ಹುಣಸೂರಲ್ಲಿ ವಿವಿಧ‌ ಸಂಘಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಹುಣಸೂರು,ನವೆಂಬರ್.೧: ಹುಣಸೂರಿನ ಮಂಟಿ ವೃತ್ತದಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ, ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಹಾಗೂ ಆಟೋ ಚಾಲಕರ ಸಂಘದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.

ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಪೂಜೆ ಸಲ್ಲಿಸಿ ನಂತರ ಸಾರ್ವಜನಿಕರಿಗೆ ಹಣ್ಣು ಹಂಪಲು ವಿತರಿಸಲಾಯಿತು, ಮಧ್ಯಾಹ್ನ ಅನ್ನದಾನ ಹಮ್ಮಿಕೊಳ್ಳಲಾಗಿತ್ತು.

ನಂತರ‌ ಸಂಗೀತ ರಸಸಂಜೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ವೇಳೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರನ್ನು ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಮೂರೂ ಸಂಘಗಳ ಅಧ್ಯಕ್ಷರು,ಪದಾಧಿಕಾರಿಗಳು‌ ಹಾಗೂ ಕನ್ನಡಾಭಿಮಾನಿಗಳು‌ ಹಾಜರಿದ್ದರು.

ಹುಣಸೂರಲ್ಲಿ ವಿವಿಧ‌ ಸಂಘಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆ Read More

ಹುಣಸೂರಿನ ಸಂವಿಧಾನ ಸರ್ಕಲ್ ಗುಂಡಿಮಯ:ಕೇಳೋರೇ ಇಲ್ಲ!

ಹುಣಸೂರು: ಹುಣಸೂರಿನ ಹೃದಯ ಭಾಗ, ನಗರ ಸಭೆ ಮುಂಭಾಗದಲ್ಲೇ ಇರುವ ಸಂವಿಧಾನ ವೃತ್ತದ ಸುತ್ತಮುತ್ತ ದೊಡ್ಡ ದೊಡ್ಡ ಗುಂಡಿಗಳಾಗಿದ್ದು ಮಳೆ ನೀರು ತುಂಬಿ ರಾಡಿಯಾಗಿದ್ದರು ಗಮನಿಸುವವರೇ ಇಲ್ಲದಿರುವುದು ದುರಂತವೇ ಸರಿ.

ಈ ವೃತ್ತವನ್ನು ನೋಡಿದರೆ‌ ರಸ್ತೆಯೊ ಕೆಸರು ಗದ್ದೆಯೊ ಅನಿಸುತ್ತದೆ.ಬರೀ ಹೊಂಡಗಳೇ ಕಾಣುತ್ತವೆ.ನೀರು ತುಂಬಿದಾಗ ವಾಹನ ಸವಾರರು ಕಾಣದೆ ಗುಂಡಿಗೆ ಬಿದ್ದು‌ ಗಾಯಗೊಂಡಿದ್ದಾರೆ.

ಸ್ಥಳೀಯ ಶಾಸಕ ಜಿ.ಡಿ.ಹರೀಶ್ ಗೌಡರು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ.ಅವರ ಕಣ್ಣಿಗೆ ಈ‌ ರಸ್ತೆ ಗಂಡಿಗಳು ಕಾಣುವುದಿಲ್ಲವೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ‌ ಹುಣಸೂರು ತಾಲೂಕು‌ ಅಧ್ಯಕ್ಷ ಚೆಲುವರಾಜು ಕಾರವಾಗಿ ಪ್ರಶ್ನಿಸಿದ್ದಾರೆ.

ಇಡೀ ಹುಣಸೂರು ಗುಂಡಿಮಯವಾಗಿದೆ.
ನಗರಸಭೆ ಮುಂಭಾಗದಲ್ಲೇ ಸಂವಿಧಾನ ಸರ್ಕಲ್ ಇದೆ.ಇಲ್ಲಿನ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಹೆಸರಿಗೆ ಸಂವಿಧಾನ ಸರ್ಕಲ್, ಆದರೆ ಇದಕ್ಕೆ ಕನಿಷ್ಟ ಒಂದು ತಡೆಗೋಡೆ ಕೂಡಾ ಇಲ್ಲದಿರುವುದು ದುರ್ದೈವದ ಸಂಗತಿ.

ಹೀಗೆ ವೃತ್ತಗಳನ್ನು ಮಾಡಿ ಅಭಿವೃದ್ಧಿ ಪಡಿಸದೆ ಅಂತಹಾ ಮಹಾನ್ ನಾಯಕನಿಗೆ ಏಕೆ ಅವಮಾನ‌ ಮಾಡುತ್ತೀರಿ ಎಂದು ಚೆಲುವರಾಜು ಕಾರವಾಗಿ ಪ್ರಶ್ನಿಸಿದ್ದಾರೆ.

ಈ ವೃತ್ತದಲ್ಲಿ ಸದಾ ವಾಹನ‌ ಸಂಚಾರ ಇದ್ದೇ ಇರುತ್ತದೆ.ಜನಸಂದಣಿಯೂ‌ ಹೆಚ್ಚಿರುತ್ತದೆ. ಗುಂಡಿಗಳ ನೀರು ಬೇರೆಯವರಿಗೆ ಎರಚಿ ಜಗಳಗಳಾದ ಉದಾಹರಣೆ ಕೂಡಾ ಇದೆ.

