ಜಮೀನಿಗೆ ರಸ್ತೆ ಬಿಡಿಸುವ ವಿಚಾರಕ್ಕೆ ಜಗಳ:ಮೂರು ಮಂದಿ ಮೇಲೆ ಹಲ್ಲೆ

ಮೈಸೂರು: ಜಮೀನಿಗೆ ರಸ್ತೆ ಬಿಡಿಸುವ ವಿಚಾರಕ್ಕೆ ಜಗಳ ನಡೆದು ಮೂರು ಮಂದಿಯ ಮೇಲೆ ಚಾಕು ಹಾಗೂ ರಾಡ್ ನಿಂದ ಹಲ್ಲೆ ಮಾಡಿರುವ‌ ಘಟನೆ ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.

ಮೂವರಿಗೆ ಚಾಕುವಿನಿಂದ ಇರಿದು ರಾಡ್ ನಿಂದ ಹಲ್ಲೆ ಮಾಡಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.

ಈ‌ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಕಟ್ಟೆಮನುಗನ ಹಳ್ಳಿಯಲ್ಲಿ ನಡೆದಿದ್ದು, ಜಮೀನು ಮಾಲೀಕ ಬಸವರಾಜು, ಪ್ರದೀಪ್ ಅವರಿಗೆ ಗಂಭೀರ ಗಾಯವಾಗಿದೆ.

ಕೋರ್ಟ್ ವ್ಯಾಜ್ಯವಿದ್ದರೂ ಜಮೀನಿಗೆ ನುಗ್ಗಿ ದಾಂಧಲೆ ಮಾಡಿದ್ದಾರೆ.
ಘಟನೆ ಸಂಬಂಧ ಸಣ್ಣಕುಮಾರ, ಬುದ್ದ, ಸೋಮೇಶ್, ಸಂಜು, ರವಿ,ಕುಮಾರ್, ಮುನಿಯಮ್ಮ, ದೊಡ್ಡಸಿದ್ದು, ರಾಜಶೇಖರ್, ಕವಿತಾ ವಿರುದ್ಧ ಪ್ರಕರಣ ದಾಖಲಾಗಿದೆ.

ಜಮೀನಿಗೆ ರಸ್ತೆ ಬಿಡಿಸುವ ವಿಚಾರಕ್ಕೆ ಜಗಳ:ಮೂರು ಮಂದಿ ಮೇಲೆ ಹಲ್ಲೆ Read More

ಅಗ್ನಿ ಅವಘಡ : ಗ್ಯಾರೇಜ್ ನಲ್ಲಿದ್ದ 18 ಬೈಕ್ 2 ಕಾರು ಬೆಂಕಿಗಾಹುತಿ

ಮೈಸೂರು: ಗ್ಯಾರೇಜ್ ವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಬೈಕು,ಕಾರುಗಳು ಸುಟ್ಟು ಹೋದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಪಡುವಕೋಟೆಯ ಗ್ಯಾರೇಜ್ ನಲ್ಲಿ ಅಗ್ನಿ ಅವಘಡ ಸಂಭವಿಸಿ 18 ಬೈಕುಗಳು ಎರಡು ಮೂರು ಕಾರುಗಳು ಸುಟ್ಟು ಕರಕಲಾಗಿವೆ.

ಪಡುವಕೋಟೆ ಗ್ರಾಮದ ನಿವಾಸಿ ಅಜಿತ್ ಎಂಬುವರಿಗೆ ಸೇರಿದ ಗ್ಯಾರೇಜ್ ನಲ್ಲಿ ಈ ಘಟನೆ‌ನಡೆದಿದೆ.

ಸುದ್ದಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಆರಿಸಿದ್ದಾರೆ. ಹೆಚ್.ಡಿ. ಕೋಟೆ ಪೊಲೀಸರು ಪರಿಶೀಲನೆ ನಡೆಸಿದರು.

ಅಗ್ನಿ ಅವಘಡ : ಗ್ಯಾರೇಜ್ ನಲ್ಲಿದ್ದ 18 ಬೈಕ್ 2 ಕಾರು ಬೆಂಕಿಗಾಹುತಿ Read More

ಒಂದೇ ಜಮೀನಿನಲ್ಲಿ ನಾಲ್ಕನೇ ಚಿರತೆ ಸೆರೆ:ದೂರವಾಗದ ಚಿಂತೆ

ಹೆಚ್.ಡಿ.ಕೋಟೆ: ನಾಲ್ಕೈದು ದಿನಗಳ ಹಿಂದಷ್ಟೆ ಹೆಚ್.ಡಿ.ಕೋಟೆಯಲ್ಲಿ ಚಿರತೆ ಸೆರೆಯಾಗಿ ಜನ ನಿಟ್ಟುಸಿರು‌ ಬಿಡುವಾಗಲೇ ಮತ್ತೊಂದು‌ ಚಿರತೆ ಸೆರೆಸಿಕ್ಕಿದ್ದು ತೀವ್ರ ಆತಂಕಕ್ಕೆ ಎಡೆ ಮಾಡಿದೆ.

