ವಕ್ಫ್‌ ಬೋರ್ಡ್‌ ವಜಾಗೊಳಿಸಲು ಹೇಮಾನಂದೀಶ್ ಆಗ್ರಹ

ಮೈಸೂರು: ಆಂಧ್ರ ಪ್ರದೇಶದಂತೆ ನಮ್ಮ ರಾಜ್ಯದಲ್ಲೂ ವಕ್ಫ್‌ ಬೋರ್ಡ್‌ ವಜಾಗೊಳಿಸಬೇಕು ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾನಂದೀಶ್ ಆಗ್ರಹಿಸಿದ್ದಾರೆ.

ವಕ್ಫ್‌ ಬೋರ್ಡ್‌ ಮಾಡಿರುವ ಭೂ ಕಬಳಿಕೆಯಿಂದ ರೈತರು, ಮಠ ಮಂದಿರಗಳು, ಶಿಕ್ಷಣ ಸಂಸ್ಥೆಯವರಿಗೆ ಅನ್ಯಾಯವಾಗಿದೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರ ರೈತರ ಪರ, ಜನರ ಪರ, ಸಂವಿಧಾನದ ಪರ ಎಂದು ಹೇಳುತ್ತದೆ. ಅದನ್ನು ಈಗ ಮಾಡಿ ತೋರಿಸಬೇಕು ಎಂದು ಪ್ರಕಟಣೆಯಲ್ಲಿ ಅವರಯ ಒತ್ತಾಯಿಸಿದ್ದಾರೆ.

ವಕ್ಫ್‌ ಬೋರ್ಡ್‌ ಸಂವಿಧಾನ ವಿರೋಧಿ ಮಂಡಳಿ. ಇದರಿಂದ ದೇಶದ ಸ್ವಾಸ್ಥ್ಯ ಹಾಳಾಗುತ್ತಿದೆ. ವಕ್ಫ್‌ ಬೋರ್ಡ್‌ ಮೂಲಕ ರೈತರಿಗೆ ಕೊಟ್ಟಿರುವ ನೋಟಿಸ್‌ ಹಿಂಪಡೆದಿರುವುದು ಶಾಶ್ವತ ಪರಿಹಾರವಲ್ಲ. ಸರ್ಕಾರಕ್ಕೆ ನಿಜವಾಗಲೂ ರೈತರ ಮೇಲೆ ಕಾಳಜಿ ಇದ್ದರೆ ಅವರ ಪಹಣಿಯಲ್ಲಿ ರೈತರ ಹೆಸರು ಬರುವಂತೆ ನೋಡಿಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.

ವಕ್ಫ್‌ ಬೋರ್ಡ್‌ ವಜಾಗೊಳಿಸಲು ಹೇಮಾನಂದೀಶ್ ಆಗ್ರಹ Read More

ಬಿಪಿಎಲ್ ಕಾರ್ಡ್ ರದ್ದು ಅವೈಜ್ಞಾನಿಕ: ಹೇಮಾ ನಂದೀಶ್

ಮೈಸೂರು: ಬಿಪಿಎಲ್ ಕಾರ್ಡ್ ರದ್ದು ವಿಚಾರದಲ್ಲಿ ರಾಜ್ಯ ಸರಕಾರ ಆವೈಜ್ಞಾನಿಕ ನೀತಿ ಅನುಸರಿಸುತ್ತಿದೆ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾನಂದೀಶ್ ಆರೋಪಿಸಿದ್ದಾರೆ.

ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೆ, ಭ್ರಷ್ಟಾಚಾರದಲ್ಲಿ ಮುಳುಗಿ ಬೊಕ್ಕಸ ಬರಿದಾಗಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು 11 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಿದ್ದಾರೆ ಎಂದು ದೂರಿದ್ದಾರೆ.

ಅನರ್ಹತೆ ಹೆಸರಿನಲ್ಲಿ ನಿಜವಾದ ಬಿಪಿಎಲ್ ಕಾರ್ಡ್ ದಾರರ ಹಕ್ಕು ಕಿತ್ತುಕೊಳ್ಳುವುದು ಖಂಡನೀಯ. ಬಿಪಿಎಲ್ ಕಾರ್ಡು ದಾರರನ್ನು ಇಳಿಮುಖಗೊಳಿಸಿ, ಭಾಗ್ಯ ಯೋಜನೆಗಳಿಗೆ ಹಣ ಹೊಂದಿಸುವ ದುರುದ್ದೇಶ ಬಿಪಿಎಲ್ ಕಾರ್ಡ್ ರದ್ದತಿ ಹಿಂದೆ ಆಡಗಿದೆ ಹೇಮಾ‌ ಟೀಕಿಸಿದ್ದಾರೆ.

