ಹುಣಸೂರು: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ವತಿಯಿಂದ ಹುಣಸೂರಿನ ರತ್ನಪುರಿ ಕಾಲೋನಿಯ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಲೇಖನಿಗಳನ್ನು ನೀಡಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ಮುಖಂಡರು ರಾಜ್ಯದಲ್ಲೆಡೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು, ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಇಒ ಮಹದೇವ್, ಸರ್ಕಲ್ ಇನ್ಸ್ಪೆಕ್ಟರ್ ರವಿ, ನಗರಸಭಾ ಆಯುಕ್ತರಾದ ಮಾನಸ, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಮುರುಗ ಪಾಲ್ಗೊಂಡಿದ್ದರು.
ಕರ್ನಾಟಕ ಪ್ರಜಾ ಪಾರ್ಟಿ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಲೋಕೇಶ್, ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ರವಿ ಅವರ ನೇತೃತ್ವದಲ್ಲಿ ನೋಟ್ ಬುಕ್ ಹಾಗೂ ಲೇಖನಿ ವಿತರಿಸಲಾಯಿತು.
ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಸಿಬ್ಬಂದಿ ಮತ್ತು ಇತರೆ ಸರ್ಕಾರಿ ಅಧಿಕಾರಿಗಳು ಹಾಜರಿದ್ದರು.
ಮೈಸೂರು: ಕರ್ನಾಟಕದ ಏಕೈಕ ಪ್ರಾದೇಶಿಕ ಪಕ್ಷ ಜನತಾದಳ (ಜಾತ್ಯತೀತ) 25 ವರ್ಷಗಳ ಬೆಳ್ಳಿ ಹಬ್ಬ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮಿಪುರಂನಲ್ಲಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ತಿಂಡಿ, ಹಣ್ಣು,ಹಂಪಲು ಹಂಚಲಾಯಿತು.
ಈ ಸಂದರ್ಭದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಬಿ.ಜಿ.ಸಂತೋಷ್, ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ ನಗರ ಪಾಲಿಕೆ ಮಾಜಿ ಸದಸ್ಯೆ ಶೋಭಾ, ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ, ಮುಖಂಡರಾದ ಯದುನಂದನ್, ರಾಮು ಹಾಜರಿದ್ದರು.
ಹುಣಸೂರು: ಕರ್ನಾಟಕ ರಾಜ್ಯ ಪ್ರಜಾ ಪಾರ್ಟಿ ರೈತ ಪರ್ವದ ವತಿಯಿಂದ ಹೊನ್ನಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಟಿವಿಯನ್ನು ಕೊಡುಗೆಯಾಗಿ ನೀಡಲಾಯಿತು.
79 ನೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೆಪಿಪಿ ರೈತಪರ್ವ ರಾಜ್ಯಾಧ್ಯಕ್ಷ ಶಿವಣ್ಣ ಅವರ ನೇತೃತ್ವದಲ್ಲಿ ಸುಮಾರು 30 ಸಾವಿರ ರೂ ಮೌಲ್ಯದ ಟಿವಿಯನ್ನು ಮಕ್ಕಳ ಶೈಕ್ಷಣಿಕ ಉದ್ದೇಶಕ್ಕಾಗಿ ಕೊಡುಗೆಯಾಗಿ ನೀಡಿ ಮಾದರಿಯಾಗಿದ್ದಾರೆ.
ಈ ವೇಳೆ ತಾಲೂಕು ಪ್ರಜಾ ಪಾರ್ಟಿ ರೈತ ಪರ್ವ ಅಧ್ಯಕ್ಷ ಚೆಲುವರಾಜು, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷೆ ಪಾರ್ವತಿ, ಶಾಲೆಯ ಮುಖ್ಯ ಶಿಕ್ಷಕರಾದ ಎನ್ ಕೆ ರಮೇಶ್, ಶಾಲೆಯ ಸಹ ಶಿಕ್ಷಕರಾದ ಗಿರೀಶ್ ಕುಮಾರ್ ಕೆ.ಎಸ್, ರವಿಕುಮಾರ್, ಕುಮಾರಿ ರೇಖಾ ಹಾಗೂ ಪೋಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ನೀಡಿರುವ ಟಿವಿಯನ್ನು ಪಡೆದು ಪ್ರಜಾ ಪಾರ್ಟಿ ರಾಜ್ಯ ಅಧ್ಯಕ್ಷ ಶಿವಣ್ಣ ಹಾಗೂ ತಾ.ಅಧ್ಯಕ್ಷ ಚೆಲುವ ರಾಜು ಅವರಿಗೆ ಶಾಲೆಯ ಪರವಾಗಿ ಅಭಿನಂದಿಸಲಾಯಿತು.
