ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ ಮಗಳು ಪತ್ತೆ

ಮೈಸೂರು: ತಾಯಿ ಮತ್ತು ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಸಮೀಪದ ಕೊತ್ತನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ

ಕೊತ್ತನಹಳ್ಳಿ ಗ್ರಾಮದ ಮಹದೇವಮ್ಮ( 38) ಮಗಳು ಸುಪ್ರಿಯ(20) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇವರ ಸಾವಿಗೆ ಮಹದೇವಮ್ಮನ ಪತಿ ಕಾರಣ ಎಂದು ಗ್ರಾಮಸ್ಥರು ಕೊಲೆ ಆರೋಪ ಮಾಡಿದ್ದಾರೆ.

ಮದುವೆ ಆಗಿ 22 ವರ್ಷವಾದರೂ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

22 ವರ್ಷಗಳ ಹಿಂದೆ ಮಹದೇವಮ್ಮಳನ್ನ ಮದುವೆ ಆಗಿದ್ದ ಕೊತ್ತನಹಳ್ಳಿ ಜಯರಾಮ ದಂಪತಿಗೆ ಸುಪ್ರಿಯ ಎಂಬ ಮಗಳಿದ್ದಾಳೆ.

ಜಯರಾಮುಗೆ ವರದಕ್ಷಿಣೆ ದಾಹ ಕಡಿಮೆ ಆಗಿರಲಿಲ್ಲ. ಈ ವಿಚಾರದಲ್ಲಿ ಪತ್ನಿ ಜೊತೆ ಜಗಳವಾಡುತ್ತಲೇ ಇದ್ದ. ಇದರಿಂದ ಮಗಳು ಸುಪ್ರಿಯ ನೊಂದಿದ್ದಳು.

ಗಂಡನ ವರ್ತನೆಯಿಂದ ಬೇಸತ್ತ ಮಹದೇವಮ್ಮ ಹಲವು ಬಾರಿ ಹುಲ್ಲಹಳ್ಳಿ ಠಾಣೆ ಪೊಲೀಸರ ಮೊರೆ ಹೋಗಿದ್ದರು.

ಮಹದೇವಮ್ಮ ಹಾಗೂ ಮಗಳು ಮನೆಯ ತಂಬಾಕು ಬೇಯಿಸುವ ಬ್ಯಾರೆನ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ,ಇದು ಆತ್ಮಹತ್ಯೆ ಯೊ ಅಥವಾ ಕೊಲೆಯೊ ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಗಬೇಕಿದೆ.

ಇಬ್ಬರ ಸಾವಿಗೆ ಗಂಡ ಜಯರಾಮು ಕಾರಣ ಎಂದು ಮೃತ ಮಹಿಳೆ ಮಹದೇವಮ್ಮ ತವರು ಮನೆಯ ಸಂಬಂಧಿಕರು ಆರೋಪಿಸಿದ್ದಾರೆ.

ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ ಮಗಳು ಪತ್ತೆ Read More

ಮುಚ್ಚಿದ್ದ ಬಾರ್ ಬಲವಂತವಾಗಿ‌ ತೆಗೆಸಿ, ಕ್ಯಾಷಿಯರ್ ಬೆದರಿಸಿ ಬಿಯರ್ ಬಾಟೆಲ್ಸ್ ಹೊತ್ತೊಯ್ದ ಕಿಡಿಗೇಡಿಗಳು

ಮೈಸೂರು, ಮಾ.8: ಕಿಡಿಗೇಡಿಗಳ ಗುಂಪೊಂದು ಮುಚ್ಚಿದ್ದ ಬಾರನ್ನು ಬಲವಂತವಾಗಿ‌ ತೆಗೆಸಿ, ಕ್ಯಾಷಿಯರ್ ಗೆ ನಿಂದಿಸಿ ಕೊಲೆ ಬೆದರಿಕೆ ಹಾಕಿ ಬಿಯರ್ ಬಾಟೆಲ್ ಕೇಸ್ ಹೊತ್ತೊಯ್ದ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ಹುಲ್ಲಹಳ್ಳಿಯ ನ್ಯೂ ಕಾರವಾನ್ ಬಾರ್ ನಲ್ಲಿ
ಈ ಘಟನೆ ನಡೆದಿದ್ದು,ಈ ಸಂಬಂಧ ಕ್ಯಾಷಿಯರ್ ವೆಂಕಟೇಶ್ ಅವರು ಕಿಶೋರ್, ಚಂದನ್ ಸೇರಿದಂತೆ 7 ಮಂದಿ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಧ್ಯರಾತ್ರಿ ಬಾರ್ ಕ್ಲೋಸ್ ಮಾಡಿ ಹಣ ಲೆಕ್ಕ ಮಾಡುತ್ತಿದ್ದ ವೇಳೆ ಕಿಶೋರ್, ಚಂದನ್ ಹಾಗೂ 5 ಮಂದೀ ಬಂದು ಬಾಗಿಲ ಬಳಿ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಲವಂತವಾಗಿ ಶೆಟರ್ ಓಪನ್ ಮಾಡಿ ಒಳಗೆ ನುಗ್ಗಿದ್ದಾರೆ.

