ಸಂಘ ನಿರ್ಬಂಧಕ್ಕೆ ಸಚಿವ ಖರ್ಗೆ ಪತ್ರ:ಹೇಮಾ ನಂದೀಶ್ ಖಂಡನೆ

ಮೈಸೂರು: ಸರಕಾರಿ ಸಂಸ್ಥೆಗಳ ಜಾಗ,
ಮೈದಾನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳನ್ನು ನಿಷೇಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದನ್ನು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷರಾದ ಹೇಮಾನಂದೀಶ್ ತೀವ್ರವಾಗಿ ಖಂಡಿಸಿದರೆ.

ಆರ್‌ಎಸ್‌ಎಸ್ ಪ್ರಕೃತಿ ವಿಕೋಪ ಮತ್ತು ದುರಂತಗಳ ಸಂದರ್ಭದಲ್ಲಿ ಮೊದಲು ಸಹಾಯಕ್ಕೆ ನಿಲ್ಲುತ್ತದೆ. ಇದನ್ನು ಪರಿಗಣಿಸಿ, 1963ರಲ್ಲಿ ದಿಲ್ಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಆಗಿನ ಪ್ರಧಾನಿ ಜವಾಹರಲಾಲ್‌ ನೆಹರು ಅವರು
ಆರ್‌ಎಸ್‌ಎಸ್‌ನವರಿಗೆ
ಗಣವೇಷಧಾರಿಗಳಾಗಿ ಭಾಗವಹಿಸುವಂತೆ ಆಹ್ವಾನ ನೀಡಿದ್ದರು ಎಂಬುದನ್ನು‌ ಮೊದಲು ಮನಗಾಣಿ ಎಂದು ಸಲಹೆ ನೀಡಿದ್ದಾರೆ.

2024ರಲ್ಲಿ ಕೇಂದ್ರ ಸರಕಾರವು ಸಂಘವನ್ನು ಸಾಮಾಜಿಕ ಸಂಘಟನೆ ಎಂದು ಪರಿಗಣಿಸಿ, ಕಾಂಗ್ರೆಸ್ ಪಕ್ಷದ ಆಡಳಿತವು ಹಿಂದೆ ಹಾಕಿದ್ದ ನಿಷೇಧವನ್ನು ತೆಗೆದು ಹಾಕಿದೆ. ಸಂಘದ ಚಟುವಟಿಕೆಗಳಲ್ಲಿ ಸರಕಾರಿ ಅಧಿಕಾರಿಗಳು ಹಾಗೂ ನೌಕರರು ಭಾಗವಹಿಸಬಹುದೆಂದು ಆದೇಶ ಹೊರಡಿಸಿದೆ. ಇಂತಹ ರಾಷ್ಟ್ರ ಪ್ರೇಮ ಬೆಳೆಸುವ ಸಂಘಟನೆಯ ಚಟುವಟಿಕೆಗಳಿಗೆ ನಿಷೇಧ ಹೇರಲು ಮುಂದಾಗಿರುವುದು ಖಂಡನೀಯ ಎಂದು ಹೇಮಾ ನಂದೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಘ ನಿರ್ಬಂಧಕ್ಕೆ ಸಚಿವ ಖರ್ಗೆ ಪತ್ರ:ಹೇಮಾ ನಂದೀಶ್ ಖಂಡನೆ Read More

ಬಾಲಕಿ ಅತ್ಯಾಚಾರ ಕೊಲೆ: ಹೇಮಾ ನಂದೀಶ್ ಖಂಡನೆ

ಮೈಸೂರು: ಕಲಬುರಗಿ ಮೂಲದ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣವನ್ನು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾನಂದೀಶ್ ತೀವ್ರವಾಗಿ ಖಂಡಿಸಿದ್ದಾರೆ.