ಮೈಸೂರು: ಮಂಚೇಗೌಡನ ಕೊಪ್ಪಲು ಸರ್ಕಾರಿ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ರಕ್ತದಾನದ ಗುಂಪಿನ ಪರೀಕ್ಷೆ ಹಮ್ಮಿಕೊಳ್ಳಲಾಯಿತು.
ಇನ್ನರ್ ವೀಲ್ ಕ್ಲಬ್ ಅಫ್ ಮೈಸೂರು ಗೋಲ್ಡ್ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ 300ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ರಕ್ತದ ಗುಂಪಿನ ಪರೀಕ್ಷೆ ಹಾಗೂ ಮಕ್ಕಳ ಗುರುತಿನ ಚೀಟಿ ವಿತರಿಸಿ ರಕ್ತದಾನದ ಬಗ್ಗೆ ಜಾಗೃತಿ ಮಂಡಿಸಲಾಯಿತು.
ಈ ವೇಳೆ ಮಾತನಾಡಿದ ಇಂದಿರಾ ಗಾಂಧಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು ಅವರು, ಮಕ್ಕಳ ಆರೋಗ್ಯ ರಕ್ಷಣೆಯು ಸಮಾಜದ ಜವಾಬ್ದಾರಿ, ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬೇಕಾದರೆ ಮೊದಲು ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಬೇಕು ಎಂದು ಹೇಳಿದರು.
ಆರೋಗ್ಯವಂತ ಮಕ್ಕಳಿಂದ ಮಾತ್ರ ಸದೃಢ ಸಮಾಜ, ದೇಶ ನಿರ್ಮಾಣ ಸಾಧ್ಯವಾಗುತ್ತದೆ, ಸದೃಢವಾದ ದೇಶ ನಿರ್ಮಾಣ ಮಾಡಲು ಮೊದಲು ಸದೃಢವಾದ ಪ್ರಜೆಗಳನ್ನು ರೂಪಿಸಬೇಕು, ಸದೃಢವಾದ ಪ್ರಜೆಗಳನ್ನು ರೂಪಿಸಲು ಆರೋಗ್ಯವಂತ ಮಕ್ಕಳು ಸಮಾಜದಲ್ಲಿ ಇರಬೇಕು ಇಂತಹ ಸಮಾಜವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಮಕ್ಕಳ ಆರೋಗ್ಯವನ್ನು ನಿರ್ಲಕ್ಷಿಸದೆ ಕಾಲಕಾಲಕ್ಕೆ ತಪಾಸಣೆ ನಡೆಸಿ, ಅವಶ್ಯವಿದ್ದಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕು, ಸರ್ಕಾರವು ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ತಪಾಸನೆ ಮತ್ತು ಔಷಧಿ ವಿತರಣೆ ಮಾಡುತ್ತಿದ್ದು ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರವಿ ಮಂಚೇಗೌಡನಕೊಪ್ಪಲು ಹೇಳಿದರು
ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಗೋಲ್ಡ್ ಅಧ್ಯಕ್ಷರಾದ ರಶ್ಮಿ ಬಸವರಾಜ್ ಮಾತನಾಡಿ,ರಕ್ತದಾನ ಶ್ರೇಷ್ಠದಾನ ಇತರೆ ದಾನಗಳಲ್ಲಿ ಇದು ಅಮೂಲ್ಯ ದನವಾಗಿದೆ, ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಬಹುದು ಹಾಗೂ ಅನೇಕ ಆರೋಗ್ಯಗಳಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.
ನಂತರ ಮಕ್ಕಳಿಗೆ ರಕ್ತದಾನದಿಂದ ಆಗುವ ಪ್ರಯೋಜನಗಳ ಬಗ್ಗೆ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಜಾಗೃತಿ ಮೂಡಿಸಿದರು.
ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರ್ ಗೋಲ್ಡ್ ಕಾರ್ಯದರ್ಶಿ ಪ್ರತಿಭಾ, ಮಾಜಿ ಅಧ್ಯಕ್ಷರಾದ ಡಾ. ಪ್ರೇಮಾ ರವಿ, ಶಾಲಿನಿ, ಮಾಜಿ ಉಪ ಮಹಾಪೌರರಾದ ಮಹದೇವಪ್ಪ, ಶ್ರೀನಿವಾಸ್, ರಾಮಚಂದ್ರು, ಶಾಲೆಯ ಮುಖ್ಯ ಉಪಾಧ್ಯಾಯರಾದ ಶುಭ, ಸಹ ಶಿಕ್ಷಕರಾದ ಪುಷ್ಪ,ಅನುಪಮಾ,ಕೃಷ್ಣಮ್ಮ ಮತ್ತಿತರರು ಹಾಜರಿದ್ದರು.
ಕೊಳ್ಳೇಗಾಲ: ತಾಲೂಕಿನ ಹೊಂಡರಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಲನಚಿತ್ರ ನಟ ಗಣೇಶ್ ರಾವ್ ಕೇಸರ್ ಕರ್ ಅವರು ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಿ ಮಕ್ಕಳಿಗೆ ನೋಟ್ ಬುಕ್ ಹಾಗೂ ಸಮವಸ್ತ್ರ ವಿತರಿಸಿದರು.
ಹುಟ್ಟಿದ ಊರಿಗೆ ಹಾಗೂ ಓದಿದ ಶಾಲೆಗೆ ಕಾಯಕಲ್ಪ ಮಾಡಲು ಹೊರಟಿರುವ ನಟ ಗಣೇಶ್ ರಾವ್ ಕೇಸರ್ ಕರ್ ಅವರು ತಂದೆ ಮಾಜಿ ಸೇನಾಧಿಕಾರಿ ದಿ.ಆರ್. ಕೃಷ್ಣರಾವ್, ತಾಯಿಯರ ಸ್ಮರಣಾರ್ಥ ತಾವು ಓದಿದ ಶಾಲೆಯನ್ನು ದತ್ತು ಪಡೆದು ಕಳೆದ 2 ವರ್ಷಗಳಿಂದ ನಿರಂತರವಾಗಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಈಗಾಗಲೇ ಶಿಥಿಲಗೊಂಡಿದ್ದ ಶಾಲಾ ಕಟ್ಟಡವನ್ನು ಕೆಡವಿ ನೂತನ ಕೊಠಡಿಗಳನ್ನು ನಿರ್ಮಾಣ ಮಾಡಿದ್ದಾರೆ. ಈಗ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಿದ್ದು. ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪಿಎಸ್ಐ ಸುಪ್ರೀತ್ ಅವರು ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು.
ಇದಕ್ಕೂ ಮೊದಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ 2025-26 ನೇ ಶೈಕ್ಷಣಿಕ ವರ್ಷದ ಬಿಳಿ ಸಮವಸ್ತ್ರ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಗಣೇಶ್ ರಾವ್ ಕೇಸರ್ ಕರ್ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು ನಾನು ಓದುವಾಗ ಶಾಲೆಯಲ್ಲಿ ಯಾವುದೇ ಸೌಲಭ್ಯವಿರಲಿಲ್ಲ ನಾನು ಇಂಗ್ಲಿಷ್ ಕಲಿತಿದ್ದು ಪಕ್ಕದ ಮದುವನಹಳ್ಳಿ ಶಾಲೆಯಲ್ಲಿ. ನಮ್ಮ ಗ್ರಾಮದಲ್ಲಿ ಶಾಲೆಯನ್ನು ಅಭಿವೃದ್ಧಿ ಪಡಿಸಬೇಕು,ಬೇರೆಡೆ ಮಕ್ಕಳು ಹೋಗಬಾರದು ಅದಕ್ಕಾಗಿ ನಮ್ಮ ತಂದೆ ತಾಯಿ ಹೆಸರಲ್ಲಿ ದತ್ತು ತೆಗೆದುಕೊಂಡಿದ್ದೇನೆ ಈ ಕಾರ್ಯಕ್ಕೆ ನನ್ನೊಡನೆ ನಮ್ಮ ಗ್ರಾಮದ ನನ್ನ ಸಹಪಾಠಿ ಮಲ್ಲೆಶ್ ಕೈಜೋಡಿಸಿದ್ದಾರೆ ಎಂದು ತಿಳಿಸಿದರು.