ಕೂಡಲೇ ಸಂವಿಧಾನ ಸರ್ಕಲ್ ಸರಿಪಡಿಸಬೇಕು ಮತ್ತು ಅಂಬೇಡ್ಕರ್ ಅವರ ಪ್ರತಿಮೆ ಅಥವಾ ಭಾವಚಿತ್ರವನ್ನು ಅಳವಡಿಸಬೇಕು, ಈ ಭಾಗದ ರಸ್ತೆಗಳ ಗುಂಡಿಗಳನ್ನು ಮುಚ್ಚಿ ಸರಿಪಡಿಸಿ ರಸ್ತೆಯನ್ನು ಅಭಿವೃದ್ಧಿಪಡಿಸಿ ವೃತ್ತವನ್ನು ಸುಂದರವಾಗಿ ಕಾಣುವಂತೆ ಮಾಡಬೇಕು ಎಂದು ಚೆಲುವರಾಜು ಅವರು ಶಾಸಕರು ಮತ್ತು ನಗರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಹುಣಸೂರಿನ ಸಂವಿಧಾನ ಸರ್ಕಲ್ ಗುಂಡಿಮಯ:ಕೇಳೋರೇ ಇಲ್ಲ! Read More

ಹುಣಸೂರಿನಲ್ಲಿ ಅಕ್ರಮವಾಗಿ ಬೆಲೆಬಾಳುವ ಮರಗಳಿಗೆ ಕತ್ತರಿ:ಚೆಲುವರಾಜು ಆಕ್ರೋಶ

ಹುಣಸೂರು: ಹುಣಸೂರು ಸಮೀಪ ಬೈಪಾಸ್ ರಸ್ತೆ ಹಾಳಗೆರೆ ಬಳಿ ಸುಮಾರು ಒಂದೂವರೆ ಕಿಲೋಮೀಟರ್ ಉದ್ದಕ್ಕೂ ರಸ್ತೆ ಬದಿ ಇದ್ದ ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಕತ್ತರಿಸಲಾಗಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ‌ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ಇದರಲ್ಲಿ ಸ್ಥಳೀಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು, ಇತರೆ ಅಧಿಕಾರಿಗಳು, ಜನಪ್ರತಿನಿಧಿಗಳು ಯಾರು ಶಾಮಿಲಾಗಿದ್ದಾರೋ ತಿಳಿಯದು, ಆದರೆ ಮರ ಕತ್ತರಿಸಿರುವುದು ಸತ್ಯ. ಈಗಾಗಲೇ ಮರಗಳನ್ನು ಕತ್ತರಿಸಿ ತುಂಡು ಮಾಡಲಾಗಿದ್ದು ಅವುಗಳನ್ನು ಸಾಗಿಸಲು ನಾಲ್ಕೈದು ಲಾರಿಗಳನ್ನು ಇಲ್ಲಿ ನಿಲ್ಲಿಸಲಾಗಿದೆ.
ನಾನು ಈ ಕುರಿತು ಈಗಾಗಲೇ ಸಂಬಂಧಪಟ್ಟ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಚೆಲುವರಾಜು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.

ದೂರು ಆಲಿಸಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮರ ಮತ್ತು ಲಾರಿಗಳನ್ನು ಸ್ಥಳದಿಂದ ಎತ್ತಲು ಅವಕಾಶ ನೀಡಿಲ್ಲ, ದಾಖಲೆಗಳನ್ನು ತೋರಿಸಿ ತೆಗೆದು ಕೊಂಡು ಹೋಗಬಹುದು ಎಂದು ಸ್ಥಳದಲ್ಲಿದ್ದವರಿಗೆ ತಾಕೀತು ಮಾಡಿ ಮರದ ತುಂಡುಗಳು ಅಲ್ಲೇ ಉಳಿಯುವಂತೆ ಮಾಡಿದ್ದಾರೆ, ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಅವರು ತಿಳಿಸಿದರು.

ರಸ್ತೆ ಉದ್ದಕ್ಕೂ ಗಿಡ ಮರಗಳಿದ್ದರೆ ದಾರಿಹೋಕರಿಗೆ ನೆರಳಾಗಿರುತ್ತದೆ ಮತ್ತು ಪರಿಸರ ಸ್ವಚ್ಛತೆಯಿಂದ ಇರುತ್ತದೆ ಆದರೆ ಇವರು ಮರಗಳನ್ನು ಕಡಿಯುವ ಮೂಲಕ ಸಾಲಮರದ ತ್ತಿಮ್ಮಕ್ಕ ಅವರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲಿನ ಸಂಬಂಧಪಟ್ಟ ಅಧಿಕಾರಿಗಳನ್ನು ಮರ ಕತ್ತರಿಸಿರುವ ಬಗ್ಗೆ ಕೇಳಿದರೆ ಟೆಂಡರ್ ಆಗಿದೆ, ಟೆಂಡರ್ ಪಡೆದವರು ಮರ ಕತ್ತರಿಸಿ ತೆಗೆದುಕೊಂಡು ಹೋಗುತ್ತಾರೆ ಎಂದು ಉಡಾಫೆ ಉತ್ತರ ನೀಡುತ್ತಾರೆ, ಆದರೆ ಒಂದು ಎರಡು ಮರಗಳಿಗೆ ಟೆಂಡರ್ ಆಗಿದ್ದರೆ ಇವರು ರಸ್ತೆ ಉದ್ದಕ್ಕೂ ಇರುವ ಎಲ್ಲ ಮರಗಳನ್ನು ಕಡಿದು, ಅಕ್ರಮ ಎಸಗಿದ್ದಾರೆ. ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಮರ ಕತ್ತರಿಸಿರುವವರ ವಿರುದ್ಧ ಮತ್ತು ಟೆಂಡರ್ ಪಡೆದಿರುವವರ ವಿರುದ್ಧ ಹಾಗೂ ಮರ ಕತ್ತರಿಸಲು ಅನುವು ಮಾಡಿಕೊಟ್ಟ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಚೆಲುವರಾಜು ಆಗ್ರಹಿಸಿದ್ದಾರೆ.

