ಆನೆ ಸಮೀಪ ಫೋಟೊ ತೆಗೆದುಕೊಂಡು 25 ಸಾವಿರ ರೂ ದಂಡ ಪೀಕಿದ ಯುವಕ!

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ (ಗುಂಡ್ಲುಪೇಟೆ): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೈಸೂರು-ಊಟಿ ಹೆದ್ದಾರಿಯಲ್ಲಿ ಆನೆ ಕಂಡ ಯುವಕ ಕಾರಿಂದಿಳಿದು ಆನೆ ಸಮೀಪ ಫೋಟೋ ತೆಗೆದುಕೊಳ್ಳಲು ಹೋಗಿ ಸಿಕ್ಕಿ ಬಿದ್ದು ದಂಡ ಕಟ್ಟಿದ ಪ್ರಸಂಗ ನಡೆದಿದೆ.

ಬಂಡೀಪುರ ಹೆದ್ದಾರಿಯಲ್ಲಿ ನಿಂತ ಆನೆ ಮುಂದೆ ಪಟ್ಟಣದ ಯುವಕ ಸಾಹುಲ್ ಆನೆ ಜೊತೆ ಫೋಟೋಗಾಗಿ ಹುಚ್ಚಾಟ ಮೆರೆದು ಅರಣ್ಯ ಇಲಾಖೆಗೆ ಮುಚ್ಚಳಿಕೆ ಬರೆದುಕೊಟ್ಟು ದಂಡ ಕಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಶನಿವಾರ ಬಂಡೀಪುರ ಹೆದ್ದಾರಿಯಲ್ಲಿ ಸ್ನೇಹಿತರೊಂದಿಗೆ ಕಾರಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ನಿಂತಿದ್ದ ಕಾಡಾನೆ ಕಂಡು ಗುಂಡ್ಲುಪೇಟೆ ನಿವಾಸಿ ಸಾಹುಲ್ ರಸ್ತೆಗಿಳಿದು ಫೋಟೋ ತೆಗೆಸಿಕೊಳ್ಳುತ್ತಿದ್ದಾಗ ಕಾರಲ್ಲಿದ್ದ ಸ್ನೇಹಿತ ಆನೆ ಜೊತೆ ಕೀಟಲೆ ಮಾಡುವ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.

ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಆತನನ್ನು ಕರೆಯಿಸಿ ವಿಚಾರಣೆ ನಡೆಸಿ ಬುದ್ದಿವಾದ ಹೇಳಿ 25 ಸಾವಿರ ದಂಡ ಪೀಕಿಸಿದ್ದಾರೆ.

ಪ್ರವಾಸಿಗರು ಇತ್ತೀಚೆ ಅರಣ್ಯ ಹಾಗೂ ಕಾಡುಪ್ರಾಣಿಗಳೊಂದಿಗೆ ಪೊಟೊ ವಿಡಿಯೊ ರೀಲ್ಸ್ ಮಾಡುವ ಹುಚ್ಚು ಹೆಚ್ಚಾಗಿದ್ದು ಅರಣ್ಯ ಇಲಾಖೆಯವರ ಗಸ್ತು ನಿರ್ಲಕ್ಷ್ಯವೆ ಇದಕ್ಕೆ ಕಾರಣವಾಗಿದೆ.

ಇದು ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆಯಾದ ಮೇಲೆ ಇಲಾಖೆ ಎಚ್ಚೆತ್ತುಕೊಂಡಿರುವುದು ವಿಪರ್ಯಾಸ.

