ಶ್ರವಣದೋಷ ಮಕ್ಕಳು ಶಾಲೆಯಿಂದ ದೂರ ಉಳಿವುದು ದುರದೃಷ್ಟಕರ-ನಾಗೇಂದ್ರ

ಮೈಸೂರು: ಮಕ್ಕಳ ದಿನಾಚರಣೆಯನ್ನು ಜೀವಧಾರ ರಕ್ತನಿಧಿ ಕೇಂದ್ರದಿಂದ ಶ್ರವಣದೋಷವುಳ್ಳ ಮಕ್ಕಳಿಗೆ
ಉಚಿತ ಶೂ ವಿತರಿಸಿ ಉಚಿತ ರಕ್ತದ ಗುಂಪು ಪರೀಕ್ಷೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮೈಸೂರಿನ ತಿಲಕ್ ನಗರದಲ್ಲಿರುವ ಶ್ರವಣ ದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಿ, ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ 60ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಶೂ ವಿತರಿಸಲಾಯಿತು.

ನಂತರ ಉಚಿತ ರಕ್ತದ ಗುಂಪು ಪರೀಕ್ಷೆ ಮಾಡಿಸಲಾಯಿತು.

ಈ ವೇಳೆ ಮಾತನಾಡಿದ
ಬಿಜೆಪಿ ನಗರ ಅಧ್ಯಕ್ಷ ಎಲ್ ನಾಗೇಂದ್ರ ಅವರು,ಪೋಷಕರ ಅತಿಯಾದ ಆರೈಕೆ ಹಾಗೂ ಭಯದಿಂದಾಗಿ ಅನೇಕ ಶ್ರವಣದೋಷ ಮಕ್ಕಳು ಶಾಲೆಯಿಂದ ದೂರ ಉಳಿಯುತ್ತಿರುವುದು ದುರದೃಷ್ಟಕರ ಎಂದು ವಿಷಾದಿಸಿದರು.

ಪೋಷಕರು ಯಾವುದೇ ಆತಂಕ ಇಟ್ಟುಕೊಳ್ಳದೆ ಶ್ರವಣದೋಷ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು ಆಗ ಮಾತ್ರ ಅವರು ಎಲ್ಲರಂತೆ ಕಲಿತು ವಿದ್ಯಾವಂತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಹೇಳಿದರು.

ಶ್ರವಣ ದೋಷವುಳ್ಳ ಮಕ್ಕಳಿಗೆ ಅಗತ್ಯ ಪ್ರೋತ್ಸಾಹ ಮಾರ್ಗದರ್ಶನ ಹಾಗೂ ಶಿಕ್ಷಣ ಕೊಡಿಸಿದಲ್ಲಿ ಸಾಮಾನ್ಯ ಮಕ್ಕಳಂತೆ ಜ್ಞಾನಾರ್ಜನೆ ಸಾಧ್ಯ ಎಂದು ನಾಗೇಂದ್ರ ತಿಳಿಸಿದರು ‌

ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ರವೀಂದ್ರ, ರಂಗಸ್ವಾಮಿ, ಜೀವದಾರ ರಕ್ತ ನಿಧಿ ಕೇಂದ್ರ ನಿರ್ದೇಶಕ ಗಿರೀಶ್, ಶಾಲೆಯ ನಿರ್ವಾಹಕರಾದ ಮೀರಜ್ ಅಹಮದ್, ಕೇಬಲ್ ವಿಜಿ, ಕೆಂಪಣ್ಣ, ಸೂರಜ್, ಸದಾಶಿವ್ ಹಾಗೂ ಶಾಲೆಯ ಶಿಕ್ಷಕ ವೃಂದ ಹಾಜರಿದ್ದರು.

ಶ್ರವಣದೋಷ ಮಕ್ಕಳು ಶಾಲೆಯಿಂದ ದೂರ ಉಳಿವುದು ದುರದೃಷ್ಟಕರ-ನಾಗೇಂದ್ರ Read More