ಹೊಟ್ಟೆ ಪಾಡಿಗಾಗಿ ಮೈಸೂರು ದಸರಾ ಹಬ್ಬದ ವೇಳೆ ಬಲೂನು ಮಾರಲು ಬಾಲಕಿ ತಂದೆ,ತಾಯಿಯೊಂದಿಗೆ ಬಂದಿದ್ದಾಗ ವ್ಯಕ್ತಿಯೊಬ್ಬ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ, ಕೊಲೆಗೈದು ಚರಂಡಿಯಲ್ಲಿ ಎಸೆದಿರುವುದು ಅಕ್ಷಮ್ಯ.

ರಾಜ್ಯದಲ್ಲಿ ನಿತ್ಯ ಒಂದಿಲ್ಲೊಂದು ಅತ್ಯಾಚಾರ, ಕೊಲೆ ಪ್ರಕರಣಗಳು ವರದಿಯಾಗುತ್ತಲೇ ಇವೆ.ಕಾಮುಕರ, ಕ್ರೌರ್ಯಕ್ಕೆ ಕಡಿವಾಣವಿಲ್ಲ, ಅತ್ಯಾಚಾರಿ, ಕೊಲೆಗಡುಕರಿಗೆ ಯಾವುದೇ ಕಾನೂನಿನ ಭಯ ಇಲ್ಲದಂತಾಗಿದೆ. ಆ ಕಾಮುಕನಿಗೆ ಬಂಧಿಸಿದರೆ ಸಾಲದು. ಪೋಕ್ಸೊ ಕಾಯ್ದೆ ಅಡಿ ಕಠಿಣ ಶಿಕ್ಷೆ ಕೊಟ್ಟು ಆ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ.

ದೇಶದ ಬಾಲಕಿಯರಿಗೆ, ಮಹಿಳೆಯರಿಗೆ ಎಲ್ಲಿಯೂ ಸಹ ರಕ್ಷಣೆ ಇಲ್ಲದಂತಾಗಿದೆ. ಇದನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಮಹಿಳಾ ಕುಲಕ್ಕೆ ರಕ್ಷಕವಚ ಸಿಗುವದಾದರೂ ಯಾವಾಗ ಎಂದು ರೇಖಾ ಶ್ರೀನಿವಾಸ್ ಪ್ರಶ್ನಿಸಿದ್ದಾರೆ.

ಬಾಲಕಿ ಅತ್ಯಾಚಾರ ಕೊಲೆ: ಹೇಮಾ ನಂದೀಶ್ ಖಂಡನೆ Read More

ಆರ್.ವಿ.ದೇಶಪಾಂಡೆ ಹೇಳಿಕೆ ಖಂಡನೀಯ:ಹೇಮಾ ನಂದೀಶ್

ಮೈಸೂರು: ಹಿರಿಯ ರಾಜಕಾರಣಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು, ಆರ್.ವಿ.ದೇಶಪಾಂಡೆ ಅವರು ಮಹಿಳೆಯರಿಗೆ ಅವ ಹೇಳನಕಾರಿಯಾಗಿ ಮಾತ ನಾಡಿರುವುದು ಸರಿಯಲ್ಲ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷರಾದ ಹೇಮಾನಂದೀಶ್ ತಿಳಿಸಿದ್ದಾರೆ.

ಆ‌ರ್.ವಿ.ದೇಶಪಾಂಡೆ ರಾಜಕೀಯ, ಸಾಮಾಜಿಕ ಜೀವನದಲ್ಲಿ ಅಪಾರ ಅನುಭವ ಇರುವವರು. ಜಿಲ್ಲೆಯ ಜ್ವಲಂತ ಸಮಸ್ಯೆ ಬಗ್ಗೆ ಹಿರಿಯ ಪತ್ರಕರ್ತೆಯೊಬ್ಬರು
ಪ್ರಶ್ನಿಸಿದಾಗ ಅದಕ್ಕೆ ಸಮಂಜಸವಾದ ಉತ್ತರ ನೀಡಬೇಕಿತ್ತು. ನಾನೂ ಒಬ್ಬ ಮಹಿಳೆಯಾಗಿ ದೇಶಪಾಂಡೆ ಅವರು ನೀಡಿರುವ ಉತ್ತರವನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

ತಮ್ಮದೇ ಪಕ್ಷದ ವೇದಿಕೆಯಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆ ಕೊಟ್ಟಿದ್ದೇವೆ ಎಂದು ಅನೇಕ ಸಲ ಹೇಳುತ್ತಾರೆ. ಮತ್ತೊಂದೆಡೆ ಈ ರೀತಿ ಅಪ್ರಬುದ್ಧ ಹೇಳಿಕೆಗಳನ್ನು ಕೊಟ್ಟು ಮಹಿಳೆಯರನ್ನು ಮತ್ತು ಪತ್ರಕರ್ತರನ್ನು ಅವಮಾನಿಸುತ್ತಾರೆ.

