ಮನೆಯ ಮುಂಬಾಗಿಲು ಮುರಿದು ೧ ಕೋಟಿ ಚಿನ್ನಾಭರಣ ದೋಚಿದ ಕಳ್ಳರು

ಮೈಸೂರು,ನವೆಂಬರ್.೧: ಮನೆಯ ಮುಂಬಾಗಿಲನ್ನು ಮುರಿದು ಒಳ ನುಗ್ಗಿರುವ ಕಳ್ಳರು ಸುಮಾರು ೧ ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ದೋಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ದಟ್ಟಗಳ್ಳಿ ೩ನೇ ಹಂತ, ಕನಕದಾಸನಗರ ’ಜೆ’ಬ್ಲಾಕ್‌ ನಿವಾಸಿ ಸಾಫ್ಟ್‌ವೇರ್ ಎಂಜಿನಿಯರ್ ವಿನಯ್ ಕುಮಾರ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.

ಅ.೨೦ ರಂದು ವಿನಯ್ ಪತ್ನಿ ಮತ್ತು ಮಕ್ಕಳೊಂದಿಗೆ ಚಿಕ್ಕಮಗಳೂರಿಗೆ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು.

ಅವರು ಅ.೨೧ ರಂದು ಮಧ್ಯಾಹ್ನ ೩ ಗಂಟೆಗೆ ಹಿಂತಿರುಗಿದ್ದಾರೆ.ಆಗ ಮನೆಯ ಮುಂಭಾಗದ ಬಾಗಿಲು ತೆರೆದಿರುವುದನ್ನು ನೋಡಿ ವಿನಯ್ ಆತಂಕಗೊಂಡಿದ್ದಾರೆ.

ಮನೆಯೊಳಗೆ ಹೋಗಿ ನೋಡಿದಾಗ ಮಲಗುವ ಕೋಣೆಯಲ್ಲಿದ್ದ ವಾರ್ಡ್ ರೋ ಬ್‌ನಲ್ಲಿ ಇಟ್ಟಿದ್ದ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿರುವುದನ್ನು ಗೊತ್ತಾಗಿದೆ.

ಕಳ್ಳರು ಸುಮಾರು ೭೦೦ ಗ್ರಾಂ ತೂಕದ ಚಿನ್ನದ ಆಭರಣಗಳು, ನಾಲ್ಕು ಸರಗಳು, ಮೂರು ಆಭರಣ ಸೆಟ್‌ಗಳು, ಐದು ಬಳೆಗಳು, ಎಂಟು ಕಿವಿಯ ವಾಲೆಗಳು, ೧೦ ಉಂಗುರಗಳು ಮತ್ತು ೩ ಕೆಜಿ ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ.

ತಕ್ಷಣ, ವಿನಯ್ ಸರಸ್ವತಿಪುರಂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶ್ವಾನ ದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಬಂದು ಮಹಜರು ನಡೆಸಿದರು.

ಸರಸ್ವತಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮನೆಯ ಮುಂಬಾಗಿಲು ಮುರಿದು ೧ ಕೋಟಿ ಚಿನ್ನಾಭರಣ ದೋಚಿದ ಕಳ್ಳರು Read More

ಪ್ರಾಧ್ಯಾಪಕರ ಮನೆಯಲ್ಲಿ ನಗದು ಸೇರಿ 15.60 ಲಕ್ಷ ಮೌಲ್ಯದ ಚಿನ್ನಾಭರಣ ಕಳುವು

ಮೈಸೂರು: ಐನಾತಿ ಕಳ್ಳರು ಮನೆಯ ಕಬೋರ್ಡ್ ನಲ್ಲಿದ್ದ ನಗದು ಸೇರಿದಂತೆ 15.60 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ವಿಜಯನಗರ 4 ನೇ ಹಂತದಲ್ಲಿ ಈ ಘಟನೆ ನಡೆದಿದ್ದು,ಮಂಡ್ಯ ಜಿಲ್ಲೆ ವಿ.ಸಿ.ಫಾರಂ ನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುವ ಡಾ.ಸುಮಾ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.

ಮನೆಯಲ್ಲಿ ಅತ್ತೆ ಹಾಗೂ ಮಾವ ಇದ್ದರೂ ಮೊದಲ ಮಹಡಿಯಲ್ಲಿದ್ದ ಕಬೋರ್ಡ್ ನಿಂದ ಕಳ್ಳರು ಚಿನ್ನಾಭರಣಗಳನ್ನ ದೋಚಿ ಪರಾರಿಯಾಗಿದ್ದಾರೆ.

