ಸುಳ್ಳು 11-ಬಿ ಖಾತೆ ಸೃಷ್ಟಿಸಿ ಸ್ವತ್ತು ಬೇರೆಯವರಿಗೆ ಪರಭಾರೆ: ಪ್ರತಿಭಟನೆ

ಹುಣಸೂರು: ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಉಮ್ಮತ್ತೂರು ಗ್ರಾಮ ಪಂಚಾಯಿತಿಯಲ್ಲಿ ಅಕ್ರಮವಾಗಿ ಸುಳ್ಳು 11-ಬಿ ಖಾತೆ ಸೃಷ್ಟಿಸಿ ತಮಗೆ ಸೇರಿದ ಸ್ವತ್ತನ್ನು ಯಾರೋ ಮೂರನೆ ವ್ಯಕ್ತಿಗೆ ‘ಬಿ’ ಖಾತೆ ಮಾಡಿಕೊಡಲಾಗಿದೆ ಎಂದು ಆರೋಪಿಸಿ ಸ್ವತ್ತಿನ ಮಾಲೀಕರು ಪ್ರತಿಭಟನೆ ನಡೆಸಿದರು.

ಸ್ವತ್ತಿನ ಮಾಲೀಕ ಮಣಿಪುತ್ರ ಮತ್ತು ಅವರ‌ ಸಹೋದರ ಪ್ರಶಾಂತ್ ಮತ್ತಿತರರು ನಡೆಸಿದ ಪ್ರತಿಭಟನೆಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಮತ್ತಿತರರು ಬೆಂಬಲ ನೀಡಿದರು.

ಹುಣಸೂರು ತಾಲ್ಲೂಕು,
ಹನಗೋಡು ಹೋಬಳಿ 2ನೇ ಪಕ್ಷಿರಾಜಪುರ ಗ್ರಾಮದ ಮಣಿಪುತ್ರ ಬಿನ್ ಲೇಟ್: ಶುದ್ದರಾಜು ಅವರಿಗೆ ,ಸಂತರಾಜ್ ಮತ್ತು ಅಕ್ಕ ಮನಿಲಾ ರವರಿಗೆ ಸೇರಿದ ಸ್ವತ್ತನ್ನು 3ನೇ ವ್ಯಕ್ತಿಗೆ ಅಂದರೆ ನತಾನಿಯಲ್ ಬಿನ್ ಲೇಟ್: ಜೈಶಂಕರ್ ರವರಿಗೆ ಯಾವುದೇ ಹಕ್ಕುಬಾಧ್ಯತೆ ಇಲ್ಲದಿದ್ದರೂ ಸಹ ಉಮ್ಮತ್ತೂರು ಗ್ರಾಮ ಪಂಚಾಯಿತಿ ಪಿ.ಡಿ.ಒ. ಮಹದೇವ ರವರು ಯಾವುದೇ ಆರ್.ಡಿ. ವಂಶವೃಕ್ಷ ಪಡೆಯದೆ ಸುಳ್ಳು ದಾಖಲೆಯನ್ನು ಸೃಷ್ಟಿಸಿ ಕೊಟ್ಟಿದ್ದಾರೆ, ಸದರಿ ಸ್ವತ್ತನ್ನು ‘ಬಿ’ ಖಾತೆ ಮಾಡಿರುವುದು ಕಾನೂನು ಬಾಹಿರವಾಗಿರುತ್ತದೆ. ‘ಬಿ’ ಖಾತೆ ದಾಖಲು ಮಾಡಲು ನನ್ನ ಅಕ್ಕ ಮನಿಲಾ ಅಥವಾ ನನ್ನ ಭಾವ ಸಂತರಾಜು ರವರ ಹೆಸರಿನಲ್ಲಿ ರೆವಿನ್ಯೂ ಆರ್.ಟಿ.ಸಿ. ಇರುವುದಿಲ್ಲ. ನನ್ನ ಹೆಸರಿಗೆ ವಿಲ್ ದಾಖಲಾಗಿದ್ದರೂ ಸಹ ಪರಿಗಣಿಸದೆ ಸುಳ್ಳು ಖಾತೆ ಸೃಷ್ಟಿಸಿರುತ್ತಾರೆ. ಇದರ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಪ್ರಶಾಂತ್ ಅವರು ಮಾಧ್ಯಮಗಳಿಗೆ ತಿಳಿಸಿದರು.