ಈ ಬಾರಿ ಶಾಲೆಯಲ್ಲಿ 20 ಮಕ್ಕಳ ದಾಖಲಾತಿ ಹೆಚ್ಚಳವಾಗಿದೆ ನಾನು ಶ್ರೀಮಂತನಲ್ಲ, ಆದರೂ ನಾನು ಹುಟ್ಟಿ ಬೆಳೆದ ಈ ಶಾಲೆಗೆ ಏನಾದರೂ ಮಾಡಬೇಕೆಂಬ ಬಯಕೆ, ಹಾಗಾಗಿ ಅಂಬೇಡ್ಕರ್ ಚಿಂತನೆಯಂತೆ ನಾನು ಓದಿದ ಶಾಲೆಯನ್ನು ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದು ಅಧಿಕೃತವಾಗಿ ದತ್ತು ತೆಗೆದುಕೊಂಡು ಕಾಯಕಲ್ಪ ಮಾಡಲು ಮುಂದಾಗಿದ್ದೇನೆ ಎಂದು ಹೇಳಿದರು.
ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಅಭಿವೃದ್ಧಿ ಮಾಡುವ ಉದ್ದೇಶ ಹೊಂದಿದ್ದೇನೆ, ಈ ಶಾಲೆಯನ್ನು ಸ್ಮಾರ್ಟ್ ಕ್ಲಾಸ್ ಮಾಡಲು ತೀರ್ಮಾನಿಸಿದ್ದೆ. ಅದರಂತೆ ಇಂದು ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಲಾಗಿದೆ. ವಿದ್ಯೆ ಕಲಿತರೆ ನಿಮ್ಮ ಬಳಿ ಯಾವುದೇ ಸಮಸ್ಯೆ ಸುಳಿಯುವುದಿಲ್ಲ ಎಂದು ಮಕ್ಕಳಿಗೆ ತಿಳಿಹೇಳಿದರು.
ಇದೇ ತಿಂಗಳ 24 ಕ್ಕೆ ಶಾಲೆಯಲ್ಲಿ ಕ್ರೀಡಾಕೂಟ ನಡೆಸಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಮಕ್ಕಳು ಓದಿನ ಜೊತೆಗೆ ಆಟ ಪಾಠದಲ್ಲೂ ತೊಡಗಿಸಿ ಕೊಳ್ಳಬೇಕು ಯಾರು ಸಹ ಪುಸ್ತಕ ಪೆನ್ನು ಪೆನ್ಸಿಲ್ ಇಲ್ಲ ಎಂದು ಓದು ನಿಲ್ಲಿಸಬೇಡಿ ಯಾರಿಗಾದರೂ ಪೆನ್ನು ಪುಸ್ತಕ ಇಲ್ಲದಿದ್ದರೆ ಶಿಕ್ಷಕರ ಬಳಿ ಹೇಳಿಕೊಳ್ಳಿ ನಾವು ಒದಗಿಸಿಕೊಡುತ್ತೇವೆ ಎಲ್ಲರೂ ಚೆನ್ನಾಗಿ ಓದಿ ಊರಿಗೆ ಶಾಲೆಗೆ ಹೆಸರು ಕೀರ್ತಿ ತನ್ನಿ ಎಂದು ಕರೆನೀಡಿದರು.
ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪಿಎಸ್ಐ ಸುಪ್ರೀತ್ ಮಾತನಾಡಿ ಹುಟ್ಟಿದ ಊರಿನ ಶಾಲೆಗೆ ಏನಾದರೂ ಸೇವೆ ಮಾಡಬೇಕೆಂಬುದನ್ನು ಗಣೇಶ್ ರಾವ್ ಅವರನ್ನು ನೋಡಿ ಕಲಿಯಬೇಕು ಎಂದು ಮೆಚ್ಚುಗೆಯಿಂದ ಹೇಳಿದರು.
