ಕಾಂಗ್ರೆಸ್ ನಾಯಕ‌ ರಾಜೀವ್ ಹುಟ್ಟುಹಬ್ಬ:ಆಸ್ಟ್ರಿಚ್ ಪಕ್ಷಿ ದತ್ತು

ಮೈಸೂರು: ಕಾಂಗ್ರೆಸ್ ಹಿರಿಯ ನಾಯಕ ಎಚ್.ವಿ. ರಾಜೀವ್ ಅವರ ಹುಟ್ಟುಹಬ್ಬದ ಪ್ರಯುಕ್ತ ಎಚ್.ವಿ. ರಾಜೀವ್ ಸ್ನೇಹಬಳಗದ ಸದಸ್ಯ ಆರ್. ಹುಡ್ಕೊ ಕುಮಾರ್ ಒಂದು ಆಸ್ಟ್ರಿಚ್ ಪಕ್ಷಿಯನ್ನು ದತ್ತು ಪಡೆದು ಮಾದರಿಯಾಗಿದ್ದಾರೆ.

ಮೈಸೂರಿನ ಝೂನಲ್ಲಿ ಹುಡ್ಕೊ ಕುಮಾರ್ ಒಂದು ಆಸ್ಟ್ರಿಚ್ ಹಕ್ಕಿಯನ್ನು ದತ್ತು ಪಡೆದುಕೊಂಡರು.

ಈ ವಿಶೇಷ ಕಾರ್ಯಕ್ರಮದಲ್ಲಿ ಹೆಚ್.ವಿ. ರಾಜೀವ್ ಅವರ ಪತ್ನಿ ಲಕ್ಷ್ಮೀ,ನವ್ಯ ರಾಜೀವ್, ಮಾಜಿ ಮೇಯರ್ ಭೈರಪ್ಪ, ಮಾಜಿ ಕಾರ್ಪೊರೇಟರ್ ಕೆ.ವಿ. ಮಲ್ಲೇಶ್, ನಾಗೇಶ್ ರಂಗನಾಥ್ ಮತ್ತಿತರರು ಹಾಜರಿದ್ದರು.

ಈ ವೇಳೆ ಮಾತನಾಡಿದ ಲಕ್ಷ್ಮಿ ರಾಜೀವ್ ಅವರು, ರಾಜೀವ್ ಅವರ ಜೀವನ ಸದಾ ಸಮಾಜಮುಖಿ ಕಾರ್ಯಗಳತ್ತ ಕೇಂದ್ರೀಕೃತವಾಗಿದೆ. ಅವರ ಹುಟ್ಟುಹಬ್ಬವನ್ನು ಹೀಗೆ ಅರ್ಥಪೂರ್ಣ ಕಾರ್ಯದ ಮೂಲಕ ಆಚರಿಸಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.

ಮಾಜಿ ಮೇಯರ್ ಭೈರಪ್ಪ ಅವರು ಮಾತನಾಡಿ, ಎಚ್.ವಿ. ರಾಜೀವ್ ಮೈಸೂರಿನ ಅಭಿವೃದ್ಧಿ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ನೀಡಿದ ಕೊಡುಗೆ ದೊಡ್ಡದು. ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತಹ ಕಾರ್ಯಕ್ರಮ ಸಾರ್ವಜನಿಕರಲ್ಲಿ ಸಂರಕ್ಷಣೆಯ ಅರಿವು ಮೂಡಿಸುತ್ತವೆ ಎಂದು ಹೇಳಿದರು.

ಆರ್. ಹುಡ್ಕೋ ಕುಮಾರ್ ಮಾತನಾಡಿ,ರಾಜೀವ್ ಅವರ ಹುಟ್ಟುಹಬ್ಬದಂದು ಒಂದು ಉತ್ತಮ ಕೆಲಸ ಮಾಡುವ ಆಸೆ ನನಗಿತ್ತು. ಆಸ್ಟ್ರಿಚ್ ದತ್ತು ಪಡೆಯುವ ಮೂಲಕ ಪ್ರಕೃತಿ ಮತ್ತು ಪ್ರಾಣಿಗಳ ಸಂರಕ್ಷಣೆಗೆ ನಮ್ಮ ಬದ್ಧತೆಯನ್ನು ತೋರಿಸಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ನೇಹಬಳಗ ಸದಸ್ಯರು ರಾಜೀವ್ ಅವರ ಸೇವಾ ಚಟುವಟಿಕೆಗಳನ್ನು ಮುಂದುವರಿಸುವ ಪ್ರತಿಜ್ಞೆ ಕೈಗೊಂಡರು.

