ಸಾಲ ಬಾಧೆಯಿಂದ ನೊಂದು ರೈತ ಆತ್ಮಹತ್ಯೆ

ಹುಣಸೂರು: ಸಾಲಬಾಧೆಯಿಂದ ನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರಿನ ಚಿಕ್ಕಹೆಜ್ಜೂರು ಗ್ರಾಮದಲ್ಲಿ ನಡೆದಿದೆ.

ಚಿಕ್ಕಹೇಜ್ಜೂರು ಗ್ರಾಮದ ಮಹದೇವಪ್ಪ(69) ಆತ್ಮಹತ್ಯೆ ಮಾಡಿಕೊಂಡ ರೈತ.

ಆತ ಬೆಳೆ ಬೆಳೆಯಲು ದೊಡ್ಡಹೆಜ್ಜೂರು ಸೊಸೈಟಿ ಹಾಗೂ ವಿವಿಧೆಡೆ ಸಾಲ ಕೂಡ ಮಾಡಿಕೊಂಡಿದ್ದರು ಎನ್ನಲಾಗಿದೆ.

ಟ್ರಾಕ್ಟರ್‌ನ್ನೂ ಖಾಸಗಿ ಫೈನಾನ್ಸ್‌ನಲ್ಲಿ ಸಾಲ ತೆಗೆದುಕೊಂಡು ಟ್ರಾಕ್ಟರ್‌ ಖರೀದಿಸಿದ್ದರು. ಸಾಲ ತೀರಿಸದ ಕಾರಣ ಫೈನಾನ್ಸ್‌ನವರು ನೋಟಿಸ್ ನೀಡಿದ್ದರು.

ಬೆಳೆಗಳು ಅತಿವೃಷ್ಟಿಯಿಂದಾಗಿ ನಾಶವಾಗಿ ಫಸಲು ಕೈ ಸೇರಿಲ್ಲ, ಮಾಡಿದ್ದ ಸಾಲವನ್ನು ಹೇಗೆ ತೀರಿಸುವುದು ಎಂದು ಮನನೊಂದು ಮಹದೇವಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಲ ಬಾಧೆಯಿಂದ ನೊಂದು ರೈತ ಆತ್ಮಹತ್ಯೆ Read More

ಸರ್ಕಾರಿ ಶಾಲೆಯಲ್ಲಿ ಕೆಪಿಪಿ ಯಿಂದ ದೇವರಾಜ ಅರಸರ ಪುಣ್ಯ ತಿಥಿ ಆಚರಣೆ

ಹುಣಸೂರು: ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರು ಸ್ಥಾಪಿಸಿದ ಹುಣಸೂರು ತಾಲೂಕಿನ ಹೊನ್ನಿ ಕೊಪ್ಪಲು ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ವತಿಯಿಂದ ಅರಸು ಪುಣ್ಯತಿಥಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಶಾಲೆಯ ಮಕ್ಕಳಿಗೆ ಉಪಹಾರ ಮತ್ತು ಪುಸ್ತಕಗಳನ್ನು ನೀಡುವ ಮೂಲಕ ಡಿ ದೇವರಾಜ ಅರಸು ಅವರ ಪುಣ್ಯತಿಥಿಯನ್ನು ಕೆಪಿಪಿ ರಾಜ್ಯಾಧ್ಯಕ್ಷ ಶಿವಣ್ಣ ಮತ್ತು ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಶಿವಣ್ಣ ಮತ್ತು ಚೆಲುವರಾಜು ಅವರು ದೇವರಾಜ ಅರಸು ಅವರು ಹುಣಸೂರಿಗೆ ನೀಡಿರುವ ಕೊಡುಗೆಯನ್ನು ಯಾರು ಮರೆಯಲಾಗದು ಎಂದು ಹೇಳಿದರು.