ಶಿಥಿಲವಾಗಿರುವ ಮರಗಳನ್ನು ಕತ್ತರಿಸದಿದ್ದರೆ ಅನಾಹುತ ಆಗುತ್ತದೆ.ಅಂತವನ್ನು ಕಡಿದರೆ ನಮ್ಮ ಅಭ್ಯಂತರ ಇಲ್ಲ, ಆದರೆ ಚೆನ್ನಾಗಿರುವ ಇನ್ನು ಬಹಳ‌ವರ್ಷ ಬಾಳುವ, ಜನರಿಗೆ ನೆರಳು ಕೊಡುವ ಬೆಲೆಬಾಳುವ ಮರಗಳನ್ನು ಕಡಿದು ಹಾಕುತ್ತಿದ್ದಾರೆ ಇದು ಅಕ್ರಮ, ಹಗಲು ದರೋಡೆ ಎಂದು ಕರ್ನಾಟಕ ಪ್ರಜಾ ಪಾರ್ಟಿಯವರು ಕೆಂಡ ಕಾರಿದ್ದಾರೆ.

ಮರಗಳನ್ನು ಕತ್ತರಿಸಿ ಬೇರೆ ಕಡೆ ಸಾಗಿಸಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೀಗೆ ಅಕ್ರಮ ಎಸಗುವವರನ್ನು ಹೇಳುವವರು ಕೇಳುವವರು ಯಾರು ಇಲ್ಲವೇ ಎಂದು ಚೆಲುವರಾಜು ತೀವ್ರವಾಗಿ ಖಂಡಿಸಿದ್ದಾರೆ.

ತಕ್ಷಣ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು, ಪೊಲೀಸ್ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಮುಂದೆ ಉತ್ತಮವಾದ ಚೆನ್ನಾಗಿರುವ ಮರಗಳನ್ನು ಕಡಿಯದಂತೆ ನೋಡಿಕೊಳ್ಳಬೇಕು ಹಾಗೂ ಮರಗಳನ್ನು ಕತ್ತರಿಸಿ ಅಕ್ರಮ ಮಾಡಿರುವ ವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲೇಬೇಕು ಇಲ್ಲದಿದ್ದರೆ ಕರ್ನಾಟಕ ಪ್ರಜಾ ಪಾರ್ಟಿಯಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ಚೆಲುವರಾಜು ಎಚ್ಚರಿಸಿದ್ದಾರೆ.

ಹುಣಸೂರಿನಲ್ಲಿ ಅಕ್ರಮವಾಗಿ ಬೆಲೆಬಾಳುವ ಮರಗಳಿಗೆ ಕತ್ತರಿ:ಚೆಲುವರಾಜು ಆಕ್ರೋಶ Read More

ಅನಧಿಕೃತ ಮನೆ ನಿರ್ಮಾಣ ತೆರವಿಗೆ ದಲಿತ ಸಂಘರ್ಷ ಸಮಿತಿ ಆಗ್ರಹ

ಹುಣಸೂರು: ಹುಣಸೂರು ತಾಲ್ಲೂಕು ಕಸಬಾ ಹೋಬಳಿ, ಚಿಕ್ಕಹುಣಸೂರು ಗ್ರಾಮದ ವಾಚಳ್ಳಿ ರಸ್ತೆಯಲ್ಲಿರುವ ಅಂಬೇಡ್ಕರ್ ನಗರದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಲು ಮೀಸಲಿಟ್ಟಿದ್ದ ಜಾಗದಲ್ಲಿ ಅನಧಿಕೃತ ಕಟ್ಟಡ ತಲೆ ಎತ್ತುತ್ತಿದ್ದು ಕೂಡಲೇ ಇದನ್ನು ತಡೆ ಹಿಡಿಯಬೇಕೆಂದು
ಹುಣಸೂರು ತಹಶೀಲ್ದಾರ್ ಮಂಜುನಾಥ್
ಅವರಿಗೆ ದಲಿತ ಸಂಘರ್ಷ ಸಮಿತಿ ಹುಣಸೂರು ತಾಲೂಕು ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ರಾಮಕೃಷ್ಣ, ರಾಜ,ಶಿವರಾಜ್,
ಕೃಷ್ಣ,ಸಿದ್ದೇಶ ಎ.ಎಸ್, ಚೆಲುವರಾಜು,
ನಾರಾಯಣ ಮತ್ತಿತರರು ತಹಸೀಲ್ದಾರ್ ಮಂಜುನಾಥ್ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.

ಕಟ್ಟಡ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಸಮಿತಿಯ ಸದಸ್ಯರು ಮತ್ತು ಶಿಶುಪಾಲನಾ ಇಲಾಖೆ ಸಿಬ್ಬಂದಿ ಭೇಟಿ ಕೊಟ್ಟಾಗ ಏಕಾಏಕಿ ಅಲ್ಲಿದ್ದವರು ಆಕ್ರಮಣಕ್ಕೂ ಮುಂದಾದರು ಎಂದು ಆರೋಪಿಸಿದ್ದಾರೆ.

ಸರ್ಕಾರಿ ಜಾಗದಲ್ಲಿ ಅದೂ ಅಂಗನವಾಡಿ ಕೇಂದ್ರ ನಿರ್ಮಾಣವಾಗಬೇಕಾದ ಜಾಗದಲ್ಲಿ ಖಾಸಗಿ ವ್ಯಕ್ತಿಗಳಿಗೆ ಮನೆ ಕಟ್ಟಿಕೊಳ್ಳಲು ಅನುಮತಿ ಕೊಟ್ಟವರು ಯಾರು? ಕೂಡಲೇ ಅಂತವರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಅನದಿಕೃತ ಮನೆ ತೆರವುಗೊಳಿಸಬೇಕು ಹಾಗೂ ಅಲ್ಲಿ ಅಂಗನವಾಡಿ ಕಟ್ಟಡವನ್ನೇ ನಿರ್ಮಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದರು.

ಪದಾಧಿಕಾರಿಗಳಿಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಕೂಡ ಸಾತ್ ನೀಡಿದರು.

