ನೈರುತ್ಯ ರೈಲ್ವೇ ಕನ್ನಡ ಸಂಘದಿಂದಕನ್ನಡ ರಾಜ್ಯೋತ್ಸವ ಆಚರಣೆ

ಹುಬ್ಬಳ್ಳಿ: ನೈರುತ್ಯ ರೈಲ್ವೇ ಕನ್ನಡ ಸಂಘ ಹುಬ್ಬಳ್ಳಿ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧಾರವಾಡ ಶಾಖೆಯ ಪಾದಾಧಿಕಾರಿಗಳ ಮಕ್ಕಳು ಕನ್ನಡ ನಾಡಿನ ಹೆಮ್ಮೆಯ ಹಾಡಿಗೆ ನೃತ್ಯ ಮಾಡಿ ಎಲ್ಲರ ಗಮನ ಸೆಳೆದರು.

ಈ ಮಕ್ಕಳ ನೃತ್ಯದ ಮೋಡಿಯನ್ನು ಪ್ರಶಂಸಿಸಿದ ಉಪಾಧ್ಯಕ್ಷರಾದ ಪ್ರಾಣೇಶ ಅವರು ನಗದು ಬಹುಮಾನ ನೀಡಿ ಗೌರವಿಸಲಾಯಿತು.

ನೃತ್ಯದಲ್ಲಿ ನಿವೇದಿತಾ,ಶ್ರಾವಣಿ,ರೋಷನಿ,
ಮಿಜ್ಬಾ ಮತ್ತು ಅಚಲ ಭಾಗವಹಿಸಿದ್ದರು.

ಧಾರವಾಡ ಶಾಖೆಯ ಅಧ್ಯಕ್ಷರಾದ ರಾ.ಹ ಕೊಂಡಕೇರ, ಉಪಾಧ್ಯಕ್ಷರಾದ ಮಹೇಶ ಎಸ್ ತಳವಾರ ಪದಾಧಿಕಾರಿಗಳಾದ ಮುನೀರ್ ಅಹ್ಮದ್ ಕುರ್ಲಗೇರಿ,ಲಕ್ಷ್ಮಣ ಬಂಡಿವಡ್ಡರ ಹಾಗೂ ಎಲ್ಲ ಕುಟುಂಬ ವರ್ಗದವರು ಹಾಜರಿದ್ದರು.

ನೈರುತ್ಯ ರೈಲ್ವೇ ಕನ್ನಡ ಸಂಘದಿಂದಕನ್ನಡ ರಾಜ್ಯೋತ್ಸವ ಆಚರಣೆ Read More

ಮನೆ ದೇವರ ಪರಿಕಲ್ಪನೆ ಜಾನಪದರಿಂದ ಹುಟ್ಟಿದ್ದು:ಡಾ ಜಾನಪದ ಎಸ್ ಬಾಲಾಜಿ

ಹುಬ್ಬಳ್ಳಿ: ಮನೆ ದೇವರ ಪರಿಕಲ್ಪನೆ ಜಾನಪದರಿಂದ ಹುಟ್ಟಿದ್ದುದು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.

ಹುಬ್ಬಳ್ಳಿ ತಾಲೂಕಿನ ನೂಲ್ವಿ ಶ್ರೀ ಜಗದ್ಗುರು ರೇಣುಕಾಚಾರ್ಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಹುಬ್ಬಳ್ಳಿ ತಾಲೂಕು ಘಟಕ ಏರ್ಪಡಿಸಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಾದಿ ಶರಣರು ಹಾಗೂ ವಚನಕಾರರು ಮನೆದೇವರ ಸಾಂಪ್ರದಾಯವನ್ನು ಮುಂದುವರಿಸಿಕೊಂಡು ಬಂದರು, ಬುಡಕಟ್ಟು ಸಮುದಾಯದವರಿಗೆ ಪಾರಂಪರಿಕ ಜ್ಞಾನ ಇರುತ್ತದೆ, ಬುಡಕಟ್ಟು ಪ್ರದರ್ಶನ ಕಲೆಗಳು ಇತ್ತೀಚಿನ ದಿನಗಳಲ್ಲಿ ಅಳಿವಿನಂಚಿನಲ್ಲಿದ್ದು, ಸರ್ಕಾರ ಈ ಬಗ್ಗೆ ಹೆಚ್ಚು ಅಲೆಮಾರಿಗಳು ಹಾಗೂ ಬುಡಕಟ್ಟು ಸಮುದಾಯದವರಿಗೆ ಪ್ರೋತ್ಸಾಹ ಮತ್ತು ತರಬೇತಿ ನೀಡುವ ಮೂಲಕ ಅವರ ಸಂಪ್ರದಾಯ ಮತ್ತು ಕಲಾಪ್ರಾಕಾರಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕೆಂದು ಅಗ್ರಹಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಿವಾನಂದ ಬೆಂತೂರ ಅಧ್ಯಕ್ಷರು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕುಂದಗೋಳ ಮಾತನಾಡಿ ಬುಡಕಟ್ಟು ಸಮುದಾಯದಲ್ಲಿ ಸಾಮರಸ್ಯ ಹಾಗೂ ಐಕ್ಯತೆಯ ಭಾವನೆಗಳು ಹೆಚ್ಚಾಗಿರುತ್ತದೆ, ಅವರಿಂದ ಒಗ್ಗೂಡಿಸಿಕೊಂಡು ಕಲಿಯ ಬಹುದು ಎಂದು ತಿಳಿಸಿದರು.