ಅದೂ ಒಂದೇ ತಿಂಗಳಲ್ಲಿ ಒಂದೇ ಜಮೀನಿನಲ್ಲಿ ನಾಲ್ಕನೇ ಚಿರತೆ ಸೆರೆಯಾಗಿದೆ.
ನಾಲ್ಕೈದು ದಿನಗಳ ಹಿಂದಷ್ಟೆ ಮೂರನೇ ಚಿರತೆ ಸೆರೆಯಾಗಿತ್ತು.ಇದೀಗ ಅದೇ ಸ್ಥಳದಲ್ಲೇ ಮತ್ತೊಂದು ಚಿರತೆ ಸೆರೆಯಾಗಿದೆ.

ಹೆಚ್.ಡಿ.ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಸಮೀಪದ ಗುರುಮಲ್ಲು ಅವರ ಜಮೀನಿನಲ್ಲಿ ಚಿರತೆ ಬೋನಿನಲ್ಲಿ ಸೆರೆಯಾಗಿದೆ.

‌ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ ಚಿರತೆ ಬೋನಿನಲ್ಲಿ ಸೆರೆಯಾಗಿದೆ,ಆದರೆ ಜನರಲ್ಲಿ ಆತಂಕ ದೂರವಾಗಿಲ್ಲ.

ರೈತರ ದೂರಿನ ಮೇರೆಗೆ ಅರಣ್ಯ ಇಲಾಖೆ ಬೋನು ಇರಿಸಿತ್ತು.ಅದೇ ಜಮೀನಿನಲ್ಲಿ ಇನ್ನೂ ಹಲವು ಚಿರತೆಗಳಿರಬಹುದೆಂದು ರೈತರು ಆತಂಕಪಟ್ಟಿದ್ದಾರೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚಿರತೆಯನ್ನು ಸಿಬ್ಬಂದಿ ಅರಣ್ಯಕ್ಕೆ ರವಾನಿಸಿದ್ದಾರೆ.

ಒಂದೇ ಜಮೀನಿನಲ್ಲಿ ನಾಲ್ಕನೇ ಚಿರತೆ ಸೆರೆ:ದೂರವಾಗದ ಚಿಂತೆ Read More

ಬೋನಿಗೆ ಚಿರತೆ ಬಿದ್ದರೂ ದೂರವಾಗದ ಆತಂಕ

ಎಚ್.ಡಿ.ಕೋಟೆ: ಪಟ್ಟಣದ ಡ್ರೈವರ್ ಕಾಲೋನಿ‌ ಸಮೀಪ 7 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದ್ದು ಸ್ಥಳೀಯ ಸಧ್ಯಕ್ಕೆ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಒಂದು ವಾರದ ಅಂತರದಲ್ಲಿ ಇದೇ ಸ್ಥಳದಲ್ಲಿ ಎರಡು ಗಂಡು ಚಿರತೆಗಳು ಬೋನಿಗೆ ಬಿದ್ದಿದ್ದವು, ಈಗ ಮೂರನೇ ಚಿರತೆ ಸಿಕ್ಕಿರುವುದರಿಂದ ಇನ್ನೂ ಚಿರತೆಗಳು ಇರಬಹುದೆಂದು ರೈತರು ಹೇಳುತ್ತಿದ್ದಾರೆ.

ರೈತ ರಾಮಕೃಷ್ಣ ಅವರ ಜಮೀನಿನಲ್ಲಿ ಕೋಟೆ ವಲಯ ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.

ಕಳೆದ ಒಂದು ವಾರದ ಹಿಂದೆ ಸಮೀಪದ ಜಮೀನಿನ ರೈತ ಗುಂಡು ಮಲ್ಲು ಅವರ ಜಮೀನಿನಲ್ಲಿ 5 ವರ್ಷದ ಗಂಡು ಚಿರತೆ ಸಿಕ್ಕಿತ್ತು,ಮತ್ತೆ ಮೂರು ದಿನಗಳ ನಂತರ ಮತ್ತೊಂದು ಚಿರತೆ ಬೋನಿಗೆ ಬಿದ್ದಿತ್ತು,ಈಗ ಏಳು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದ್ದು ಸಧ್ಯಕ್ಕೆ ಇಲ್ಲಿನ ಜನ ನಿಟ್ಟುಸಿರು ಬಿಟ್ಟರೂ ಚಿರತೆ ಸೇರಿದಂತೆ ಇನ್ನೂ ಕಾಡುಪ್ರಾಣಿ ಗಳಿರಬಹುದೆಂದು ಜನ ಆತಂಕ ಪಟ್ಟಿದ್ದಾರೆ.

