ಜ.9ರಂದು ಬೂಕನಬೆಟ್ಟ ಜಾತ್ರಾ ಮಹೋತ್ಸವ: ನಾಟಕ ಪ್ರದರ್ಶನ

ಹಾಸನ: ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು, ಹಿರೀಸಾವೆ ಹೋಬಳಿಯ ಬೂಕನ ಬೆಟ್ಟ ಜಾತ್ರಾ ಮಹೋತ್ಸವದ ಪ್ರಯುಕ್ತ ಜನವರಿ 9ರಂದು ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಶ್ರೀರಂಗನಾಥ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಬೂಕನ ಬೆಟ್ಟ ಜಾತ್ರಾ ಮಹೋತ್ಸವದ ಪ್ರಯುಕ್ತ ಜಾತ್ರಾ ಮೈದಾನದಲ್ಲಿ ಜನವರಿ 9ರಂದು ರಾತ್ರಿ 8 ಗಂಟೆಗೆ ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ ನಾಟಕ ಏರ್ಪಡಿಸಲಾಗಿದೆ.

ಕಾರ್ಯಕ್ರಮವನ್ನು ಹಾಸನ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್ ಉದ್ಘಾಟನೆ ಮಾಡಲಿದ್ದಾರೆ, ಅಧ್ಯಕ್ಷತೆಯನ್ನು ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಡಾ. ಸಿ ಎನ್ ಬಾಲಕೃಷ್ಣ ಅವರು ವಹಿಸಲಿದ್ದಾರೆ.

ಈ ಸುಂದರ ಪೌರಾಣಿಕ ನಾಟಕದಲ್ಲಿ ಕಲಾಭಿಮಾನಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಪ್ರೋತ್ಸಾಹಿಸಬೇಕೆಂದು ನಾಟಕದ ಆಯೋಜಕರು ಮನವಿ ಮಾಡಿದ್ದಾರೆ.

ಜ.9ರಂದು ಬೂಕನಬೆಟ್ಟ ಜಾತ್ರಾ ಮಹೋತ್ಸವ: ನಾಟಕ ಪ್ರದರ್ಶನ Read More