ಮೈಸೂರು: ಮಕ್ಕಳ ಜೊತೆ ಇದ್ದ ಗೃಹಿಣಿಯ ಮನೆಗೆ ನುಗ್ಗಲು ಹೊಂಚು ಹಾಕಿದ್ದ ಕಳ್ಳನನ್ನು ಸಾರ್ವಜನಿಕರೆ ಹಿಡಿದ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.
ಕಳನನ್ನು ಪೊಲೀಸರು ಬಂಧಿಸಿದ್ದು,ಕಂಬಿ ಎಣಿಸಿದ್ದಾನೆ.
ನಂಜನಗೂಡಿನ ಎಂ.ಎಂ.ಬಡಾವಣೆಯಲ್ಲಿ ಘಟನೆ ನಡೆದಿದ್ದು, ಹುಲ್ಲಹಳ್ಳಿಯ ನಂಜೀಪುರ ಗ್ರಾಮದ ಶಿವಪಾದ ಸಿಕ್ಕಿಬಿದ್ದ ಕಳ್ಳ.
ಬುಧವಾರ ರಾತ್ರಿ 9 ಗಂಟೆಯಲ್ಲಿ ಕಳ್ಳ ವೀರಮಣಿ ಎಂಬುವರ ಮನೆ ಕಾಂಪೌಂಡ್ ಹಾರಿ ಬಂದು ಅವಿತುಕೊಂಡು ಒಳಗೆ ನುಗ್ಗಲು ಹೊಂಚು ಹಾಕಿದ್ದ.ಅದನ್ನ ನೋಡಿದ ಗೃಹಿಣಿ ಸೆಲ್ವಿ ಅವರು ಕೂಗಿಕೊಂಡಿದ್ದಾರೆ.
ತಕ್ಷಣ ಅಕ್ಕಪಕ್ಕದ ನಿವಾಸಿಗಳು ಓಡಿಬಂದು ಖದೀಮನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿ ದ್ದಾರೆ.
ಈ ಹಿಂದೆಯೂ ಇದೇ ಕಳ್ಳ ಕಳ್ಳತನಕ್ಕೆ ಯತ್ನಿಸಿ ತಪ್ಪಿಸಿಕೊಂಡಿದ್ದ,ನನ್ನ ಪತಿ ಬರದೇ ಇದ್ದಿದ್ದರೆ ನಾನು ಕೊಲೆ ಆಗುತ್ತಿದ್ದೆ.ಇದು ಮೊದಲನೇ ಸಲ ಅಲ್ಲ,ಹಿಂದೆಯೂ ಕುತ್ತಿಗೆಗೆ ಚಾಕು ಹಿಡಿದಿದ್ದ,ನಮಗೆ ರಕ್ಷಣೆ ಬೇಕು ಎಂದು ಸೆಲ್ವಿ ಅವರು ಮನವಿ ಮಾಡಿದ್ದಾರೆ
ಕಳ್ಳನ ವಿರುದ್ದ ಕ್ರಮ ಕೈಗೊಳ್ಳಬೇಕು ಹಾಗೂ ತಮ್ಮ ಬಡಾವಣೆಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಎಂ.ಎಂ.ಬಡಾವಣೆ ಜನತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ನಾಗ್ಪುರ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರದ ನಿವಾಸಕ್ಕೆ ವ್ಯಕ್ತಿಯೊಬ್ಬ ಬಾಂಬ್ ಬೆದರಿಕೆ ಕರೆ ಮಾಡಿದ್ದು ಕೆಲಕಾಲ ಆತಂಕ ವುಂಟಾಯಿತು.
ಆ ವ್ಯಕ್ತಿ ಬೆಳಿಗ್ಗೆ ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ತುರ್ತು ಸಂಖ್ಯೆ 112ಕ್ಕೆ ಕರೆ ಮಾಡಿ ಬೆದರಿಕೆಯೊಡ್ಡಿದ್ದ ಇದರಿಂದ ಅಧಿಕಾರಿಗಳೇ ಶಾಕ್ ಗೆ ಒಳಗಾದರು.
