ಜನರ ಮನಸೆಳೆದ ಗೊಂಬೆ ಪ್ರದರ್ಶನ
ಚಾಮರಾಜನಗರ: ಮೈಸೂರು ಮಾತ್ರವಲ್ಲದೆ ಸುತ್ತಮುತ್ತಲ ಜಿಲ್ಲೆಗಳಲ್ಲೂ ಜನ ದಸರಾ ಬೊಂಬೆಗಳನ್ನ ಕೂರಿಸುವುದು ಪ್ರದರ್ಶಿಸುವುದು ಇದ್ದೇ ಇರುತ್ತೆ,ಅದೇ ರೀತಿ ಗಡಿಜಿಲ್ಲೆ ಚಾಮರಾಜನಗರದಲ್ಲೂ ಗೊಂಬೆ ಪ್ರದರ್ಶನ ಗಮನ ಸೆಳೆಯುತ್ತಿದೆ.
ಮೈಸೂರು ದಸರಾ ಹಬ್ಬದ ಹಿನ್ನೆಲೆಯಲ್ಲಿ ಚಾಮರಾಜನಗರದ ಮನೆಗಳಲ್ಲಿ ಗೊಂಬೆ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದೆ.
ಚಾಮರಾಜನಗರ ಪಟ್ಟಣ ನಿವಾಸಿ ಭಾನು ಲೋಕೆಶ್ ಎಂಬುವವರ ನಿವಾಸದಲ್ಲಿ ಕೂರಿಸಲಾದ ಗೊಂಬೆಗಳು ಮನೋಹರವಾಗಿದೆ.
ಕನ್ನಡ ನಾಡಿನ ವಿಶೇಷ ಹಬ್ಬವಾಗಿರುವ ದಸರಾದಲ್ಲಿ ಗೊಂಬೆಗಳ ಮೂಲಕ ಪರಂಪರೆ,ಸಂಸ್ಕೃತಿ, ಸಂಸ್ಕಾರ ಮತ್ತು ಸತ್ಕಾರ್ಯಗಳ ಪರಿಚಯ ಮಾಡುವುದು ಪ್ರಮುಖ ಉದ್ದೇಶವಾಗಿದೆ.
ಜನರ ಮನಸೆಳೆದ ಗೊಂಬೆ ಪ್ರದರ್ಶನ Read More