಲಯಗಳನ್ನು ತೆರೆದು ಎಲ್ಲಾ ಅನುಕೂಲ ಕಲ್ಪಿಸಿ ಕೊಟ್ಟಿದೆ.

ಆದರೆ ಈ ವಿದ್ಯಾರ್ಥಿನಿಲಯಗಳಿಗೆ ಭದ್ರತೆಯ ಅವಶ್ಯಕತೆ ಇದ್ದು ಕಾಣುತ್ತಿದೆ.

ಏಕೆಂದರೆ ಇಲ್ಲೊಂದು ಸಣ್ಣ ಉದಾಹರಣೆ ಇದೆ.

ಹುಣಸೂರಿನಲ್ಲಿರುವ ಡಾ.ಬಿ‌.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯದಲ್ಲಿ ಸುಮಾರು 30 ಮಂದಿ ವಿದ್ಯಾರ್ಥಿನಿಯರು ವಿವಿಧ ತರಗತಿಗಳಲ್ಲಿ ಓದುತ್ತಿದ್ದಾರೆ. ಇವರನ್ನು ನೋಡಿಕೊಳ್ಳಲು ವಾರ್ಡನ್ ಸೇರಿ ನಾಲ್ಕು ಮಂದಿ ಸಿಬ್ಬಂದಿ ಇದ್ದಾರೆ.

ಆದರೆ ಈ ವಿದ್ಯಾರ್ಥಿ ನಿಲಯಕ್ಕೆ ಜರೂರಾಗಿ ರಕ್ಷಣೆ ಬೇಕೇ ಬೇಕು. ಏಕೆಂದರೆ ಇಂದು ಬೆಳಗ್ಗೆ ಒಬ್ಬಳು ಮಹಾತಾಯಿ ವಿದ್ಯಾರ್ಥಿನಿಲಯಕ್ಕೆ‌ ಏಕಾಏಕಿ ನುಗ್ಗಿ ಗಲಾಟೆ ಮಾಡಿ ಹೋಗಿದ್ದಾರೆ.

ನನ್ನ ಮಕ್ಕಳನ್ನು ನಾನು ಏನು ಬೇಕಾದರೂ ಮಾಡಿಕೊಳ್ಳುತ್ತೇನೆ ಅವರನ್ನು ನಾನು ಕರೆದುಕೊಂಡು ಹೋಗುತ್ತೇನೆ. ಓದುವುದು ಬೇಡ ಎಂದು ಗಲಾಟೆ ಮಾಡಿ ನಂತರ ಅಡುಗೆ ಮನೆಗೆ ನುಗ್ಗಿ ಮಕ್ಕಳಿಗೆ ವಿತರಿಸಲು ಇಟ್ಟಿದ್ದ ಹಾಲು ಮತ್ತು ಬೆಳಗಿನ ಉಪಹಾರವನ್ನು ಚೆಲ್ಲಿ ಕೆಟ್ಟದಾಗಿ ವರ್ತಿಸಿದ್ದಾಳೆ.

ಜತೆಗೆ‌ ತನ್ನ ಮಕ್ಕಳ ಮೇಲೆ ಹಲ್ಲೆ ಮಾಡಿ ಸಿಬ್ಬಂದಿಗೂ ಆವಾಜ್ ಹಾಕಿದ್ದಾಳೆ.ಆಕೆ ನಿಜವಾಗಿ ಆಹೆಣ್ಣುಮಕ್ಕಳ ತಾಯಿಯೆ ಎಂಬ ಅನುಮಾನ ಕಾಡುತ್ತಿದೆ.

ವಿಷಯ ತಿಳಿದ ನಂತರ ಸ್ಥಳೀಯ ಪೊಲೀಸರು ಬಂದು‌ ಆಕೆಗೆ ಬುದ್ದಿ ಹೇಳಿದ್ದಾರೆ.ಇದು ಒಳ್ಳೆಯದೇ.ಆದರೆ ಇದೇ ರೀತಿ ಇನ್ಯಾರಾದರು ಅಪರಿಚಿತರು ನುಗ್ಗಿ ಏನಾದರೂ ಅನಾಹುತ ಮಾಡಿದರೆ‌ ಹೊಣೆ ಯಾರು ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಪ್ರಶ್ನಿಸಿದ್ದಾರೆ.

ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಆಗಮಿಸಿ ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಬೇಕು ಮತ್ತು ಸಿಬ್ಬಂದಿಗೆ ಯಾರನ್ನೂ ಒಳಗೆ ಬಿಡದಂತೆ ತಾಕೀತು ಮಾಡಬೇಕು ಅಲ್ಲದೆ ಒಬ್ಬರು ಸೆಕ್ಯೂರಿಟಿಯನ್ನಾದರೂ ಇಲ್ಲಿಗೆ ನೇಮಿಸಬೇಕು ಎಂದು ಚೆಲುವರಾಜು ಆಗ್ರಹಿಸಿದ್ದಾರೆ.