ತನಿಖೆ ಸಮಯದಲ್ಲಿ, ಕರೆ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿದ್ದು, ನಾಗ್ಪುರ ನಗರದ ಸಕ್ಕರ್ದಾರ ಪ್ರದೇಶದ ವಿಮಾ ದವಾಖಾನಾ ಬಳಿಯ ತುಳಸಿ ಬಾಗ್ ರಸ್ತೆಯ ನಿವಾಸಿ ಉಮೇಶ್ ವಿಷ್ಣು ರಾವುತ್ ಎಂಬಾತ ಕರೆ ಮಾಡಿದ್ದಾನೆಂದು ಗೊತ್ತಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊಬೈಲ್ ಲೊಕೇಶನ್ ಮತ್ತು ತಾಂತ್ರಿಕ ನೆರವಿನಿಂದ ಪೊಲೀಸರು ವಿಮಾ ದವಾಖಾನಾದ ಆವರಣದಿಂದ ರಾವುತ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಳಲಿಸಿ,ವಿಚಾರಣೆಗೆ ಒಳಪಡಿಸಿದ್ದಾರೆ.
ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರದ ತಾಲ್ಲೋಕೊಂದರಲ್ಲಿ ವಿಧವೆಯೊಬ್ವರು ಸರ್ಕಾರ ಕೊಟ್ಟ ನಿವೇಶನದಲ್ಲಿ ಮನೆ ನಿರ್ಮಿಸಲು ಪರದಾಡಿ ಏನೂ ಮಾಡಲು ತೋಚದೆ ಸಾಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಆಕೆ ಎಲ್ಲ ಕಡೆ ತನ್ನ ಮನದಾಳದ ದೂರಿನ ಅರ್ಜಿ ನೀಡಿದರೂ ಅದಿಕಾರಿಗಳು ಮಾತ್ರ ಕ್ಯಾರೆ ಎನ್ನದ ಕಾರಣ ಸಾಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೋಕಿನ ಲೊಕ್ಕನಹಳ್ಳಿ ಗ್ರಾಮದ ಲೇ ಸುರೇಶ್ ಎಂಬುವವರ ಪತ್ನಿ ಮಣಿ ಎಂಬಾಕೆ ಈಗ ದಿಕ್ಕು ಕಾಣದೆ ಆತ್ಮಹತ್ಯೆ ದಾರಿ ಎಂದು ಕೊಂಡಿದ್ದಾರೆ.
ಈಕೆ ರಾಜೀವ್ ಗಾಂದಿ ವಸತಿ ಯೋಜನೆಯಡಿ ನಿವೇಶನವೊಂದರ ಹಕ್ಕು ಪತ್ರವನ್ನು ಪಂಚಾಯ್ತಿ ನೀಡಿದೆ. ಆದರೆ ಮೊದಲ ಹಂತದಲ್ಲಿ ತಳಪಾಯ ತೆಗೆದು ಬೇಸ್ ಮಟ್ಟ ಮಾಡಿ ಬಿಲ್ ಪಡೆಯಲು ಸಾಹಸ ಕೂಡ ಮಾಡುತ್ತಿಧ್ದಾರೆ.
ಆದರೆ ಬಿಲ್ ಅಪ್ರೂವಲ್ ಮಾಡಸಿಕೊಳ್ಳಲಾಗದೆ ಪೂರ್ಣ ಮನೆಯನ್ನು ನಿರ್ಮಿಸಿಕೊಳ್ಳಲಾಗದೆ ತನ್ನ ಕೈ ತಾನೆ ಹಿಚುಕುಗೊಂಡು ಅದಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾಳೆ.
ಈಕೆ ಇರೊ ಜಾಗದಲ್ಲಿನ ಬೀದಿ ಅತೀ ಚಿಕ್ಕದು, ಮನೆ ನಿರ್ಮಾಣ ಮಾಡಲು ಸಾಮಗ್ರಿಗಳನ್ನು ತಂದಿಡಲು ಸಾಗಿಸಲು ಸೂಕ್ತ ಜಾಗವಿಲ್ಲ,ಮತ್ತೊಂದು ಸರ್ಕಾರಿ ರಸ್ತೆ ಪ್ರಭಾವಿಗಳ ಪಾಲು ಇದರಿಂದ ನೊಂದು ದಿಕ್ಕು ಕಾಣದೆ ಪಂಚಾಯತ್ ಅದಿಕಾರಿಗಳು, ತಾಲ್ಲೋಕು ಕಾರ್ಯ ನಿರ್ವಹಣಾದಿಕಾರಿಗಳು,ಜಿಪಂ.ಅದಿಕಾರಿಗಳು, ಉಪವಿಭಾಗಾದಿಕಾರಿಗಳು, ಜಿಲ್ಲಾದಿಕಾರಿಗಳು ಹೀಗೆ ಹಂತ ಹಂತವಾಗಿ ಪತ್ರವ್ಯವಹಾರ ಮಾಡಿದ್ದಾರೆ.
