ಶಂಕರಾಚಾರ್ಯ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಶ್ರೀಗಳ ವರ್ಧಂತಿ: ಹೋಮ

ಮೈಸೂರು: ಮೈಸೂರಿನಲ್ಲಿ ಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ವರ್ಧಂತಿ ಮಹೋತ್ಸವ ಅಂಗವಾಗಿ ಹೋಮ
ಮತ್ತಿತ್ತರ ಧಾರ್ಮಿಕ ಕಾರ್ಯ ನೆರವೇರಿಸಲಾಯಿತು.

ಹರಿಹರಪುರ ಮಠದ ಪೀಠಾಧೀಶರಾದ ಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ವರ್ದಂತಿ ಮಹೋತ್ಸವ ಅಂಗವಾಗಿ

ಶ್ರೀ ಮಹಾಜನ ಸಭಾ ಟ್ರಸ್ಟ್ ರಾಮ ಮಂದಿರ ಹಾಗೂ ಭಕ್ತ ವೃಂದದಿಂದ ಶ್ರೀ ಕೃಷ್ಣಮೂರ್ತಿಪುರಂ ರಾಮಮಂದಿರದಲ್ಲಿ
ಶ್ರೀಗಳ ಆಯುಷ್ ವೃದ್ದಿಗೆ ಹಾಗೂ ಲೋಕಕಲ್ಯಾಣಕ್ಕಾಗಿ ರುದ್ರಾಭಿಷೇಕ, ನವಗ್ರಹ ಹೋಮ,ಗಣಪತಿ ಹೋಮ, ಆಯುಷ್ ಹಾಗೂ ಧನ್ವಂತರಿ ಹೋಮ ಹಮ್ಮಿಕೊಳ್ಳಲಾಯಿತು.

ಇದೇ‌ ವೇಳೆ ಮಾತೆಯರಿಂದ ಲಕ್ಷ್ಮಿ ನರಸಿಂಹ ಪಾರಾಯಣ, ವೇದ ಬಳಗದ ವೇದ ಬ್ರಹ್ಮಶ್ರೀ ಅನಂತ ಜೋಶಿ ಹಾಗೂ ಕೃಷ್ಣಮೂರ್ತಿಪುರಂ ರಾಮಮಂದಿರದ ಪ್ರಧಾನ ಅರ್ಚಕರಾದ ಸಂತೋಷ್ ಕುಮಾರ್ ಅವರ ನೇತೃತ್ವದಲ್ಲಿ
ಹೋಮ ಹವನಗಳು ನಡೆಯಿತು.

ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಈ ಸಂದರ್ಭದಲ್ಲಿ ಮೇಲುಕೋಟೆ ವೆಂಗಿ ಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ,
ಮಾಧವ್ ರಾವ್, ಬಿ.ಎಸ್ ಶೇಷಾದ್ರಿ, ವಿ ಎನ್ ಕೃಷ್ಣ, ಕೆ ಎನ್ ಅರುಣ್, ಎಚ್ ಅಶ್ವಥ್ ನಾರಾಯಣ್, ರಾಮ್ ಪ್ರಸಾದ್, ಹರಿಹರಪುರ ಮಠದ ಆಡಳಿತಾಧಿಕಾರಿ ಚಂದ್ರನ್,ಶ್ರೀಮಠದ ಮೈಸೂರು ವ್ಯವಸ್ಥಾಪಕರಾದ ಶ್ರೀನಿವಾಸ್,
ಜಯಶ್ರೀ ಮೂರ್ತಿ, ವಿದುಷಿ ನಾಗಲಕ್ಷ್ಮಿ, ಪ್ರೇಮ ಚಂದ್ರಶೇಖರ್,ಉಮಾ ನಂಜುಂಡಯ್ಯ, ಸುಬ್ಬಲಕ್ಷ್ಮಿ, ಕಮಲ ಮತ್ತಿತರರು ಪಾಲ್ಗೊಂಡಿದ್ದರು.

ಶಂಕರಾಚಾರ್ಯ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಶ್ರೀಗಳ ವರ್ಧಂತಿ: ಹೋಮ Read More

ಆರ್ ಸಿ ಬಿ ಗೆಲುವಿಗೆ ಪ್ರಾರ್ಥಿಸಿ ವಿಶೇಷ ಹೋಮ :ಶಾಸಕ ಹರೀಶ್ ಗೌಡ ಭಾಗಿ

ಮೈಸೂರು,ಜೂ.2: ಆರ್ ಸಿ ಬಿ ಗೆಲುವಿಗೆ ಪ್ರಾರ್ಥಿಸಿ ಮೈಸೂರಿನಲ್ಲಿ ಕ್ರಿಕೆಟ್ ಪ್ರೇಮಿಗಳು
ನಗರದ ದಿವಾನ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನದಲ್ಲಿ ವಿಶೇಷ ಹೋಮ ಹಮ್ಮಿಕೊಂಡರು.

ಅಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್ ಸಿ ಬಿ
ವರ್ಸಸ್ ಪಂಜಾಬ್ ಫೈನಲ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜ್ ಬೆಂಗಳೂರು ಜಯಗಳಿಸಲಿ ಎಂದು ಅಭಿಮಾನಿಗಳು ಆರ್ ಸಿ ಬಿ ತಂಡದ ಆಟಗಾರರಿಗೆ ದೈವಬಲ ತುಂಬಲು
ದೇವಸ್ಥಾನದ ಪ್ರಧಾನ ಅರ್ಚಕರಾದ ಮೈ ಕುಮಾರ್ ಅವರ ನೇತೃತ್ವದಲ್ಲಿ ವಿಜಯ ದುರ್ಗಾ ಹೋಮ ನೆರವೇರಿಸಿದರು.

ಆರ್ ಸಿ ಬಿ ಜರ್ಸಿ ಧರಸಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಗೌಡ ಕೂಡಾ ಆರ್ ಸಿ ಬಿ ಜರ್ಸಿ ಧರಸಿ ಪೂಜೆಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಹರೀಶ್ ಗೌಡರು, ಈ ಬಾರಿ ಆರ್ ಸಿ ಬಿ ಗೆಲ್ಲುವ ನಿರೀಕ್ಷೆಯಲ್ಲಿದ್ದೇವೆ ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ ಪ್ರತಿಯೊಬ್ಬ ಆಟಗಾರರು ಅತ್ಯುತ್ತಮ ಪ್ರದರ್ಶನ ಮಾಡಿದ್ದಾರೆ,
ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಮೇಲೆ ಅತಿ ನಿರೀಕ್ಷೆಯಲ್ಲಿದ್ದೇವೆ, ಆರ್ ಸಿ ಬಿ ತಂಡ ಗೆಲುವು ಸಾಧಿಸಿ ಕಪ್ ತರಲಿ ಎಂದು ಶುಭ ಹಾರೈಸಿದರು.

ದೇವರಾಜ ಬ್ಲಾಕ್ ಅಧ್ಯಕ್ಷ ರಮೇಶ್ ರಾಮಪ್ಪ, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ , ಗುರುರಾಜ್ ಶೆಟ್ಟಿ, ನವೀನ, ರವಿಚಂದ್ರ, ಸಂದೀಪ್, ಎಸ್ ಎನ್ ರಾಜೇಶ್, ನಿತಿನ್, ಹರೀಶ್ ಗೌಡ, ರವಿಕುಮಾರ್, ಹೇಮಂತ,ಜಗದೀಶ್, ಹರ್ಷ, ಲೋಕೇಶ್, ಶ್ರೀನಿವಾಸ ಶೆಟ್ಟಿ ಮತ್ತಿತರರು ಪೂಜೆಯಲ್ಲಿ ಭಾಗವಹಿಸಿದ್ದರು.

ಆರ್ ಸಿ ಬಿ ಗೆಲುವಿಗೆ ಪ್ರಾರ್ಥಿಸಿ ವಿಶೇಷ ಹೋಮ :ಶಾಸಕ ಹರೀಶ್ ಗೌಡ ಭಾಗಿ Read More

ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ:ಜಿಲ್ಲಾಧಿಕಾರಿ ಕುಟುಂಬ ಭಾಗಿ

ಮೈಸೂರು: ಯುಗಾದಿ ಹಬ್ಬದ ಅಂಗವಾಗಿ ಇರ್ವಿನ್ ರಸ್ತೆಯಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಹೋಮ ಮತ್ತಿತರ ವಿಶೇಷ ಪೂಜಾ ಕಾರ್ಯ ನೆರವೇರಿಸಲಾಯಿತು.

ಶ್ರೀ ಸ್ವಾಮಿಗೆ ತೈಲಾಭಿಷೇಕ, ವಿಶೇಷ ಧ್ರವ್ಯಗಳು ಹಾಗೂ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಪಂಚಾಂಗ ಶ್ರಾವಣ ಪಠಿಸುವ ಮೂಲಕ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಿದವು.

ನಂತರ ಭಕ್ತಾದಿಗಳಿಗೆ ಬೇವು-ಬೆಲ್ಲ ಹಾಗೂ ಪ್ರಸಾದ ವಿತರಿಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಕುಟುಂಬ ಸಮೇತ ಪೂಜಾ ಕಾರ್ಯಗಳಲ್ಲಿ ಭಾಗಿಯಾಗಿದ್ದುದು ವಿಶೇಷ.

ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ:ಜಿಲ್ಲಾಧಿಕಾರಿ ಕುಟುಂಬ ಭಾಗಿ Read More