ಅನಧಿಕೃತ ಮನೆ ನಿರ್ಮಾಣ ತೆರವಿಗೆ ದಲಿತ ಸಂಘರ್ಷ ಸಮಿತಿ ಆಗ್ರಹ Read More

ಹುಣಸೂರು ನಗರಸಭಾ ಮೈದಾನದಲ್ಲಿ ವಸ್ತುಪ್ರದರ್ಶನ ತೆರವಿಗೆ ಚೆಲುವರಾಜು ಆಗ್ರಹ

ಹುಣಸೂರು: ಹುಣಸೂರು ನಗರಸಭಾ ಮೈದಾನದಲ್ಲಿ ಮನರಂಜನಾ ವಸ್ತುಪ್ರದರ್ಶನ ನಡೆಯುತ್ತಿದ್ದು,ಇದರ ಅವಧಿ ಮುಗಿದಿದ್ದರೂ, ಇನ್ನೂ ತೆರವುಗೊಳಿಸಿಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾ. ಅಧ್ಯಕ್ಷ ಚೆಲುವರಾಜು ಗಂಭೀರ ಆರೋಪ‌ಮಾಡಿದ್ದಾರೆ.

ಈ ಜಾಗ ಸರ್ಕಾರಿ ಸ್ವತ್ತಾಗಿದ್ದು, ಈ ಹಿಂದೆಯೂ ವಸ್ತುಪ್ರದರ್ಶನ ಅಳವಡಿಸಲು ನಾವು ವಿರೋಧಿಸಿದ್ದರೂ ಅಧಿಕಾರಿಗಳು ಒಂದು ತಿಂಗಳ ಕಾಲಾವಕಾಶ ನೀಡಿ ಅನುಮತಿ ನೀಡಿದ್ದರಿಂದ ವಸ್ತುಪ್ರದರ್ಶನ ನಡೆಯುತ್ತಿದೆ.

ಇದು ಸರ್ಕಾರಿ ಆಟದ ಮೈದಾನವಾಗಿದೆ.ಇಲ್ಲಿ ವಸ್ತುಪ್ರದರ್ಶನ ನಡೆಯುತ್ತಿರುವುದರಿಂದ ಮಕ್ಕಳಿಗೆ ಆಟವಾಡಲು ಹಾಗೂ ಸಾರ್ವಜನಿಕರು ವಾಯುವಿಹಾರ ಮಾಡಲು ಬಹಳ ತೊಂದರೆಯಾಗಿದೆ ಚೆಲುವರಾಜು ತಿಳಿಸಿದ್ದಾರೆ.

ಈಗಾಗಲೇ ವಸ್ತುಪ್ರದರ್ಶನದ ಅವಧಿ ಮುಗಿದಿರುವುದರಿಂದ ಇನ್ನು ಎರಡು ದಿನಗಳ ಒಳಗಾಗಿ ನಗರಸಭಾ ಮೈದಾನದಲ್ಲಿ ಅಳವಡಿಸಲಾಗಿರುವ ವಸ್ತುಪ್ರದರ್ಶನವನ್ನು ತೆರವುಗೊಳಿಸಬೇಕೆಂದು ಅವರು
ಒತ್ತಾಯಿಸಿದ್ದಾರೆ.

ಒಂದು ವೇಳೆ ಈ ಅವಧಿಯೊಳಗಾಗಿ ವಸ್ತುಪ್ರದರ್ಶನವನ್ನು ತೆರವುಗೊಳಿಸದಿದ್ದಲ್ಲಿ ಇನ್ನು ಮುಂದೆ ಏನೇ ಆದರೂ ನಗರಸಭೆ ಅಧಿಕಾರಿಗಳು, ಆಯುಕ್ತರು ಜವಾಬ್ದಾರರು ಎಂದು ಅವರು ಎಚ್ಚರಿಸಿದ್ದಾರೆ.

ಹಾಗೂ ಈ‌ ವಿಷಯದ ಬಗ್ಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಚೆಲುವರಾಜು ತಿಳಿಸಿದ್ದಾರೆ.

ಹುಣಸೂರು ನಗರಸಭಾ ಮೈದಾನದಲ್ಲಿ ವಸ್ತುಪ್ರದರ್ಶನ ತೆರವಿಗೆ ಚೆಲುವರಾಜು ಆಗ್ರಹ Read More

ಹೊನ್ನಿಕುಪ್ಪೆ ಗ್ರಾಮದಲ್ಲಿ ಗಬ್ಬೆದ್ದು ಹೋಗಿವೆ ಚರಂಡಿಗಳು:ರೋಗದ ಭೀತಿಯಲ್ಲಿ ಜನತೆ

ಹುಣಸೂರು: ಹುಣಸೂರು ತಾಲೂಕು ಉದ್ದೂರು ಕಾವಲ್ ಗ್ರಮ ಪಂಚಾಯತಿ ವ್ಯಾಪ್ತಿಯ ಹೊನ್ನಿಕುಪ್ಪೆ ಗ್ರಾಮದಲ್ಲಿ ‌ಚರಂಡಿಗಳು ತುಂಬಿ ಹುಳುಗಳು,ಸೊಳ್ಳೆಕಾಟ ಹೆಚ್ಚಾಗಿದ್ದು ರೋಗ ರುಜಿನಗಳ ತಾಣವಾಗಿದೆ,ಜನ ಆತಂಕಕ್ಕೆ ಒಳಗಾಗಿದ್ದಾರೆ.

ಈಗಾಗಲೇ ಹಲವಾರು ಮಂದಿ ರೋಗರುಜಿನಗಳಿಂದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊನ್ನಿಕುಪ್ಪೆ ಗ್ರಾಮದಲ್ಲಿ ಚರಂಡಿಗಳ ಹೂಳನ್ನು ತೆಗೆದದ್ದು ಇಲ್ಲವೇ ಇಲ್ಲ. ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ತುಂಬಿಕೊಂಡು ಮುಂದೆ ಹೋಗದೆ ಗಬ್ಬು‌ವಾಸನೆ ಬರುತ್ತಿದೆ‌ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆರೋ ಪಿಸಿದ್ದಾರೆ.

