ಮೈಸೂರು: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ಕೃಷ್ಣರಾಜ ಯುವ ಬಳಗದ ವತಿಯಿಂದ ಗನ್ ಹೌಸ್ ವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಹೋಳಿಗೆ ಊಟ ನೀಡಲಾಯಿತು.
ಉಪಹಾರ ಸೇವಿಸಲು ಬಂದಂತಹ 70ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಹೋಳಿಗೆಯನ್ನು ನೀಡಿ ಉಪಹಾರದ ಹಣವನ್ನು ವಿತರಿಸಿ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪನವರು ವಿಶೇಷವಾಗಿ ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯ ನವರ ಹುಟ್ಟುಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಬಸವರಾಜ್ ಬಸಪ್ಪ ಅವರಿಗೆ ಜಿ ರಾಘವೇಂದ್ರ, ಎಸ್ ಎನ್ ರಾಜೇಶ್, ಕಂಸಾಳೆ ರವಿ,ಶ್ರೀಕಾಂತ್ ಯಾದವ್, ನವೀನ್ ಕೆಂಪಿ ಮತ್ತಿತರರು ಸಾಥ್ ನೀಡಿದರು.
ಮೈಸೂರು: ಬೆಂಗಳೂರು ರಾಯಲ್ ಚಾಲೆಂಜರ್ಸ್ ಈ ಬಾರಿ ಕಪ್ ಗೆದ್ದರೆ ಇಂದಿರಾ ಕ್ಯಾಂಟೀನ್ ಗಳಲ್ಲಿ ಹೋಳಿಗೆ ಊಟ ಹಾಕಿಸುವುದಾಗಿ ಹೇಳಿದ್ದ ಕೆ ಆರ್ ಬ್ಯಾಂಕ್ ಅಧ್ಯಕ್ಷ ನುಡಿದಂತೆ ನಡೆದುಕೊಂಡಿದ್ದಾರೆ.
ಐಪಿಎಲ್ ಫೈನಲ್ ನಲ್ಲಿ ಪಂಜಾಬ್ ತಂಡವನ್ನು ಸೋಲಿಸಿ ಕಪ್ಪು ಮೂಡುಗೇರಿಸಿಕೊಂಡ ಆರ್ ಸಿ ಬಿ 18 ವರ್ಷದ ಕೋಟ್ಯಾಂತರ ಕನ್ನಡಿಗರ ಕನಸನ್ನು ನನಸು ಮಾಡಿದೆ.
ಆರ್ ಸಿ ಬಿ ತಂಡದ ಈ ಮಹಾನ್ ಗೆಲುವಿನ ಹಿನ್ನೆಲೆಯಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ ಅವರ ನೇತೃತ್ವದಲ್ಲಿ ಮೈಸೂರು ನಗರದ 11 ಇಂದಿರಾ ಕ್ಯಾಂಟೀನ್ ಗಳಲ್ಲಿ ಸಾರ್ವಜನಿಕರಿಗೆ ಉಚಿತ ಹೋಳಿಗೆ ಊಟವನ್ನು ನೀಡುವ ಮೂಲಕ ಕ್ರಿಕೆಟ್ ಹಬ್ಬವನ್ನು ಸಡಗರದಿಂದ ಆಚರಿಸಿದರು.
ಕೆ ಆರ್ ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಸಾರ್ವಜನಿಕರಿಗೆ ಉಚಿತ ಹೋಳಿಗೆ ಊಟ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಬಸವರಾಜ ಬಸಪ್ಪ, ಕಳೆದ 18 ವರ್ಷಗಳಿಂದ ಆರ್‌ಸಿಬಿ ತಂಡ ಪ್ರಶಸ್ತಿ ಗೆದ್ದಿಲ್ಲ ಈ ವನವಾಸ ಈಗ ಮುಕ್ತಾಯವಾಗಿದೆ, ವಿರಾಟ್ ಕೊಹ್ಲಿ ಅವರು ಆರ್ ಸಿ ಬಿ ತಂಡವನ್ನು18 ವರ್ಷಗಳಿಂದ ಪ್ರತಿನಿಧಿಸಿದ್ದು ಈಬಾರಿ ಐಪಿಎಲ್ ಕಪ್ ತಂದು ಕೊಟ್ಟಿದ್ದಾರೆ ಎಂದು ನುಡಿದರು.
ಇಡೀ ವಿಶ್ವದಲ್ಲಿ ನಮ್ಮ ತಂಡಕ್ಕೆ ಇರುವ ಫ್ಯಾನ್ಸ್ ಯಾವ ತಂಡಕ್ಕೂ ಇಲ್ಲ ಎಂದು ಹೇಳಿದರು.