ಕಾಂಗ್ರೆಸ್ ನಾಯಕ‌ ರಾಜೀವ್ ಹುಟ್ಟುಹಬ್ಬ:ಆಸ್ಟ್ರಿಚ್ ಪಕ್ಷಿ ದತ್ತು Read More

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಮಹಿಳೆಯರ ಬದುಕಿಗೆ ದಾರಿ:ರಾಜೀವ್

ಮೈಸೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮಹಿಳೆಯರು ಸಾಲ ಸೌಲಭ್ಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ದು,ಅದು‌ ಅವರ‌ ಬದುಕಿಗೆ ದಾರಿಯಾಗಿದೆ ಎಂದು ಮುಡಾ ಮಾಜಿ ಅಧ್ಯಕ್ಷ ಹೆಚ್ ವಿ ರಾಜೀವ್ ಹೇಳಿದ್ದಾರೆ.

ಈ ಯೋಜನೆ ಶೇ.16 ರ ಬಡ್ಡಿದರದಲ್ಲಿ ಸಾಲವನ್ನು ಒದಗಿಸುತ್ತಿದ್ದು, ಇದು ಮಿತಿಯಲ್ಲಿಯೇ ಇದೆ. ಪ್ರಮುಖವಾಗಿ, ಯಾವುದೇ ಜಾಮೀನು ಇಲ್ಲದೆ ಸಾಲ ನೀಡುವ ಈ ಯೋಜನೆ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯ ದಾರಿ ತೆರೆದಿದೆ. ಇಂತಹ ಯೋಜನೆಗಳು ಜನತೆಯ ಬದುಕು ಸುಧಾರಿಸಲು ಸಹಾಯ ಮಾಡುತ್ತವೆ ಎಂದು ತಿಳಿಸಿದ್ದಾರೆ.

ಅದರೆ ಖಾಸಗಿ ಮೈಕ್ರೊಫೈನಾನ್ಸ್ ಸಂಸ್ಥೆಗಳ ದಂಡಮಾರ್ಗದ ಹಣವಸೂಲಿ ಮತ್ತು ಹೆಚ್ಚಿನ ಬಡ್ಡಿ ದರಗಳು ಜನರ ಮೇಲೆ ಬೃಹತ್ ಆರ್ಥಿಕ ಒತ್ತಡವನ್ನು ತಂದಿವೆ ಎಂದು ರಾಜೀವ್ ಹೇಳುದ್ದಾರೆ.

ಇವು ಬಡ ಜನರ ಬದುಕನ್ನು ಕಷ್ಟಕರವಾಗಿಸುತ್ತಿವೆ, ಸರ್ಕಾರ ಕೂಡಲೇ ಇವುಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆದ ಎಚ್ ವಿ ರಾಜೀವ್ ಒತ್ತಾಯಿಸಿದ್ದಾರೆ.

ಧರ್ಮಸ್ಥಳ ಯೋಜನೆಯಂತಹ ಉತ್ತಮ ಉದ್ದೇಶಗಳುಳ್ಳ ಸಂಸ್ಥೆಗಳು ಸಮಾಜದಲ್ಲಿ ನಂಬಿಕೆ ಮತ್ತು ನೆರವನ್ನು ಒದಗಿಸುತ್ತಿರುವುದರಿಂದ ಇವುಗಳಿಗೆ ಪ್ರೋತ್ಸಾಹ ನೀಡಲು ನಾವೆಲ್ಲರೂ ಮುಂದಾಗಬೇಕು ಎಂದು ಹೆಚ್ ವಿ ರಾಜೀವ್
ಮನವಿ ಮಾಡಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಮಹಿಳೆಯರ ಬದುಕಿಗೆ ದಾರಿ:ರಾಜೀವ್ Read More

ಎಚ್.ವಿ.ರಾಜೀವ್ ಅವರಿಗೆ ಅಭಿನಂದನೆಗಳ ಮಹಾಪೂರ

ಮೈಸೂರು: ಲಕ್ಷ ವೃಕ್ಷ ಆಂದೋಲನದ ರುವಾರಿ,ಸಹಾಕಾರಿ ಯೂನಿಯನ್ ಬ್ಯಾಂಕ್ ಅಧ್ಯಕ್ಷರು, ಮುಡಾ ಮಾಜಿ ಅಧ್ಯಕ್ಷ ಡಾ. ಎಚ್.ವಿ.ರಾಜೀವ್ ಅವರಿಗೆ ಅಭಿನಂದನೆಗಳ ಮಹಾಪೂರವೆ ಹರಿದುಬಂದಿದೆ.