ಸಾಮಾನ್ಯವಾಗಿ ಆಶಾ ಕಾರ್ಯಕರ್ತೆಯರು ಗ್ರಾಮಗಳಲ್ಲಿ ಮಹಿಳೆಯರು, ಮಕ್ಕಳನ್ನು ಭೇಟಿಯಾಗಿ ರೋಗಗಳ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ತಿಳುವಳಿಕೆ ಮೂಡಿಸುತ್ತಾರೆ. ಆದರೆ ಹೊನ್ನಿಕುಪ್ಪೆ ಗ್ರಾಮದಲ್ಲಿ ಆಶಾ ಕಾರ್ಯಕರ್ತೆ ಮನೆ ಮುಂದೆಯೇ ಚರಂಡಿ ಕಟ್ಟಿಕೊಂಡು ಕೆಟ್ಟ ವಾಸನೆ ಬರುತ್ತಿದ್ದರೂ ಅವರು ಸಹ ಯಾರ ಗಮನಕ್ಕೂ ತಾರದೆ ಇರುವುದು ದುರ್ದೈವದ ಸಂಗತಿ ಎಂದು ಚೆಲುವರಾಜು ಬೇಸರ ವ್ಯಕ್ತಪಡಿಸಿದ್ದಾರೆ.

ಕೂಡಲೇ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲಿ, ಪಿಡಿಒ ಮತ್ತು ಇತರೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಹೊನ್ನಿ ಕುಪ್ಪೆ ಗ್ರಾಮದ ಚರಂಡಿಗಳನ್ನು ಸರಿಪಡಿಸಬೇಕೆಂದು ಚೆಲುವರಾಜು ಆಗ್ರಹಿಸಿದ್ದಾರೆ.

ಹೊನ್ನಿಕುಪ್ಪೆ ಗ್ರಾಮದಲ್ಲಿ ಗಬ್ಬೆದ್ದು ಹೋಗಿವೆ ಚರಂಡಿಗಳು:ರೋಗದ ಭೀತಿಯಲ್ಲಿ ಜನತೆ Read More

ಹುಣಸೂರಿನಲ್ಲಿ ವಿಷ್ಣುವರ್ಧನ್ ಜನ್ಮದಿನ: ಸಾರ್ವಜನಿಕರಿಗೆ ಲಾಡು ಊಟ

ಹುಣಸೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 75 ನೆ‌ ಹುಟ್ಟುಹಬ್ಬವನ್ನು ಹುಣಸೂರಿನ ಕಲಾ ಸ್ಟುಡಿಯೋ ಮುಂಭಾಗ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಮತ್ತು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ತಾಲೂಕು ವತಿಯಿಂದ ವಿಶೇಷವಾಗಿ ಆಚರಿಸಲಾಯಿತು.

ಬೆಳಗ್ಗೆ ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್ ಪಿ ಮಂಜುನಾಥ್, ಕೆಪಿಸಿಸಿ ಜನರಲ್ ಸೆಕ್ರೆಟರಿ ಹುಣಸೂರು ತಾಲೂಕು ಸಿದ್ದನ ಕೊಪ್ಪಲು ಪ್ರೊ ಸುವರ್ಣ ರಾಮದಾಸ್, ನಗರಸಭೆ ಕಮಿಷನರ್ ಮಾನಸ,ತಹಸೀಲ್ದಾರ್ ಮಂಜುನಾಥ್ ಸೇರಿದಂತೆ ಹುಣಸೂರು ಡಿ ವೈ ಎಸ್ ಪಿ, ಸರ್ಕಲ್ ಇನ್ಸ್ಪೆಕ್ಟರ್, ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಮತ್ತಿತರ ಗಣ್ಯ ವ್ಯಕ್ತಿಗಳು ಪಾಲ್ಗೊಂಡು ವಿಷ್ಣುವರ್ಧನ್ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

ಪೂಜೆಯ ನಂತರ ಸಾರ್ವಜನಿಕರಿಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ವತಿಯಿಂದ ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ಲಾಡು ಊಟ ಏರ್ಪಡಿಸಲಾಗಿತ್ತು.ಇದಕ್ಕೆ ವಿಷ್ಣುವರ್ಧನ್ ಅಭಿಮಾನಿಗಳ ಸಂಘದವರು ಸಾಥ್ ನೀಡಿದರು.

ಈ ಎಲ್ಲಾ ಕಾರ್ಯಕ್ರಮದಲ್ಲಿ,ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ನಾರಾಯಾಣ,ಉಪಾಧ್ಯಕ್ಷ ಮಂಜುನಾಥ್,ಖಜಾಂಚಿ ಸಿ.ಎಸ್ ರವಿ,ಸದಸ್ಯರು ಗಳಾದ ಬಸವರಾಜು,ವೆಂಕಟೇಶ್
ಚಲುವರಾಜು,ಯತಿರಾಜು,ಸುನಿಲ್,ಪ್ರತಿಬ್,ಮಹದೇವ್,ಲಕ್ಷ್ಮಣ್,ಹೊನ್ನಯ್ಯ,ಬನ್ನೇರಿ,ಚಿಕ್ಕ,ಜೋಗಿ ಮುರುಗೇಶ್,ಸಾದಿಕ್,ಜಿಯಾ ಮತ್ತಿತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಮಾಡಿದ್ದರು.

ಹುಣಸೂರಿನಲ್ಲಿ ವಿಷ್ಣುವರ್ಧನ್ ಜನ್ಮದಿನ: ಸಾರ್ವಜನಿಕರಿಗೆ ಲಾಡು ಊಟ Read More

ಗುಡಿಸಲೆ ಆಸರೆ ಕೆಬ್ಬೆ ಕೊಪ್ಪಲು ಕಾಲೋನಿ ಜನರಿಗೆ-ಸೂರು ಸಿಗುವುದೆ ಸರ್ಕಸ್ ಮಾಡೋರಿಗೆ?

ಹುಣಸೂರು: ಹುಣಸೂರು ತಾಲೂಕಿನ ಕೆಬ್ಬೇ ಕೊಪ್ಪಲು ಕಾಲೋನಿಯಲ್ಲಿ ಸುಮಾರು 25 ಗುಡಿಸಲುಗಳಿದ್ದು ಇಲ್ಲಿನ ಜನ ಜೀವಿಸಲು ಪರದಾಡುತ್ತಿದ್ದಾರೆ.