ಇಂದಿನಿಂದ ಒಂದನೇ ತಾರೀಖಿನವರೆಗೂ ಹುಣಸೂರು ತಾಲೂಕಿನ ಸರ್ಕಾರಿ ಶಾಲೆಯ ಒಂದು ಸಾವಿರ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಚೆಲುವರಾಜು ಈ ವೇಳೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ರಮೇಶ್ ಎನ್.ಕೆ.,ಶಿಕ್ಷಕರುಗಳಾದ ಗಿರೀಶ್ ಕುಮಾರ್ ಕೆ.ಎಸ್, ರೇಖಾ ಎಚ್‌.ಪಿ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷ ಸಿದ್ದರಾಜು ಹಾಗೂ ಗ್ರಾಮದ ಯಜಮಾನರುಗಳಾದ ಸೋಮಣ್ಣ ವೆಂಕಟಬೋವಿ, ಮಹದೇವ್ ಮತ್ತಿತರರು ಉಪಸ್ಥಿತರಿದ್ದರು.

ಸರ್ಕಾರಿ ಶಾಲೆಯಲ್ಲಿ ಕೆಪಿಪಿ ಯಿಂದ ದೇವರಾಜ ಅರಸರ ಪುಣ್ಯ ತಿಥಿ ಆಚರಣೆ Read More

ಮಳೆಗೆ ಮನೆ ಗೋಡೆ, ಮೇಲ್ಛಾವಣಿ ಕುಸಿತ

ಮೈಸೂರು: ರಾತ್ರಿ ಸುರಿದ ಮಳೆಗೆ ಮನೆ ಗೋಡೆ ಹಾಗೂ ಮೇಲ್ಛಾವಣಿ ಕುಸಿದ‌ ಘಟನೆ‌ ಜಿಲ್ಲೆಯ ಹುಣಸೂರು ತಾಲೂಕು ಕೊಳಘಟ್ಟ ಗ್ರಾಮದಲ್ಲಿ ನಡೆದಿದೆ.

ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕರಗಮ್ಮ ಎಂಬುವರ ಮನೆ ಕುಸಿದಿದೆ. ಮಧ್ಯರಾತ್ರಿ ಮತ್ತೊಂದು ಭಾಗವೂ ಕುಸಿದು ಬಿದ್ದಿದೆ.

ಆದರೆ ಕೂಡಲೇ ಕುಟುಂಬಸ್ಥರು ಹೊರಬಂದಿದ್ದಾರೆ ಹಾಗಾಗಿ ಪಾರಾಗಿದ್ದಾರೆ.ಬಡ ಕರಗಮ್ಮ ನವರಿಗೆ.ಪರಿಹಾರ ನೀಡುವಂತೆ ಕುಟುಂಬಸ್ಥರು ಹಾಗೂ ಸ್ಥಳೀಯರು ಕೋರಿದ್ದಾರೆ.

ಮಳೆಗೆ ಮನೆ ಗೋಡೆ, ಮೇಲ್ಛಾವಣಿ ಕುಸಿತ Read More

ಹುಣಸೂರು ಮೂಕನಹಳ್ಳಿ ಗ್ರಾಮದಲ್ಲಿ ಕಳವು; ನಗದು ಚಿನ್ನಾಭರಣ ದೋಚಿದ ಕಳ್ಳರು

ಮೈಸೂರು: ಜಿಲ್ಲೆಯ ಹುಣಸೂರಿನ ಮೂಕನಹಳ್ಳಿ ಗ್ರಾಮದ ಮನೆಯಲ್ಲಿ ಕಳ್ಳರು
ಲಾಕರ್‌ನಲ್ಲಿಟ್ಟಿದ್ದ 200ಗ್ರಾಂ ಚಿನ್ನಾಭರಣ 1 ಲಕ್ಷ ನಗದು ಕಳ್ಳತನ ಮಾಡಿದ್ದಾರೆ.

ಸ್ವಾಮಿಗೌಡ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು,ಮನೆಯಲ್ಲಿ ಯಾರೂ ಇರಲಿಲ್ಲ,ಹೊರಗಡೆ ಹೋಗಿದ್ದರು.

ಒಂದು ಚೈನ್, 4 ಉಂಗುರ, 2 ಜೊತೆ ಓಲೆ, ಕಡಗ, ಬ್ರಾಸ್ ಲೈಟ್
ಒಂದು ಲಕ್ಷರೂ ನಗದು ಕಳುವಾಗಿದೆ.
ಹುಣಸೂರು ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ‌ ನಡೆಸಿ ಮನೆಯವರಿಂದ‌ ಮಾಹಿತಿ ಪಡೆದರು.