ರಾಜೀವ್ ಅವರು ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಹಾ ಮಂಡಳದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.ಹಾಗಾಗಿ ಅಭಿಮಾನಿಗಳು ಅವರನ್ನು ಅಭಿನಂದಿಸಿದ್ದಾರೆ.

ಸಮಾಜ ಸೇವಕರಾದ ಕೇಶವ್ ಬಿ.ಜಿ ಅವರು ರಾಜೀವ್ ಅವರನ್ನು ವಿಶೇಷವಾಗಿ ಅಭಿನಂಧಿಸಿದ್ದಾರೆ.ರಾಜೀವ್ ಅವರಿಗೆ ಮೈಸೂರು ಪೇಟ ತೊಡಿಸಿ,ಶಾಲು ಹೊದಿಸಿ,ಭಾರೀ ಗಾತ್ರದ ಹಾರ ಹಾಕಿ ಶುಭ ಕೋರಿ ಕೇಕ್ ಕತ್ತರಿಸಿ ತಿನ್ನಿಸಿ ಸಂಭ್ರಮಿಸಿದರು

ಚಾಮುಂಡಿ ಪುರಂ ನಲ್ಲಿರುವ
ಎಚ್.ವಿ.ರಾಜೀವ್ ನಿವಾಸದ ಬಳಿ ಕೇಕ್ ಕತ್ತರಿಸಿ ವಿಜಯದ ಸಂಕೇತವಾದ ಎರಡು ಗೂಳಿಗಳು (ಬುಲ್ಸ್ ಗಳು) ಸಂಘರ್ಷಕ್ಕಿಳಿದಿರುವ ವಿಶೇಷ ಉಡುಗೊರೆಯನ್ನು ನೀಡಿ ಮುಂದಿನ ದಿನಗಳಲ್ಲಿ ಶಾಸಕರಾಗಿ ಬರುವಂತೆ ಕೇಶವ್ ಅವರು ಅಭಿಮಾನಿಗಳೊಂದಿಗೆ ಶುಭ ಹಾರೈಸಿದರು.

ಕೆ.ವಿ.ಮಲ್ಲೇಶ್,ಅಶೋಕ್,ಆರ್ ಕೆ ರವಿ,
ರಘು,ಮಂಜುನಾಥ್,ಚಂದ್ರು,ವಿಕಾಸ್ ಶಾಸ್ತ್ರಿ, ಶೇಷ ಪ್ರಸಾದ್,ಲ್ಯಾಂಡ್ರಿ ಮಂಜುನಾಥ್,ಹರೀಶ್ ರೆಡ್ಡಿ, ಸುರೇಶ್,ಶ್ರೀಕಾಂತ್,ಸುಬ್ರಹ್ಮಣ್ಯ,ರವೀಂದ್ರ,ಅನಂತ್ ರಾಜ್,ಜಿ.ಕುಮಾರ್ ಗೌಡ,ಶ್ರೀರಾಮ್,ವೆಂಕಟೇಶ್ ಗುಂಡ,ಮಹೇಶ್,ರವಿಕುಮಾರ್,ಮಂಜು ಶೆಟ್ಟಿ,ಹರಿ ಮತ್ತಿತರರು ಈ ವೇಳೆ ರಾಜೀವ್ ಅವರಿಗೆ ಶುಭ ಕೋರಿದರು.

