ಎಚ್ ಡಿ ಕುಮಾರಸ್ವಾಮಿ ಅಭಿಮಾನಿ ಬಳಗದಿಂದ ಹೆಚ್ ಡಿ ಕೆ ಜನ್ಮದಿನಾಚರಣೆ

ಮೈಸೂರು: ಎಚ್ ಡಿ ಕುಮಾರಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಎಚ್ ಡಿ ಕುಮಾರಸ್ವಾಮಿ ಬಳಗದ ಗೌರವಾಧ್ಯಕ್ಷ ಹಾಗೂ ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯರಾದ ಎಸ್ ಬಿ ಎಂ ಮಂಜಣ್ಣ ಅವರ ಅಧ್ಯಕ್ಷತೆಯಲ್ಲಿ ಮೈಸೂರಿನ ಮದರ್ ತೆರೇಸಾ ವೃದ್ಧಾಶ್ರಮದಲ್ಲಿ ಹಣ್ಣು, ಉಪಹಾರ ನೀಡಿ ಸರಳವಾಗಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಎಚ್ ಡಿ ಕುಮಾರಸ್ವಾಮಿ ಬಳಗದ ಸಂಸ್ಥಾಪಕರು ಹಾಗೂ ಜಿಲ್ಲಾಧ್ಯಕ್ಷ ರಾಮಕೃಷ್ಣೇಗೌಡರು ಬೆಲವತ್ತ, ನಗರಾಧ್ಯಕ್ಷ ಆನಂದ್ ಗೌಡ್ರು ಕೆ ಆರ್ ಮಿಲ್, ನಿರ್ದೇಶಕರಾದ ರತ್ನ, ನಗರ ಘಟಕದ ಅಧ್ಯಕ್ಷರಾದ ಬಬಿತಾ, ಮಹದೇವಮ್ಮ, ರತ್ನಮ್ಮ, ಜೆಡಿಎಸ್ ರಾಜ್ಯ ವಕ್ತಾರರು ರವಿಚಂದ್ರ ಗೌಡ್ರು, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಮೇಷ್ಟ್ರು, ಕಾರ್ಯಾಧ್ಯಕ್ಷರಾದ ಪ್ರಕಾಶ್ ಪ್ರಿಯ ದರ್ಶನ್,ಲಾಯರ್ ಕುಮಾರಣ್ಣ, ಜೆಡಿಎಸ್ ಮುಖಂಡರಾದ ಹನುಮಂತಣ್ಣ, ಮೈಸೂರು ಜಿಲ್ಲಾ ಸಾಮಾಜಿಕ ಜಾಲತಾಣ ಕೆ ವಿ ಪ್ರವೀಣ್, ಡಾಬಾ ಸ್ವಾಮಿ ಸಿದ್ದಲಿಂಗಪುರ, ಕುಂಬಾರ್ ಕೊಪ್ಪಲು ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ಎಚ್ ಡಿ ಕುಮಾರಸ್ವಾಮಿ ಅಭಿಮಾನಿ ಬಳಗದಿಂದ ಹೆಚ್ ಡಿ ಕೆ ಜನ್ಮದಿನಾಚರಣೆ Read More