ಇದರಿಂದ ಮಹಿಳೆಯರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಇರುವ ಗೌರವ ಏನೆಂದು ಗೊತ್ತಾಗುತ್ತದೆ. ಶಾಸಕರು ಇಂತಹ ಮನಸ್ಥಿತಿಯಿಂದ ಹೊರಬರದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಹೇಮಾ ನಂದೀಶ್‌ ಎಚ್ಚರಿಸಿದ್ದಾರೆ.

ಅಷ್ಟಕ್ಕೂ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಬೇಡಿಕೆ ಬಹು ಹಿಂದಿನದ್ದು, ಜಿಲ್ಲೆಯ ಜನತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೆ ಬೇರೆ ಬೇರೆ ಜಿಲ್ಲೆಯನ್ನು ಅವಲಂಬಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಪ್ರಭಾವಿ ನಾಯಕರಾದ ಆರ್.ವಿ.ದೇಶಪಾಂಡೆ ಈ ರೀತಿ ಹೇಳಿರುವುದು ಶೋಭೆ ತರದು ಎಂದು ಹೇಮಾನಂದೀಶ್ ತಿಳಿಸಿದ್ದಾರೆ.

ಆರ್.ವಿ.ದೇಶಪಾಂಡೆ ಹೇಳಿಕೆ ಖಂಡನೀಯ:ಹೇಮಾ ನಂದೀಶ್ Read More

ರಾಹುಲ್ ಗಾಂಧಿ ಆರೋಪ ಹಾಸ್ಯಾಸ್ಪದ: ಹೇಮಾ ನಂದೀಶ್

ಮೈಸೂರು: ಮತಕಳ್ಳತನದ ಆರೋಪ ಮಾಡಿ ಚುನಾವಣಾ ಆಯೋಗಕ್ಕೆ ಮಸಿ ಬಳಿಯಲು ಯತ್ನಿಸುತ್ತಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನಿಲುವು ಹಾಸ್ಯಾಸ್ಪದ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾನಂದೀಶ್ ಟೀಕಿಸಿದ್ದಾರೆ.

ದೇಶದ ಜನರ ವಿಶ್ವಾಸ ವನ್ನು ಗಳಿಸುವಲ್ಲಿ ರಾಹುಲ್‌ ಗಾಂಧಿ ವಿಫಲರಾಗಿದ್ದಾರೆ.
ಸೋಲಿನ ಅವಮಾನದಿಂದ ಬಳಲಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆಧಾರರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಅವರು ದೂರಿದ್ದಾರೆ.

ಇಂಅದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಸಂವಿಧಾನದ ಕಗ್ಗೊಲೆ ಮಾಡಿದ್ದರು. ಈಗ ರಾಹುಲ್ ಗಾಂಧಿ ಚುನಾವಣಾ ಆಯೋಗದ ಮೇಲೆ ಸುಳ್ಳು ಅಪವಾದ ಹೊರಿಸುವ ಮೂಲಕ ದೇಶದ ಜನತೆ ಹಾಗೂ ಚುನಾವಣಾ ಆಯೋಗಕ್ಕೆ ಅವಮಾನ ಮಾಡುತ್ತಿದ್ದಾರೆ,ಈ ಸುಳ್ಳು ಆರೋಪದ ಹಿಂದೆ ಕಾಂಗ್ರೆಸ್ ಸಂಚು ರೂಪಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಮತ ಕಳ್ಳತನ ಆಗಿದೆ ಎಂದು ತಮ್ಮ ಬಳಿ ಪುರಾವೆ ಇದೆ ಎಂದು ರಾಹುಲ್ ಗಾಂಧಿ ಆದಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳುತ್ತಿದ್ದಾರೆ. ಅವರ ಬಳಿ ಪುರಾವೆ ಇದ್ದಿದ್ದರೆ ಅವರು ನ್ಯಾಯಾಲಕ್ಕೆ ಹೋಗಲಿ, ಅದನ್ನ ಬಿಟ್ಟು ಜನರಲ್ಲಿ ಗೊಂದಲ ಉಂಟು ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಮೂರನೇ ಬಾರಿ ನರೇಂದ್ರ ಮೋದಿಯವರು ದೇಶದ ಪ್ರಧಾನಿ ಆಗಿರುವುದನ್ನು ಸಹಿಸಿಕೊಳ್ಳದ ಕಾಂಗ್ರೆಸ್ ನಾಯಕರು ಈ ರೀತಿ ಅಪಪ್ರಚಾರ ಮಾಡುವ ಮೂಲಕ ದೇಶದ ಮತದಾರರ ಮುಂದೆ ನಗೆಪಾಟಲಿಗೆ ಈಡಾಗುತ್ತಿದ್ದಾರೆ’ ಎಂದು ಹೇಮಾ ನಂದೀಶ್ ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿ ಆರೋಪ ಹಾಸ್ಯಾಸ್ಪದ: ಹೇಮಾ ನಂದೀಶ್ Read More

ಪಿ ಎಚ್ ಡಿ ಪದವಿ ಪಡೆದ ಹೇಮನಂದೀಶ್: ಬಿಜೆಪಿಯಿಂದ ಅಭಿನಂದನೆ

ಮೈಸೂರು: ಬಿಜೆಪಿ ನಗರ ಉಪಾಧ್ಯಕ್ಷರಾದ ಹೇಮಾ ನಂದೀಶ್ ಅವರು ಮೈಸೂರು ವಿಶ್ವವಿದ್ಯಾಲಯದ ಪಿ ಎಚ್ ಡಿ ಪದವಿ ಪಡೆದಿದ್ದು, ಬಿಜೆಪಿ ಮುಖಂಡರು ಅಭಿನಂದಿಸಿದರು.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಮೈಸೂರು ನಗರ ಬಿಜೆಪಿ ವತಿಯಿಂದ ಹೇಮಾ ನಂದೀಶ್‌ ಅವರಿಗೆ ಮೈಸೂರು ಪೇಟ ತೊಡಿಸಿ,ಶಾಲು ಹೊದಿಸಿ ಹಾರ ಹಾಕಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಕೊಡಗು ಸಂಸದರಾದ ಯದುವೀರ್ ಒಡೆಯರ್,
ಬಿಜೆಪಿ ನಗರ ಅಧ್ಯಕ್ಷ ನಾಗೇಂದ್ರ,ಜಿಲ್ಲಾಧ್ಯಕ್ಷ ಎಲ್ ಆರ್ ಮಹದೇವಸ್ವಾಮಿ,ಮಾಜಿ ಮಹಾಪೌರರಾದ ಸಂದೇಶ ಸ್ವಾಮಿ,ಬಿಜೆಪಿ ಮುಖಂಡರಾದ ಎನ್. ವಿ.ಪಣೀಶ್, ಎಸ್ ಸಿ ಮೋರ್ಚಾ ಅಧ್ಯಕ್ಷ ಶೈಲೇಂದ್ರ, ನಗರ ಪ್ರಧಾನ ಕಾರ್ಯದರ್ಶಿ ಬಿ ಎಂ ರಘು, ಕೇಬಲ್ ಮಹೇಶ್, ಎಚ್ ಜಿ ಗಿರಿಧರ್ ಮತ್ತಿತರರು ಶುಭ ಕೋರಿದರು.