ಕನ್ನಡ ಜಾನಪದ ಪರಿಷತ್ ರಾಜ್ಯ ಕಾರ್ಯದರ್ಶಿ ಪ್ರೊ ಕೆ ಎಸ್ ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಜನಪದ ಸಾಹಿತ್ಯದ ಮೂಲವೇ ಬುಡಕಟ್ಟು ಸಮುದಾಯದವರು, ಅವರನ್ನು ಯುವ ಜನಾಂಗ ಅನುಕರಣೆ ಮಾಡುವ ಮೂಲಕ ಸಹಕರಿಸಬೇಕೆಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯರು ಜಿ ಹೆಚ್ ಕಟ್ಟಿ ಮಾತನಾಡಿ ಮುಂದಿನ ಪೀಳಿಗೆ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ವೈಭವ
ಪರಿಚಯ ಮಾಡಬೇಕೆಂದರೆ
ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಆಗಬೇಕಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಣ್ಣ ಎಸ್ ಶಿವಳ್ಳಿ , ಜನಪದ ಕಲಾವಿದ ಪ್ರಶಾಂತ್ ತಡಸೂರ, ಗ್ರಾಮ ಪಂಚಾಯತಿ ಸದಸ್ಯ ದೇವನಗೌಡ ಮಾ ಧರ್ಮಗೌಡ, ಕಾರವೆ ಹುಬ್ಬಳ್ಳಿ ತಾಲೂಕ ಅಧ್ಯಕ್ಷ ಗಂಗನಗೌಡ ಶಿ ನರಗುಂದ,
ಕಾಲೇಜಿನ ಉಪನ್ಯಾಸಕರಾದ ಜಿ ಬಿ ತಾಶಿಲ್ದಾರ್, ಎಸ್ ಎಸ್ ಹಿರೇಗೌಡ್ರು, ಎಂ ಎಂ ಹಾದಿಮನಿ, ಕೆ ಎಂ. ಮಲ್ಲಿಕಾರ್ಜುನಯ್ಯ, ಎಚ್ ಡಿ ಗುಂಡಪ್ಪಲ್ಲಿ, ಧಾರವಾಡ ಜಿಲ್ಲಾ ಕನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಂ ಸದಾನಂದ, ಕಲಘಟಗಿ ತಾಲೂಕ ಅಧ್ಯಕ್ಷ ನಿಂಗಪ್ಪ ದೊಡ್ಡ ಪೂಜಾರ್, ಕಲಾವಿದ ಶ್ರೀ ಪ್ರಶಾಂತ್ ಎಮ್ ತಡಿಸನ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ವಾಗತವನ್ನು ತಾಲೂಕ ಅಧ್ಯಕ್ಷ ಈಶ್ವರಪ್ಪ ಕ ಹೊ ಳಮ್ಮನವರ್, ವಂದನಾರ್ಪಣೆ ಕಾರ್ಯದರ್ಶಿ ಸಂತೋಷ್ ಕುಮಾರ್ ಬಡಿಗೇರ, ನಿರೂಪಣೆಯನ್ನು ಮಂಜುನಾಥ ಐ ಕೆ, ನಿರ್ವಹಿಸಿದರು.

ಮನೆ ದೇವರ ಪರಿಕಲ್ಪನೆ ಜಾನಪದರಿಂದ ಹುಟ್ಟಿದ್ದು:ಡಾ ಜಾನಪದ ಎಸ್ ಬಾಲಾಜಿ Read More

ಡಾ. ಪೃಥು ಪಿ ಅದ್ವೈತ್ ಗೆ ವಾಮನ ಪ್ರಿಯ ಪ್ರಶಸ್ತಿ

ಹುಬ್ಬಳ್ಳಿ: ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ಹುಬ್ಬಳ್ಳಿ ವಿಭಾಗದಿಂದ
ಎಂಟು ವರ್ಷದ ಬಾಲಕ ಡಾ. ಪೃಥು ಪಿ ಅದ್ವೈತ್ ವಾಮನ ಪ್ರಿಯ ಬಿರುದನ್ನು ಮುಡಿಗೇರಿಸಿಕೊಂಡಿದ್ದಾರೆ.