ಆನೆ ಸಮೀಪ ಫೋಟೊ ತೆಗೆದುಕೊಂಡು 25 ಸಾವಿರ ರೂ ದಂಡ ಪೀಕಿದ ಯುವಕ! Read More

ಮಹಾ ಶಿವಯೋಗಿಯಾಗಿ ಶಿವಕುಮಾರಶ್ರೀಗಳು:ಬಸವಯೋಗಿಪ್ರಭು ಬಣ್ಣನೆ

ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲೂಕು, ಬೇಗೂರು ಹೋಬಳಿ, ಮರಳಾಪುರದಲ್ಲಿ ಶತಾಯುಷಿ ಲಿಂಗೈಕ್ಯ ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಯವರ ಆರನೇ ವರ್ಷದ ಸ್ಮರಣೋತ್ಸವ ಪ್ರಯುಕ್ತ ದಾಸೋಹ ದಿನ ಆಚರಿಸಲಾಯಿತು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶರಣ ತತ್ವ ಚಿಂತಕರಾದ ಬಸವಯೋಗಿಪ್ರಭುಗಳು ಶಿವಕುಮಾರ ಸ್ವಾಮೀಜಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಈ‌ ವೇಳೆ ಮಾತನಾಡಿದ ಅವರು,
ಶಿವಕುಮಾರ ಮಾಹಾಸ್ವಾಮೀಜಿಯವರು ಬಸವಣ್ಣನವರು ನೀಡಿದ ಕಾಯಕ ದಾಸೋಹ ಶಿವಯೋಗವನ್ನು ಅಳವಡಿಸಿಕೊಂಡು ತ್ರಿಕಾಲ ಲಿಂಗಪೂಜಾ ನಿಷ್ಠರಾಗಿ ಮಹಾ ಶಿವಯೋಗಿಯಾಗಿ ಬೆಳಗಿದರು ಎಂದು ‌ಬಣ್ಣಿಸಿದರು.

ವಿಶ್ವಗುರು ಬಸವಣ್ಣನವರು ನೀಡಿದ
ದಾಸೋಹ ತತ್ವವನ್ನು ಬಡ ಮಕ್ಕಳಿಗೆ ಶಿಕ್ಷಣ ಮತ್ತು ಅನ್ನ ದಾಸೋಹವನ್ನು ಮಾಡುವುದರ ಮೂಲಕ ದಾಸೋಹ ತತ್ವವನ್ನು ಮುಂದುವರೆಸಿದ ಮಹಾ ದಾಸೋಹಿಯಾಗಿದ್ದಾರೆ.

ಬಸವಣ್ಣನವರು ಸ್ಥಾಪಿಸಿದ ಶೂನ್ಯಪೀಠದ ಪರಂಪರೆಯಲ್ಲಿ ಬರುವ ಹರದನಹಳ್ಳಿ ಗೋಸಲ ಸಿದ್ದೇಶ್ವರರು ಬರಡು ಭೂಮಿಯಲ್ಲಿ ನೀರು ತಂದ ಸ್ಥಳವೇ ಸಿದ್ದ ಗಂಗೆ ಸಿದ್ದಗಂಗಾ ಪರಂಪರೆಯಲ್ಲಿ ಬಂದ ಉದ್ದಾನ ಸ್ವಾಮಿಗಳ ಕರಸಂಜಾತರಾಗಿ ಬಂದವರು ಶಿವಕುಮಾರ ಸ್ವಾಮಿಗಳು ಎಂದು ಬಸವಯೋಗಿಪ್ರಭುಗಳು ಸ್ಮರಿಸಿದರು.

ಇದೇ ವೇಳೆ ಸದ್ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಗ್ರಾಮದ ಯುವಕರು ಮುಖಂಡರು ಮುದ್ದುಮಕ್ಕಳು ಭಕ್ತಿಯಿಂದ ಭಾಗವಹಿಸಿದ್ದರು.

ಮಹಾ ಶಿವಯೋಗಿಯಾಗಿ ಶಿವಕುಮಾರಶ್ರೀಗಳು:ಬಸವಯೋಗಿಪ್ರಭು ಬಣ್ಣನೆ Read More

ನಿರಂಜನ್ ಕುಮಾರ್ ಅವರಿಗೆ ಶುಭ ಹಾರೈಕೆ

ಮೈಸೂರು: ಗುಂಡ್ಲುಪೇಟೆ ಮಾಜಿ ಶಾಸಕ ನಿರಂಜನ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ.

ಮೈಸೂರು ಕುವೆಂಪು ನಗರದ ನಿವಾಸದಲ್ಲಿ ನಿರಂಜನ್ ಕುಮಾರ್ ಅವರಿಗೆ ಅಭಿಮಾನಿಗಳು ಹುಟ್ಟು ಹಬ್ಬದ ಶುಭಾಶಯ ಕೋರಿದರು.

ಇದೇ ವೇಳೆ ಸಮಾಜ ಸೇವಕರಾದ ಗಗನ್, ನಾಗೇಂದ್ರ, ವಿನು ಮತ್ತು ಆನಂದ್ ಅವರು‌ ನಿರಂಜನ್ ಅವರಿಗೆ ಭಾರೀ ಗಾತ್ರದ ಗುಲಾಬಿ ಹಾರ ಹಾಕಿ ವಿಶೇಷವಾಗಿ ಶುಭ ಹಾರೈಸಿದರು

ನಿರಂಜನ್ ಕುಮಾರ್ ಅವರಿಗೆ ಶುಭ ಹಾರೈಕೆ Read More