ಹೊನ್ನಿಕುಪ್ಪೆಯಲ್ಲಿ ಜಾನಪದ ಮೆರಗು16 ದಿನ ಪೂಜಿಸಿದ ಕೊಂತಿಗುಡಿ ವಿಸರ್ಜನೆ

ಹುಣಸೂರು: ಹುಣಸೂರು ತಾಲೂಕು ಹೊನ್ನಿ ಕುಪ್ಪೆ ಗ್ರಾಮದಲ್ಲಿ ಊರಿನ ಹಿರಿಯರು ಹಿಂದಿನಿಂದ ನಡೆಸಿಕೊಂಡು ಬಂದ ಪದ್ದತಿಯನ್ನು ಈಗಲೂ ಮುಂದುವರಿಸುತ್ತಾ ಜಾನಪದ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ.

ಹೊನ್ನಿಕುಪ್ಪೆ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಇಟ್ಟಿಗೆ ಮತ್ತು ಮಣ್ಣಿನಿಂದ ಕೊಂತಿಗುಡಿ ನಿರ್ಮಿಸಿ ಕಳಶ ಇಟ್ಟು ಪೂಜೆ ಮಾಡಲಾಯಿತು. ಇದಕ್ಕೆ ತಿಂಗಳ ಮಾಮನ ಪೂಜೆ ಎಂದು ಕರೆಯಲಾಗುತ್ತದೆ.

ದೀಪಾವಳಿ ಹಬ್ಬ ಮುಗಿದ ತಕ್ಷಣ ಕೊಂತಿಗುಡಿ ಅಂದರೆ ತಿಂಗಳ ಮಾಮನ ಪೂಜೆಯನ್ನು ನೆರವೇರಿಸ್ತಾ 16 ದಿನಗಳ ಕಾಲ ತಿಂಗಳ ಮಾಮನ ಪೂಜೆಯನ್ನು ಮಾಡಲಾಯಿತು.

ಊರಿನ ಮುಖಂಡರಲ್ಲಿ ಒಬ್ಬರು ಮತ್ತು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷರೂ ಆದ ಚೆಲುವರಾಜು ಮತ್ತಿತರ ನಾಯಕರ ಮುಂದಾಳತ್ವದಲ್ಲಿ 15 ದಿನ ಪೂಜೆ‌ ನೆರವೇರಿಸಿ 16ನೆ ದಿನ ಅಂದರೆ ಇಂದು ಮುಂಜಾನೆ ಕೊಂತಿಗುಡಿಯನ್ನು ಶಾಸ್ತ್ರೋಕ್ತವಾಗಿ ವಿಸರ್ಜಿಸಲಾಯಿತು.

ಕೊಂತಿ ಗುಡಿ ಪ್ರತಿಷ್ಠಾಪನೆ ಮಾಡಿ ಶಿವನನ್ನು ಆರಾಧನೆ ಮಾಡುವುದು ವಿಶೇಷ. ಇದನ್ನು ಕಳೆದ 70 ವರ್ಷಗಳಿಂದ ಊರಿನ ಹಿರಿಯರು ಮುಂದುವರಿಸಿಕೊಂಡು ಬಂದಿದ್ದು ಈ ಮೂಲಕ ಜಾನಪದ ಕಲೆಯನ್ನು ಬೆಳೆಸುವ ಕೆಲಸವನ್ನು ಮಾಡಲಾಗುತ್ತಿದೆ.

ತಿಂಗಳ ಮಾಮನ ಆರಾಧನೆ ಪ್ರಾರಂಭವಾದ ಮೇಲೆ ಪ್ರತಿದಿನ ಸಂಜೆ ಊರಿನ ಪ್ರತಿಯೊಂದು ಮನೆಯವರು ತಮ್ಮ ಮನೆಯಿಂದ ದೀಪವನ್ನು ತಂದು ಇಲ್ಲಿ ಇಟ್ಟು ಹಚ್ಚಿ ಪೂಜೆ ಮಾಡಿ ಮಧ್ಯರಾತ್ರಿ 12 ಗಂಟೆವರೆಗೂ ಜಾನಪದ ಗೀತೆಗಳನ್ನು ಹಾಡುವುದು, ಭಜನೆ ಮಾಡುವುದು ಕೋಲಾಟ ಆಡುವುದು ಹೀಗೆ ಒಂದೊಂದು ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಜತೆಗೆ ಕಟ್ಟುನಿಟ್ಟಾಗಿ ನಡೆದುಕೊಳ್ಳುವುದು,ಅಪಚಾರವಾಗದಂತೆ ಎಚ್ಚರಿಕೆಯಿಂದ ಇದ್ದು ಕೊಂತಿಗುಡಿಗೆ ನಿನ್ನೆವರೆಗೂ ಪೂಜೆ ನೆರವೇರಿಸಲಾಯಿತು.