ಬೋನಿಗೆ ಚಿರತೆ ಬಿದ್ದರೂ ದೂರವಾಗದ ಆತಂಕ Read More

ಸೋಲಾರ್ ತಂತಿ,ಆನೆಕಂದಕ,ರೈಲ್ವೆಹಳಿ ಬೇಲಿ:ಅಂತ್ಯ ಸಂಸ್ಕಾರಕ್ಕೆ ಕಸರತ್ತು

ಹೆಚ್.ಡಿ.ಕೋಟೆ: ಕಾಡುಪ್ರಾಣಿಗಳು ನಡೆಸುವ ದಾಳಿಯಿಂದ ರಕ್ಷಿಸಿಕೊಳ್ಳಲು ನಿರ್ಮಿಸಲಾದ ಆನೆಕಂದಕ,ಸೋಲಾರ್ ತಂತಿ,ರೈಲ್ವೆ ಹಳಿ ಬೇಲಿ ಯಿಂದಾಗಿ ಅಂತ್ಯ ಸಂಸ್ಕಾರಕ್ಕೆ ಹೋಗಲು ಕಸರತ್ತು ನಡೆಸುವಂತಾಗಿದೆ.

ಯಾರಾದರೂ ಮೃತಪಟ್ಟಾಗ ಮೃತದೇಹ ಸಾಗಿಸಲು ಆದಿವಾಸಿಗಳು ಹರಸಾಹಸ ಪಡುವಂತಾಗಿದೆ.

ಮೃತದೇಹವನ್ನ ಹೊತ್ತು ಭಾರಿ ಆಳವಿರುವ ಕಂದಕದಲ್ಲಿ ಇಳಿದು ಸೋಲಾರ್ ತಂತಿ ಅಳವಡಿಸಿರುವ ರೈಲ್ವೆ ಹಳಿ ಬೇಲಿಯನ್ನ ದಾಟಿ ಪಡಿಪಾಟಲು ಅನುಭವಿಸುತ್ತಿದ್ದಾರೆ.

ಇದು ಯಾವುದೊ ದೂರದ ಕಾಡು ಪ್ರದೇಶದ ಕಥೆಯಲ್ಲ,ಮುಖ್ಯ ಮಂತ್ರಿಗಳ ತವರು ಜಿಲ್ಲೆಯಲ್ಲೇ ಈ ವ್ಯಥೆ.ಆದರೂ‌ ಇದುವರೆಗೂ ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನ ಹರಿಸದೆ ಇರುವುದು ದುರ್ದೈವದ ಸಂಗತಿ.

ಹೆಚ್.ಡಿ.ಕೋಟೆ ತಾಲೂಕು ಹಿರೆಹಳ್ಳಿ ಆದಿವಾಸಿಗಳ ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಹೀಗೆ ಸಾಹಸ ಮಾಡಿಯೇ ಅಂತ್ಯ ಸಂಸ್ಕಾರ ಮಾಡಬೇಕಾಗುತ್ತದೆ.

ಆದಿವಾಸಿಗಳ ಸಂಪ್ರದಾಯದಂತೆ ಅರಣ್ಯ ಪ್ರದೇಶದಲ್ಲೇ ಶವಸಂಸ್ಕಾರ ಮಾಡಬೇಕಿದೆ.ಆನೆಕಂದಕ,ಸೋಲಾರ್ ಹಾಗೂ ರೈಲ್ವೆ ಹಳಿ ಬೇಲಿಯಿಂದಾಗಿ ಮೃತದೇಹವನ್ನ ಅರಣ್ಯ ಪ್ರದೇಶಕ್ಕೆ ಕೊಂಡೊಯ್ಯಲು ಸಾಧ್ಯವಾಗದೆ ತೀವ್ರ ತೊಂದರೆಗೆ ಒಳಗಾಗುತ್ತಿದ್ದಾರೆ.

ರೈಲ್ವೆ ಬೇಲಿಯ ನಡುವೆ ಒಂದು ಗೇಟ್ ನಿರ್ಮಿಸಿ ಅನುಕೂಲ ಮಾಡಿಕೊಡಬೇಕೆಂದು ಹಿರೆಹಳ್ಳಿ ಆದಿವಾಸಿಗಳು ಒತ್ತಾಯಿಸಿದ್ದಾರೆ.

ಒಂದು ವೇಳೆ ಗೇಟ್ ನಿರ್ಮಿಸದೆ ಇದ್ದರೆ ಮುಂದಿನ ದಿನಗಳಲ್ಲಿ ನಮ್ಮ ಗುಡಿಸಲುಗಳ ಮಧ್ಯಯೇ ಅಂತ್ಯ ಸಂಸ್ಕಾರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೂಡಲೇ ಸ್ಥಳೀಯ ಶಾಸಕ ಅನಿಲ್ ಚಿಕ್ಕಮಾದು ಇತ್ತ ಗಮನ ಹರಿಸಬೇಕಿದೆ.

ಸೋಲಾರ್ ತಂತಿ,ಆನೆಕಂದಕ,ರೈಲ್ವೆಹಳಿ ಬೇಲಿ:ಅಂತ್ಯ ಸಂಸ್ಕಾರಕ್ಕೆ ಕಸರತ್ತು Read More