ಎಚ್.ವಿ.ರಾಜೀವ್ ಅವರಿಗೆ ಅಭಿನಂದನೆಗಳ ಮಹಾಪೂರ Read More

ರಾಜೀವ್ ಕೋಟಿ ವೃಕ್ಷ ಆಂದೋಲನ ಮಾಡುತ್ತಾರೆ – ಎಂ ಲಕ್ಷ್ಮಣ್ ಶ್ಲಾಘನೆ

ಮೈಸೂರು: ‌ಮೈಸೂರಲ್ಲಿ ಮಾತ್ರವಲ್ಲ ಕರ್ನಾಟಕದ ಯಾವ ರಾಜಕಾರಣಿಯೂ ಮಾಡದ ಕೆಲಸವನ್ನು ಹೆಚ್ ವಿ ರಾಜೀವ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಎಂ.ಲಕ್ಷ್ಮಣ್ ಶ್ಲಾಘಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಹೆಚ್.ವಿ. ರಾಜೀವ್ ಅವರ ಹುಟ್ಟುಹಬ್ಬದ ಪ್ರಯುಕ್ತ ರಾಜೀವ್ ಸ್ನೇಹ ಬಳಗ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಎಂ ಲಕ್ಷ್ಮಣ್ ಮಾತನಾಡಿ,ಪರಿಸರ ಪ್ರೇಮವನ್ನು ಕೊಂಡಾಡಿದರು.

ಪರಿಸರ ಎಂದರೆ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಬಾರದು ಎಂಬ ಉದ್ದೇಶದಿಂದ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೂ ಕೂಡ ಗಿಡಗಳನ್ನು ರಾಜೀವ್ ಹಂಚುತ್ತಿದ್ದಾರೆ, ಈಗಾಗಲೇ ಲಕ್ಷ ವೃಕ್ಷ ಆಂದೋಲನ ಮಾಡಿದ ರಾಜೀವ್ ರವರು ಕೋಟಿ ವೃಕ್ಷ ಆಂದೋಲನವನ್ನು ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೂಜ್ಯ ಇಳೈ ಅಳ್ವಾರ್ ಸ್ವಾಮೀಜಿ ಆಶೀರ್ವದಿಸಿ ಮಾತನಾಡಿ, ಕೆಲವು ಬಾರಿ ಭಗವಂತ ಕೆಲವು ಉದ್ದೇಶಗಳಿಗಾಗಿ ಭೂಮಿಯ ಮೇಲೆ ಕೆಲವು ವ್ಯಕ್ತಿಗಳನ್ನು ಸೃಷ್ಟಿ ಮಾಡುತ್ತಾನೆ ಹಾಗೆ ಸಮಾಜಕ್ಕೆ ಕೊಡುಗೆ ನೀಡುವುದಕ್ಕಾಗಿಯೇ ರಾಜೀವ್ ಬಂದಿದ್ದಾರೆ ಎಂಬುದು ನಮ್ಮ ನಂಬಿಕೆ ಎಂದು ತಿಳಿಸಿದರು.

ನಿಜಕ್ಕೂ ರಾಜೀವ್ ಮಾಡುತ್ತಿರುವ ಕಾರ್ಯ ಅತ್ಯಂತ ಪುಣ್ಯದ ಕಾರ್ಯ ಇಂತಹ ಕಾರ್ಯದಲ್ಲಿ ತೊಡಗಿರುವ ರಾಜೀವ ಸ್ನೇಹ ಬಳಗದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು

ಈ ಸಂದರ್ಭದಲ್ಲಿ ಮಾಜಿ ಮೇಯರ್ ಭೈರಪ್ಪ, ಕೆ.ವಿ ಮಲ್ಲೇಶ್, ಹಿರಿಯ ಸಮಾಜ ಸೇವಕ ರಘುರಾಮ್ ವಾಜುಪೇಯಿ, ಶೇಷಪ್ರಸಾದ್, ನಾಗೇಶ್,ಟಿಂಬರ್ ನಾಗರಾಜ್,ಮುರಳಿ,ಹುಡ್ಕೋ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ರಾಜೀವ್ ಕೋಟಿ ವೃಕ್ಷ ಆಂದೋಲನ ಮಾಡುತ್ತಾರೆ – ಎಂ ಲಕ್ಷ್ಮಣ್ ಶ್ಲಾಘನೆ Read More