ನಗರ ಪ್ರದೇಶದ ಜನರಿಗೆ ತಿಂಗಳ ಮಾಮನ ಪೂಜೆ ಕೊಂತಿಗುಡಿ ಇದು ಯಾವುದು ಗೊತ್ತಿಲ್ಲ. ಆದರೆ ಹೀಗೆ ಸಣ್ಣ ಪುಟ್ಟ ಗ್ರಾಮದವರು ಶಿವನ ಆರಾಧನೆಯನ್ನು ಈ ರೀತಿ ಆಚರಿಸುತ್ತಾ ಜಾನಪದ ಕಲೆಯನ್ನು ಬೆಳೆಸುತ್ತಾ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ಮತ್ತು ಇದು ಮುಂದಿನ ಪೀಳಿಗೆಗೂ ಮುಂದುವರಿಯುವ ಅಗತ್ಯವಿದೆ.

ನಿನ್ನೆ ಮಧ್ಯರಾತ್ರಿವರೆಗೂ ಇಡೀ ಹೊನ್ನಿಕುಪ್ಪೆ ಜನ ತಿಂಗಳ ಮಾಮನ ಪೂಜೆ,ಜನಪದಗೀತೆ,ಕೋಲಾಟದಲ್ಲಿ ತೊಡಗಿದರು.

ಊರಿನ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ತಯಾರಿಸಿದ್ದ ಒಬ್ಬಟ್ಟು, ಪಾಯಸ, ಚಿರೋಟಿ ವಡೆ, ರವೆ ಉಂಡೆ ಹೀಗೆ ಅನೇಕ ಭಕ್ಷ ಭೋಜಗಳನ್ನು ತಂದು ಕೊಂತಿ ಗುಡಿಗೆ ನೈವೇದ್ಯ ಮಾಡಲಾಯಿತು.

ನಂತರ ಎಲ್ಲರೂ ಸೇರಿ ಆಹಾರ ಸಿದ್ಧಪಡಿಸಿ ಅನ್ನದಾನ ಕೂಡ ಮಾಡಲಾಯಿತು. ಕೊನೆಯಲ್ಲಿ ಕೊಂತಿ ಗುಡಿಯನ್ನು ಹುರುಳಿ ಮತ್ತು ಹುಚ್ಚೆಳ್ಳು ಬೆಳೆ ಬೆಳೆದ ಹೊಲದಲ್ಲಿ ತೆಗೆದುಕೊಂಡು ಹೋಗಿ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡುವ ಮೂಲಕ ತಿಂಗಳ ಮಾಮನ ಪೂಜೆ ಮುಕ್ತಾಯ ಹಾಡಿದರು.

ಕುಂತಿ ಗುಡಿಯನ್ನು ಹುರುಳಿ ಮತ್ತು ಹುಚ್ಚೆಳ್ಳು ಹೊಲದಲ್ಲಿಯೇ ವಿಸರ್ಜನೆ ಮಾಡಬೇಕೆಂಬ ಪದ್ಧತಿಯು ಇದೆ.

ಹೊನ್ನಿಕುಪ್ಪೆಯಲ್ಲಿ ಜಾನಪದ ಮೆರಗು16 ದಿನ ಪೂಜಿಸಿದ ಕೊಂತಿಗುಡಿ ವಿಸರ್ಜನೆ Read More

ಶ್ರೀ ದೊಡ್ಡಮ್ಮ ತಾಯಿ ದೇವಾಲಯದಲ್ಲಿ ಕಾರ್ತೀಕ ಮಾಸದ ಪೂಜೆ

ಹುಣಸೂರು: ಹುಣಸೂರು ತಾಲೂಕು,ಹೊನ್ನಿಕುಪ್ಪೆ ಗ್ರಾಮದ ಶ್ರೀ ದೊಡ್ಡಮ್ಮ ತಾಯಿ ದೇವಾಲಯದಲ್ಲಿ ಕಾರ್ತೀಕ ಪೂಜೆಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.

