ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾಳೆ ಮಗು ಕೀರ್ತನ: ದಾನಿಗಳ ಮೊರೆ ಹೋದ ಪೋಷಕರು
ಹುಬ್ಬಳ್ಳಿ: ಅಪರೂಪದ ಮಾರಣಾಂತಿಕ ಕಾಯಿಲೆಯಿಂದ ಮೈಸೂರು ಮೂಲದ ಮಗುವೊಂದು ಬಳಲುತ್ತಿದ್ದು ಚಿಕಿತ್ಸೆಗೆ ದುಬಾರಿ ವೆಚ್ಚವಾಗುವ ಕಾರಣ ಪೋಷಕರು ದಾನಿಗಳ ಮೊರೆಹೋಗಿದ್ದಾರೆ.
ಮೈಸೂರು ಮೂಲದ ಎಚ್. ನಾಗಶ್ರೀ ಮತ್ತು ಎನ್. ಕಿಶೋರ್ ದಂಪತಿಯ ಕೆ. ಕೀರ್ತನ ಒಂದು ವರ್ಷ 10 ತಿಂಗಳ ಮಗು, ಎಸ್ಎಂಎ (ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ) ಅಂದರೆ ಬೆನ್ನು ಮೂಳೆಯ ಸ್ನಾಯು ಕ್ಷೀಣತೆಯಾಗುವ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾಳೆ.
ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳಬೇಕಿದೆ ಆದರೆ ಒಂದು ಇಂಜೆಕ್ಷನ್ ಗೆ ಸುಮಾರು 16 ಕೋಟಿ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ ಹಾಗಾಗಿ ಕೀರ್ತನ ಪೋಷಕರು ಆತಂಕ ಕ್ಕೊಳಗಾಗಿದ್ದಾರೆ.
ಕೇವಲ ಒಂದು ಇಂಜೆಕ್ಷನ್ ಗೆ 16 ಕೋಟಿ ವೆಚ್ಚವಾದರೆ ಅದೆಷ್ಟು ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳಬೇಕು ಗೊತ್ತಿಲ್ಲ, ಹಾಗಾಗಿ ಮಗುವಿನ ಚಿಕಿತ್ಸೆಗೆ ಪೋಷಕರು ದಾನಿಗಳನ್ನು ಮೊರೆ ಹೋಗಿದ್ದಾರೆ.
ಈ ನಡುವೆ ಕೀರ್ತನ ದಿನೇ ದಿನೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾಳೆ ಮೂಳೆಯ ಸ್ನಾಯು ಕ್ಷೀಣಿಸುತ್ತಿದೆ. ಮಗುವನ್ನು ಉಳಿಸಿಕೊಳ್ಳಲು ಪೋಷಕರು ಹರಸಾಹಸ ಪಡುತ್ತಿದ್ದಾರೆ.
ಕೀರ್ತನ ತಾಯಿ ನಾಗಶ್ರೀ ಅವರು ಹೆಚ್ ಡಿ ಕೋಟೆ ಹುಣಸೇಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ, ತಂದೆ ಕಿಶೋರ್ ಅವರು ಸರ್ಕಾರಿ ನೌಕರರಾಗಿದ್ದಾರೆ.
ಈ ಕಾಯಿಲೆ ಗುಣಪಡಿಸಲು ಅಮೆರಿಕದಿಂದ ಝೋಲ್ ಜೆನ್ಸ್ಮಾ ಎಂಬ ಇಂಜೆಕ್ಷನ್ ತರಿಸಬೇಕಿದೆ, ಇದಕ್ಕೆ 16 ಕೋಟಿ ರೂ ಬೇಕಾಗಿದೆ, ಹಾಗಾಗಿ ಮಗುವಿನ ಪೋಷಕರು ತಮಗೆ ಸಹಾಯ ಮಾಡಬೇಕೆಂದು ದಾನಿಗಳಲ್ಲಿ ಮನವಿ ಮಾಡಿದ್ದಾರೆ.

ಮಗುವಿನ ಚಿಕಿತ್ಸೆಗೆ ಸಹಾಯ ಮಾಡ ಬಯಸುವವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ, ದೇವರಾಜ ಅರಸು ರಸ್ತೆ, ಮೈಸೂರು.
ಖಾತೆದಾರರ ಹೆಸರು ಕೆ ಕೀರ್ತನ
ಖಾತೆ ಸಂಖ್ಯೆ: 435325 88429
ಐ ಎಫ್ ಎಸ್ ಸಿ ಕೋಡ್: ಎಸ್ ಬಿ ಐ ಎನ್ 0070270 ಇಲ್ಲಿಗೆ ಹಣ ಸಂದಾಯ ಮಾಡಬಹುದಾಗಿದೆ.
ವಿವರಗಳಿಗೆ: ಮೊಬೈಲ್ 9980690234 ಅಥವಾ 9901262206 ಈ ನಂಬರಿಗೆ ಸಂಪರ್ಕಿಸಬಹುದು.
ನಿಜಕ್ಕೂ ಹೃದಯವಂತರು ಪೋಷಕರಿಗೆ ಯಾವುದೇ ರೂಪದಲ್ಲಿ ಸಹಾಯ ಮಾಡಿದರೆ ಮಗು ಉಳಿಯುವುದು ಸಾಧ್ಯವಾಗುತ್ತದೆ.
.