ಈ ಗುಡಿಸಲಿನಲ್ಲಿ ವಾಸ ಮಾಡುವವರು ಗ್ರಾಮಗಳಲ್ಲಿ ಅಲೆಯುತ್ತ ಸರ್ಕಸ್ ಮಾಡಿ ನಾಲ್ಕು ಕಾಸು ಸಂಪಾದನೆ ಮಾಡಿ ಜೀವನ ನಡೆಸುತ್ತಾರೆ, ಸುಮಾರು 70 ವರ್ಷಗಳಿಂದ ಇವರು ಗುಡಿಸಲಿನಲ್ಲೇ ವಾಸ ಮಾಡುತ್ತಿದ್ದಾರೆ.

ಕಟ್ಟ ಕಡೆಯ ವ್ಯಕ್ತಿಗೂ ಸೂರು ಇರಬೇಕು, ನೆಮ್ಮದಿಯಿಂದ ಜೀವನ ಮಾಡಬೇಕು ಎಂದು ಸರ್ಕಾರಗಳು ಹೇಳುತ್ತಲೇ ಬರುತ್ತಿವೆ ಆದರೆ ಈ ಸರ್ಕಸ್ ಮಾಡಿ ಜೀವನ ಸಾಗಿಸುತ್ತಿರುವವರು ಗುಡಿಸಲಿನಲ್ಲಿ ಇದ್ದಾರೆ ಮಳೆ ಬಂದಾಗ ನೀರು ಸೋರುತ್ತದೆ ಆದರೂ ಅನಿವಾರ್ಯ ವಾಗಿ ಈ ಜನ ಇಲ್ಲೇ ಇದ್ದರೆ,ಆದರೇ ಇವರ ಬವಣೆಯನ್ನು ಕೇಳುವವರೂ ಇಲ್ಲ,ನೋಡುವವರೂ ಇಲ್ಲ.

ಕಾಂಗ್ರೆಸ್ ಸರ್ಕಾರ ಈ ಕಡೆ ಗಮನ ಹರಿಸಿಯೇ ಇಲ್ಲ, ಸ್ಥಳೀಯ ಶಾಸಕ ಹರೀಶ್ ಗೌಡರು ಗಮನ ಹರಿಸದಿರುವುದು ದುರ್ದೈವ ಸಂಗತಿ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಪಕ್ಷದ ಸ್ಥಳೀಯ ಅಧ್ಯಕ್ಷ ರವಿ ಅವರು ತಮ್ಮ ಜನರ ಪರವಾಗಿ ನಮ್ಮಲ್ಲಿ ಅಳಲು ತೋಡಿಕೊಂಡಿದ್ದು ಕೂಡಲೇ ನಮ್ಮ ಜನರಿಗೆ ಸಣ್ಣ ಮನೆಗಳನ್ನು ಕಟ್ಟಿಸಿ ಕೊಡಬೇಕೆಂದು ಕೋರಿದ್ದಾರೆ.

ಆರು ತಿಂಗಳ ಹಿಂದೆಯೇ ಮನೆ ನಿರ್ಮಿಸಿಕೊಡುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ಅವರಿಗೆ ಮನವಿಯನ್ನು ಕೊಟ್ಟಿದ್ದೇವೆ ಆದರೂ ಏನು ಪ್ರಯೋಜನವಾಗಿಲ್ಲ ಎಂದು ದೂರಿದರು.

ಹಿಂದೆ ಇದ್ದ ಶಾಸಕ ಮಂಜುನಾಥ್ ಅವರು 10 ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದಾರಂತೆ ಆದರೆ ಈಗಿನ ಶಾಸಕ ಹರೀಶ್ ಗೌಡರು ಒಂದು ಮನೆಯನ್ನು ಕಟ್ಟಿಸಿ ಕೊಟ್ಟಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸರ್ಕಾರ ಉಳ್ಳವರಿಗೆ ಮನೆಗಳನ್ನು ಕೊಡುತ್ತದೆ ಆದರೆ ಹೀಗೆ ಗುಡಿಸಲಿನಲ್ಲಿ ಜೀವಿಸಿವವರಿಗೆ ಮನೆ ಕೊಡುವುದಿಲ್ಲ ಎಂದು ಚೆಲುವರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಷ್ಟೋ ಜನ ತಮ್ಮ ಮನೆಯನ್ನು ಟ್ರಾಕ್ಟರ್ ಗಳನ್ನು ನಿಲ್ಲಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ ಆದರೆ ಈ ಜನರು ರಾತ್ರಿ ಹಗಲು ಚಳಿ,ಮಳೆಯಲ್ಲಿ ಗುಡಿಸಲಲ್ಲಿ ವಾಸ ಮಾಡುವ ಪರಿಸ್ಥಿತಿ ಇದೆ.ಇದೆಲ್ಲ ಸರ್ಕಾರದ ಗಮನಕ್ಕೆ ಬರುವುದೇ ಇಲ್ಲ.

ಈ ಕೆಬ್ಬೇ ಕೊಪ್ಪಲು ಕಾಲೋನಿಯು ಮರದೂರು ಗ್ರಾಮ ಪಂಚಾಯಿತಿ‌ ವ್ಯಾಪ್ತಿಗೆ ಸೇರುತ್ತದೆ. ಕಳೆದ 70 ವರ್ಷಗಳಿಂದ ಗುಡಿಸಲಲ್ಲಿ ವಾಸವಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ, ಪಿಡಿಒ‌ ಆಗಲೀ, ಸ್ಥಳೀಯ ಜನಪ್ರತಿನಿಧಿಗಳಾಗಲೀ ಗಮನ ಹರಿಸದೆ ಇರುವುದು ಇವರ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಚಲುವರಾಜು ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಶಾಸಕರು ರಾಜ್ಯ ಸರ್ಕಾರದ ಗಮನ ಸೆಳೆದು ಈ ಕೆಬ್ಬೆಕೊಪ್ಪಲು ಕಾಲೋನಿ ಜನರಿಗೆ ಕೂಡಲೇ ಮನೆಗಳನ್ನು ನಿರ್ಮಿಸಿ ಕೊಡಬೇಕೆಂದು ಚೆಲುವರಾಜು ಆಗ್ರಹಿಸಿದ್ದಾರೆ.