ಸರ್ಕಾರಿ ಜಾಗದಲ್ಲಿ ಎಚ್ ವಿ ರಾಜೀವ್ ಲೇಔಟ್ ನಿರ್ಮಾಣ ಮಾಡಿಲ್ಲ:ತೇಜಸ್ವಿ

ಮೈಸೂರು: ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘ ದಿಂದ ಯಾವುದೇ ಸರ್ಕಾರಿ ಜಾಗದಲ್ಲಿ ಮುಡಾ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್ ಲೇಔಟ್ ನಿರ್ಮಾಣ ಮಾಡಿಲ್ಲ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಕಳೆದ 27 ವರ್ಷಗಳಿಂದ ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಎಚ್. ವಿ. ರಾಜೀವ್ ಅವರು ಯಾವುದೇ ಸರ್ಕಾರಿ (ರೆವಿನ್ಯೂ,ಟಿ,ಟಿ,ಸಿ, )ಜಾಗದಲ್ಲಿ ಲೇಔಟ್ ಮಾಡಿಲ್ಲ ಹಣಕೊಟ್ಟು ಭೂಮಿ ಖರೀದಿಸಿ ಲೇಔಟ್ ಮಾಡಿದ್ದಾರೆ ಎಂದು ತೇಜಸ್ವಿ ತಿಳಿಸಿದ್ದಾರೆ.

ಕೆಲವು ದಿನಗಳಿಂದ ರಾಜೀವ್ ಅವರ ಕುರಿತು ಈ ರೀತಿಯ ಸುಳ್ಳು ಸುದ್ದಿಯನ್ನು ಕೆಲವರು ಹಬ್ಬಿಸುತ್ತಿದ್ದಾರೆ,ಈ ಮೂಲಕ ರಾಜೀವ್ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ

ಈಗಾಗಲೇ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಸಮೇತ ಮಾಧ್ಯಮಗಳಿಗೆ ವಿವರಿಸಿರುವ ರಾಜೀವ್ ಅವರು ಕೆರ್ಗಳ್ಳಿ, ನೇಗರ್ತಳ್ಳಿ, ಬಲ್ಲಳ್ಳಿ, ಜಾಗದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರವಾಗಿ ಬಡಾವಣೆ ನಿರ್ಮಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜೀವ್ ಅವರು ಕಳೆದ ಮೂರ ದಶಕಗಳಿಂದ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದಾರೆ ಮತ್ತು ಮೂಡ ಅಧ್ಯಕ್ಷರಾಗಿದ್ದ ಅವಧಿಯಲ್ಲೂ ಕೂಡ ಯಾವ ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ನಿರ್ವಹಿಸಿದ್ದಾರೆ ಎಂದು ತೇಜಸ್ವಿ ತಿಳಿಸಿದ್ದಾರೆ.

ರಾಜೀವ್ ಅವರ ಮೇಲಿನ ಆರೋಪಿಗಳು ಸತ್ಯಕ್ಕೆ ದೂರವಾದುದು ಈ ರೀತಿಯ ಸುಳ್ಳು ಆರೋಪಗಳನ್ನು ಮಾಡಿ ಅವರ ಘನತೆಗೆ ಚ್ಯುತಿ ತರುವ ಕೆಲಸವನ್ನು ಯಾರೂ ಮಾಡಬಾರದು ಎಂದು ತೇಜಸ್ವಿ ನಾಗಲಿಂಗ ತಿಳಿಸಿದ್ದಾರೆ.

ಸರ್ಕಾರಿ ಜಾಗದಲ್ಲಿ ಎಚ್ ವಿ ರಾಜೀವ್ ಲೇಔಟ್ ನಿರ್ಮಾಣ ಮಾಡಿಲ್ಲ:ತೇಜಸ್ವಿ Read More

ಮುಡಾ ಮಾಜಿ ಅಧ್ಯಕ್ಷ ಹೆಚ್​.ವಿ.ರಾಜೀವ್ ರಿಂದ ಭಾರೀ ಅಕ್ರಮ:ಆರೋಪ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬದಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ನಡುವೆಯೇ ಮುಡಾ ಮಾಜಿ ಅಧ್ಯಕ್ಷ ಹೆಚ್​.ವಿ.ರಾಜೀವ್ ಕೂಡಾ ದೊಡ್ಡ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಆಯುಕ್ತರ ಅನುಮತಿ ಇಲ್ಲದೇ ಹೆಚ್​.ವಿ.ರಾಜೀವ್ ಅವರು ಮೈಸೂರಿನ ಜ್ಞಾನಗಂಗ ಗೃಹ ನಿರ್ಮಾಣ ಸಹಕಾರ ಸಂಘದಿಂದ ಒಂದೇ ದಿನದಲ್ಲಿ 848 ನಿವೇಶನಗಳ ಖಾತೆ ಮಾಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಮೈಸೂರು ಜ್ಞಾನ ಗಂಗಾ ಗೃಹ ನಿರ್ಮಾಣ ಸಹಕಾರ ಸಂಘದಿಂದ ಕೇರ್ಗಳ್ಳಿ, ನಗರ್ತಳ್ಳಿ ಮತ್ತು ಬಲ್ಲಹಳ್ಳಿ ಗ್ರಾಮದ ಒಟ್ಟು 252 ಎಕರೆ 10 ಗುಂಟೆ ಪ್ರದೇಶದಲ್ಲಿ ಬಡವಾಣೆ ನಿರ್ಮಾಣ ಮಾಡಲಾಗಿದೆ.