ಈ ಸಂಭಂಧ ವಿಜಯನಗರ ಪೊಲೀಸ್ ಠಾಣೆಗೆ ಡಾ.ಸುಮಾ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪ್ರಾಧ್ಯಾಪಕರ ಮನೆಯಲ್ಲಿ ನಗದು ಸೇರಿ 15.60 ಲಕ್ಷ ಮೌಲ್ಯದ ಚಿನ್ನಾಭರಣ ಕಳುವು Read More

ಪೊಲೀಸರ ಕಂಡು ಎಸ್ಕೇಪ್ ಆದ ಕಳ್ಳ: ಕದ್ದ ಬ್ಯಾಗ್ ನಲ್ಲಿತ್ತು7.20 ಲಕ್ಷ ಬೆಲೆಯ ಚಿನ್ನಾಭರಣ

ಮೈಸೂರು: ಗಸ್ತಿನಲ್ಲಿದ್ದ ಪೊಲೀಸರ ಕಂಡೊಡನೆ ಸ್ಕೂಟರ್ ಬಿಟ್ಟು ಓಡಿಹೋದ ಕಳ್ಳನ ಬ್ಯಾಗ್ ನಲ್ಲಿ ನಗದು ಸೇರಿ 7.20 ಲಕ್ಷ ಮೌಲ್ಯದ ಚಿನ್ನಾಭರಣ ದೊರೆತಿದೆ.

ಯಾರದ್ದೊ ಮನೆಯಲ್ಲಿ ಕಳ್ಳತನ ಮಾಡಿ ಮಾಲು ಸಮೇತ ಎಸ್ಕೇಪ್ ಆಗುತ್ತಿದ್ದ ವೇಳೆ ಪೊಲೀಸರು ಎದುರಾಗಿದ್ದಾರೆ.ಹೆದರಿದ ಕಳ್ಳ ತಪ್ಪಿಸಿಕೊಂಡ,ಆದರೆ ಆತ ಕದ್ದ ಮಾಲು ಪೊಲೀಸರಿಗೆ ಸಿಕ್ಕಿದೆ.

ಮುಂಜಾನೆ 4.10 ಯಲ್ಲಿ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಟಗಳ್ಳಿ ಸಿಗ್ನಲ್ ಬಳಿ ಈ ಘಟನೆ ನಡೆದಿದೆ.

ವಿಜಯನಗರ ಠಾಣೆ ಸಿಬ್ಬಂದಿ ಅನಂತ್ ಅವರು ರಾತ್ರಿ ಪಾಳಿ ಗಸ್ತಿನಲ್ಲಿದ್ದರು. ಮುಂಜಾನೆ ಹೂಟಗಳ್ಳಿ ಬಳಿ ಗಸ್ತಿನಲ್ಲಿದ್ದಾಗ ಅಸ್ಪಷ್ಟ ನಂಬರ್ ಪ್ಲೇಟ್ ಇದ್ದ ಸ್ಕೂಟರ್ ನಲ್ಲಿ ವ್ಯಕ್ತಿಯೊಬ್ಬ ತೆರಳುತ್ತಿದ್ದ.

ಈ ವೇಳೆ ಪೊಲೀಸರು ಆತನ ಅಡ್ಡಗಟ್ಟಿ ನಿಲ್ಲಿಸಿದಾಗ ಕಳ್ಳ ಓಡಿಹೋಗಿದ್ದಾನೆ, ಪೊಲೀಸರೂ ಕೂಡಾ ಆತನ ಬೆನ್ನಟ್ಟಿದ್ದಾರೆ.ಆದರೆ ಆತ ಪರಾರಿಯಾಗಿದ್ದ.

ನಂತರ ಸ್ಕೂಟರ್ ಬಳಿ ಬಂದು ಪರಿಶೀಲಿಸಿದಾಗ ಬ್ಯಾಗ್ ದೊರೆತಿದೆ.ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿ ನಂತರ ಸ್ಕೂಟರ್ ಹಾಗೂ ಬ್ಯಾಗ್ ಠಾಣೆಗೆ ತಂದು ತೆರೆದು ನೋಡಿದಾಗ 50 ಸಾವಿರ ನಗದು ಹಾಗೂ 90 ಗ್ರಾಂ ಚಿನ್ನಾಭರಣ ಇದ್ದುದು ಕಂಡು ಬಂದಿದೆ.