ಪಿ ಎಚ್ ಡಿ ಪದವಿ ಪಡೆದ ಹೇಮನಂದೀಶ್: ಬಿಜೆಪಿಯಿಂದ ಅಭಿನಂದನೆ Read More

ವಕ್ಸ್‌ ಕಾಯ್ದೆ ತಿದ್ದುಪಡಿ ದೇಶದ ಭದ್ರತೆ: ಹೇಮಾ ನಂದೀಶ್

ಮೈಸೂರು,ಏ.5: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂದು ದೇಶ ಒಂದೇ ಕಾನೂನು ಎಂಬ ಸಂದೇಶ ನೀಡುತ್ತಿರುವುದು ಐತಿಹಾಸಿಕ ನಿರ್ಧಾರ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾನಂದೀಶ್ ತಿಳಿಸಿದ್ದಾರೆ.

ವಕ್ಸ್‌ ಕಾಯ್ದೆ ತಿದ್ದುಪಡಿ ದೇಶದ ಭದ್ರತೆಗೆ ಅನುಕೂಲವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತ ದೇಶದಲ್ಲಿ ಜೈನರು, ಬೌದ್ಧರು, ಕ್ರಿಶ್ಚಿಯನ್ನರು ಸೇರಿದಂತೆ ಹಲವು ಅಲ್ಪಸಂಖ್ಯಾತರಿಗಿಲ್ಲದ ವಕ್ಸ್ ಬೋರ್ಡ್ ಮುಸ್ಲಿಂರಿಗ್ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

ವಕ್ಸ್ ಬೋರ್ಡ್ ಕಾನೂನು ನೆರವಿನಿಂದ ಹಲವು ಮಠಮಾನ್ಯಗಳು, ಶಾಲಾ ಕಾಲೇಜುಗಳು, ಮತ್ತು ಸಾರ್ವಜನಿಕರ ಆಸ್ತಿ ಸೇರಿದಂತೆ 1.2 ಲಕ್ಷ ಕೋಟಿ ರೂ. ಆಸ್ತಿ ಕಬಳಿಸಿದ್ದು, ದೇಶದ ಸರಕಾರೇತರ ಅತೀ ಹೆಚ್ಚು ಆಸ್ತಿ ಹೊಂದಿದೆ ಎಂದು ಜೆಪಿಸಿ (ಜಂಟಿ ಸಂಸತ್ ಸಮಿತಿ) ವರದಿ ನೀಡಿದೆ.

ಅತೀ ಹೆಚ್ಚು ರೈತರ ಆಸ್ತಿಯೊಂದಿಗೆ ಮುಸ್ಲಿಂ ಸಮುದಾಯದ ಆಸ್ತಿ ಕೂಡ ಕಬಳಿಸಿದ್ದು ಬಹಿರಂಗವಾಗಿದೆ. ಹೊಸ ವಕ್ಸ್ ಕಾಯ್ದೆ ತಿದ್ದುಪಡಿಯಿಂದ ಯಾರಿಗಾದರೂ ಅನ್ಯಾಯವಾದರೆ ಜಿಲ್ಲಾಧಿಕಾರಿಗಳೊಂದಿಗೆ ಕೋರ್ಟ್ ಮೂಲಕ ನ್ಯಾಯ ಪಡೆಯಬಹುದು.

ವಕ್ಸ್ ಸಮಿತಿಯಲ್ಲಿ ಮಹಿಳೆಯರೂ, ಮುಸ್ಲಿಮೇತರರಿಗೂ ಅವಕಾಶ ನೀಡಿ ಪಾರದರ್ಶಕವಾಗಿ ನ್ಯಾಯ ಕೊಡಿಸಲು ವಕ್ಸ್‌ ಕಾಯ್ದೆ ತಿದ್ದುಪಡಿ ಅನುಕೂಲವಾಗಲಿದೆ ಎಂದು ಹೇಮಾ ನಂದೀಶ್ ತಿಳಿಸಿದ್ದಾರೆ.