ಹುಬ್ಬಳ್ಳಿಯ ದೇಶಪಾಂಡೆ ನಗರದ ಶ್ರೀ ಕೃಷ್ಣ ಕಲ್ಯಾಣಮಂಟಪದಲ್ಲಿ ನೆಡೆದ ಶ್ರೀಮತ್ ಭಾಗವತ ಸಮ್ಮೇಳನದಲ್ಲಿ ಮೈಸೂರಿನಿಂದ ಭಾಗವಹಿಸಿದ ಬಾಲಕ ಡಾ. ಪೃಥು ಪಿ ಅದ್ವೈತ್ ಸಭೆಯಲ್ಲಿ ವಿವಿಧ ಮಂತ್ರಗಳನ್ನು ಪಠಿಸಿ ಪ್ರಶಂಸೆ ಪಡೆದರು.

ಡಾ. ಪೃಥು ಪಿ ಅದ್ವೈತ್ ಈಗಾಗಲೇ ಸ್ತೂತ್ರ ಪಠಣದಲ್ಲಿ ವಿಶ್ವದಾಖಲೆ ನಿರ್ಮಿಸಿ ಗೌರವ ಡಾಕ್ಟರೇಟ್ ಪದವಿ ಪಡೆದಿರುವುದನ್ನು ಗುರುತಿಸಿ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ಸಂಸ್ಥಾಪಕ ಅಧ್ಯಕ್ಷರಾದ ವಿದ್ಯಾವಾಚಸ್ಪತಿ ಡಾ ಅರಳು ಮಲ್ಲಿಗೆ ಪಾರ್ಥಸಾರಥಿ ಅವರು ಡಾ. ಪೃಥು ಪಿ ಅದ್ವೈತ್ ಗೆ “ವಾಮನ ಪ್ರಿಯ” ಎಂಬ ಬಿರುದು ಮತ್ತು ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಪೃಥುವಿನ ಪೋಷಕರಾದ ಪುನೀತ್ ಜಿ, ಪೂಜಾ ಎನ್, ಡಾ. ಸತ್ಯ ಮೂರ್ತಿ ಆಚಾರ್ಯ, ಅಚ್ಯುತ ಭಟ್, ದ.ಕ. ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಐ‌.ಪಿ. ಐತಾಳ್, ಬೆಂಗಳೂರಿನ ಭಾನುಪ್ರಕಾಶ್ ಶರ್ಮ, ಮಂಗಳಾ ಭಾಸ್ಕರ್, ಮೈಸೂರಿನ ಡಾ. ರಮಾಕಾಂತ್ ಶೆಣೈ, ಸುಮತಿ ಸುಬ್ರಹ್ಮಣ್ಯ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಡಾ. ಪೃಥು ಪಿ ಅದ್ವೈತ್ ಗೆ ವಾಮನ ಪ್ರಿಯ ಪ್ರಶಸ್ತಿ Read More

ಜಯಮೃತ್ಯುಂಜಯ ಶ್ರೀಗಳ ಆಹಾರದಲ್ಲಿ ವಿಷ!:ಅರವಿಂದ್ ಬೆಲ್ಲದ್ ಬಾಂಬ್

ಹುಬ್ಬಳ್ಳಿ: ಯಾರೋ ಎಸಕೂಡಲ ಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳ ಆಹಾರವನ್ನು ವಿಷ ಮಾಡಿ ಅವರನ್ನು ಮುಗಿಸಬೇಕು ಎಂಬ ಯೋಚನೆ ಮಾಡಿದ್ದಾರೆ ಎಂದು ವಿಧಾನ ಸಭೆ ವಿಪಕ್ಷ ಉಪ ನಾಯಕ ಅರವಿಂದ್ ಬೆಲ್ಲದ್ ಹೊಸ ಬಾಂಬ್ ಸಿಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಬಗ್ಗೆ ಗಂಭೀರ ಆರೋಪ ಮಾಡಿರುವ ಅವರು, ಶ್ರೀಗಳ ಆರೋಗ್ಯ ಹದಗೆಟ್ಟಿದೆ. ಅವರಿಗೆ ಫುಡ್ ಪಾಯಿಸನ್ ಆಗಿದೆ ಅಂತ ಗೊತ್ತಿತ್ತು,ಆದರೆ ಇದಕ್ಕೆ ಬೇರೆಯದೆ ಕಾರಣ ಇದೆ ಎಂದು ಹೇಳಿದ್ದಾರೆ