ನಾನು ಸರ್ಕಾರಿ ಶಾಲೆಯಲ್ಲಿ ಓದಿದ್ದು ಇಂತಹ ಪ್ರೋತ್ಸಾಹ ಕೊಡುವ ವವರು ಯಾರು ಇರಲಿಲ್ಲ, ನನ್ನ ವ್ಯಾಪ್ತಿಯ 80 ಹಳ್ಳಿಗಳಲ್ಲಿ ಇಂತಹ ಸಹಕಾರ ನೀಡುವ ಯಾವುದೇ ಶಾಲೆಗಳಿಲ್ಲ ಹಾಗಾಗಿ ನಿಮಗೆ ಪ್ರೋತ್ಸಾಹ ನೀಡಲು ಗಣೇಶ್ ರಾವ್ ಇದ್ದಾರೆ, ಶಿಕ್ಷಣ ನೀಡಲು ಉತ್ತಮ ಶಿಕ್ಷಕರಿದ್ದಾರೆ ಇನ್ನೇನು ಬೇಕು ಸಾಧನೆ ಮಾಡಲು ಇದನ್ನು ಬಳಸಿಕೊಂಡು ಗಣೇಶ ರವರ ಕನಸನ್ನು ನನಸು ಮಾಡಿ ಎಂದು ಕರೆ ನೀಡಿದರು.
ಚಾಮರಾಜನಗರ ಡಿ ಡಿ ಪಿ ಐ ಕಚೇರಿಯ ಡಿ ವೈ ಪಿ ಸಿ ನಾಗೇಂದ್ರ, ಡಯಟ್ ನ ನಾಗರಾಜುರವರು ಮಾತನಾಡಿ ಒಂದು ಶಾಲೆಯನ್ನ ಅಭಿವೃದ್ಧಿ ಮಾಡಿದರೆ ಆ ಗ್ರಾಮದ ಅಭಿವೃದ್ಧಿಯಾಗುತ್ತದೆ ಗಣೇಶ್ ರಾವ್ ಅವರು ಸಿನಿಮಾ ರಂಗದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಹುಟ್ಟೂರಿನ ಶಾಲೆಯನ್ನು ಮರೆತಿಲ್ಲ ಎಂದು ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳ, ಶಾಲೆಯ ಮುಖ್ಯ ಶಿಕ್ಷಕ ವಾಸುದೇವ, ಗ್ರಾಮದ ಮುಖಂಡರುಗಳಾದ ಶಿವಣ್ಣ, ಗುರುಸ್ವಾಮಿ, ಮಲ್ಲಿಕಾರ್ಜುನ, ಶರತ್, ರಾಜಮ್ಮ, ಪುಷ್ಪವತಿ, ಸುರೇಶ್ ಗೌಡ, ಮಲ್ಲೇಶ್ ಮತ್ತಿತರರು ಹಾಜರಿದ್ದರು.
ಮೈಸೂರು,ಮಾ.5: ಜಿಲ್ಲೆಯ ಎಚ್.ಡಿ.ಕೋಟೆ ಸರ್ಕಾರಿ ಶಾಲೆಯ ಲೈಂಗಿಕ ಕಿರುಕುಳದ ಆರೋಪಿ ಮುಖ್ಯ ಶಿಕ್ಷಕ ಗಿರೀಶ್ ನನ್ನು ಬಂಧಿಸಲಾಗಿದೆ.
ಆರೋಪಿ ಗಿರೀಶ್ ಹುಬ್ಬಳ್ಳಿಯ ಅಜ್ಞಾತ ಸ್ಥಳದಲ್ಲಿ ಅಡಗಿದ್ದ.ಎಚ್.ಡಿ.ಕೋಟೆ ಪೊಲೀಸರು ಹುಡುಕಿ ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಮೈಸೂರಿನತ್ತ ಕರೆತರುತ್ತಿದ್ದಾರೆ.
ಶಾಲೆಯಲ್ಲೇ ಈ ಮುಖ್ಯ ಶಿಕ್ಷಕ ಮಹಾಶಯ ಮತ್ತು ಬರುವ ಮಾತ್ರೆ ಕೊಟ್ಟು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.ಈ ಬಗ್ಗೆ ಮಕ್ಕಳು ಪೋಷಕರಿಗೆ ತಿಳಿಸಿದ್ದರು.ನಂತರ ಪೋಷಕರು ಪ್ರತಿಭಟನೆ ಮಾಡಿ ಶಿಕ್ಷಕನ ಬಂಧನಕ್ಕೆ ಆಗ್ರಹಿಸಿದ್ದರು.
ಈ ಮುಖ್ಯ ಶಿಕ್ಷಕನ ವಿರುದ್ಧ ಪೊಕ್ಸೊ ಪ್ರಕರಣ ದಾಖಲಾಗಿತ್ತು.