ಶ್ರೀ ದೊಡ್ಡಮ್ಮ‌ತಾಯಿ ದೇವಾಲಯ ನಿರ್ಮಾಣಕ್ಕೆ ಅಂದಿನ ಮುಖ್ಯ ಮಂತ್ರಿಯಾಗಿದ್ದ ಡಿ.ದೇವರಾಜ ಅರಸರು ಕಾರಣಕರ್ತರು.

ಸುತ್ತಲಿನ ಹಳ್ಳಿಗಳ ಜನರು‌ ಮನವಿ ಮಾಡಿದ ಹಿನ್ನೆಲೆಯಲ್ಲಿ ದೇವರಾಜ ಅರಸು ಅವರು ಜಾಗ ಕೊಟ್ಟು, ದೊಡ್ಡದಾದ ಬೆಳ್ಳಿಯ ಮುಖವಾಡವನ್ನು ಕೊಡುಗೆಯಾಗಿ ನೀಡಿದ್ದರು.

ಮತ್ತು ಲೋಹದ ಕುದುರೆ ಹಾಗೂ ಕತ್ತಿಯನ್ನು ಕೊಟ್ಟಿದ್ದರು.ಅಂದಿನಿಂದ ಇದೇ ಜಾಗದಲ್ಲಿ ಗುಡಿ ಕಟ್ಟಿ ದೊಡ್ಡಮ್ಮ ತಾಯಿ ಮತ್ತು ಸಿದ್ದಪ್ಪಾಜಿ ದೇವರನ್ನು ನಾವೆಲ್ಲ ಹಳ್ಳಿವರು ಭಕ್ತಿಯಿಂದ ಪೂಜಿಸಿಕೊಂಡು ಬರುತ್ತಿದ್ದೇವೆ ಎಂದು ಕರ್ನಾಟಕ ಪ್ರಜಾಪಾರ್ಟಿ ರೈತಪರ್ವ‌ ಹುಣಸೂರು ತಾಲೂಕು ಅಧ್ಯಕ್ಷರೂ ಹೊನ್ನಿಕುಪ್ಪೆ ಗ್ರಾಮದವರೇ‌ ಆದ ಚೆಲುವರಾಜು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದರು

ನಿನ್ನೆ ರಾತ್ರಿ ದೊಡ್ಡಮ್ಮ ತಾಯಿ ಮತ್ತು ಸಿದ್ದಪ್ಪಾಜಿ‌ ದೇವರಿಗೆ ಕಾರ್ತೀಕ ಮಾಸದ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.

ಶ್ರೀ ದೊಡ್ಡಮ್ಮ ತಾಯಿ ದೇವಾಲಯದಲ್ಲಿ ಕಾರ್ತೀಕ ಮಾಸದ ಪೂಜೆ Read More

ಹೊನ್ನಿಕುಪ್ಪೆ ಗ್ರಾಮದಲ್ಲಿ ಗಬ್ಬೆದ್ದು ಹೋಗಿವೆ ಚರಂಡಿಗಳು:ರೋಗದ ಭೀತಿಯಲ್ಲಿ ಜನತೆ

ಹುಣಸೂರು: ಹುಣಸೂರು ತಾಲೂಕು ಉದ್ದೂರು ಕಾವಲ್ ಗ್ರಮ ಪಂಚಾಯತಿ ವ್ಯಾಪ್ತಿಯ ಹೊನ್ನಿಕುಪ್ಪೆ ಗ್ರಾಮದಲ್ಲಿ ‌ಚರಂಡಿಗಳು ತುಂಬಿ ಹುಳುಗಳು,ಸೊಳ್ಳೆಕಾಟ ಹೆಚ್ಚಾಗಿದ್ದು ರೋಗ ರುಜಿನಗಳ ತಾಣವಾಗಿದೆ,ಜನ ಆತಂಕಕ್ಕೆ ಒಳಗಾಗಿದ್ದಾರೆ.

