ಚಿನ್ಮಯ ಮಿಷನ್ ನಲ್ಲಿ ದತ್ತ ಜಯಂತಿ ಆಚರಣೆ
ಮೈಸೂರು: ಮೈಸೂರಿನ ಗೋಕುಲಮ್ ನಲ್ಲಿರುವ ಚಿನ್ಮಯ ಮಿಷನ್ ನಲ್ಲಿ ದತ್ತ ಜಯಂತಿಯನ್ನು ಶ್ರದ್ಧಾ,ಭಕ್ತಿಯಿಂದ ಆಚರಿಸಲಾಯಿತು.
ಶ್ರೀ ಗುರು ದತ್ತಾತ್ರೇಯ ಸ್ವಾಮಿಗೆ ಬೆಳಿಗ್ಗೆ ಕ್ಷೀರಾಭಿಷೇಕ ನೆರವೇರಿಸಿ ನಂತರ ಅಷ್ಟೋತ್ತರ, ಪಾದುಕ ಪೂಜೆ ಮಾಡಲಾಯಿತು.
ಈ ವೇಳೆ ಸ್ವಾಮಿ ಕಾಶಿಕಾನಂದ ಜಿ ಯವರು ದತ್ತಾತ್ರೇಯ ಮೂರ್ತಿಗೆ ಕ್ಷೀರಭಿಷೇಕವನ್ನು ನೆರವೇರಿಸಿದರು.
ನಂತರ ಭಜನೆ,ಮಹಾ ಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಚಿನ್ಮಯ ಮಿಷನ್ ಮಂಡ್ಯ ಕೇಂದ್ರದ ಸ್ವಾಮಿ ಆದಿತ್ಯನಂದಜಿ ಅವರು ದತ್ತ ಜಯಂತಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ದತ್ತಾತ್ರೇಯ ಪೂಜೆ ಕುರಿತು ಭಕ್ತರಿಗೆ ವಿವರಿಸಿದರು.ನೂರಾರು ಮಂದಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.