ಹೊಸ ಬೆಳಕು ಸೇವಾ ಟ್ರಸ್ಟ್ ನಿಂದ ಪ್ರಾಣಿ ಪಕ್ಷಿಗಳಿಗೆ ನೀರು ಇಡುವ ಕಾರ್ಯ

ಮೈಸೂರು: ಹೊಸ ಬೆಳಕು ಸೇವಾ ಟ್ರಸ್ಟ್ ವತಿಯಿಂದ ಮೈಸೂರಿನ ವಿಜಯನಗರ ರೈಲ್ವೆ ಬಡಾವಣೆಯ ಉದ್ಯಾನವನದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಇಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಶ್ರೀ ವಿಜಯ ವಿದ್ಯಾ ಮಹಾ ಗಣಪತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಗುರುದತ್ ಮತ್ತು ಪದಾಧಿಕಾರಿಗಳ ಸಮ್ಮುಖದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಇಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಬಟ್ಟಲು ಗಳನ್ನು ಕೊಡುವ ಮುಖಾಂತರ ಮನೆ ಮುಂದೆ ಪ್ರಾಣಿ-ಪಕ್ಷಿಗಳಿಗೆ ನೀರನ್ನು ಇಟ್ಟು ಅವುಗಳ ದಾಹ ನೀಗಿಸಬೇಕೆಂದು ತಿಳುವಳಿಕೆ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಹೊಸ ಬೆಳಕು ಸೇವಾ ಟ್ರಸ್ಟ್ ನ ಅಧ್ಯಕ್ಷೆ ಗೀತಾ, ಪದಾಧಿಕಾರಿಗಳಾದ ಅನಿತಾ, ರಶ್ಮಿ, ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷ ರಕ್ತದಾನಿ ಮಂಜು, ಶ್ರೀ ವಿಜಯ ವಿದ್ಯಾ ಮಹಾ ಗಣಪತಿ ದೇವಸ್ಥಾನದ ಅಧ್ಯಕ್ಷರಾದ ಗುರುದತ್ ಪದಾಧಿಕಾರಿಗಳಾದ ಧರ್ಮೇಗೌಡ, ಶ್ರೀರಾಮುಲು, ಸುಬ್ರಹ್ಮಣ್ಯಂ, ಸದಸ್ಯರಾದ ನಾರಾಯಣ, ಸುರೇಶ್ ಬಾಬು, ಮಂಜುನಾಥ್, ಬಾಲಕೃಷ್ಣ ನಗರ್, ಪಾಂಡುರಂಗ ರಾವ್, ನಾಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.

ಹೊಸ ಬೆಳಕು ಸೇವಾ ಟ್ರಸ್ಟ್ ನಿಂದ ಪ್ರಾಣಿ ಪಕ್ಷಿಗಳಿಗೆ ನೀರು ಇಡುವ ಕಾರ್ಯ Read More

ಸಾಧಕರಿಗೆ ಸೇವ ರತ್ನ ಪ್ರಶಸ್ತಿ ಪ್ರದಾನ

ಮೈಸೂರು: ಮೈಸೂರಿನ ಹೋಟೆಲ್ ಮೌರ್ಯ ರೆಸಿಡೆನ್ಸಿಯಲ್ಲಿ ಹೊಸ ಬೆಳಕು ಸೇವಾ ಟ್ರಸ್ಟ್ ಉದ್ಘಾಟನೆಯನ್ನು ವಿಶೇಷವಾಗಿ ನೆರವೇರಿಸಲಾಯಿತು.

ಸಾಧಕರಿಗೆ ಸೇವ ರತ್ನ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಹೊಸ ಬೆಳಕು ಸೇವಾ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮಾಜಿ ಶಾಸಕರಾದ ಎಲ್ ನಾಗೇಂದ್ರ ಅವರು ಗಣ್ಯರ ಜೊತೆ ಸೇರಿ ಉದ್ಘಾಟನೆ ಮಾಡಿ,
ಸಾಧಕರನ್ನು ಗೌರವಿಸಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು.

ಕರಾಟೆ ಮಾಸ್ಟರ್ ದಿಲೀತ್ತು ಉತ್ತಪ್ಪ , ರಕ್ತದಾನಿ ಮಹದೇವಸ್ವಾಮಿ, ಖೋಖೋ ಆಟಗಾರ್ತಿ ಚೈತ್ರ, ಪೊಲೀಸ್ ಇಲಾಖೆಯ ದಿವಾಕರ್, ಆರ್ಟಿಸ್ಟ್ ಗೌರಿ, ಸಮಾಜ ಸೇವಕರಾದ ಪ್ರಭಮಣಿ, ಮಾದೇವಯ್ಯ, ಕಾಂತರಾಜು, ಮಾಲಂಬಿಕ, ಸೌಮ್ಯ ಆರ್ ರವಿ, ಇಬ್ರಾಹಿಂ ರಫೀಕ್ ಅವರುಗಳು ಸನ್ಮಾನ ಸ್ವೀಕರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸಬೆಳಕು ಸೇವಾ ಟ್ರಸ್ಟ್ ಸಂಸ್ಥಾಪಕರಾದ ಗೀತಾ ಎಮ್ ಎನ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಹೇಮಾ ನಂದೀಶ್, ಶಿವಪ್ರಸಾದ್, ಮಹೇಶ್, ವಿಕ್ರಂ ಅಯ್ಯಂಗಾರ್, ಶ್ರೀನಿವಾಸ್ ಗುರುಗಳು ಪಾಲ್ಗೊಂಡಿದ್ದರು.

ಸಾಧಕರಿಗೆ ಸೇವ ರತ್ನ ಪ್ರಶಸ್ತಿ ಪ್ರದಾನ Read More