ಮಠದ ಹೊರಗಡೆ ಯಾರೊ ಇಬ್ಬರು ಯುವಕರು ನಿಂತು ಮಠಕ್ಕೆ ಯಾರು ಬರುತ್ತಾರೆ ಯಾರು ಹೋಗತ್ತಾರೆ ಎಂಬ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ ಜತೆಗೆ ವಿಡಿಯೋ ಸಹ ಮಾಡಿಕೊಳ್ಳುತ್ತಿದ್ದಾರೆ ಅಂತ ಭಕ್ತರು ನನಗೆ ಹೇಳಿದ್ದಾರೆ‌. ಅದೇ ಯುವಕರು ಅಡುಗೆ ಮನೆಗೆ ಹೋಗಿದ್ದರು. ಈ ಬಗ್ಗೆ ಸ್ಥಳೀಯ ಭಕ್ತರು ಯುವಕರನ್ನು ವಿಚಾರಣೆ ಮಾಡಿದ್ದಾರೆ. ಆ ಯುವಕರು ಅಡುಗೆ ಮನೆಗೆ ಹೋಗಿ ಬಂದ ಕೆಲವೆ ಹೊತ್ತಿನಲ್ಲಿ ಶ್ರೀಗಳ ಆರೋಗ್ಯ ಹದಗೆಟ್ಟಿದೆ, ಶ್ರೀಗಳು ಈ ಬಗ್ಗೆ ನನ್ನ ಮುಂದೆ ಹೇಳಿಕೊಂಡಿದ್ದಾರೆ ಎಂದು ಬೆಲ್ಲದ್ ಮಾಹಿತಿ ಹಂಚಿಕೊಂಡಿದ್ದಾರೆ‌

ನನಗೆ ಮನಸ್ಸು ಸರಿಯಾಗುತ್ತಿಲ್ಲ, ನನಗೆ ವಿಷ ಪ್ರಾಶನ ಆಗಿದೆ ಅಂತ ಅನುಮಾನ ಇದೆ,
ಊಟದಲ್ಲಿ ಏನೋ ಹಾಕಲಾಗಿದೆ.ಯಾರೊ ಈ ಕೆಟ್ಟ ಕೆಲಸ ಮಾಡುತ್ತಿದ್ದಾರೆ,ಸಮಾಜ ನೋಡುತ್ತಿದೆ,ಅವರು ಮಾಡಿದ ಕೆಟ್ಟ ಕೆಲಸಕ್ಕೆ ತಕ್ಕ ಶಿಕ್ಷೆ ಸಮಾಜ ನೀಡುತ್ತದೆ ಎಂದು ಶ್ರೀಗಳು ನನಗೆ ತಿಳಿಸಿದ್ದಾರೆ ಎಂಬುದಾಗಿ ಅರವಿಂದ್ ಬೆಲ್ಲದ್ ತಿಳಿಸಿದ್ದಾರೆ.

ಜಯಮೃತ್ಯುಂಜಯ ಶ್ರೀಗಳ ಆಹಾರದಲ್ಲಿ ವಿಷ!:ಅರವಿಂದ್ ಬೆಲ್ಲದ್ ಬಾಂಬ್ Read More

ಹುಬ್ಬಳ್ಳಿ ಅತ್ಯಾಚಾರಿ ಎನ್‌ಕೌಂಟರ್; ಸರಕಾರ,ಪೊಲೀಸರಿಗೆ ರೇಖಾ ಅಭಿನಂದನೆ

ಮೈಸೂರು: ಹುಬ್ಬಳ್ಳಿಯಲ್ಲಿ ಚಿಕ್ಕ ಮಗುವನ್ನು ಅಪಹರಿಸಿ, ಕೊಲೆ ಮಾಡಿದ ಆರೋಪಿಯನ್ನು ಕಾನೂನಿನ ಚೌಕಟ್ಟಿನಲ್ಲಿ ಗುಂಡಿಟ್ಟು ಕೊಲ್ಲಲಾಗಿದ್ದು, ತಕ್ಕ ಶಾಸ್ತಿ ಮಾಡಲಾಗಿದೆ ಎಂದು ಶ್ರೀ ದುರ್ಗಾಪೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಇಂತಹ ಕ್ರಮ ಕೈಗೊಂಡಿದ್ದಕ್ಕೆ ಸರಕಾರ ಹಾಗೂ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಘಟನೆ ಇಡೀ ಸಮಾಜ ತಲೆ ತಗ್ಗಿಸುವಂತಹದು, ಇಂತಹ ಘಟನೆಗಳು ಕೊನೆಯಾಗಬೇಕು. ಈ ರಾಕ್ಷಸಿ ಕೃತ್ಯವನ್ನು ಎಲ್ಲರೂ ಖಂಡಿಸಬೇಕು ಎಂದು ಕರೆ ನೀಡಿದ್ದಾರೆ.

ಹುಬ್ಬಳ್ಳಿ ಪೊಲೀಸರ ಈ ದಿಟ್ಟ ಕ್ರಮಕ್ಕೆ ಎಲ್ಲೆಡೆಯಿಂದ ಶ್ಲಾಘನೆ ಕೇಳಿ ಬರುತ್ತಿವೆ, ಇದು ಅತ್ಯಾಚಾರಿಗಳಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ, ಅತ್ಯಾಚಾರಿಗಳಿಗೆ ಇಂತಹ ಶಿಕ್ಷೆ ನೀಡಿದರೆ ಅವರಲ್ಲಿ ಭಯ ಬರುವುದು,
ತ್ವರಿತವಾಗಿ ವಿಧಿಸಿದ ಈ ಶಿಕ್ಷೆಯ ಭಯದಿಂದಾದರೂ ಇಂಥಾ ದುರುಳರ ಸಂಖ್ಯೆ ಕಡಿಮೆಯಾಗಲಿ ಎಂದು ರೇಖಾ ಶ್ರೀನಿವಾಸ್ ಹೇಳಿದ್ದಾರೆ.