ಬಿಪಿಎಲ್ ಕಾರ್ಡ್ ರದ್ದು ಮಾಡಲು ದಾರಿ ಹುಡುಕುತ್ತಿರುವ ರಾಜ್ಯ ಸರಕಾರ, ಸಣ್ಣ ರೈತರು, ಮನೆ ನಿರ್ಮಾಣ ಅಥವಾ ಹೈನುಗಾರಿಕೆಗೆ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆಯಲು ತೆರಳಿದಾಗ ಬ್ಯಾಂಕ್ ಅಧಿಕಾರಿಗಳು ನೀವು ಅಂದಾಜು ಮೂರು ವರ್ಷ ತೆರಿಗೆ ಪಾವತಿಸಿರಬೇಕು ಎಂದು ಹೇಳಿರುತ್ತಾರೆ. ಅದರಂತೆ ಮುಗ್ಧ ಜನರು ಸಾಲ ಪಡೆಯುವ ಉದ್ದೇಶದಿಂದ ತೆರಿಗೆ ಕಟ್ಟಿರುತ್ತಾರೆ. ಆದರೆ, ಅದನ್ನೇ ನೆಪ ಮಾಡಿಕೊಂಡು ಇಂತವರ ಬಿಪಿಎಲ್‌ ಕಾರ್ಡ್ ರದ್ದು ಮಾಡಲಾಗುತ್ತಿದೆ.

ಇಂತಹ ಕುಂಟು ನೆಪ ಹೇಳಿ ಬಡ ವರ್ಗದ ಜನತೆಗೆ ಸಿಕ್ಕ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿರುವುದು ಖಂಡ ನೀಯ ಎಂದು ಹೇಮಾ ನಂದೀಶ್ ತಿಳಿಸಿದ್ದಾರೆ.

ಬಿಪಿಎಲ್ ಕಾರ್ಡ್ ರದ್ದು ಅವೈಜ್ಞಾನಿಕ: ಹೇಮಾ ನಂದೀಶ್ Read More

ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು: ಹೇಮಾ ನಂದೀಶ್

ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್‌ ದುರಾಡಳಿತ ಕೊನೆಗಾಣಿಸಲು ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕೈ ಪಕ್ಷದ ಅಭ್ಯರ್ಥಿಗಳನ್ನು ಜನ ಸೋಲಿಸಲಿದ್ದಾರೆ ಎಂದು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾ ನಂದೀಶ್ ಭವಿಷ್ಯ ನುಡಿದಿದ್ದಾರೆ.

ಎರಡು ಕಡೆ ಬಿಜೆಪಿ, ಒಂದು ಕಡೆ ಎನ್‌ ಡಿಎ ಅಭ್ಯರ್ಥಿ ನಿಖಲ್ ಕುಮಾರಸ್ವಾಮಿ ಸರ್ಧೆ ಮಾಡಿದ್ದಾರೆ. ಮೂರು ಕ್ಷೇತ್ರದ ಮತದದಾರು ಪ್ರಜ್ಞಾವಂತಿಕೆಯಿಂದ ಮತ ಹಾಕುವ ವಿಶ್ವಾಸ ಇದೆ. ಒಂದೂವರೆ ವರ್ಷ ಕಾಂಗ್ರೆಸ್ ದುರಾಡಳಿತ ನೋಡಿರುವ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಹಿಂದೆ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಹಾಕಿದ್ದರು. ಇಂದು ಅದೇ ಲೋಕಾಯುಕ್ತ ಮುಂದೆ ತನಿಖೆ ಎದುರಿಸಬೇಕಾಯಿತು.

ಅವರ ಭ್ರಷ್ಟಾಚಾರ ಸಾಬೀತಾಗಿಬಿಡುತ್ತದೆ ಎಂದು ಸಿಬಿಐ ರಾಜ್ಯಕ್ಕೆ ಆಗಮಿಸಬಾರದು ಎಂದು ನಿರ್ಬಂಧ ಹೇರಿದ್ದಾರೆ. ಇದನ್ನು ಗಮನಿಸಿದರೆ ಹಗರಣದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗುತ್ತಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎಂದು ಹೇಮಾ ಅವರು ಪ್ರಶ್ನಿಸಿದ್ದಾರೆ.

ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು: ಹೇಮಾ ನಂದೀಶ್ Read More