ಆರ್ ಸಿ ಬಿ ತಂಡವು ಇಡೀ ವಿಶ್ವವೇ ಮೆಚ್ಚುವಂತಹ ಗೆಲುವು ಸಾಧಿಸಿದೆ, ಇಂತಹ ಗೆಲುವು ಪಡೆಯಲು ನಾವು ಸೇರಿದಂತೆ ಕೋಟ್ಯಂತರ ಅಭಿಮಾನಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ನಮ್ಮ ತಂಡ ಗೆದ್ದಿರುವ ಕಾರಣ ಇಂದು ಮೈಸೂರು ನಗರದ ಎಲ್ಲಾ ಇಂದಿರಾ ಕ್ಯಾಂಟೀನ್ ನಲ್ಲಿ ಸಾರ್ವಜನಿಕರಿಗೆ ಉಚಿತ ಹೋಳಿಗೆ ಊಟ ನೀಡುವ ಮೂಲಕ ಹಬ್ಬದಂತೆ ಸಂಭ್ರಮಿಸಿದ್ದೇವೆ ಎಂದು ಬಸವರಾಜ್ ಬಸಪ್ಪ ಹೇಳಿದರು
ಕುರುಬರ ಸಂಘದ ಹಂಗಾಮಿ ರಾಜ್ಯ ಅಧ್ಯಕ್ಷ ಸುಬ್ರಹ್ಮಣ್ಯ (ಸುಬ್ಬಣ್ಣ), ಸಮಾಜ ಸೇವಕಿ ಖುಷಿ ವಿನು, ಗೌರಿಶಂಕರ್ ನಗರದ ಶಿವಕುಮಾರ್, ಎಸ್ ಎನ್ ರಾಜೇಶ್, ಮೈಸೂರು ಬಸವಣ್ಣ, ಸುನಿ, ಕನಕ ಮೂರ್ತಿ, ಮತ್ತಿತರರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಮೈಸೂರು: ಐಪಿಎಲ್ ನಲ್ಲಿ ಈ ಬಾರಿ ಆರ್ ಸಿ ಬಿ ಜಯಗಳಿಸಿದರೆ ಮೈಸೂರಿನ ಇಂದಿರಾ ಕ್ಯಾಂಟೀನ್ ಗಳಲ್ಲಿ ಹೋಳಿಗೆ ಊಟ ಹಾಕಿಸುವುದಾಗಿ ಕ್ರಿಕೆಟ್ ಅಭಿಮಾನಿ ಬಸವರಾಜ ಬಸಪ್ಪ ತಿಳಿಸಿದ್ದಾರೆ.
18 ವರ್ಷದಿಂದ ಐಪಿಎಲ್ ನಲ್ಲಿ ರಾಯಲ್ ಚಾಲೆಂಜ್ ಬೆಂಗಳೂರು ಕಪ್ ಗಾಗಿ ಪ್ರಯತ್ನಪಡುತ್ತಿದ್ದು,ಈ ಬಾರಿ ಗೆಲ್ಲುವ ವುಶ್ವಾಸವಿದೆ ಎಂದು ಕೆ ಆರ್ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಕ್ರಿಕೆಟ್ ಪ್ರೇಮಿ ಬಸವರಾಜ್ ಬಸಪ್ಪ ಹೇಳಿದ್ದಾರೆ.
ನಮ್ಮ ಆರ್‌ಸಿಬಿ ತಂಡ ಈ ಬಾರಿ ಕಪ್ ಗೆದ್ದರೆ ಮೈಸೂರು ನಗರದ ಇಂದಿರಾ ಕ್ಯಾಂಟೀನ್ ಗಳಲ್ಲಿ ಹೋಳಿಗೆ ಊಟ ಹಾಕಿಸುವ ಮೂಲಕ ಸಂಭ್ರಮಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಆರ್‌ಸಿಬಿ ಗೆದ್ದರೆ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಗಳಲ್ಲಿ ಜೂನ್ 4 ರಂದು ಮಧ್ಯಾನ ಒಂದು ಹೊತ್ತು ಸಾರ್ವಜನಿಕರಿಗೆ ಹೋಳಿಗೆ ಊಟವನ್ನು ಉಚಿತವಾಗಿ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಬಸವರಾಜ್ ಬಸಪ್ಪ ಮನವಿ ಮಾಡಿದ್ದಾರೆ.