ಹುಬ್ಬಳ್ಳಿ ಅತ್ಯಾಚಾರಿ ಎನ್‌ಕೌಂಟರ್; ಸರಕಾರ,ಪೊಲೀಸರಿಗೆ ರೇಖಾ ಅಭಿನಂದನೆ Read More

ಹುಬ್ಬಳ್ಳಿ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಎನ್‌ಕೌಂಟರ್‌

ಹುಬ್ಬಳ್ಳಿ: 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಯು ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

ಆರೋಪಿ ರಿತೇಶ್ ಕುಮಾರ್ ಪೊಲೀಸರ ಗುಂಡೇಟಿಗೆ ಮೃತಪಟ್ಟಿದ್ದಾನೆ.

ಬಾಲಕಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಅವನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಓಡಿಹೋಗಲು ಯತ್ನಿಸಿದ್ದಾನೆ.
ಅಲ್ಲದೇ ಪೊಲೀಸ್ ಜೀಪಿನ ಮೇಲೂ ಕಲ್ಲು ತೂರಿದ್ದಾನೆ.

ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಮೇಲೆ ಫೈರಿಂಗ್ ಮಾಡಿದ್ದಾರೆ, ಲೇಡಿ ಪೊ ಎಸ್ ಐ ಅನ್ನಪೂರ್ಣ ಅವರು ಹಾರಿಸಿದ ಗುಂಡು ತಗುಲಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪಾಪಿ ಮೃತಪಟ್ಟಿದ್ದಾನೆ.

ಇತ್ತ ಘಟನೆಯಲ್ಲಿ ಒಬ್ಬ ಪಿಎಸ್‌ಐ ಮತ್ತು ಇಬ್ಬರು ಸಿಬ್ಬಂದಿಗೂ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿಯು ಬಾಲಕಿಗೆ ಚಾಕ್ಲೀಟ್ ಆಸೆ ತೋರಿಸಿ ಕಿಡ್ನಾಪ್ ಮಾಡಿ ಬಳಿಕ ಅತ್ಯಾಚಾರ ಮಾಡಿದ್ದಾನೆ. ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಘಟನೆ ಖಂಡಿಸಿ ಬಾಲಕಿಯ ಪೋಷಕರು ಹಾಗೂ ಸ್ಥಳೀಯರು ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದು, ಆತನನ್ನು ಎನ್‌ಕೌಂಟರ್ ಮಾಡುವಂತೆ ಆಗ್ರಹಿಸಿದ್ದರು.

ಆರೋಪಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ವಿವಿಧ ಸಂಘಟನೆಗಳೊಂದಿಗೆ ಪ್ರತಿಭಟನಾ ನಿರತರು ಪೊಲೀಸ್ ಕಮಿಷನರ್ ಶಶಿಕುಮಾರ್ ಪರ ಜಯಕಾರ ಹಾಕಿದರು.

ಹುಬ್ಬಳ್ಳಿ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಎನ್‌ಕೌಂಟರ್‌ Read More

ಚಾಕೋಲೆಟ್ ಆಸೆ ತೋರಿಸಿ ಬಾಲಕಿ ಹೊತ್ತೊಯ್ದು ಅತ್ಯಾಚಾರ: ಕೊ*ಲೆ

ಹುಬ್ಬಳ್ಳಿ: ಚಾಕೋಲೆಟ್ ಆಸೆ ತೋರಿಸಿ ಏನೂ ಅರಿಯದ ೫ ವರ್ಷದ ಕಂದಮ್ಮನನ್ನು ಅಪಹರಿಸಿದ ಕಾಮ ಪಿಶಾಚಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪೈಶಾಚಿಕ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಮಗುವಿನ ತಾಯಿ ಮನೆಯ ಒಳಗೆ ಕೆಲಸ ಮಾಡುತ್ತಿದ್ದರು, ಮಗು ಮನೆಯ ಹೊರಗೆ ಆಟವಾಡುತ್ತಿತ್ತು,ಈ ವೇಳೆ ಮನೆಯ ಬಳಿ ಬಂದ ಆರೋಪಿ ಗೇಟ್ ತೆರೆದು ಒಳ ನುಗ್ಗಿ ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ಹೊತ್ತೊಯ್ದಿದ್ದಾನೆ.

