ಹೊಯ್ಸಳ ಕರ್ನಾಟಕ ಸಂಘದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ 9ಲಕ್ಷ ದೇಣಿಗೆ ನೀಡಿದ ಶ್ರೀಗಳು

ಮೈಸೂರು: ಅವಧೂತ ದತ್ತಪೀಠದ‌ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೊಯ್ಸಳ ಕರ್ನಾಟಕ ಸಂಘದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಸೋಲಾರ್ ಗ್ರಿಡ್ ಅಳವಡಿಕೆಗಾಗಿ 9ಲಕ್ಷ ದೇಣಿಗೆ ನೀಡಿದ್ದಾರೆ.

ಮೈಸೂರಿನ ಕೆ. ಆರ್. ವನಂನಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಸೋಲಾರ್ ಗ್ರಿಡ್ ಅಳವಡಿಕೆಗಾಗಿ ದತ್ತ ಜಯಂತಿ ಅಂಗವಾಗಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಕೊಡುಗೆಯಾಗಿ 9 ಲಕ್ಷ ರೂ. ಗಳ ಚೆಕ್ ಅನ್ನು ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ. ಆರ್. ಸತ್ಯನಾರಾಯಣ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಆರ್. ಸತ್ಯನಾರಾಯಣ ಅವರು,ಸ್ವಾಮೀಜಿ ಯವರು ಮೊದಲಿನಿಂದಲೂ ನಮ್ಮ ಸಂಘದ ಮೇಲೆ ಕೃಪೆ ಇಟ್ಟು ಪೋಷಿಸುತ್ತಾ ಬಂದಿದ್ದಾರೆ ಎಂದು ತಿಳಿಸಿದರು.
ಶ್ರೀ ಗಳ ಮಾತೃಶ್ರೀ ಮಾತಾ ಜಯಲಕ್ಷ್ಮಿ ಅಮ್ಮ ನವರ ಸ್ಮರಣರ್ಥ ಅನ್ನಪೂರ್ಣ ಮಂದಿರ ವನ್ನು ಕೊಡುಗೆ ನೀಡಿದ್ದಾರೆ, ಈಗ ಆಶೀರ್ವಾದ ಪೂರ್ವಕವಾಗಿ ಸೋಲಾರ್ ಗ್ರಿಡ್ ನೀಡುತ್ತಿರುವುದು ವಿದ್ಯಾರ್ಥಿಗಳಿಗೆ ಬಹಳ ಸಹಕಾರಿ ಯಾಗಲಿದೆ, ಸ್ವಾಮೀಜಿ ಗಳ ಈ ಕೊಡುಗೆ ನಮ್ಮೆಲ್ಲರಿಗೆ ಪ್ರಾತಃ ಸ್ಮರಣೀಯ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಆಶ್ರಮದ ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು, ಆಶ್ರಮದ ವಿನಯ್ ಬಾಬು,ಸಂಘದ ಕಾರ್ಯದರ್ಶಿ ಎನ್. ಎಸ್. ಜಯಸಿಂಹ, ಸಹ ಕಾರ್ಯದರ್ಶಿ ಎಚ್. ಎ. ವಿಜಯಕುಮಾರ್, ಸಂಘದ ನಿರ್ದೇಶಕರುಗಳಾದ ಬಿ. ಕೆ. ವೆಂಕಟೇಶ ಪ್ರಸಾದ್, ವೀಣಾ ಜಿ. ಆರ್, ಲಕ್ಷ್ಮಿ ಎಂ. ಆರ್. ಹಾಸ್ಟೆಲ್‌ನ ವಾರ್ಡನ್ ಎಚ್. ಕೆ. ನಾಗೇಶ್, ವಿಶ್ವಜಿತ್ ಮತ್ತಿತರರು ಹಾಜರಿದ್ದರು.

ಹೊಯ್ಸಳ ಕರ್ನಾಟಕ ಸಂಘದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ 9ಲಕ್ಷ ದೇಣಿಗೆ ನೀಡಿದ ಶ್ರೀಗಳು Read More

ಹೊಯ್ಸಳ ಕರ್ನಾಟಕ ಸಂಘದಿಂದಭೈರಪ್ಪ ಅವರಿಗೆ ದೀಪ ಬೆಳಗಿ ಸಂತಾಪ

ಮೈಸೂರು: ನಾಡಿನ ಹೆಸರಾಂತ ಸಾಹಿತಿಗಳು ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ ಅವರಿಗೆ ಮೈಸೂರಿನ ಹೊಯ್ಸಳ ಕರ್ನಾಟಕ ಸಂಘದಲ್ಲಿ ದೀಪ ಬೆಳಗಿ ಮೌನಚಾರಣೆ ಮಾಡಿ ಸಂತಾಪ ಸೂಚಿಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷರಾದ ಕೆ. ಆರ್. ಸತ್ಯನಾರಾಯಣ ಅವರು, ಡಾ. ಎಸ್. ಎಲ್. ಭೈರಪ್ಪ ನವರು ನಮ್ಮ ಸಂಘದ ಗೌರವನ್ವಿತ ಧರ್ಮದರ್ಶಿಗಳಾಗಿದ್ದರು ಎಂದು ಸ್ಮರಿಸಿದರು.