ಹುಣಸೂರು ಮೂಕನಹಳ್ಳಿ ಗ್ರಾಮದಲ್ಲಿ ಕಳವು; ನಗದು ಚಿನ್ನಾಭರಣ ದೋಚಿದ ಕಳ್ಳರು Read More

ಸೆರ್ವೆ ಮಾಡಲು ಬಂದ ಅಧಿಕಾರಿಗಳಿಗೆ ಮೊಚ್ಚು ತೋರಿಸಿ, ಬೆಂಕಿ ಉಗುಳಿ ಬೆದರಿಕೆ

ಮೈಸೂರು: ಜಮೀನು ಸರ್ವೆ ಮಾಡಲು ಬಂದ ಅಧಿಕಾರಿಗಳಿಗೆ ಮೊಚ್ಚು ತೋರಿಸಿ ಬೆಂಕಿ ಉಗುಳಿ ಬೆದರಿಸಿದ ಘಟನೆ ಜಿಲ್ಲೆಯ ಹುಣಸೂರು ತಾಲೂಕು ಹನಗೋಡು ಹೋಬಳಿಯಲ್ಲಿ ನಡೆದಿದೆ.

ಶಿಂಡೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಲವ ಎಂಬಾತ ಮೊಚ್ಚು ತೋರಿಸಿ ಬೆಂಕಿ ಉಗುಳಿ ಬೆದರಿಸಿದ್ದಾನೆ.

ಸರ್ವೆ ಅಧಿಕಾರಿಗಳ ಜೊತೆ ಪೊಲೀಸರು ಇದ್ದರೂ ಈತ ಬೆದರಿಸಿದ್ದಾನೆ,ಈತ ಬೆಂಕಿ ಉಗುಳಿ ಬೆದರಿಕೆ ಹಾಕಿರುವ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.

ಹುಣಸೂರು ತಾಲೂಕು ಹನಗೋಡು ಹೋಬಳಿ ಶಿಂಡೇನಹಳ್ಳಿ ಗ್ರಾಮದ ಸರ್ವೆ ನಂ.66/12 ರ 4 ಎಕರೆ 3 ಗುಂಟೆ ಜಮೀನು ವಿವಾದವಿದ್ದು ನ್ಯಾಯಾಲಯದ ಮೆಟ್ಟಿಲೇರಿದೆ.

ಮಂಗಳವಾರಮ್ಮ ಹಾಗೂ ಲವ,ಕುಶ ಎಂಬುವರ ನಡುವೆ ವಿವಾದ ನಡೆದಿದ್ದು ಕೆಲವು ದಿನಗಳ ಹಿಂದೆ ಮಂಗಳವಾರಮ್ಮ ಪರವಾಗಿ ತೀರ್ಪು ನೀಡಲಾಗಿದೆ.ಹಾಗಾಗಿ ಜಮೀನು ಸರ್ವೆ ನಡೆಸಿ ರಕ್ಷಣೆ ಮಾಡಿಕೊಡುವಂತೆ ಸರ್ವೆ ಅಧಿಕಾರಿಗಳಿಗೆ ಎಸಿ ನ್ಯಾಯಾಲಯದಲ್ಲಿ ಆದೇಶವಾಗಿದೆ.

ಈ ಆದೇಶದ ಹಿನ್ನೆಲೆಯಲ್ಲಿ ಸರ್ವೆ ಮಾಡಲು ಬಂದ ಅಧಿಕಾರಿಗಳ ಮೇಲೆ ಆವಾಜ್ ಹಾಕಿ ಹಿಂದೆ ಕಳಿಸಿದ ಪ್ರಕರಣಗಳೂ ನಡೆದಿವೆ.

ಸೂಕ್ತ ಪೊಲೀಸ್ ಬಂದೋ ಬಸ್ತ್ ನಡುವೆ ಎಡಿಎಲ್ ಆರ್ ಮಹಮದ್ ಹುಸೇನ್,ಸರ್ವೆ ಅಧಿಕಾರಿಗಳಾದ ಕುಮಾರ್,ಮಂಜು ಅವರು ಬಂದಾಗ ಲವ ಮೊಚ್ಚು ಸಮೇತ ಬಂದು ಬೆದರಿಕೆ ಹಾಕಿದ್ದಾನೆ.