ವಕ್ಸ್‌ ಕಾಯ್ದೆ ತಿದ್ದುಪಡಿ ದೇಶದ ಭದ್ರತೆ: ಹೇಮಾ ನಂದೀಶ್ Read More

ತಕ್ಷಣ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆಗೆ ಹೇಮಾ ನಂದೀಶ್ ಆಗ್ರಹ

ಮೈಸೂರು: ರಾಜ್ಯ ಸರಕಾರದ ಗೃಹಲಕ್ಷ್ಮೀ ಯೋಜನೆಯ ಹಣ ಕೂಡಲೇ ಬಿಡುಗಡೆಗೊಳಿಸುವಂತೆ ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾ ನಂದೀಶ್ ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಆಮಿಷ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಇದೀಗ ಯೂ ಟರ್ನ್ ಹೊಡೆಯುವ ಲಕ್ಷಣ ತೋರಿಸುತ್ತಿದೆ ಎಂದು ಟೀಕಿಸಿದ್ದಾರೆ.

ನನಗೂ ಫ್ರೀ, ನಿನಗೂ ಫ್ರೀ, ಹೆಣ್ಣು ಮಕ್ಕಳ ಖಾತೆಗೆ ಪ್ರತಿ ತಿಂಗಳು 2000 ರೂ. ಹಣ ಜಮಾವಣೆ, ಅನ್ನಭಾಗ್ಯ, ಯುವನಿಧಿ ಎಂದು ಚುನಾವಣಾ ಪ್ರಚಾರದಲ್ಲಿ ಘಂಟಾಘೋಷವಾಗಿ ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಈಗ ಯೋಜನೆ ಜಾರಿಗೆ ಹಣದ ಕೊರತೆ ಇದೆ ಎಂದು ಜಾರಿಗೊಳ್ಳುತ್ತಿದ್ದಾರೆ ಎಂಬುದಾಗಿ ಹೇಮಾ ನಂದೀಶ್ ದೂರಿದ್ದಾರೆ.

ಅನ್ನಭಾಗ್ಯದ ನಗದು ಫಲಾನುಭವಿಗಳಿಗೆ ನೀಡದೆ ಐದು ತಿಂಗಳಾಗಿದೆ. ಗೃಹಲಕ್ಷ್ಮೀ ಯೋಜನೆಯ ಮಾಸಿಕ ಹಣ ಫಲಾನುಭವಿಗಳ ಖಾತೆಗೆ ಪಾವತಿಸದೆ ಮೂರು ತಿಂಗಳಾಗಿದೆ. ಸರ್ಕಾರ ಕೂಡಲೇ ಗ್ಯಾರಂಟಿ ಯೋಜನೆಯ ಫಲಾನುಭವಿ ಗಳಿಗೆ ಹಣವನ್ನು ಪಾವತಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಬಸ್ ಪ್ರಯಾಣ ದರ, ಮೆಟ್ರೊ ರೈಲು ದರ, ವಿದ್ಯುತ್ ದರ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಬರೆ ಎಳೆ ಯುತ್ತಿರುವ ಸರ್ಕಾರ, 5 ರೂಪಾಯಿ ಇದ್ದ ಜನನ, ಮರಣ ದೃಢೀಕರಣ ಪತ್ರದ ದರವನ್ನು ಏಕಾಏಕಿ 50 ರೂಪಾಯಿಗೆ ಏರಿಸುವುದರ ಮೂಲಕ ಜನವಿರೋಧಿ, ಜನರ ಜೇಬು ಲೂಟಿ ಮಾಡಲು ಹೊರಟಿರುವ ಸರ್ಕಾರ ಎಂಬುದು ಸಾಬೀತು ಪಡಿಸಿದೆ ಎಂದು ಪ್ರಕಟಣೆಯಲ್ಲಿ ಹೇಮಾ ನಂದೀಶ್ ವ್ಯಂಗ್ಯ ವಾಡಿದ್ದಾರೆ.