ಕ್ಯಾಷ್ ಬಾಕ್ಸ್ ಮೇಲೆ ಕುಳಿತು ಧಂಕಿ ಹಾಕಿ ಬೆದರಿಸಿ ಬಿಯರ್ ಹಾಗೂ ವಿಸ್ಕಿ ಬಾಟಲ್ ಗಳನ್ನು ಬಾಕ್ಸ್ ಒಂದಕ್ಕೆ ತುಂಬಿಕೊಂಡು ಕೊಲೆ‌ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಕಿಶೋರ್ ಹಾಗೂ ಚಂದನ್ ರನ್ನ ಪೊಲೀಸರು ಬಂಧಿಸಿದ್ದಾರೆ.

ಮುಚ್ಚಿದ್ದ ಬಾರ್ ಬಲವಂತವಾಗಿ‌ ತೆಗೆಸಿ, ಕ್ಯಾಷಿಯರ್ ಬೆದರಿಸಿ ಬಿಯರ್ ಬಾಟೆಲ್ಸ್ ಹೊತ್ತೊಯ್ದ ಕಿಡಿಗೇಡಿಗಳು Read More

ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ:ಆರೋಪಿ ಬಂಧನ

ಮೈಸೂರು: ಪ್ರತಿಷ್ಠಿತ ಫೈನಾನ್ಸ್ ಗಳು ಹಾಗೂ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಅಮಾಯಕರಿಗೆ ಲಕ್ಷಾಂತರ ರೂ ವಂಚಿಸಿದ್ದ ವ್ಯಕ್ತಿಯನ್ನು ಹುಲ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾದನಹಳ್ಳಿ ಗ್ರಾಮದ ಸುನಿಲ್ ಬಂಧಿತ ಆರೋಪಿ.

ಆಕಳ ಗ್ರಾಮದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸುನಿಲ್ ನನ್ನು ಬಂಧಿಸಿದ್ದಾರೆ.

ಕಲ್ಯಾಣಿ ಮೋಟಾರ್ಸ್ ನಲ್ಲಿ ಎಕ್ಸಿಕ್ಯುಟಿವ್ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದ ಸುನಿಲ್ ತನಗೆ ಪ್ರತಿಷ್ಠಿತ ಫೈನಾನ್ಸ್ ಗಳ ವ್ಯವಸ್ಥಾಪಕರು ಪರಿಚಯವಿದ್ದಾರೆ, ಲಕ್ಷಾಂತರ ರೂಪಾಯಿಗಳನ್ನು ಕಡಿಮೆ ಬಡ್ಡಿ ದರದಲ್ಲಿ ಕೊಡಿಸುತ್ತೇನೆ ಎಂದು ನಂಬಿಸಿದ್ದಾನೆ.

ಜೊತೆಗೆ ಹಣ ಕೊಡಿಸಿದರೆ ಅದಕ್ಕಾಗಿ ಕಮೀಷನ್ ಕೊಡಬೇಕೆಂದು ಹೇಳಿದ್ದಾನೆ.ಈತನ ಮಾತು ನಂಬಿದ ಅನೇಕ ಅಮಾಯಕರು ಕಮಿಷನ್ ನೀಡಿದ್ದಾರೆ.

ಸಾಕಷ್ಟು ಜನರಿಂದ ಹಣ ಪಡೆದಿದ್ದರೂ ಯಾವುದೇ ಸಾಲ ಕೊಡಿಸಿಲ್ಲವೆಂದು ದೂರಿದ್ದಾರೆ.

ಅಲ್ಲದೆ ಕಮೀಷನ್ ಹೆಸರಲ್ಲಿ ಸುಮಾರು 20 ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದಾನೆಂದು ಹೇಳಲಾಗಿದೆ.

ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ:ಆರೋಪಿ ಬಂಧನ Read More