ಕಾಮುಕನಿಗೆ ದರ್ಮದೇಟು ಹಾಕಿದ ಜನ
ಮೈಸೂರು: ಅಕ್ರಮ ಸಂಬಂಧ ಬೆಳೆಸುವಂತೆ ಗೃಹಿಣಿ ಹಿಂದೆ ಬಿದ್ದ ಕಾಮುಕನಿಗೆ ಜನ ಧರ್ಮದೇಟು ಹಾಕಿದ ಪ್ರಸಂಗ ಮೈಸೂರಿನಲ್ಲಿ ನಡೆದಿದೆ.
ಕಾಮುಕನ ಕಿರುಕುಳದಿಂದ ನೊಂದ ಮಹಿಳೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ಚಿಕ್ಕಬೆಂಚನಹಳ್ಳಿ ನಿವಾಸಿ ಮಹೇಶ್ ವಿರುದ್ದ ಪ್ರಕರಣ ದಾಖಲಾಗಿದೆ.
ಗೃಹಿಣಿ ಮೈಸೂರಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.ಪಕ್ಕದ ಮನೆಯ ನಿವಾಸಿ ಮಹೇಶ್ ಸಹ ಮೈಸೂರಿನಲ್ಲೇ ಕೆಲಸ ಮಾಡುತ್ತಿದ್ದಾನೆ.
ಪ್ರತಿದಿನ ಗೃಹಿಣಿಯ ಹಿಂದೆ ಬರುತ್ತಿದ್ದ ಮಹೇಶ ತನ್ನ ಜೊತೆ ಸಂಬಂಧ ಬೆಳೆಸುವಂತೆ ಒತ್ತಾಯಿಸಿದ್ದಾನೆ.ಕೆಲಸಕ್ಕೆ ಹೋಗುವ ಸ್ಥಳಕ್ಕೆ ಬಂದು ಟಾರ್ಚರ್ ನೀಡುತ್ತಿದ್ದ.
ಎಂಜಾಯ್ ಮಾಡೋಣ,ಹಣ ಕೊಡ್ತೀನಿ ಎಂದು ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ.ತನ್ನ ಜೊತೆ ಬರದೆ ಇದ್ದರೆ ಫೋಟೋ ಹಾಗೂ ವಿಡಿಯೋಗಳನ್ನ ಮಾರ್ಫ್ ಮಾಡಿ ಇಂಟರ್ನೆಟ್ ನಲ್ಲಿ ಹಾಕಿ ಮಾನತೆಗೆದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಸಂಬಂಧ ಗೃಹಿಣಿ ತನ್ನ ಪತಿಯ ಅಣ್ಣನಿಗೆ ತಿಳಿಸಿದ್ದಾರೆ. ಮಹೇಶ್ ನೀಡುತ್ತಿದ್ದ ಕಿರುಕುಳವನ್ನ ಭಾವ ಕಣ್ಣಾರೆ ಕಂಡಾಗ ಆತ ಪರಾರಿಯಾಗಿದ್ದಾನೆ.
ಮಹೇಶ್ ನನ್ನು ಚೇಸ್ ಮಾಡಿದ ಭಾವ ಬಿಳಿಕೆರೆ ಬಳಿ ಹಿಡಿದು ಜನರೊಂದಿಗೆ ಹಿಗ್ಗಮುಗ್ಗ ಥಳಿಸಿದ್ದಾರೆ.
ಮಹೇಶ್ ಆಸ್ಪತ್ರೆ ಸೇರಿದ್ದಾನೆ.ಹಲ್ಲೆ ನಡೆಸಿದ ಹಿನ್ನಲೆ ಗೃಹಿಣಿಯ ಭಾವನ ಮೇಲೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿನ್ನಲೆ ಗೃಹಿಣಿ ಬಿಳಿಕೆರೆ ಠಾಣೆಗೆ ತೆರಳಿ ತನಗೆ ನೀಡುತ್ತಿದ್ದ ಕಿರುಕುಳದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.ಹೂಟಗಳ್ಳಿಯಲ್ಲಿ ಕಿರುಕುಳ ನೀಡಿದ ಹಿನ್ನಲೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಮಹೇಶ್ ವಿರುದ್ದ ದೂರು ದಾಖಲಾಗಿದೆ.