ತಕ್ಷಣ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆಗೆ ಹೇಮಾ ನಂದೀಶ್ ಆಗ್ರಹ Read More

ಶಿಕ್ಷಣದ ಹಕ್ಕು ಕಸಿಯುವ ರಾಜ್ಯ ಸರ್ಕಾರ: ಹೇಮಾ ನಂದೀಶ್

ಮೈಸೂರು: ಶಿಕ್ಷಣ ಮೂಲಭೂತ ಹಕ್ಕು. ಆದರೆ, ರಾಜ್ಯ ಸರ್ಕಾರ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವ ಮೂಲಕ ಈ ಹಕ್ಕನ್ನು ಕಸಿಯುತ್ತಿದೆ ಎಂದು ಬಿಜೆಪಿ ಮೈಸೂರು ನಗರ ಉಪಾಧ್ಯಕ್ಷೆ ಹೇಮಾ ನಂದೀಶ್ ಟೀಕಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು,ರಾಜ್ಯದ ಕಾಂಗ್ರೆಸ್ ಸರ್ಕಾರ ವಿಶ್ವವಿದ್ಯಾಲಯಗಳನ್ನೂ ಆದಾಯದ ಮೂಲ ಮತ್ತು ಒಂದು ಸರಕನ್ನಾಗಿ ನೋಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯ ಸರ್ಕಾರವೇ ಆರ್ಥಿಕ ಸಂಕಷ್ಟದಲ್ಲಿದೆ. ಹಾಗಾಗಿ ಇಂಥ ಕ್ರಮಕ್ಕೆ ಮುಂದಾಗುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಪದವೀಧರರಿಗೆ ಯುವ ನಿಧಿ ಘೋಷಿಸಿದ ಸರ್ಕಾರ ಈಗ ಅಂತಹ ಪದವೀಧರರನ್ನು ರೂಪಿಸುವ ವಿಶ್ವವಿದ್ಯಾಲಯಗಳನ್ನೇ ಮುಚ್ಚಲು ಹೊರಟಿದೆ. ರಾಜ್ಯವನ್ನು ಆರ್ಥಿವಾಗಿ ಮಾತ್ರವಲ್ಲದೆ, ಬೌದ್ಧಿಕವಾಗಿ ದಿವಾಳಿಯತ್ತ ಕೊಂಡೊಯ್ಯುತ್ತಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಎಲ್ಲ ಭಾಗದವರಿಗೂ ಉನ್ನತ ಶಿಕ್ಷಣ ಕೈಗೆಟುಕುವಂತೆ ಬಿಜೆಪಿ ಸರ್ಕಾರ ಹತ್ತು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅವುಗಳನ್ನು ಮುಚ್ಚುವ ಮೂಲಕ ಆ ಭಾಗದ ವಿದ್ಯಾರ್ಥಿಗಳಿಗೆ ಶೋಷಣೆ ಮಾಡುತ್ತಿದೆ ಎಂದು ಹೇಮಾನಂದೀಶ್ ಆರೋಪಿಸಿದ್ದಾರೆ.

ರಾಜ್ಯದ ಕರಾವಳಿ ಭದ್ರತೆಗೆ ಬೇಕಿರುವ ಇಂಧನವನ್ನು ಕಡಿತಗೊಳಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಇದು ಆಡಳಿತ ವೈಫಲ್ಯದ ನಿದರ್ಶನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಣದ ಹಕ್ಕು ಕಸಿಯುವ ರಾಜ್ಯ ಸರ್ಕಾರ: ಹೇಮಾ ನಂದೀಶ್ Read More

ಮೈಕ್ರೋ ಫೈನಾನ್ಸ್ ಹಾವಳಿ, ಕ್ರಮಕ್ಕೆ ಹೇಮಾ ನಂದೀಶ್ ಆಗ್ರಹ

ಮೈಸೂರು: ಗ್ರಾಮೀಣ ಪ್ರದೇಶಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ಮಿತಿಮೀರಿದ್ದು,ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷ ಹೇಮಾನಂದೀಶ್ ಒತ್ತಾಯಿಸಿದ್ದಾರೆ.