ಕೂಡಲೇ ಈ ಕಾಲೋನಿಗೆ‌ ಸರಿಯಾದ ರಸ್ತೆ,ಒಳಚರಂಡಿ ವ್ಯವಸ್ಥೆ ಕೂಡಾ ಮಾಡಿಕೊಡಬೇಕಿದೆ.ಇವರೂ ಕೂಡಾ ನಾಗರೀಕರಂತೆ ಬದುಕಲು‌ ಸರ್ಕಾರ ಆಸರೆ ಕಲ್ಪಿಸುವ ಅತ್ಯಗತ್ಯವಿದೆ.

ಗುಡಿಸಲೆ ಆಸರೆ ಕೆಬ್ಬೆ ಕೊಪ್ಪಲು ಕಾಲೋನಿ ಜನರಿಗೆ-ಸೂರು ಸಿಗುವುದೆ ಸರ್ಕಸ್ ಮಾಡೋರಿಗೆ? Read More

ಹೊನ್ನಿಕುಪ್ಪೆ ಗ್ರಾಮದಲ್ಲಿ ಯಶಸ್ವಿಯಾಗಿ ನೆರವೇರಿದ ಗಣಪತಿ ವಿಸರ್ಜನೆ

ಹುಣಸೂರು: ಹುಣಸೂರು ತಾಲೂಕಿನ ಹೊನ್ನಿಕುಪ್ಪೆ ಗ್ರಾಮದಲ್ಲಿ ಕಳೆದ 27ರಿಂದ ಗ್ರಾಮ ದೇವತೆ ದೊಡ್ಡಮ್ಮತಾಯಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಇಂದು ಅದ್ದೂರಿ ಮೆರವಣಿಗೆಯೊಂದಿಗೆ ಸಾಂಗವಾಗಿ ವಿಸರ್ಜನೆ ಮಾಡಲಾಯಿತು.

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ದೇವಾಲಯದ ಆವರದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ದೇವಾಲಯದ ಅರ್ಚಕರ ಮೂಲಕ ಇದುವರೆಗೂ ಸಂಪ್ರದಾಯಬದ್ಧವಾಗಿ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಂಡು ಬರಲಾಗಿತ್ತು.

ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ವತಿಯಿಂದ ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ಇಂದು ಗ್ರಾಮದಲ್ಲಿ ಗಣೇಶ‌ ವಿಸರ್ಜನೆ ಪ್ರಯುಕ್ತ ಅನ್ನದಾನ ಹಮ್ಮಿಕೊಳ್ಳಲಾಯಿತು.ಹೊನ್ನಿಕುಪ್ಪೆ ಗ್ರಾಮದವರಲ್ಲದೆ ಅಕ್ಕಪಕ್ಕದ ಗ್ರಾಮದವರು ಕೂಡ ಪಾಲ್ಗೊಂಡಿದ್ದರು

ನಂತರ ಅದ್ದೂರಿ ಬೃಹತ್ ಮೆರವಣಿಗೆಯಲ್ಲಿ ಗಣಪತಿಯನ್ನು ಸಮೀಪದ ಕೆಂಚನಕೆರೆಗೆ ಕೊಂಡೊಯ್ದು ಯಶಸ್ವಿಯಾಗಿ ವಿಸರ್ಜನೆ ಮಾಡಲಾಯಿತು.

ಗ್ರಾಮದಲ್ಲಿ ಯಾವುದೇ ಗಲಭೆ ಗದ್ದಲ ಗೌಜಲು ಉಂಟಾಗದಂತೆ ಪೊಲೀಸರು ಬಿಗಿ ಭದ್ರತೆ ವಹಿಸಿದ್ದರು.

ಹೊನ್ನಿಕುಪ್ಪೆ ಗ್ರಾಮದ ದೊಡ್ಡ ಯಜಮಾನರು ಚಿಕ್ಕ ಯಜಮಾನರು ಸೇರಿದಂತೆ ಅನೇಕ ಮುಖಂಡರು ಮತ್ತು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಎಲ್ಲರೂ ಹಾಜರಿದ್ದು ವಿಶೇಷ.

ಹೊನ್ನಿಕುಪ್ಪೆ ಗ್ರಾಮದಲ್ಲಿ ಯಶಸ್ವಿಯಾಗಿ ನೆರವೇರಿದ ಗಣಪತಿ ವಿಸರ್ಜನೆ Read More

ಹುಣಸೂರಿನ ಗೋಕುಲ,ಮಾರುತಿ ಬಡಾವಣೆಯವರಿಂದ ವಿಜೃಂಬಣೆಯ ಗಣಪತಿ ವಿಸರ್ಜನೆ

ಹುಣಸೂರು: ಹುಣಸೂರಿನ ಗೋಕುಲ ಬಡಾವಣೆ ಮತ್ತು ಮಾರುತಿ ಬಡಾವಣೆಯ ನಾಗರಿಕರೆಲ್ಲ ಸೇರಿ ಪ್ರತಿವರ್ಷದಂತೆ ಸಾಂಪ್ರದಾಯಿಕವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿ ವಿಜೃಂಭಣೆಯಿಂದ ವಿಸರ್ಜನೆ ಮಾಡಿದ್ದಾರೆ.