ಬಳಿಕ ಅತ್ಯಾಚಾರವೆಸಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿ ಮನೆಯ ಬಳಿ ಬರುತ್ತಿರುವ ಬಲಕಿಯನ್ನು ಹೊಯ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬಿಹಾರ ಮೂಲದ ಯುವಕ ಈ ನೀಚ ಕೃತ್ಯ ಎಸಗಿದ್ದಾನೆ, ಹುಬ್ಬಳ್ಳಿ ಅಶೋಕನಗರ ಠಾಣೆಗೆ ನುಗ್ಗಿರುವ ಬಾಲಕಿ ಪೋಷಕರು ಹಾಗೂ ಸಾರ್ವಜನಿಕರು, ಆರೋಪಿಯನ್ನು ಬಂಧಿಸಿ ತಮಗೆ ಒಪ್ಪಿಸುವಂತೆ ಪಟ್ಟು ಹಿಡಿದರು.

ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿ ಹತ್ಯೆ ಮಾಡಿದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಜನತೆ ದುಷ್ಕರ್ಮಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಬಾಲಕಿಯ ಕುಟಂಬಸ್ಥರೊಂದಿಗೆ ಅಶೋಕ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ ಸ್ಥಳಕ್ಕೆ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಜನರನ್ನು ಸಮಾಧಾನಪಡಿಸಲು ಯತ್ನಿಸಿದರು .

ಕೆಲ ಸಮಯ ಪೊಲೀಸ್ ಠಾಣೆ ಮುಂದೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.ನಂತರ ಹಿರಿಯ ಅಧಿಕಾರಿಗಳು ಸಾರ್ವಜನಿಕರನ್ನು ಸಮಾಧಾನಪಡಿಸಿ,ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಆದರೆ ಮಗುವಿನ ತಂದೆ,ತಾಯಿಯ ರೋಧನ ಮುಗಿಲು ಮುಟ್ಟಿದ್ದು ಎಂತಹ ಕಠಿಣ ಹೃದಯದವರು ಕೂಡಾ ಮರುಗುವಂತಿತ್ತು

ಚಾಕೋಲೆಟ್ ಆಸೆ ತೋರಿಸಿ ಬಾಲಕಿ ಹೊತ್ತೊಯ್ದು ಅತ್ಯಾಚಾರ: ಕೊ*ಲೆ Read More

ಜಾನಪದ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ:ಡಾ ಜಾನಪದ ಎಸ್ ಬಾಲಾಜಿ

ಹುಬ್ಬಳ್ಳಿ: ಜಾನಪದ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯರಾದ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.

ಹುಬ್ಬಳ್ಳಿಯ ಗಂಗಾಧರ ನಗರದ ನೂಲಿಯ ಚಂದಯ್ಯ ಅಂಬೇಡ್ಕರ್ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಹುಬ್ಬಳ್ಳಿ ತಾಲೂಕ ಕನ್ನಡ ಜಾನಪದ ಪರಿಷತ್ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಅಲೌಕಿಕ ಸಂವಿಧಾನ ಇದಕ್ಕೆ ಇತಿ- ಮಿತಿ ಇಲ್ಲ, ಚೌಕಟ್ಟು ಇಲ್ಲ ಎಂದಿಗೂ ನಶಿಸುವುದಿಲ್ಲ, ಇದಕ್ಕೆ ಒಗ್ಗೂಡಿಸುವ ಶಕ್ತಿ ಇದೆ,ಮಹಿಳೆಯರು ಜಾನಪದ ಉಳಿವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ ಅವರಿಂದಲೇ ಜಾನಪದ ಎಂದಿಗೂ ಗಟ್ಟಿಯಾಗಿರುತ್ತದೆ
ಎಂದು ಡಾ.ಜಾನಪದ‌ ಎಸ್ ಬಾಲಾಜಿ ತಿಳಿಸಿದರು.

ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಡಾ ಜ್ಯೋತಿರ್ಲಿಂಗ ಹಣೆಕಟ್ಟಿ ಮಾತನಾಡಿ,ಜಾನಪದ ಮಾನವೀಯ ಮೌಲ್ಯಗಳನ್ನು ಹಾಗೂ ಸಂಸ್ಕಾರವನ್ನು ಕಲಿಸುವುದರಿಂದ ಕನ್ನಡ ಜಾನಪದ ಪರಿಷತ್ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಲ್ಲಿ ಜಾನಪದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಪ್ರಶಂಸನೀಯ ಎಂದು ತಿಳಿಸಿದರು.