ಮೈಕ್ರೋ ಫೈನಾನ್ಸ್ ಹಾವಳಿ ಹಾಗೂ ವಸೂಲಾತಿ ದೌರ್ಜನ್ಯದಿಂದ ಸಾಲಗಾರ ಬಡವರು ತತ್ತರಿಸಿದ್ದಾರೆ. ಆ‌ರ್ ಬಿಐ ನಿಯಮಗಳನ್ನು ಗಾಳಿಗೆ ತೂರಿ ಮೀಟರ್ ಬಡ್ಡಿ ದಂಧೆಕೋರರಂತೆ ಮೈಕ್ರೋ ಫೈನಾನ್ಸ್‌ ಜಾಲ ಸಾಲಗಾರರ ಪ್ರಾಣ ಹಿಂಡಿ ವಸೂಲಾತಿಗೆ ನಿಂತಿರುವುದು ಸರಿಯಲ್ಲ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ಮರ್ಯಾದೆಗೆ ಅಂಜಿ ಗ್ರಾಮೀಣ ಪ್ರದೇಶದ ಬಡವರು ಮನೆ ತೊರೆದು ಹೋಗುತ್ತಿದ್ದಾರೆ. ಇವರ ರಕ್ಷಣೆಗೆ ಸರಕಾರ ಜರೂರು ಕ್ರಮ ಕೈಗೊಳ್ಳಬೇಕಿದೆ. ನಿಯಮ ಉಲ್ಲಂಘಿಸುವ ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ ಎಂದು ಹೇಮಾ ನಂದೀಶ್ ಆಗ್ರಹಿಸಿದ್ದಾರೆ.

ಮೈಕ್ರೋ ಫೈನಾನ್ಸ್ ಹಾವಳಿ, ಕ್ರಮಕ್ಕೆ ಹೇಮಾ ನಂದೀಶ್ ಆಗ್ರಹ Read More

ಬಸ್ ದರ ಏರಿಕೆಗೆ ಹೇಮಾ ನಂದೀಶ್ ಕಿಡಿ

ಮೈಸೂರು: ಉಚಿತಗಳ ಆಮಿಷ ಒಡ್ಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರಕಾರ ಏಕಾಏಕಿ ಬಸ್ ಪ್ರಯಾಣ ದರ ಏರಿಸಿ ಜನಸಾಮಾನ್ಯರ ಬದುಕಿಗೆ ಶಾಕ್ ನೀಡಿದೆ ಎಂದು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾ ನಂದೀಶ್ ಕಿಡಿಕಾರಿದ್ದಾರೆ.

ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಆಸೆ ತೋರಿಸಿ ಈಗ ಶೇ.15ರಷ್ಟು ದರ ಏರಿಸಿರುವುದು ದ್ವಂದ್ವ ನೀತಿ. ಗ್ರಾಮೀಣ ಸಾರಿಗೆ ಬಸ್‌ಗಳು ದಾರಿ ಮಧ್ಯೆಯೇ ಕೆಟ್ಟು ನಿಂತು ಪ್ರಯಾಣಿಕರು ಪರದಾಡುತ್ತಿರುವ ಈ ಸಂದರ್ಭದಲ್ಲಿ ನಿಗಮಗಳಿಗೆ ಸರಕಾರ ಹೊಸ ಬಸ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡಬೇಕಿತ್ತು,ಅದು ಬಿಟ್ಟು ಬಸ್ ದರ ಏರಿಸಿ ಬಡವರನ್ನು ಮತ್ತಷ್ಟು ಕಷ್ಟಕ್ಕೆ ನೂಕಿದೆ ಎಂದು ಟೀಕಿಸಿದ್ದಾರೆ.

ಬಸ್ ದರ ಏರಿಸುವ ನಿರ್ಧಾರವನ್ನು ರಾಜ್ಯ ಸರಕಾರ ತಕ್ಷಣ ವಾಪಸ್ ಪಡೆದು ನಿಗಮಗಳಿಗೆ ಹೊಸ ಬಸ್ ನೀಡುವ ಮೂಲಕ ಸಾರಿಗೆ ವ್ಯವಸ್ಥೆ ಸರಿಪಡಿಸಬೇಕು ಎಂದು ಹೇಮಾ ನಂದೀಶ್ ಆಗ್ರಹಿಸಿದ್ದಾರೆ.

ಬಸ್ ದರ ಏರಿಕೆಗೆ ಹೇಮಾ ನಂದೀಶ್ ಕಿಡಿ Read More