ಜನಕಲ್ಯಾಣ ಸಮಾವೇಶ ಬೆಂಬಲಿಸಿ ಮೈಸೂರಿನಿಂದ ಹಾಸನಕ್ಕೆ 150 ನಾಗರೀಕರು

ಮೈಸೂರು: ಮೈಸೂರಿನ ಕೈಲಾಸಪುರಂ ಬಡಾವಣೆಯಿಂದ 150ಕ್ಕೂ ಹೆಚ್ಚು ನಾಗರೀಕರು ಹಾಸನ ಕಾಂಗ್ರೆಸ್ ಸಮಾವೇಶಕ್ಕೆ ತೆರಳಿದರು.

ಸ್ವಾಭಿಮಾನಿಗಳ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಹಾಸನದಲ್ಲಿ ನಡೆಯುತ್ತಿರುವ ಜನಕಲ್ಯಾಣ ಸಮಾವೇಶಕ್ಕೆ ನಮ್ಮ ನಡೆ ಜನಕಲ್ಯಾಣ ಕಡೆ ಘೋಷಣೆಯೊಂದಿಗೆ ಕೈಲಾಸಪುರಂ ನಾಗರೀಕರು ಬಸ್ ನಲ್ಲಿ
ತೆರಳಿದರು

ನಗರ ಪಾಲಿಕೆ ಮಾಜಿ ಸದಸ್ಯ ಸುನಂದ ಕುಮಾರ್, ಮುಖಂಡರಾದ ರಾಜರಾಜೇಂದ್ರ ಮಲ್ಲಿಕಾರ್ಜುನ, ಸುರೇಶ, ದುರ್ಗೇಶ, ವಾಟರ್ ಕೃಷ್ಣ, ಪಾಪಚ್ಚಿ, ಕಾಳಸೂರಿ ಗೋಲ್ಡ್, ರಾಜಶೇಖರ್, ಶಂಕರ್, ಕುಮಾರಸ್ವಾಮಿ, ಜಗದೀಶ್ ಸೇರಿಂದಂತೆ ಅನೇಕರು ಹಾಸನಕ್ಕೆ ಹೊರಟರು.

ಜನಕಲ್ಯಾಣ ಸಮಾವೇಶ ಬೆಂಬಲಿಸಿ ಮೈಸೂರಿನಿಂದ ಹಾಸನಕ್ಕೆ 150 ನಾಗರೀಕರು Read More

ರಾಜ್ಯದ ನೀರಾವರಿ ವಿಚಾರ ಕುರಿತು ಚರ್ಚಿಸಲು ಪ್ರಧಾನಿ ಭೇಟಿ:ಡಿಕೆಶಿ

ನವದೆಹಲಿ: ರಾಜ್ಯದ ನೀರಾವರಿ ವಿಚಾರ ಸೇರಿದಂತೆ ಕೆಲವು ವಿಷಯಗಳ ಕುರಿತು ಚರ್ಚಿಸಲು ಪ್ರಧಾನ ಮಂತ್ರಿ ಮೋದಿಯವರನ್ನು ಭೇಟಿ ಮಾಡಲಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ,ವನ್ಯಜೀವಿ ಇಲಾಖೆ ಸಚಿವರು ಮತ್ತು ಮಂಡಳಿಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಈಗಾಗಲೇ ಭೇಟಿ ಮಾಡಿದ್ದೇವೆ. ವನ್ಯಜೀವಿ ಮಂಡಳಿಗೆ ಪ್ರಧಾನಿಯವರೇ ಅಧ್ಯಕ್ಷರಾಗಿದ್ದಾರೆ. ಸ್ಥಾಯಿ ಸಮಿತಿಗೆ ಸಚಿವರು ಅಧ್ಯಕ್ಷರಾಗಿದ್ದಾರೆ ಎಂದು ಹೇಳಿದರು.

ಕಳಸಾ ಬಂಡೂರಿ ನಾಲಾ ಯೋಜನೆ ವಿಚಾರದಲ್ಲಿ ಮಧ್ಯಪ್ರವೇಶಿಸಿ ಅಗತ್ಯವಿರುವ ಅರಣ್ಯ ಮತ್ತು ವನ್ಯಜೀವಿ ಮಂಡಳಿ ಅನುಮತಿ ಕೊಡಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದು ಡಿಕೆಶಿ ತಿಳಿಸಿದರು.

ಹಾಸನ ಸಮಾವೇಶ ವಿರುದ್ಧ ಎಐಸಿಸಿ ನಾಯಕರಿಗೆ ಪತ್ರ ಹೋಗಿದೆಯಂತಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ,
ಪತ್ರ ಬಂದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ಆದರೆ ಮುಖ್ಯಮಂತ್ರಿಗಳು ನನಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಅದಕ್ಕಿಂತ ಹೆಚ್ಚು ನನಗೆ ಗೊತ್ತಿಲ್ಲ, ಪಕ್ಷದ ಉಪಸ್ಥಿತಿ ಇದ್ದೇ ಇರುತ್ತದೆ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ರಾಜ್ಯದ ನೀರಾವರಿ ವಿಚಾರ ಕುರಿತು ಚರ್ಚಿಸಲು ಪ್ರಧಾನಿ ಭೇಟಿ:ಡಿಕೆಶಿ Read More