ಜಾನಪದ ಆಚರಣೆಗಳು, ಪಾರಂಪರಿಕ ವಾಡಿಕೆಗಳು ಹಾಗೂ ಪದ್ಧತಿಗಳನ್ನು ಅನುಸರಿಸಿಕೊಂಡು ಹೋಗುವುದು ವಿದ್ಯಾರ್ಥಿಗಳು ಮತ್ತು ಯುವಜನರ ಕರ್ತವ್ಯ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯ ಕಾರ್ಯದರ್ಶಿ ಪ್ರೊ ಕೆ ಎಸ್ ಕೌಜಲಗಿ ತಿಳಿಸಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘಟನೆ ರಾಜ್ಯಾಧ್ಯಕ್ಷ ಸುರೇಶ ಗೋಕಾಕ್ ಮಾತನಾಡಿ ಪಿಜ್ಜಾ, ಬರ್ಗರ್ ಯುಗದಲ್ಲಿ ಇದ್ದರೂ ನಮ್ಮ ಗ್ರಾಮೀಣ ಆಹಾರ ಪದ್ಧತಿಯನ್ನು ನಿರ್ಲಕ್ಷಿಸಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರೊ ಪಿ ಬಿ ಪುಲಕೇಶಿ ಶಾಮಣ್ಣನವರ್, ಪ್ರಾಂಶುಪಾಲರು ಎಸ್ ಎಸ್ ಎಸ್ ಸಿ ಡಾ ಅಂಬೇಡ್ಕರ್ ಕಾಲೇಜು, ಪಿ ಎಸ್ ಬಪ್ಪರಮನಿ ಎಂ ಎಸ್ ಎಸ್ ಅಧಿಕಾರಿಗಳು, ಡಾ ಸಪ್ನಾ ಜಾದವ್ ಐಕ್ಯೂಎಸ್‌ಸಿ ಸಂಚಾಲಕರು, ಕನ್ನಡ ಪ್ರಾಧ್ಯಾಪಕಿ ಡಾ ಸವಿತಾ ಕೋಟ್ಬಾಗಿ, ಕನ್ನಡ ಜಾನಪದ ಪರಿಷತ್ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಎಂ, ಹುಬ್ಬಳ್ಳಿ ತಾಲೂಕ ಅಧ್ಯಕ್ಷರು ಈಶ್ವರಪ್ಪ ಕ ಹೊಳೆಮ್ಮನವರು, ಕಾರ್ಯದರ್ಶಿ ಸಂತೋಷ್ ಕುಮಾರ್ ಬಡಿಗೇರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇಮಾಮ್ ಸಾಬ್ ಎಮ್ ಮಲ್ಲಪ್ಪನವರ್, ಕಲಘಟಗಿಯ ನಿಂಗಪ್ಪ ಪೂಜಾರಿ, ಅಣ್ಣಿಗೆರೆ ರವಿರಾಜ್ ವರೆಣೆಕರ್,ಧಾರವಾಡ ಜಿಲ್ಲಾ ಸಂಚಾಲಕರು ಜಾನಪದ ಯುವ ಬ್ರಿಗೇಡ್ ಮಹೇಶ್ ತಳವಾರ, ಹಾವೇರಿ ಸಂಚಾಲಕ ಶಿವಯೋಗಿ ಹಾಗೂ ಇತರ ಕಲಾವಿದರು ಪದವಿ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಾನಪದ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ:ಡಾ ಜಾನಪದ ಎಸ್ ಬಾಲಾಜಿ Read More

ಭೂಮಿ ಇರುವವರೆಗೂ ಜಾನಪದ ಇದ್ದೇ ಇರುತ್ತದೆ:ಡಾ.ಜಾನಪದ‌ ಎಸ್ ಬಾಲಾಜಿ

ಹುಬ್ಬಳ್ಳಿ: ಜಾನಪದ ಮುರಿದು ಕಟ್ಟಬೇಕಾಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯ ಅಧ್ಯಕ್ಷರು ಹಾಗೂ ಭಾರತ ಸರ್ಕಾರದ ಐ ಸಿ ಸಿ ಆರ್ ಸದಸ್ಯರೂ ಆದ ಡಾ.ಜಾನಪದ‌ ಎಸ್ ಬಾಲಾಜಿ ಅಭಿಪ್ರಾಯ ಪಟ್ಟರು.

ಹುಬ್ಬಳ್ಳಿ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ಹುಬ್ಬಳ್ಳಿ ನಗರ ತಾಲ್ಲೂಕಿನ 10 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಜಾನಪದ ಅವಿನಾಶಿ, ಭೂಮಿ ಇರುವವರೆಗೂ ಜಾನಪದ ಇದ್ದೇ ಇರುತ್ತದೆ ಆದರೆ ಕಾಲಘಟ್ಟಕ್ಕೆ ಪರಿವರ್ತನೆ ಗೊಳ್ಳುತ್ತಾಬಂದಿದೆ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅಭಿವೃದ್ಧಿ ದಿಕ್ಕಿನಲ್ಲಿ ನಿರಂತರವಾಗಿ ಸಾಗಲಿ ಎಂದು ತಿಳಿಸಿದರು.