ಈಗಾಗಲೇ ಹಲವಾರು ಮಂದಿ ರೋಗರುಜಿನಗಳಿಂದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊನ್ನಿಕುಪ್ಪೆ ಗ್ರಾಮದಲ್ಲಿ ಚರಂಡಿಗಳ ಹೂಳನ್ನು ತೆಗೆದದ್ದು ಇಲ್ಲವೇ ಇಲ್ಲ. ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ತುಂಬಿಕೊಂಡು ಮುಂದೆ ಹೋಗದೆ ಗಬ್ಬು‌ವಾಸನೆ ಬರುತ್ತಿದೆ‌ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆರೋ ಪಿಸಿದ್ದಾರೆ.

ಸಾಮಾನ್ಯವಾಗಿ ಆಶಾ ಕಾರ್ಯಕರ್ತೆಯರು ಗ್ರಾಮಗಳಲ್ಲಿ ಮಹಿಳೆಯರು, ಮಕ್ಕಳನ್ನು ಭೇಟಿಯಾಗಿ ರೋಗಗಳ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ತಿಳುವಳಿಕೆ ಮೂಡಿಸುತ್ತಾರೆ. ಆದರೆ ಹೊನ್ನಿಕುಪ್ಪೆ ಗ್ರಾಮದಲ್ಲಿ ಆಶಾ ಕಾರ್ಯಕರ್ತೆ ಮನೆ ಮುಂದೆಯೇ ಚರಂಡಿ ಕಟ್ಟಿಕೊಂಡು ಕೆಟ್ಟ ವಾಸನೆ ಬರುತ್ತಿದ್ದರೂ ಅವರು ಸಹ ಯಾರ ಗಮನಕ್ಕೂ ತಾರದೆ ಇರುವುದು ದುರ್ದೈವದ ಸಂಗತಿ ಎಂದು ಚೆಲುವರಾಜು ಬೇಸರ ವ್ಯಕ್ತಪಡಿಸಿದ್ದಾರೆ.

ಕೂಡಲೇ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲಿ, ಪಿಡಿಒ ಮತ್ತು ಇತರೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಹೊನ್ನಿ ಕುಪ್ಪೆ ಗ್ರಾಮದ ಚರಂಡಿಗಳನ್ನು ಸರಿಪಡಿಸಬೇಕೆಂದು ಚೆಲುವರಾಜು ಆಗ್ರಹಿಸಿದ್ದಾರೆ.

ಹೊನ್ನಿಕುಪ್ಪೆ ಗ್ರಾಮದಲ್ಲಿ ಗಬ್ಬೆದ್ದು ಹೋಗಿವೆ ಚರಂಡಿಗಳು:ರೋಗದ ಭೀತಿಯಲ್ಲಿ ಜನತೆ Read More

ಹೊನ್ನಿಕುಪ್ಪೆ ಗ್ರಾಮದಲ್ಲಿ ಯಶಸ್ವಿಯಾಗಿ ನೆರವೇರಿದ ಗಣಪತಿ ವಿಸರ್ಜನೆ

ಹುಣಸೂರು: ಹುಣಸೂರು ತಾಲೂಕಿನ ಹೊನ್ನಿಕುಪ್ಪೆ ಗ್ರಾಮದಲ್ಲಿ ಕಳೆದ 27ರಿಂದ ಗ್ರಾಮ ದೇವತೆ ದೊಡ್ಡಮ್ಮತಾಯಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಇಂದು ಅದ್ದೂರಿ ಮೆರವಣಿಗೆಯೊಂದಿಗೆ ಸಾಂಗವಾಗಿ ವಿಸರ್ಜನೆ ಮಾಡಲಾಯಿತು.

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ದೇವಾಲಯದ ಆವರದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ದೇವಾಲಯದ ಅರ್ಚಕರ ಮೂಲಕ ಇದುವರೆಗೂ ಸಂಪ್ರದಾಯಬದ್ಧವಾಗಿ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಂಡು ಬರಲಾಗಿತ್ತು.

ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ವತಿಯಿಂದ ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ಇಂದು ಗ್ರಾಮದಲ್ಲಿ ಗಣೇಶ‌ ವಿಸರ್ಜನೆ ಪ್ರಯುಕ್ತ ಅನ್ನದಾನ ಹಮ್ಮಿಕೊಳ್ಳಲಾಯಿತು.ಹೊನ್ನಿಕುಪ್ಪೆ ಗ್ರಾಮದವರಲ್ಲದೆ ಅಕ್ಕಪಕ್ಕದ ಗ್ರಾಮದವರು ಕೂಡ ಪಾಲ್ಗೊಂಡಿದ್ದರು

ನಂತರ ಅದ್ದೂರಿ ಬೃಹತ್ ಮೆರವಣಿಗೆಯಲ್ಲಿ ಗಣಪತಿಯನ್ನು ಸಮೀಪದ ಕೆಂಚನಕೆರೆಗೆ ಕೊಂಡೊಯ್ದು ಯಶಸ್ವಿಯಾಗಿ ವಿಸರ್ಜನೆ ಮಾಡಲಾಯಿತು.

ಗ್ರಾಮದಲ್ಲಿ ಯಾವುದೇ ಗಲಭೆ ಗದ್ದಲ ಗೌಜಲು ಉಂಟಾಗದಂತೆ ಪೊಲೀಸರು ಬಿಗಿ ಭದ್ರತೆ ವಹಿಸಿದ್ದರು.

ಹೊನ್ನಿಕುಪ್ಪೆ ಗ್ರಾಮದ ದೊಡ್ಡ ಯಜಮಾನರು ಚಿಕ್ಕ ಯಜಮಾನರು ಸೇರಿದಂತೆ ಅನೇಕ ಮುಖಂಡರು ಮತ್ತು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಎಲ್ಲರೂ ಹಾಜರಿದ್ದು ವಿಶೇಷ.

ಹೊನ್ನಿಕುಪ್ಪೆ ಗ್ರಾಮದಲ್ಲಿ ಯಶಸ್ವಿಯಾಗಿ ನೆರವೇರಿದ ಗಣಪತಿ ವಿಸರ್ಜನೆ Read More

ವರ್ಷಿಣಿ ನ್ಯೂಸ್ ಫಲಶೃತಿ:ಹೊನ್ನಿಕುಪ್ಪೆ ಗ್ರಾಮದ ಚರಂಡಿ ಸ್ವಚ್ಛ!

ಹುಣಸೂರು: ಹುಣಸೂರು ತಾಲೂಕು ಉದ್ದೂರು ಕಾವಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಿಕುಪ್ಪೆ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಹದಗೆಟ್ಟು ಹೋಗಿದ್ದುದನ್ನು ಸರಿಪಡಿಸಲಾಗಿದ್ದು, ಜನ ಸಂತಸ ವ್ಯಕ್ತಪಡಿಸಿದ್ದಾರೆ.

ಚರಂಡಿಯಲ್ಲಿ ಕಸ ತೆಗೆದು ಯಾವದೋ ಕಾಲವಾಗಿತ್ತು,ಈಗ ಸತತ ಮಳೆ ಬರುತ್ತಿದ್ದು,ನೀರು ಮುಂದೆ ಹೋಗದೆ ಅಲ್ಲೇ ನಿಂತು ಕೊಳೆತು ಗಬ್ಬು‌ ವಾಸನೆ ಬರುತ್ತಿತ್ತು.

ಚರಂಡಿಯಲ್ಲಿ ಹುಳು,ಹುಪ್ಪಟಿ ತುಂಬಿತ್ತಲ್ಕದೆ ಜೊತೆಗೆ ಸೊಳ್ಳೆಗಳ ಕಾಟ ವಿಪರೀತವಾಗಿತ್ತು.

ಇದರಿಂದಾಗಿ ಹೊನ್ನಿಕುಪ್ಪೆ ಗ್ರಾಮದ ಜನ ಜ್ವರದಿಂದ ಬಳಲುತ್ತಿದ್ದಾರೆ. ಕೆಲವರು ಆಸ್ಪತ್ರೆಗೂ ದಾಖಲಾಗಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆತಂಕ ವ್ಯಕ್ತಪಡಿಸಿ ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದ್ದರು.