ನಗರಾಭಿವೃದ್ಧಿ ಪ್ರಾಧಿಕಾರದ 2018ರ ಆದೇಶದ ವಿರುದ್ಧವಾಗಿ ಬಡಾವಣೆ ನಿರ್ಮಾಣ ಮಾಡಲಾಗಿದೆ. ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಎಚ್.ವಿ ರಾಜೀವ್ ಅವರೇ ಅಧ್ಯಕ್ಷರಾಗಿದ್ದಾರೆ.

252 ಎಕರೆ ಜಾಗದ ಕೆಲವು ಸರ್ವೆ ನಂಬರ್​ಗಳು ವ್ಯಾಜ್ಯ ನ್ಯಾಯಾಲಯದಲ್ಲಿದೆ, ಹಾಗಾಗಿ ಈ ಬಡವಾಣೆಗಳ ನಿವೇಶನ ಹಕ್ಕುಗಳನ್ನ ಮುಡಾ ವರ್ಗಾವಣೆ ಮಾಡಬಾರದೆಂಬ ಆದೇಶವಿದೆ.

ಆದರೂ ಕೂಡಾ ಹೆಚ್.ವಿ ರಾಜೀವ್ 848 ನಿವೇಶನಗಳನ್ನ ಒಂದೇ ದಿನದಲ್ಲಿ‌ ಮುಡಾದಿಂದ ಬಿಡುಗಡೆಗೊಳಿಸಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ದೂರಲಾಗಿದೆ.

ಅಲ್ಲದೆ ಆಯುಕ್ತರ ಅನುಮೊದನೆ ಇಲ್ಲದಿದ್ದರೂ ತಾಂತ್ರಿಕ ಶಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಿವೇಶನಗಳನ್ನಬಿಡುಗಡೆಗೊಳಿಸಿ ಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.

ಈ ಬಗ್ಗೆ ವಿವರಣೆ ನೀಡುವಂತೆ ಸರ್ಕಾರದ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗೆ ಹಿಂದಿನ ಮುಡಾ ಆಯುಕ್ತ ನಟೇಶ್ ಪತ್ರ ಬರೆದಿದ್ದಾರೆ ಎಂಬುದು ಗೊತ್ತಾಗಿದೆ.

ಈ ನಡುವೆ ಬಿಜೆಪಿ ಶಾಸಕ ಶ್ರೀವತ್ಸ ಅವರು ಹಗರಣ ಕುರಿತುಮಾತನಾಡಿದ್ದು,
ಮುಡಾದಲ್ಲಿ ಇಷ್ಟೆಲ್ಲಾ ಹಗರಣಗಳನ್ನು ಮಾಡಿ ರಕ್ಷಣೆ ಮಾಡಿಕೊಳ್ಳಲೆಂದೇ ರಾಜೀವ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಕಾಮಗಾರಿ ಪೂರ್ಣ ಆಗದೆಯೇ ನಿವೇಶನಗಳನ್ನು ಬಿಡುಗಡೆ ಮಾಡಿಸಿಕೊಂಡಿದ್ದಾರೆ,ಆದರೂ ಸರ್ಕಾರ ಯಾವುದೇ ಕ್ರಮ ವಹಿಸಿಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕು ಯಾರೇ ತಪ್ಪು ಮಾಡಿದ್ದರೂ ಅವರನ್ನು ರಕ್ಷಿಸದೇ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಶ್ರೀವತ್ಸ ಆಗ್ರಹಿಸಿದ್ದಾರೆ.

ಮುಡಾ ಮಾಜಿ ಅಧ್ಯಕ್ಷ ಹೆಚ್​.ವಿ.ರಾಜೀವ್ ರಿಂದ ಭಾರೀ ಅಕ್ರಮ:ಆರೋಪ Read More