ಇದೇ ರೀತಿ ಮತ್ಯಾರಾದರೂ ಬಂದರೆ ಏನು ಮಾಡಬೇಕು,ಅಧಿಕಾರಿಗಳು‌ ಕೂಡಲೇ ಇಂತಹ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯಗಳತ್ತ‌ ಗಮನ ಹರಿಸಿ ಬಿಗಿ ಬಂದೋಬಸ್ತ್ ಮಾಡಲೇಬೇಕಿದೆ.

ಇದು ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯ ಆಗಿರುವುದರಿಂದ ಅತಿಹೆಚ್ಚಿನ ಭದ್ರತೆ ಬೇಕಿದೆ

ಹೆಣ್ಣು ಮಕ್ಕಳ ಉಚಿತ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಬೇಕು ರಕ್ಷಣೆ Read More

ಧರ್ಮಪುರಿ ಸ ಹಿ ಪ್ರಾ ಶಾಲೆ ಮಕ್ಕಳಿಗೆ ಕೆಪಿಪಿ ಯಿಂದ ಉಚಿತ ನೋಟ್ ಬುಕ್ ವಿತರಣೆ

ಹುಣಸೂರು: ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ವತಿಯಿಂದ ತಾಲೂಕಿನ ಧರ್ಮಪುರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಲಾಯಿತು.

ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚಲುವರಾಜು ಅವರು ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿ ವಿತರಿಸುವ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಇಂದು ಧರ್ಮಪುರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಟ್ಟು163 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ವತಿಯಿಂದ ತಾಲೂಕಿನ ಧರ್ಮಪುರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಿ ವೈ ಎಸ್ ಪಿ ಗೋಪಾಲಕೃಷ್ಣ ಮತ್ತು ಲಾಯರ್ ಲೋಕೇಶ್ ಅವರು
ಚಲುವರಾಜು ಅವರ ಕಾರ್ಯವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ವಿಜಯೇಂದ್ರ,
ಮುಖ್ಯ ಶಿಕ್ಷಕರಾದ ರಾಣಿ ಎ,
ಶಿಕ್ಷಕರುಗಳಾದ‌ ಶ್ರೀಕಂಠಮೂರ್ತಿ,ಶಾಂತಲ
ವಿ.ಜೆ,ತಾರಾ ಕೆ.ಸಿ,ಹೇಮಾವತಿ ಎಂ.ಆರ್,ಮೇಘನಾ ವಿ,ರೇಖಾ ಬಿ.ಎಂ ಮತ್ತಿತರರು ಹಾಜರಿದ್ದರು.

ಧರ್ಮಪುರಿ ಸ ಹಿ ಪ್ರಾ ಶಾಲೆ ಮಕ್ಕಳಿಗೆ ಕೆಪಿಪಿ ಯಿಂದ ಉಚಿತ ನೋಟ್ ಬುಕ್ ವಿತರಣೆ Read More

ಶ್ರೀ ಮಾರುತಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆಕೆಪಿಪಿ ಯಿಂದ ಉಚಿತ ಬುಕ್ ವಿತರಣೆ

ಹುಣಸೂರು, ಜು.2:‌ ಹುಣಸೂರಿನ ತಟ್ಟೆಕೆರೆಯ ಶ್ರೀ ಮಾರುತಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ಶ್ರೀ ಮಾರುತಿ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ನೀಡಲಾಯಿತು.

ಈ ಬಾರಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ವತಿಯಿಂದ ಸರ್ಕಾರಿ ಶಾಲೆಯ ಒಂದು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ಕೊಡುವ ಗುರಿಯನ್ನು ಹೊಂದಲಾಗಿದೆ. ಈಗಾಗಲೇ ಈ ಗುರಿ ತಲುಪುವ ಹಂತದಲ್ಲಿದೆ.

ಇಂದು‌ ಮಾರುತಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೋಲಿಸ್ ಇಲಾಖೆಯ ಧನಂಜಯ ಅವರು ಪಾಲ್ಗೊಂಡಿದ್ದರು ಮತ್ತು ಚಲುವರಾಜು ಅವರ ಈ ಕಾರ್ಯವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಲಕ್ಷ್ಮಿಕಾಂತ,ಸಹ ಶಿಕ್ಷಕರುಗಳಾದ ಪುಟ್ಟೇಗೌಡ ವೈ.ಜೆ, ಮಾನಸ, ಪುಷ್ಪಲತಾ ಬಿ. ಎಸ್, ಶ್ರೀಧರ. ಎ,ಬಾಲೆಸಾಬ್ ಕನ್ಯಾಳ,ಮೆಹಬೂಬುನ್ನಿಸ ಮತ್ತು ಶಾಲೆಯ ಸಿಬ್ಬಂದಿ ವಿ.ಎನ್.ಗಿರೀಶ್ ಮತ್ತಿತರರು ಹಾಜರಿದ್ದರು.

ಶ್ರೀ ಮಾರುತಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆಕೆಪಿಪಿ ಯಿಂದ ಉಚಿತ ಬುಕ್ ವಿತರಣೆ Read More