ಅಂಗಡಿಗಳಿಗೆ ಪ್ಲಾಸ್ಟಿಕ್ ಕವರ್ ಸಾಗಿಸುತ್ತಿದ್ದ‌ ವ್ಯಕ್ತಿಗೆ 5 ಸಾವಿರ ರೂ ದಂಡ

ಮೈಸೂರು: ಅಂಗಡಿಗಳಿಗೆ ಪ್ಲಾಸ್ಟಿಕ್ ಕವರ್ ವಿತರಣೆ ಮಾಡಲು ಹೋಗುತ್ತಿದ್ದ ವ್ಯಕ್ತಿಗೆ ನಗರಸಭೆ ಅಧಿಕಾರಿಗಳು‌‌ ಚಳಿ ಬಿಡಿಸಿದ್ದಾರೆ.

ಹೂಟಗಳ್ಳಿ ನಗರಸಭೆ ವ್ಯಾಪ್ತಿಯ ಬೆಳವಾಡಿ ಗ್ರಾಮದ ಅಂಗಡಿಗಳಿಗೆ ಪ್ಲಾಸ್ಟಿಕ್ ಕವರ್ ವಿತರಣೆ ಮಾಡಲು ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಹಿಡಿದು‌ ದಂಡ ಹಾಕಿ ಕಠಿಣ ಎಚ್ಚರಿಕೆ ನೀಡಲಾಗಿದೆ.

ಆ ವ್ಯಕ್ತಿ ಸಾಗಿಸುತ್ತಿದ್ದ ಪ್ಲಾಸ್ಟಿಕ್ ಕವರ್ ಸೀಸ್ ಮಾಡಿ 5000 ರೂ ದಂಡ ವಿಧಿಸಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ನಗರಸಭೆಯ ಆರೋಗ್ಯಾಧಿಕಾರಿಗಳಾದ ನೇತ್ರಾವತಿ, ಶಂಕರ್ ಲಿಂಗೇಗೌಡ, ಶಿವಪ್ರಸಾದ್, ಪಂಚಾಯತ್ ಗ್ರಾಮ ಅಭಿವೃದ್ಧಿ ಸಂಸ್ಥೆಯ ಎನ್ ಜಿ ಒ ಅಧ್ಯಕ್ಷ ಯಾದವ್ ಹರೀಶ್ ಹಾಗೂ ನಗರ ಸಭೆಯ ಸಮುದಾಯ ಸಂಚಾಲಕರು ಹಾಜರಿದ್ದರು.

ಅಂಗಡಿಗಳಿಗೆ ಪ್ಲಾಸ್ಟಿಕ್ ಕವರ್ ಸಾಗಿಸುತ್ತಿದ್ದ‌ ವ್ಯಕ್ತಿಗೆ 5 ಸಾವಿರ ರೂ ದಂಡ Read More

ಸುದರ್ಶನ ವಿದ್ಯಾಸಂಸ್ಥೆಯಲ್ಲಿ ಸಂಭ್ರಮದ 76 ನೇ ಗಣರಾಜ್ಯೋತ್ಸವ ಆಚರಣೆ

ಮೈಸೂರು: ಮೈಸೂರಿನ ಹೂಟಗಳ್ಳಿಯ ಕೆಹೆಚ್ ಬಿ ಕಾಲೋನಿಯಲ್ಲಿರುವ ಸುದರ್ಶನ ವಿದ್ಯಾಸಂಸ್ಥೆಯಲ್ಲಿ 76 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿ, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಿಸಲಾಯಿತು.

ವಿವಿಧ‌ ವೇಷಭೂಷಣ ತೊಟ್ಟು ಮಕ್ಕಳು ಎಲ್ಲರ ಮನ ಗೆದ್ದರು.ಮಕ್ಕಳಿಗೆ ಬಹುಮಾನ ನೀಡಿ ಸಂಸ್ಥೆಯ ಕಾರ್ಯರ್ಶಿ ಎನ್.ಶ್ರೀನಿವಾಸನ್ ಪ್ರೋತ್ಸಾಹಿಸಿದರು.

ಈ ಸಂಭ್ರಮದಲ್ಲಿ ರಘುಲಾಲ್ ಅಂಡ್ ಕಂಪನಿಯ ಮುಖ್ಯಸ್ಥರಾದ ರಘುಲಾಲ್, ಎಂ.ಹೆಚ್.ಪ್ರಕಾಶ್ ಸೇರಿದಂತೆ ಸಂಸ್ಥೆಯ ಮುಖ್ಯೋಪಧ್ಯಾಯರು,
ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಸುದರ್ಶನ ವಿದ್ಯಾಸಂಸ್ಥೆಯಲ್ಲಿ ಸಂಭ್ರಮದ 76 ನೇ ಗಣರಾಜ್ಯೋತ್ಸವ ಆಚರಣೆ Read More