ಜನರ ಆತಂಕ ಗಮನಿಸಿ ವರ್ಷಿಣಿ ನ್ಯೂಸ್ ನವರು ಸುದ್ದಿ ಪ್ರಕಟಿಸಿದ್ದರು.ಸುದ್ದಿ ಪ್ರಕಟವಾದ ಬೆನ್ನಲ್ಲೇ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ
ಚರಂಡಿ ಹೂಳು ತೆಗೆಸಿ ಸಾಧ್ಯವಾದಷ್ಟು ಸರಿಪಡಿಸಿದ್ದಾರೆ.

ಚರಂಡಿ ಸ್ವಚ್ಛತೆ ಬಗ್ಗೆ ಕ್ರಮ ಕೈಗೊಂಡ ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು,ಪಿಡಿಒ ಹಾಗೂ ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ನವರಿಗೆ ಸ್ಥಳೀಯ ಜನರು ಮತ್ತು ಚೆಲುವರಾಜು ಕೃತಜ್ಞತೆ ಸಲ್ಲಿಸಿದ್ದಾರೆ.

ವರ್ಷಿಣಿ ನ್ಯೂಸ್ ಫಲಶೃತಿ:ಹೊನ್ನಿಕುಪ್ಪೆ ಗ್ರಾಮದ ಚರಂಡಿ ಸ್ವಚ್ಛ! Read More

ಹೊನ್ನಿಕುಪ್ಪೆ ಗ್ರಾಮದಲ್ಲಿ ಚರಂಡಿಯಲ್ಲಿಕೊಳಕು ನೀರು! ಕೇಳುವವರೇ ಇಲ್ಲಾ

ಹುಣಸೂರು: ಹುಣಸೂರು ತಾಲೂಕು ಉದ್ದೂರು ಕಾವಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಿಕುಪ್ಪೆ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಹದಗೆಟ್ಟು ಹೋಗಿದ್ದು ಜನ ಬದುಕಲಾರದ ಸ್ಥಿತಿಯಲ್ಲಿದ್ದಾರೆ.

ಚರಂಡಿಯಲ್ಲಿ ಕಸ ತೆಗೆದು ಯಾವ ಕಾಲವಾಯಿತೊ ಗೊತ್ತಿಲ್ಲ.ಹೂಳು ತುಂಬಿದೆ,ಹಾಗಾಗಿ ಮಳೆ ನೀರು ಮುಂದೆ ಹೋಗದೆ ಅಲ್ಲೇ ನಿಂತು ಕೊಳೆತು ಗಬ್ಬು‌ ವಾಸನೆ ಬರುತ್ತಿದೆ.

ಚರಂಡಿಯಲ್ಲಿ ನೀರು ನಿಂತಿರುವುದರಿಂದ ಹುಳು,ಹುಪ್ಪಟಿ ತುಂಬಿವೆ, ಜೊತೆಗೆ ಸೊಳ್ಳೆಗಳ ಕಾಟ ವಿಪರೀತವಾಗಿದೆ, ಹಾಗಾಗಿ ಹೊನ್ನಿಕುಪ್ಪೆ ಗ್ರಾಮದ ಜನ ಜ್ವರದಿಂದ ಬಳಲುತ್ತಿದ್ದಾರೆ. ಕೆಲವರು ಆಸ್ಪತ್ರೆಗೂ ದಾಖಲಾಗಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಆತಂಕ ವ್ಯಕ್ತಪಡಿಸಿದ್ದಾರೆ.

ಎಷ್ಟು ದಿನಗಳಿಂದ ಚರಂಡಿಯಲ್ಲಿ ನೀರು ತುಂಬಿಕೊಂಡು ಕಬ್ಬು ವಾಸನೆ ಬಂದು ಗ್ರಾಮದ ವಾತಾವರಣ ಹಾಳಾಗಿದ್ದರೂ ಗ್ರಾಮ ಪಂಚಾಯಿತಿ ಸದಸ್ಯರಾಗಲಿ ಅಧ್ಯಕ್ಷರಾಗಲಿ,ಪಿಡಿಒ ಆಗಲಿ ಯಾರೂ ಇತ್ತ ಗಮನ ಹರಿಸಿಲ್ಲ ಬಹಳ ಸಾರಿ ದೂರು ನೀಡಿದ್ದರೂ ಏನು ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯ ಜನರು ಮತ್ತು ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚರಂಡಿಯ ಕೆಟ್ಟ‌‌ವಾಸನೆ ತಡೆಯಲಾಗದೆ‌ ಕೆಲವರಿಗೆ ಕಾಲರಾ ಕಾಡುತ್ತಿದೆ.ಜನ ಹೇಗೆ ಬದುಕಬೇಕು ಎಂದು ಪ್ರಶ್ನಿಸಿದ್ದಾರೆ.

