ಚನ್ನೇನಳ್ಳಿ ಗ್ರಾಮದಲ್ಲಿ ನಡೆದ ಭವ್ಯ ಏಳು ಗಡಿದೇವರುಗಳ ಕರಗ ಉತ್ಸವ

ಚನ್ನರಾಯಪಟ್ಟಣ: ಅಲ್ಲಿ ದೇವಲೋಕವೇ ದರೆಗಿಳಿದಂತೆ ಭಾಸವಾಗುತ್ತಿತ್ತು,ಎಲ್ಲೆಲ್ಲೂ ಸಂಭ್ರಮ ಸಡಗರ ಮನೆ ಮಾಡಿತ್ತು.

ಇದೆಲ್ಲ ಎಲ್ಲಿ ಅಂತೀರಾ, ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಹೋಬಳಿಯ ಚನ್ನೇನಳ್ಳಿ ಗ್ರಾಮದಲ್ಲಿ.

ಊರಕೆರೆಯ ಮುಂಭಾಗ ಏಳು ಗಡಿಯ ದೇವರುಗಳ ಹೂ ಹೊಂಬಾಳೆ ಮಾಡಿ ನಂದಿ ಪೂಜೆ ಕಾಸೆ ಪೂಜೆ ಫಿರಂಗಿ ಅಳತೆ ಮಾಡಲಾಯಿತು.

ಮಂಡ್ಯ ಮತ್ತು ರಾಮನಗರ ಜಿಲ್ಲೆಯ ಏಳು ತಾಲೂಕುಗಳ ಏಳು ಗಡಿದೇವರುಗಳಾದ ಚನ್ನಪಟ್ಟಣ ತಾಲೂಕಿನ ದೊಡ್ಡ ಬೀರೇಶ್ವರ ಸ್ವಾಮಿ, ಮದ್ದೂರು ತಾಲೂಕಿನ ಆಲೂರು ಬೀರೇಶ್ವರ ಸ್ವಾಮಿ, ಚನ್ನಪಟ್ಟಣ ತಾಲೂಕಿನ ಅಬ್ಬೂರ್ ಬೀರೇಶ್ವರ ಸ್ವಾಮಿ, ಮಂಡ್ಯ ತಾಲೂಕಿನ ಸಾತನೂರು ಬೀರೇಶ್ವರ ಸ್ವಾಮಿ, ಕೆರಗೋಡು ಬೀರೇಶ್ವರ ಸ್ವಾಮಿ, ಮದ್ದೂರು ತಾಲೂಕಿನ ಹೊಸಕೆರೆ ಬೀರೇಶ್ವರ ಸ್ವಾಮಿ, ಮಂಡ್ಯ ತಾಲೂಕಿನ ಉಮರಳ್ಳಿ ಬೀರೇಶ್ವರ ಸ್ವಾಮಿ ಮತ್ತು ಮದ್ದೂರು ತಾಲೂಕಿನ ಯಡಹಳ್ಳಿ ಲಕ್ಕಮ್ಮ ಹಾಗೂ ಕಮಲಮ್ಮ ದೇವಿಯವರ ಕರಗ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಭಕ್ತಿ ಭಾವದಿಂದ ಸಂಭ್ರಮ ಸಡಗರದಿಂದ ನೆರವೇರಿತು.

ಚನ್ನೇನಹಳ್ಳಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರ ಸಮ್ಮುಖದಲ್ಲಿ ಭಕ್ತಿ ಭಾವದಿಂದ ಉತ್ಸಹ ನಡೆಯಿತು.

ನಂತರ ಏಳು ದೇವರಗಳ ವಾನ್ಯ ಉತ್ಸವ ಮೆರವಣಿಗೆ ತಳಿರು ತೋರಣಗಳಿಂದ ವಿದ್ಯುತ್ ದೀಪಗಳ ಅಲಂಕಾರದಿಂದ ವಿಜೃಂಭಣೆಯಿಂದ ಸಾಗಿತು.

ವಾಲಗ,ಕೊಂಬು,ಕಹಳೆ ಸದ್ದಿಗೆ ಹೆಜ್ಜೆ ಹಾಕುತ್ತಾ ಉತ್ಸವ ಹೋಗುತ್ತಿದ್ದರೆ ಎರಡು ಕಣ್ಣು ಸಾಲದಂತಿತ್ತು.

ಗ್ರಾಮದ ರಸ್ತೆಗಳ ಬೀದಿ ಬೀದಿಗಳಲ್ಲಿ ಗೃಹಿಣಿಯರು ಏಳು ದೇವರಿಗೆ ಆರತಿ ನೆರವೇರಿಸಿದರು.

ಚನ್ನೇನಳ್ಳಿ ಗ್ರಾಮದಲ್ಲಿ ನಡೆದ ಭವ್ಯ ಏಳು ಗಡಿದೇವರುಗಳ ಕರಗ ಉತ್ಸವ Read More