ಈ ಸಂಬಂಧ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ಕಳ್ಳನ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಪೊಲೀಸರ ಕಂಡು ಎಸ್ಕೇಪ್ ಆದ ಕಳ್ಳ: ಕದ್ದ ಬ್ಯಾಗ್ ನಲ್ಲಿತ್ತು7.20 ಲಕ್ಷ ಬೆಲೆಯ ಚಿನ್ನಾಭರಣ Read More

ಜನ ಸಾಮಾನ್ಯರಿಗೆ ಕೈಗೆಟುಕದಂತಾದ ಚಿನ್ನ

ಮುಂಬೈ: ಹೆಣ್ಣುಮಕ್ಕಳ ಅತಿ ನೆಚ್ಚಿನ ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನ ಸಾಮಾನ್ಯರಿಗೆ ಕೈಗೆಟುಕದಂತಾಗಿದೆ.

ಮುಂಬೈನ ಸ್ಪಾಟ್ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ10 ಗ್ರಾಂಗೆ 90,500 ರಿಂದ ರೂ. 90,800 ರೂಪಾಯಿಗಳವರೆಗೂ ವಹಿವಾಟಾಗುತ್ತಿದೆ.

ಶುಕ್ರವಾರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿ ಪ್ರತಿ ಔನ್ಸ್‌ಗೆ $3,000 ದಾಟಿದ ಅಂತರರಾಷ್ಟ್ರೀಯ ಚಿನ್ನದ ಬೆಲೆಗಳು ದೇಶೀಯ ಬೇಡಿಕೆಯ ಮೇಲೆ ಪರಿಣಾಮ ಬೀರಿವೆ.

ಮದುವೆ ಸೀಸನ್ ಪ್ರಾರಂಭವಾಗಿದೆ,ಇತ್ತ ಚಿನ್ನದ ಬೆಲೆ ಏರುತ್ತಲೇ ಇದೆ, ಪ್ರಸ್ತುತ ಹೆಚ್ಚಿನ ಬೆಲೆಗಳಲ್ಲಿ, ಪರಿಮಾಣದ ದೃಷ್ಟಿಯಿಂದ ಚಿನ್ನದ ಅತಿದೊಡ್ಡ ಖರೀದಿದಾರ ಸಮುದಾಯವಾಗಿರುವ ಕಡಿಮೆ ಮತ್ತು ಮಧ್ಯಮ-ಆದಾಯದ ಜನರಿಗೆ, ಚಿನ್ನ ಕೈಗೆಟುಕುತ್ತಿಲ್ಲ

ಐಐಎಂ ಅಹಮದಾಬಾದ್‌ನ ಇಂಡಿಯನ್ ಗೋಲ್ಡ್ ಪಾಲಿಸಿ ಸೆಂಟರ್ 2022 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಶ್ರೀಮಂತರು ಮಾತ್ರ ಚಿನ್ನವನ್ನು ಖರೀದಿಸುತ್ತಾರೆ ಎಂಬ ಸಾಮಾನ್ಯ ಗ್ರಹಿಕೆಗೆ ವ್ಯತಿರಿಕ್ತವಾಗಿ, ಶೇಕಡಾ 56 ರಷ್ಟು ಚಿನ್ನವನ್ನು ವಾರ್ಷಿಕವಾಗಿ 2 ಲಕ್ಷದಿಂದ ರೂ. 10 ಲಕ್ಷದವರೆಗೆ ಗಳಿಸುವ ಜನರೂ ಕೂಡಾ ಖರೀದಿಸಿದ್ದಾರೆ.

2022 ರಿಂದ, ಚಿನ್ನದ ಬೆಲೆ ದ್ವಿಗುಣಗೊಂಡಿದೆ, ಆದರೆ ಈ ವರ್ಗದ ಖರೀದಿದಾರರ ಉಳಿತಾಯವು ದ್ವಿಗುಣಗೊಂಡಿಲ್ಲ, ಹೆಚ್ಚಿನ ಚಿನ್ನವನ್ನು ಖರೀದಿಸುವ ಅವರ ಸಾಮರ್ಥ್ಯವನ್ನು ಚಿನ್ನದ ದರ ಏರಿಕೆ ಕಡಿಮೆ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಒಟ್ಟಾರೆ‌ ಬಡ ಜನತೆ ಮಕ್ಕಳ ವಿವಾಹ ಮತ್ತಿತರ ಹಬ್ಬ-ಹರಿದಿನಗಳಿಗೆ ಚಿನ್ನ ಖರೀದಿಸುವುದನ್ನೆ ಮರೆಯಬೇಕಿದೆ.

ಜನ ಸಾಮಾನ್ಯರಿಗೆ ಕೈಗೆಟುಕದಂತಾದ ಚಿನ್ನ Read More