ಪೊಲೀಸ್ ಸಿಬ್ಬಂದಿಗಳಿದ್ದರೂ ಕೇರ್ ಮಾಡದೆ ಆವಾಜ್ ಹಾಕಿದ್ದಲ್ಲದೆ ಸೀಮೆಣ್ಣೆ ಕುಡಿದು ಬೆಂಕಿ ಉಗುಳಿ ಬೆದರಿಕೆ ಹಾಕಿದ್ದಾನೆ.

ಪೊಲೀಸರು ಮಧ್ಯ ಪ್ರವೇಶಿಸಿ ಲವ ಕೈಲಿದ್ದ ಮೊಚ್ಚು ವಶಪಡಿಸಿಕೊಂಡಿದ್ದಾರೆ.ಲವ ನಿಗೆ ಕೆಂಡ,ಹರೀಶ,ಸೋಮೇಗೌಡ ಸಹಕರಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ದೂರು ದಾಖಲಿಸುವಂತೆ ಸೂಚಿಸಲಾಗಿದೆ.

ಸೆರ್ವೆ ಮಾಡಲು ಬಂದ ಅಧಿಕಾರಿಗಳಿಗೆ ಮೊಚ್ಚು ತೋರಿಸಿ, ಬೆಂಕಿ ಉಗುಳಿ ಬೆದರಿಕೆ Read More

ಮಹಿಳೆಯ ಹಿಂಬಾಲಿಸಿ ಸರ ದೋಚಿ ಗ್ರಾಮಸ್ಥರಿಗೆ‌ ಸಿಕ್ಕಿಬಿದ್ದ ಐನಾತಿ ಕಳ್ಳ

ಮೈಸೂರು: ಜಮೀನಿಗೆ ಹೋಗುತ್ತಿದ್ದ ಮಹಿಳೆಯನ್ನ ಐಸ್ ಮಾರಾಟ ಮಾಡುವ ನೆಪದಲ್ಲಿ ಹಿಂಬಾಲಿಸಿ, ಹಲ್ಲೆ ನಡೆಸಿ ಚಿನ್ನದ ಸರ ಕಿತ್ತು ಪರಾರಿಯಾದ
ಐನಾತಿ ಸರಗಳ್ಳನನ್ನು ಗ್ರಾಮದವರೆ ಹಿಡಿದ ಪ್ರಕರಣ ಹೂಣಸೂರಿನಲ್ಲಿ ನಡೆದಿದೆ.

ಹುಣಸೂರು ಪೊಲೀಸರು ಬಂಧಿಸಿದ್ದಾರೆ.

ಹುಣಸೂರು ತಾಲೂಕು ಹೊಸವಾರಂಚಿ ಗ್ರಾಮದಲ್ಲಿ ಘಟನೆ ನಡೆದಿದ್ದು,ಕೆಂಪರಾಜು ಸಿಕ್ಕಿಬಿದ್ದ ಆರೋಪಿ.

ಗ್ರಾಮದ ಜ್ಯೋತಿ ಎಂಬುವರು ಅವರೆಕಾಯಿ ಕೊಯ್ಯಲು ಜಮೀನಿಗೆ ತೆರಳುತ್ತಿದ್ದರು.ಈ ವೇಳೆ ಕೆಂಪರಾಜು ಐಸ್ ಕ್ರೀಂ ಮಾರಾಟ ಮಾಡುವವನಂತೆ ಹಿಂಬಾಲಿಸಿದ್ದಾನೆ.

ಜ್ಯೋತಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕೆಂಪರಾಜು ಕಲ್ಲು ಎತ್ತಿ ತಲೆಮೇಲೆ ಹಾಕಿ ಕೊಲ್ಲುವ ಬೆದರಿಕೆ ಒಡ್ಡಿ 35 ಗ್ರಾಂ ಚಿನ್ನದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾನೆ.

ತಕ್ಷಣ ಜ್ಯೋತಿ ಸಮೀಪದಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.