ಖಾತೆ ವಜಾ ಮಾಡಬೇಕು ಹಾಗೂ ಭ್ರಷ್ಟಾಚಾರ ಎಸಗಿರುವ ಪಿ.ಡಿ.ಒ ಮಹದೇವ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರಶಾಂತ್ ಆಗ್ರಹಿಸಿದ್ದಾರೆ.

ಸುಳ್ಳು 11-ಬಿ ಖಾತೆ ಸೃಷ್ಟಿಸಿ ಸ್ವತ್ತು ಬೇರೆಯವರಿಗೆ ಪರಭಾರೆ: ಪ್ರತಿಭಟನೆ Read More

ವೈದ್ಯ ವಿಧ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ:ಮನೆ ಓನರ್ ವಿರುದ್ದ ಎಫ್ಐಆರ್

ಮೈಸೂರು: ಜೆಎಸ್ ಎಸ್ ಮೆಡಿಕಲ್ ಕಾಲೇಜು ವಿಧ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಮನೆ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಾಗಿದೆ

ಬಾಡಿಗೆ ನೀಡಿದ್ದ ಮನೆ ಮಾಲೀಕನ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಬನ್ನಿಮಂಟಪ ಜೆ ಎಸ್ ಎಸ್ ನಗರದ ನಿವಾಸಿ ಅಮಾನುಲ್ಲಾ ಖಾನ್ ವಿರುದ್ದ ಎಫ್ಐಆರ್ ದಾಖಲಾಗಿದೆ.

ಕೇರಳ ಮೂಲದ ವಿಧ್ಯಾರ್ಥಿನಿ ಅಮಾನುಲ್ಲಾ ಖಾನ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಜೂನ್ ನಲ್ಲಿ ಅಮಾನುಲ್ಲಾಖಾನ್ ಅವರ ಮನೆಯಲ್ಲಿ ಕೊಠಡಿ ಬಾಡಿಗೆ ಪಡೆದು ವೈದ್ಯ ವಿಧ್ಯಾರ್ಥಿನಿ ತಂಗಿದ್ದಳು.ಆಕೆ ಒಂಟಿಯಾಗಿದ್ದ ವೇಳೆ ಅಮಾನುಲ್ಲಾಖಾನ್ ಕೊಠಡಿಗೆ ನುಗ್ಗಿ ವಿಧ್ಯಾರ್ಥಿನಿಯ ಬಟ್ಟೆ ಹಿಡಿದು ಎಳೆದಾಡಿ ಮೊಬೈಲ್ ಕಿತ್ತು ಬಿಸಾಕಿ ನನ್ನ ಜೊತೆ ಸೆಕ್ಸ್ ಮಾಡಲು ಸಹಕರಿಸದಿದ್ದರೆ ಸಾಯಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿ ಬಲತ್ಕಾರಕ್ಕೆ ಯತ್ನಿಸಿದ್ದಾನೆ.

ಕೂಡಲೇ ವಿಧ್ಯಾರ್ಥಿನಿ ಅಮಾನುಲ್ಲಾ ಖಾನ್ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಮನೆಯಿಂದ ಹೊರಗೆ ಬಂದು ಆಕೆಯ ಪ್ರಿಯಕರನಿಗೆ ವಿಷಯ ತಿಳಿಸಿ ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ವೈದ್ಯ ವಿಧ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ:ಮನೆ ಓನರ್ ವಿರುದ್ದ ಎಫ್ಐಆರ್ Read More