ಉದ್ದೂರು ಕಾವಲ್ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು ತಕ್ಷಣ ಗ್ರಾಮಕ್ಕೆ ಆಗಮಿಸಿ ಇಲ್ಲಿನ ಚರಂಡಿಗಳನ್ನು ಸ್ವಚ್ಛಪಡಿಸಲು ಕ್ರಮ ಕೈಗೊಳ್ಳಬೇಕು, ಹೂಳು ತೆಗೆಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕೆಂದು ಗ್ರಾಮಸ್ಥರ ಪರವಾಗಿ ಚಲುವರಾಜು ಒತ್ತಾಯಿಸಿದ್ದಾರೆ.

ದೂರು ಕೊಟ್ಟರೂ ಏನು ಕ್ರಮ ತೆಗೆದುಕೊಳ್ಳದ ಪಿಡಿಒ ಮೇಲೆ ಇ ಒ ಅವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಹೊನ್ನಿಕುಪ್ಪೆ ಗ್ರಾಮದಲ್ಲಿ ಚರಂಡಿಯಲ್ಲಿಕೊಳಕು ನೀರು! ಕೇಳುವವರೇ ಇಲ್ಲಾ Read More

ಹುಣಸೂರಿನ ಹೊನ್ನಿಕುಪ್ಪೆ ಗ್ರಾಮಕ್ಕೆ ನೀರು ಕೊಡದೆ ಜನರ ಪರದಾಟ

ಹುಣಸೂರು: ಹುಣಸೂರು ತಾಲೂಕು,ಉದ್ದೂರು ಕಾವಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಿಕುಪ್ಪೆ ಗ್ರಾಮದಲ್ಲಿ ಸುಮಾರು 800 ಮಂದಿ ವಾಸಿಸುತ್ತಿದ್ದು ಸರಿಯಾಗಿ ಕುಡಿಯುವ ನೀರು ಬರದೆ ಬಹಳ ತೊಂದರೆ ಅನುಭವಿಸು ತ್ತಿದ್ದಾರೆ.

ಹೊನ್ನಿಕುಪ್ಪೆ ಗ್ರಾಮದಲ್ಲಿ ಪ್ರತಿ ಮನೆಗಳ ಮುಂದೆಯೂ ಕೊಳಾಯಿಗಳಿವೆ, ಆದರೆ ಹೆಸರಿಗೆ ಮಾತ್ರ ಈ ಕೊಳಾಯಿಗಳು ಇವೆ. ಇಲ್ಲಿ ನೀರು ಕೊಡುವ ನೀರು ಗಂಟಿ ತನಗೆ ಇಷ್ಟ ಬಂದಾಗ ನೀರು ಬಿಡುತ್ತಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಸ್ವತಃ ಹೊನ್ನಿಕುಪ್ಪೆ ಗ್ರಮಾದವರೇ‌ ಆದ ಚಲುವರಾಜು ಗಂಭೀರ ಆರೋಪ ಮಾಡಿದ್ದಾರೆ‌.