ಕೆಂಪರಾಜು ನನ್ನು ಪತ್ತೆ ಹಚ್ಚಿದ ಗ್ರಾಮಸ್ಥರು ನಾಲ್ಕು ಧರ್ಮದೇಟು ಹಾಕಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ಚಿನ್ನದ ಸರ ವಶಪಡಿಸಿಕೊಂಡ ಹುಣಸೂರು ಪೊಲೀಸರು ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಹಿಳೆಯ ಹಿಂಬಾಲಿಸಿ ಸರ ದೋಚಿ ಗ್ರಾಮಸ್ಥರಿಗೆ‌ ಸಿಕ್ಕಿಬಿದ್ದ ಐನಾತಿ ಕಳ್ಳ Read More

ಗಾಯಗೊಂಡಿದ್ದ ಹುಲಿ ಬನ್ನೇರುಘಟ್ಟ ಉದ್ಯಾನವನಕ್ಕೆ ಸ್ಥಳಾಂತರ

ಮೈಸೂರು: ನಾಗರಹೊಳೆ ಉದ್ಯಾನವನದಲ್ಲಿ ಹುಲಿಗಳ ಕಾದಾಟದಲ್ಲಿ ತೀವ್ರ ಗಾಯಗೊಂಡಿದ್ದ ಹುಲಿಯನ್ನು ರಕ್ಷಿಸಿ, ಸೂಕ್ತ ಚಿಕಿತ್ಸೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ

ಸುಮಾರು 11 ವರ್ಷದ ಮೂಗ ಎಂದೇ ಕರೆಯಲಾಗುತ್ತಿದ್ದ ಗಂಡು ಹುಲಿ‌‌ ಕಾದಾಟದಲ್ಲಿ ತೀವ್ರ ರಕ್ತಸ್ರಾವ ದಿಂದ ಚಿಂತಾಜನಕ ಸ್ಥಿತಿಯಲ್ಲಿತ್ತು,ಅದನ್ನು ರಕ್ಷಿಸಿ, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ.

ನಾಗರಹೊಳೆ ವಲಯದ ಕುಂತೂರು ಅರಣ್ಯ ಸಫಾರಿ ಪ್ರದೇಶದಲ್ಲಿ ಪ್ರವಾಸಿಗರ ಆಕರ್ಷಕವಾಗಿದ್ದ ಮೂಗ ಹುಲಿ ಇನ್ನೊಂದು ಗಂಡು ಹುಲಿಯ ಜೊತೆ ಕಾದಾಟ ನಡೆಸಿ ತೀವ್ರ ಗಾಯಗೊಂಡಿತ್ತು.

ಮೂಗ ಮೂರ್‍ನಾಲ್ಕು ದಿನಗಳ ಹಿಂದೆ ಕುಟ್ಟ-ಪೊನ್ನಂಪೇಟೆ ಮುಖ್ಯ ರಸ್ತೆ ಮಧ್ಯದಲ್ಲೇ ನಿತ್ರಾದಿಂದ‌ ಕುಳಿತಿತ್ತು.

ನಾಗರಹೊಳೆ ಡಿಸಿಎಫ್‌ ಸೀಮಾ ಪಿ.ಎ.ಅವರ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಿ ಶಾರ್ಪ್‌ ಶೂಟರ್‌ ಕೆ.ಪಿ.ರಂಜನ್‌ ಅವರು ಅರವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿದ್ದರು.

ಅರಣ್ಯಇಲಾಖೆಯ ಪಶು ವೈದ್ಯಾಧಿಕಾರಿಗಳಾದ ಡಾ.ಎಚ್‌.ರಮೇಶ್‌, ಡಾ.ವಾಸಿಂ ಮಿರ್ಜಾ ಅವರು ನಿತ್ರಾಣಗೊಂಡಿದ್ದ ಹುಲಿಯ ಗಾಯಗಳಿಗೆ ಪ್ರಥಮ ಚಿಕಿತ್ಸೆ ನೀಡಿದರು.

ನಂತರ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಹುಲಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ವಾಹನದ ಮೂಲಕ ಸ್ಥಳಾಂತರಿಸಲಾಯಿತು ಎಂದು ನಾಗರಹೊಳೆ ಹುಲಿಯೋಜನೆ ನಿರ್ದೇಶಕಿ ಪಿ.ಎ.ಸೀಮಾ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ನಾಗರಹೊಳೆ ಉಪವಿಭಾಗದ ಎಸಿಎಫ್‌ ಅನನ್ಯಕುಮಾರ್‌, ಆರ್‌ಎಫ್‌ಒ ಎಚ್‌.ಎಂ.ಮಂಜುನಾಥ್‌, ಡಿಆರ್‌ಎಫ್‌ಒ ಗಳಾದ ಗುರುಮೂರ್ತಿ, ನಾಗರಾಜು, ಚೇತನ್‌ಕುಮಾರ್‌ಕೋಳೂರ, ಖಂಡೆ ಪಾಲ್ಗೊಂಡಿದ್ದರು.

