ಒಡವೆಯ ಬ್ಯಾಗ್ ಹಿಂದಿರುಗಿಸಿಮಾದರಿಯಾದ ಆಟೋ ಚಾಲಕ!


(ವರದಿ:ರಾಮಸಮುದ್ರಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಪ್ರಯಾಣಿಕರೊಬ್ಬರು ತಾವು ಬಂದ ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ ಅತ್ಯಮೂಲ್ಯ ಚಿನ್ನದ ಒಡವೆಯ ಬ್ಯಾಗ್ ಅನ್ನು ಆಟೋ ಚಾಲಕ ಹಿಂತಿರುಗಿಸಿ ಮಾನವೀಯತೆ ಜತೆಗೆ ಮಾದರಿಯಾಗಿದ್ದಾರೆ.

ನಗರದ ಆಟೋ ಚಾಲಕ ಸಿದ್ದರಾಜು ಎಂಬ ಚಾಲಕ ಆಭರಣದ ಬ್ಯಾಗ್ ವಾಪಸು ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

ಹನುಮಪುರದ ರಶ್ಮಿ ಎಂಬುವರು ರಾಮಸಮುದ್ರ ಕಡೆಯಿಂದ ಪಟ್ಟಣಕ್ಕೆ ಬರುತ್ತಿದ್ದ ಆಟೊವನ್ನ ಏರಿ ಚಿನ್ನದ ಒಡವೆ ಇದ್ದ ಬ್ಯಾಗ್ ಅಲ್ಲೆ ಬಿಟ್ಟು ಪಯಣಿಸಿದ್ದರು.

ನಂತರ ಬ್ಯಾಗ್ ಹುಡುಕಿ ಎಲ್ಲೂ ಕಾಣದೆ ಕಂಗಾಲಾಗಿ ಪೊಲೀಸರ ಮೊರೆ ಹೋಗಿದ್ದರು.

ಸುಮಾರು ತಾಸು ತಪಾಸಣೆ ಮಾಡಿ ನಂತರ ಸಂಚಾರಿ ಪೊಲೀಸ್ ಸಿಬ್ಬಂದಿಯೊಬ್ವರು ಆಟೋ ಪತ್ತೆ ಹಚ್ಚಿದ್ದಾರೆ,ಬ್ಯಾಗ್ ಅನ್ನ ಆಟೊ ಚಾಲಕ ರಶ್ಮಿ ಅವರಿಗೆ ಹಿಂತಿರುಗಿಸಿದ್ದಾರೆ.ಆಕೆ ಸಿದ್ದರಾಜು ಅವರಿಗೆ ತುಂಬು ಹೃದಯದ ಧನ್ಯವಾದ ಸಲ್ಲಿಸಿದ್ದಾರೆ.

ಒಡವೆಯ ಬ್ಯಾಗ್ ಹಿಂದಿರುಗಿಸಿಮಾದರಿಯಾದ ಆಟೋ ಚಾಲಕ! Read More