ಕನ್ನಡ ಅನ್ನದ ಭಾಷೆಯಾಗಿದ್ದು ಅದನ್ನು ಪ್ರತಿ ಒಬ್ಬ ಕನ್ನಡಿಗ ಗೌರವಿಸಬೇಕು ಎಂದು ಡಾ.ಜಾನಪದ ಎಸ್ ಬಾಲಾಜಿ ಕರೆ ನೀಡಿದರು.

ಸಾನಿದ್ಯ ವಹಿಸಿದ್ದ ಹುಬ್ಬಳ್ಳಿಯ ರುದ್ರಾಕ್ಷಿ ಮಠದ ಪೂಜ್ಯ ಶ್ರೀ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಆಶೀರ್ಚನ ನೀಡಿ, ವಚನ ಸಾಹಿತ್ಯದ ಬಗ್ಗೆ ಹೆಚ್ಚು ಅಭ್ಯಾಸ ಮಾಡಿ ಅನುಸರಿಸಬೇಕೆಂದು ಕರೆ ನೀಡಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ ಟಿ ಎಂ ಭಾಸ್ಕರ ಮಾತನಾಡಿ ಜಾನಪದ ಪ್ರದರ್ಶನ ಕಲೆಗಳು ಹಾಗೂ ಜನಪದ ಕಥನ ಗೀತೆಗಳನ್ನು
ವಿದ್ಯಾರ್ಥಿಗಳು ಕಲಿಯುವ ಮೂಲಕ ಜಾನಪದ ಕುರಿತು ಜಾಗೃತಿ ಮೂಡಿಸಬಹುದು ಎಂದು ತಿಳಿಸಿದರು.

ಸಮ್ಮೇಳನದ ಅಧ್ಯಕ್ಷರು ಪ್ರೊ ಕೆ ಎಸ್ ಕೌಜಲಗಿ, ಸಾಹಿತಿ ಡಾ ಗೋವಿಂದ ಮಣ್ಣುರು, ಜಿಲ್ಲಾ ಅಧ್ಯಕ್ಷರು ಪ್ರೊ. ಲಿಂಗರಾಜ್ ಅಂಗಡಿ,ಮಲ್ಲಿಕಾರ್ಜುನ ಸಾಹುಕಾರ,ಎಂ ಎಂ ಮಾಳಾಗಿ, ಪ್ರೊ ಶೋಭಾ ಹಿತ್ತಲಿಮನಿ, ಪ್ರೊ.ಜಿ. ಬಿ. ಹಳ್ಳಾಳ ಉಪಸ್ಥಿತರಿದ್ದರು.

ಭೂಮಿ ಇರುವವರೆಗೂ ಜಾನಪದ ಇದ್ದೇ ಇರುತ್ತದೆ:ಡಾ.ಜಾನಪದ‌ ಎಸ್ ಬಾಲಾಜಿ Read More

ಪ್ರೊ.ಕೆ ಎಸ್ ಕೌಜಲಗಿ ಹುಬ್ಬಳ್ಳಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಯ್ಕೆ

ಹುಬ್ಬಳ್ಳಿ: ಹಿರಿಯ ಸಾಹಿತಿಗಳಾದ ಪ್ರೊ. ಕೆ ಎಸ್ ಕೌಜಲಗಿ ಅವರು ಮಾರ್ಚ್ ೨೦ ರಂದು ನಡೆಯುವ ಹುಬ್ಬಳ್ಳಿ ಶಹರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ.

ಪ್ರೊ. ಕೆ ಎಸ್ ಕೌಜಲಗಿ ಅವರು
ಕನ್ನಡ ಜಾನಪದ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳೂ, ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳೂ ಆಗಿದ್ದಾರೆ.

ಪ್ರೊ. ಕೆ ಎಸ್ ಕೌಜಲಗಿ ಗುರುಗಳು ಹುಬ್ಬಳ್ಳಿ ಶಹರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಯ್ಕೆಯಾಗಿರುವ ಹಿನ್ನೆಲೆಯಲ್ಲಿ ಜಾನಪದ ಯುವ ಬ್ರಿಗೇಡ್ ಧಾರವಾಡ ಘಟಕದ ವತಿಯಿಂದ ಸನ್ಮಾನಿಸಿ,ಅಭಿನಂದಿಸಲಾಯಿತು.

ಜಿಲ್ಲಾ ಸಂಚಾಲಕರಾದ ಮಹೇಶ ಎಸ್ ತಳವಾರ ಹಾಗೂ ಸಹ ಸಂಚಾಲಕರಾದ ರಾಮಪ್ಪ ಹ ಕೊಂಡಕೇರ ಅವರು ಪ್ರೊ. ಕೆ ಎಸ್ ಕೌಜಲಗಿ ಅವರನ್ನು ಅಭಿನಂದಿಸಿ,ಸತ್ಕರಿಸಿದರು.

ಪ್ರೊ.ಕೆ ಎಸ್ ಕೌಜಲಗಿ ಹುಬ್ಬಳ್ಳಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಯ್ಕೆ Read More