ಯಾವುದೇ ಜಾತಿ, ಧರ್ಮ, ಕುಲ ಬೇಧವಿಲ್ಲದೆ ಗಣಪತಿಯನ್ನು ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ಪೂಜೆಯನ್ನು ನೆರವೇರಿಸಿ ನಂತರ ಗಣಪತಿ ಮೂರ್ತಿಯನ್ನು ಊರಿನ ಅತಿ ದೊಡ್ಡದಾದ ಕೆಂಚನ ಕೆರೆಯಲ್ಲಿ ಹಗಲು ಹೊತ್ತಿನಲ್ಲೇ ಸಾಂಪ್ರದಾಯಿಕವಾಗಿ ವಿಸರ್ಜಿಸಿದ್ದು ವಿಶೇಷವಾಗಿತ್ತು.

ಈ ಕೆರೆಯ ಸುತ್ತಮುತ್ತ ಹಳ್ಳಕೊಳ್ಳ ಯಾವುದು ಇಲ್ಲ, ಬಹಳ ವಿಶಾಲವಾಗಿದ್ದು ಹಗಲು ಹೊತ್ತಿನಲ್ಲಿ ವಿಸರ್ಜಿಸುವುದರಿಂದ ಬಹಳ ಅನುಕೂಲವಾಗಿದೆ ಎಂದು ಊರಿನ ಹಿರಿಯರಾದ ತಿಮ್ಮೇಗೌಡರು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದರು.

ಯಾವುದೇ ಪೊಲೀಸರಿಂದಾಗಲಿ ಅಥವಾ ಅಧಿಕಾರಿಗಳಿಂದಾಗಲಿ ನಮಗೆ ಯಾವುದೇ ಕಿರಿಕಿರಿ ಆಗಲಿಲ್ಲ ಪೊಲೀಸರ ಸಮ್ಮುಖದಲ್ಲಿ ನಾವು ಸಂಭ್ರಮದಿಂದ ಗಣಪತಿಯನ್ನು ವಿಸರ್ಜಿಸಿದ್ದೇವೆ ಎಂದು ತಿಳಿಸಿದರು.

ಗ್ರಾಮಗಳ ಮುಖಂಡರಾದ ಗೋಪಾಲ್, ತಿಪ್ಪೇಗೌಡ್ರು, ಚಂದ್ರನಾಯಕ್, ಶಿವಕುಮಾರ್ ,ರುದ್ರಪ್ಪ,ಕುಮಾರ್,ಹಿರಿಯರಾದ ಕೆಂಪೇಗೌಡರು,ಮಂಜುನಾಥ್,ಸುರೆಶ್ ನಾಯಕ್,ಚಂದ್ರ ನಾಯಕ್, ಪಾಪಣ್ಣ ಆಚಾರ್,ಸರೋಜಮ್ಮ,ಗಿರಿ,ಮಂಜು,ಬಾಬಣ್ಣ,ಪರಮೇಶ್ ಅವರುಗಳ ನೆರವಿನಲ್ಲಿ ನೆಮ್ಮದಿಯಿಂದ ಸಂಭ್ರಮದಿಂದ ಗಣಪತಿ ವಿಸರ್ಜಿಸಲಾಯಿತು.

ಗಣಪತಿ ವಿಸರ್ಜನೆ ವೇಳೆ ಮಹಿಳೆಯರು,ಮಕ್ಕಳು,ಹಿರಿಯ ನಾಗರೀಕರು‌ ಸೇರಿದಂತೆ ಎಲ್ಲಾ ಜನಾಂಗದವರು ಖುಷಿಯಿಂದ ಭಾಗವಹಿಸಿದ್ದರು.

ಇದೆ ವೇಳೆ ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಜೊತೆ ಮಾತನಾಡಿದ ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರು, ಹುಣಸೂರಿನ ಕೆಂಚನಕೆರೆ ಅತ್ಯಂತ ವಿಶಾಲವಾಗಿದ್ದು ಹುಣಸೂರು ಸುತ್ತಮುತ್ತಲ ಗ್ರಾಮಗಳ ಜೀವನಾಡಿಯಾಗಿದೆ ಎಂದು ತಿಳಿಸಿದರು.

ಈ ಕೆಂಚನಕೆರೆಯನ್ನು ಇನ್ನಷ್ಟು ವಿಶಾಲವಾಗಿ ಮಾಡಿ ಕೆರೆಯ ಸುತ್ತ ಪಾರ್ಕ್ ನಿರ್ಮಾಣ ಮಾಡಿ ಹಿರಿಯ ನಾಗರಿಕರು ಮಕ್ಕಳು ವಾಕಿಂಗ್ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ತಾಲೂಕು ಆಡಳಿತವನ್ನು ಅವರು ಒತ್ತಾಯಿಸಿದರು.

ಕೆರೆಯ ಹೋಳನ್ನು ತೆಗೆದರೆ ಕೆರೆ ಇನ್ನಷ್ಟು ವಿಶಾಲವಾಗುತ್ತದೆ ಎಂದು ಹೇಳಿದರು.

ಈ ಕೆಂಚನ ಕೆರೆ ಸುತ್ತಮುತ್ತ ಚಲನ ಚಿತ್ರಗಳ ಮತ್ತು ಧಾರವಾಹಿಗಳ ಶೂಟಿಂಗ್ ಗಳು ನಡೆಯುತ್ತವೆ. ತಾಲೂಕು ಅಡಿತ ಅಥವಾ ನಗರ ಸಭೆಯವರು ಹೀಗೆ ಚಿತ್ರೀಕರಣ ಮಾಡುವವರಿಂದ ಇಂತಿಷ್ಟು ಶುಲ್ಕ ವಿಧಿಸಿದರೆ ಅದನ್ನು ಕೆರೆಯ ಅಭಿವೃದ್ಧಿಗೆ ಉಪಯೋಗಿಸಬಹುದು ಎಂದು ಚೆಲುವರಾಜು ಸಲಹೆ ನೀಡಿದ್ದಾರೆ.

ಹುಣಸೂರಿನ ಗೋಕುಲ,ಮಾರುತಿ ಬಡಾವಣೆಯವರಿಂದ ವಿಜೃಂಬಣೆಯ ಗಣಪತಿ ವಿಸರ್ಜನೆ Read More