ಉಪವಿಭಾಗಾದಿಕಾರಿಯೊಬ್ಬರು ಸೌಜನ್ಯಯುತವಾಗಿ ಸಮಸ್ಯೆ ಕೇಳಿ ಪ್ರಾಥಮಿಕ ಹಂತದಲ್ಲಿ ಸ್ಪಂದಿಸಿದ್ದು ಬಿಟ್ಟರೆ ಉಳಿದ ಯಾವುದೇ ಅದಿಕಾರಿಗಳು ಕ್ಯಾರೆ ಎಂದಿಲ್ಲ.
ಇತ್ತೀಚೆಗೆ ಮಹಿಳಾ ಆಯೋಗದ ಅದ್ಯಕ್ಷರು ಬಂದಿದ್ದಾಗ ಎಲ್ಲಿ ದೂರು ಸಲ್ಲಿಸುತ್ತಾಳೊ ಎಂಬ ಭಯದಿಂದ ಭೂಮಾಪನ ಇಲಾಖೆಯವರು ನಾಮಾಕಾವಸ್ಥೆ ಸರ್ವೆ ಮಾಡಿ ಹೋದವರು ಮತ್ತೆ ಇತ್ತ ತಿರುಗಿ ನೋಡಲಿಲ್ಲ.
ಮನೆ ನಿರ್ಮಿಸಲು ಇಷ್ಟು ತೊಂದರೆ ಕೊಡುತ್ತಾರೆ ಅಂತ ಗೊತ್ತಿದ್ದರೆ ನಾನು ಮನೆ ಕಟ್ಟುವ ಕೆಲಸಕ್ಕೆ ಹೋಗುತ್ತಿರಲಿಲ್ಲ ಎಂದು ನೊಂದು ನುಡಿಯುತ್ತಾರೆ ಆಕೆ.
ಅಳತೆಯಲ್ಲಿನ ಜಾಗ ನಮ್ಮ ಮಾವ ಮಾರಿದ್ದಾರೆ ಎಂದು ಹೇಳುತ್ತಿಧ್ದು ಅದು ಸರ್ಕಾರಿ ಜಾಗ ನಮ್ಮಮಾವ ಮಾರಲು ಹೇಗೆ ಸಾದ್ಯ.? ಹಾಗಾಗಿದ್ದರೆ ಅವರ ಮೇಲೂ ಕ್ರಮವಹಿಸಲಿ ಮನೆಗೆ ಗಂಡಸ್ಸಿನ ಆಸರೆ ಇಲ್ಲದ್ದರಿಂದ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಿಕೊಳ್ಳಿ ಅಂತ ಹಿಂಬರಹ ನೀಡ್ತಾರೆ ಎನ್ನುತ್ತಾರೆ ದೂರುದಾರೆ ಮಣಿ.
ಇತ್ತ ಅವರಿಗೆ ಕೊಡಬೇಕಾದ ಹಿಂಬರಹ ನಾವು ಕೊಟ್ಟಾಗಿದೆ,ನಮ್ಮನ್ನ ಏನು ಕೇಳಬೇಡಿ.ತಾಲ್ಲೋಕು ಕಾರ್ಯನಿರ್ವಾಹಕ ಅದಿಕಾರಿಗಳನ್ನ ಕೇಳಿಕೊಳ್ಳಿ ಎಂಬ ಉದಾಸೀನ ಉತ್ತರ ಮಾದ್ಯಮದವರಿಗೆ ನೀಡುತ್ತಾರೆ.