ನಾಲ್ಕು ದಿನಗಳಿಗೆ ಒಮ್ಮೆ ನೀರು ಬಿಡುತ್ತಾರೆ ಬಿಟ್ಟರೂ ಅರ್ಧ ಗಂಟೆ ಮಾತ್ರ ಬಿಡುತ್ತಾರೆ.ತಗ್ಗು ಪ್ರದೇಶದ ಮನೆಗಳಿಗೆ ನೀರು ಹರಿದು ಹೋಗುತ್ತದೆ, ಎತ್ತರದಲ್ಲಿರುವ ಪ್ರದೇಶದ ಮನೆಗಳಿಗೆ ನೀರು ಬರುವುದೇ ಇಲ್ಲ, ಇದರಿಂದ ಬಹಳಷ್ಟು ಮನೆಗಳವರು ಪ್ರತಿದಿನ ನೀರಿಗಾಗಿ ತೊಂದರೆ ಪಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಈಗ ಮಳೆಗಾಲ ಎಲ್ಲಾ ನದಿ ಕೆರೆ ಹಳ್ಳ ಕೊಳಗಳು ತುಂಬಿದೆ ಮೊದಲು ಬೋರ್ ವೆಲ್ ನಿಂದ ಗ್ರಾಮದಲ್ಲಿರುವ ಓವರ್ ಹೆಡ್ ಟ್ಯಾಂಕಿಗೆ ನೀರು ತುಂಬಿಸಬೇಕು ನಂತರ ನಲ್ಲಿಗಳ ಮೂಲಕ ನೀರು ಬಿಡಬೇಕು,ಆದರೆ ಡೈರೆಕ್ಟಾಗಿ ಬೋರ್ವೆಲ್ನಿಂದಲೇ ನೀರು ಬಿಡುತ್ತಾರೆ,ಓವರ್ ಹೆಡ್ ಟ್ಯಾಂಕ್ ಖಾಲಿ ಇರುತ್ತದೆ ಎಂದು ಚಲುವರಾಜು ಹೇಳಿದ್ದಾರೆ.

ಗ್ರಾಮದಲ್ಲಿ ಇರುವ ಓವರ್ ಹೆಡ್ ಟ್ಯಾಂಕನ್ನು ಸ್ವಚ್ಛಪಡಿಸಿ ಎಷ್ಟು ದಿನಗಳಾಯಿತೊ ತಿಳಿಯದು,ಕನಿಷ್ಟ ಮೂರು ತಿಂಗಳಿಗಾದರೂ ಸ್ವಚ್ಛಮಾಡಬೇಕು,ಅದಕ್ಕಾಗಿ ಹಣ ಕೂಡಾ ಕೊಡಲಾಗುತ್ತದೆ ಇದೆಲ್ಲಾ ನೀರಲ್ಲಿ ಹೋಮ ಆಗುತ್ತದೆ.

ನೀರು ಬಿಡುವವರು 300ರೂ‌ 500 ರೂ ಹಣ ಕೊಟ್ಟರೆ‌ ಮಧ್ಯರಾತ್ರಿಯಲ್ಲೂ ನೀರು ಬಿಡುತ್ತಾರೆ,ಆ ನೀರು ಮಧ್ಯರಾತ್ರಿಯಿಂದ ಬೆಳಗಿನವರೆಗೂ ನೀರು ಹರಿದು‌ ವೇಸ್ಟಾಗುತ್ತಿದೆ,ಅದನ್ನೆಲ್ಲ ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಚಲುವರಾಜು ಆರೋಪಿಸಿದ್ದಾರೆ.

ಒಂದು ಕಡೆ ಗ್ರಾಮದ ಜನರಿಗೆ ನೀರು ಬಿಡದೆ ಸತಾಯಿಸುತ್ತಾರೆ,ಇನ್ನೊಂದು ಕಡೆ ಹೀಗೆ ಸಮ್ಮನೆ ನೀರು ಪೋಲು ಮಾಡುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಹೊನ್ನಿಕುಪ್ಪೆ ಗ್ರಾಮದ ಜನರಿಗೆ ಆಗುತ್ತಿರುವ ಅನ್ಯಾಯ‌ ತಪ್ಪಿಸಬೇಕು,ಎಲ್ಲಾ ಮನೆಗಳಿಗೂ ಸರಿಯಾಗಿ ನೀರು ಕೊಡಬೇಕು ಎಂದು ಚಲುವರಾಜು ಆಗ್ರಹಿಸಿದ್ದಾರೆ.

ಹುಣಸೂರಿನ ಹೊನ್ನಿಕುಪ್ಪೆ ಗ್ರಾಮಕ್ಕೆ ನೀರು ಕೊಡದೆ ಜನರ ಪರದಾಟ Read More