ಶಂಕರ್ ನಾಗ್ ಎಂದೆಂದೂ ಅಮರ: ಬಸವರಾಜ್ ಬಸಪ್ಪ

ಮೈಸೂರು: ಕನ್ನಡ ಚಲನಚಿತ್ರ ರಂಗದ ನಿರ್ದೇಶಕ ,ನಟ, ನಿರ್ಮಾಪಕ, ಕಿರುತೆರೆ ಮೂಲಕ ಇಡೀ ಭಾರತದಲ್ಲಿ ಅಪಾರ ಕೀರ್ತಿಗಳಿಸಿದ ಶಂಕರ್ ನಾಗ್ ಎಂದೆಂದೂ ಅಮರ ಎಂದು ಕೆಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ ತಿಳಿಸಿದರು.

ಶಂಕರ್ ನಾಗ್ ಅವರ ಹುಟ್ಟು ಹಬ್ಬದ ಅಂಗವಾಗಿ ಸಂಸ್ಮರಣಾ ಕಾರ್ಯಕ್ರಮವನ್ನು ನಗರದ ಚಾಮರಾಜಪುರಂನಲ್ಲಿರುವ ಹೊಯ್ಸಳ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಈ‌ ವೇಳೆ ಶಂಕರ್ ನಾಗ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಿಸಿ ಕೆಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ ಮಾತನಾಡಿದರು.

ಶಂಕರ್ ನಾಗ್ ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭಾವಂತ ನಟ, ಅವರ ದೂರ ದೃಷ್ಟಿ , ತಂತ್ರಜ್ಞಾನ, ಕನ್ನಡ ಚಿತ್ರರಂಗ ಎಂದು ಮರೆಯಲಾಗದು ಎಂದು ತಿಳಿಸಿದರು.

ಅವರ ಅಭಿವೃದ್ಧಿ ದೃಷ್ಟಿಕೋನ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಅಪಾರ ಎಂದು ತಿಳಿಸಿದರು.

ಕನ್ನಡ ಚಿತ್ರರಂಗದ ಮಹಾನ್ ವ್ಯಕ್ತಿತ್ವ ಹೊಂದಿದ ಶಂಕರ್ ನಾಗ್ ಎಂದೆಂದೂ ಅಮರ. ಅವರ ಸಾಮಾಜಿಕ ಮೌಲ್ಯಗಳು ,ಚಿಂತನೆ ನಮ್ಮೆಲ್ಲರಿಗೂ ಸದಾ ಆದರ್ಶವಾಗಿದೆ ಎಂದು ತಿಳಿಸಿದರು.

ಹೊಯ್ಸಳ ಟ್ರಸ್ಟ್ ಅಧ್ಯಕ್ಷ ರಾಜೇಶ್ ಪಳನಿ ಮಾತನಾಡಿ,ಬೆಂಗಳೂರಿನ ಮೆಟ್ರೋ ಯೋಜನೆ, ಚಾಮುಂಡಿ ಬೆಟ್ಟಕ್ಕೆ ರೂಪ್ ವೆ ಕನಸು ಕಂಡಿದ್ದ ಶಂಕರ್ ನಾಗ್ ತಮ್ಮ ಚಲನಚಿತ್ರಗಳ ಮೂಲಕ ಸಮಾಜದ ಪರಿವರ್ತನೆಗೆ ವಿಶೇಷವಾಗಿ ಆಟೋ ಚಾಲಕರಿಗೆ ಮಹಾನ್ ಗೌರವವನ್ನು ತಂದು ಕೊಟ್ಟವರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿ ರಾಘವೇಂದ್ರ, ಎಸ್ ಎನ್ ರಾಜೇಶ್, ದೂರ ರಾಜಣ್ಣ, ವಿನಯ್ ಕಣಗಾಲ್,ಶ್ರೀಕಾಂತ್ ಕಶ್ಯಪ್, ಚಕ್ರಪಾಣಿ,ಸಚಿನ್ ನಾಯಕ್, ಸುಹಾಸ್, ಶಿವು, ಮಂಜುನಾಥ್, ಮಹಾನ್ ಶ್ರೇಯಸ್ ಮತ್ತಿತರರು ಪಾಲ್ಗೊಂಡಿದ್ದರು.

ಶಂಕರ್ ನಾಗ್ ಎಂದೆಂದೂ ಅಮರ: ಬಸವರಾಜ್ ಬಸಪ್ಪ Read More