ಇವರು ಕೊಡುವ ಉತ್ತರ ನೋಡಿದರೆ ಸರ್ಕಾರಿ ಜಾಗವನ್ನು ನಕಲಿ ದಾಖಲೆ ತಿದ್ದಿ ಪ್ರಭಾವಿ ಖಾಸಗಿಯವರಿಗೆ ಖಾತೆ ಮಾಡಿಕೊಟ್ಟಿರಬಹುದಾ ಎಂಬ ಸಂಶಯ ಕಾಡುತ್ತಿದೆ.
ರಾಜ್ಯದ ಮುಖ್ಯಮಂತ್ರಿಗಳು ರಾಜೀವ್ ಗಾಂದಿ ವಸತಿ ಯೋಜನೆಯಡಿ ನೀಡಲಾದ ಜಾಗಕ್ಕೆ ಮನೆ ನಿರ್ಮಿಸಲು ಅದಿಕಾರಿಗಳೆ ಅಡ್ಡಗಾಲು ಆಗಿರುವಾಗ ದೇವರು ಕೊಟ್ಟರೂ ಪೂಜಾರಿ ಕೊಡ ಎಂಬಂತಾಗಿದೆ ಈಕೆಯ ಸ್ಥಿತಿ.
ದೂರುದಾರೆ ಆರೋಪಿಸಿರುವಂತೆ ಸರ್ಕಾರದ ನಿಯಮದಂತೆ ಅಳತೆ ಮಾಡಿಸಿ ಮನೆ ಕಟ್ಟಲು ಅವಕಾಶ ಮಾಡಿಕೊಡುವುದರ ಜೊತೆಗೆ ಲೋಪ ಮಾಡಿದ್ದರೆ ಅದಿಕಾರಿಗಳ ಮೇಲೆ ಕ್ರಮ ಜರುಗಿಸಲಿ,ನನಗೆ ಆಸರೆಯ ಆಶ್ರಯ ನೀಡಲು ಈ ವಿಧವೆ ಮಹಿಳಾ ಆಯೋಗವೆ ಸಹಕಾರಿಯಾಗಲಿ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.ಏನಾಗುತ್ತದೊ ಮಣಿಗೆ ಮನೆ ಸಿಗುತ್ತದೊ ಇಲ್ಲವೊ ಕಾದು ನೋಡಬೇಕಿದೆ.
ಮೈಸೂರು: ನಗರದಲ್ಲಿ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರೌಡಿ ಆಸಾಮಿಗಳ ಮನೆಗಳ ಮೇಲೆ ದಿಢೀರ್ ದಾಳಿ ಮಾಡಲಾಯಿತು.
ಮೈಸೂರು ನಗರದಲ್ಲಿ ರೌಡಿ ಆಸಾಮಿಗಳ ಮೇಲೆ ನಿಗಾ ವಹಿಸಲು ಹಾಗೂ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಂಬಂಧ ಮೈಸೂರು ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಮೈಸೂರು ನಗರ ಪೊಲೀಸರು 61 ರೌಡಿ ಆಸಾಮಿಗಳ ಮನೆಗಳ ಮೇಲೆ ದಿಢೀರ್ ದಾಳಿ ಮಾಡಿ ವಿಶೇಷ ತಪಾಸಣೆ ಮಾಡಿದರು.
ರೌಡಿ ಆಸಾಮಿಗಳಿಗೆ ಹೆಬ್ಬಾಳು ಪೊಲೀಸ್ ಠಾಣಾ ಆವರಣದಲ್ಲಿ ರೌಡಿ ಪರೇಡ್ ನಡೆಸಲಾಯುತು.
ಯಾವುದೇ ರೀತಿಯ ರೌಡಿ ಚಟುವಟಿಕೆಗಳು ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ಕಡಕ್ ಎಚ್ಚರಿಕೆ ನೀಡಲಾಯಿತು.
ಯಾವುದೇ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾದಲ್ಲಿ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದರು.
ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರ ನೇತೃತ್ವದಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಮತ್ತು ನಗರದ ಎಸಿಪಿ ಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಈ ವಿಶೇಷ ತಪಾಸಣೆ ಹಾಗೂ ರೌಡಿ ಪರೇಡ್ ಕಾರ್ಯದಲ್ಲಿ ಪಾಲ್ಗೊಂಡಿದ್ದರು.