ವಿದ್ಯಾರ್ಥಿಯಾಗಿದ್ದಾಗ ಅವರು ಸಂಘದ ವಿದ್ಯಾರ್ಥಿ ನಿಲಯದಲ್ಲಿ ಕೆಲವು ದಿನಗಳ ಕಾಲ ವ್ಯಾಸಂಗ ಮಾಡಿದ್ದುದು ಅವರ ಭಿತ್ತಿ ಕಾದಂಬರಿಯಲ್ಲಿ ದಾಖಲಾಗಿದೆ ಎಂದು ತಿಳಿಸಿದರು.

ಕೆಲ ದಿನಗಳ ಹಿಂದೆ ನಮ್ಮ ವಿದ್ಯಾರ್ಥಿ ನಿಲಯದ ಬಗ್ಗೆ ಕೂಲಂಕುಷವಾಗಿ ನನ್ನ ಬಳಿ ವಿಚಾರಿಸಿದ್ದರು ಮತ್ತು ವಿದ್ಯಾರ್ಥಿ ಗಳ ಬಗ್ಗೆ ಅತೀವ ಕಾಳಜಿ ಇಟ್ಟುಕೊಂಡಿದ್ದರು, ಭೈರಪ್ಪ ನವರ ಅಗಲಿಕೆ ಸಾಹಿತ್ಯ ಲೋಕಕ್ಕೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟ ಎಂದು ನುಡಿದರು.

ಮುಂದಿನ ದಿನಗಳಲ್ಲಿ ಭೈರಪ್ಪ ನವರ ಹೆಸರಿನಲ್ಲಿ ಶಾಶ್ವತ ಯೋಜನೆ ಕಲ್ಪಿಸುವುದಾಗಿ ಮಾಹಿತಿ ನೀಡಿದರು.

ಕಾರ್ಯದರ್ಶಿ ಜಯಸಿಂಹ ಮಾತನಾಡಿ ಭೈರಪ್ಪ ನವರು ತಮ್ಮ ಕಾದಂಬರಿ ಗಳಲ್ಲಿ ಈ ನೆಲದ ಮಣ್ಣಿನ ಸಾಮಾಜಿಕ ಜೀವನ ಮತ್ತು ಧಾರ್ಮಿಕ ಕಟ್ಟುಪಾಡುಗಳ ಬಗ್ಗೆ ನಿರ್ಭಿತ ವಾಗಿ ಬರೆಯುತ್ತಿದ್ದರು ಆದರೆ ಅದನ್ನು ವಿವಾದ ವಾಗಿಸಲೆಂದೆ ಕೆಲವು ಪಟ್ಟಭದ್ರ ಹಿತಾಸಕ್ತಿ ಗಳು ಅವರ ಮೇಲೆ ಆರೋಪಿಸುತ್ತಿದರು,ಆದರೂ ಭೈರಪ್ಪ ನವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮುಂದಿನ ಕಾದಂಬರಿಗೆ ಸಾಜ್ಜಾಗುತ್ತಿದ್ದರು ಎಂದು ಹೇಳಿದರು.

ಸಂಘದ ಪದಾಧಿಕಾರಿಗಳಾದ ಸುಂದರಮೂರ್ತಿ, ವಿಜಯ ಕುಮಾರ್,ಶ್ರೀನಿಧಿ, ಹರೀಶ್, ಜಗಧೀಶ್, ರಂಗನಾಥ್, ಪ್ರಶಾಂತ್, ಅನುಪಮಾ, ಶೈಲಜಾ, ವಿಜಯಾಪ್ರಸಾದ್ ಸದಸ್ಯರಾದ ಮಂಜುನಾಥ್, ಚಂದ್ರಶೇಖರ್, ಪ್ರಮೋದ್, ವಿದ್ಯಾರ್ಥಿಗಳಾದ ಲಕ್ಷ್ಮಣ್, ಆದಿತ್ಯ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

ಹೊಯ್ಸಳ ಕರ್ನಾಟಕ ಸಂಘದಿಂದಭೈರಪ್ಪ ಅವರಿಗೆ ದೀಪ ಬೆಳಗಿ ಸಂತಾಪ Read More

ಹೊಯ್ಸಳ ಕರ್ನಾಟಕ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

ಮೈಸೂರು: ಹೊಯ್ಸಳ ಕರ್ನಾಟಕ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಂಘದಲ್ಲಿ 2025 ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಶುಭ ಹಾರಿಸಲಾಯಿತು.

ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ,ಉಪಾಧ್ಯಕ್ಷೆ ಶ್ರೀಮತಿ,ಕಾರ್ಯದರ್ಶಿ ಎನ್‌.ಎಸ್.ಜಯಸಿಂಹ,ಖಜಾಂಚಿ ಸುಂದರಮೂರ್ತಿ,ಸಹ-ಕಾರ್ಯದರ್ಶಿ ವಿಜಯ ಕುಮಾರ್, ಮಾಜಿ ಅಧ್ಯಕ್ಷ ಭಾರದ್ವಾಜ್, ನಿರ್ದೇಶಕರಾದ ಡಾ.ವಿದ್ಯಾಶಂಕರ,ಹರೀಶ್,ವೆಂಕಟೇಶ್,ಪ್ರಶಾಂತ್,ಜಗದೀಶ್,ಅನುಪಮಾ,ವೀಣಾ ಮುಂತಾದವರು ಹಾಜರಿದ್ದರು.

ಹೊಯ್ಸಳ ಕರ್ನಾಟಕ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ Read More