ಗಾಯಗೊಂಡಿದ್ದ ಹುಲಿ ಬನ್ನೇರುಘಟ್ಟ ಉದ್ಯಾನವನಕ್ಕೆ ಸ್ಥಳಾಂತರ Read More

ಅನೈತಿಕ ಸಂಭಂಧ ವಿರೋಧಿಸಿದ ಪತ್ನಿಯನ್ನು ಕೊಂದ ಪಾಪಿ ಪತಿ

ಮೈಸೂರು: ಅನೈತಿಕ ಸಂಭಂಧ ವಿರೋಧಿಸಿದ ಪತ್ನಿಯನ್ನು ಪತಿ ಭೀಕರವಾಗಿ ಹತ್ಯೆ ಮಾಡಿ ಪೊಲೀಸರಿಗೆ ಶರಣಾದ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಬಿಳಿಕೆರೆ ಹೋಬಳಿ ಬೆಂಕಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ರೋಜಾ(37) ಕೊಲೆಯಾದ ದುರ್ದೈವಿ.

ಪತಿ ಸ್ವಾಮಿನಾಯಕ ಪತ್ನಿಯನ್ನು ಕೊಂದು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

12 ವರ್ಷಗಳ ಹಿಂದೆ ರೋಜಾ ಮತ್ತು ಸ್ವಾಮಿನಾಯಕ ವಿವಾಹವಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಅನ್ಯೋನ್ಯ ಜೀವನ ಸಾಗಿಸುತ್ತಿದ್ದರು.

5 ವರ್ಷಗಳ ಹಿಂದೆ ಪತಿಯನ್ನ ಕಳೆದುಕೊಂಡ ಮಹಿಳೆ ಸ್ವಾಮಿನಾಯಕನ ಜೊತೆ ಸಂಭಂಧ ಬೆಳೆಸಿದ್ದಾಳೆ.ಈ ವಿಚಾರ ರೋಜಾ ಗಮನಕ್ಕೆ ಬಂದು ಜಗಳವಾಗಿದೆ.

ಆಗ ಸ್ವಾಮಿನಾಯಕನಿಗೆ ಕುಟುಂಬಸ್ಥರು ಬುದ್ದಿವಾದ ಹೇಳಿದ್ದಾರೆ.ಆದರೂ‌ ಸ್ವಾಮಿನಾಯಕ ಮಹಿಳೆಯ ಜೊತೆಗಿನ ಸಂಬಂಧ ಮುಂದುವರಿಸಿದ್ದ.

ಇದೇ ವಿಚಾರದಲ್ಲಿ ಗಂಡ ಹೆಂಡತಿ ಮತ್ತೆ ಜಗಳವಾಡಿದ್ದಾರೆ,ರೋಜಾ ಮಹಿಳೆಯ ಸಂಬಂಧ ಬಿಡುವಂತೆ ಪಟ್ಟು ಹಿಡಿದಿದ್ದಾಳೆ.

ಹೊರಗೆ ಹೋಗಿದ್ದ ಸ್ವಾಮಿನಾಯಕ ನೀರು ಹಿಡಿಯಲು ಮನೆಯಿಂದ ಹೊರಬಂದ ರೋಜಾ ಮೇಲೆ ಮೊಚ್ಚಿನಿಂದ ತೀವ್ರವಾಗಿ ಹಲ್ಲೆ ಮಾಡಿದ್ದಾನೆ.ಇದರಿಂದ ರೋಜಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ನಂತರ ಸ್ವಾಮಿನಾಯಕ ಬಿಳಿಕೆರೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್ ಹಾಗೂ ಡಿವೈಎಸ್ಪಿ ಗೋಪಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು,ಬಿಳಿಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅನೈತಿಕ ಸಂಭಂಧ ವಿರೋಧಿಸಿದ ಪತ್ನಿಯನ್ನು ಕೊಂದ ಪಾಪಿ ಪತಿ Read More