ಸಂಕ್ರಾಂತಿ ಹಬ್ಬದಲ್ಲಿ ಗೋಪೂಜೆಗೆ ವಿಶೇಷ ಸ್ಥಾನ : ಮಾ ವಿ ರಾಮ್ ಪ್ರಸಾದ್
ಮೈಸೂರು: ಸಂಕ್ರಾಂತಿ ಹಬ್ಬದಲ್ಲಿ ಗೋ ಪೂಜೆಗೆ ವಿಶೇಷ ಸ್ಥಾನವಿದೆ ಎಂದು ನಗರಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮ್ ಪ್ರಸಾದ್ ತಿಳಿಸಿದರು.
ನಗರ ಪ್ರದೇಶಗಳಲ್ಲಿನ ಜನರಿಗೆ ಹಸುಗಳ ಜತಗಿನ ಒಡನಾಟ ಹೆಚ್ಚಿಸುವ ದೃಷ್ಟಿಯಿಂದ
ಮಾ ವಿ ರಾಮ್ ಪ್ರಸಾದ್ ಅವರ ನೇತೃತ್ವದಲ್ಲಿ
ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಗೋ ಪೂಜೆ ವೇಳೆ ಅವರು ಮಾತನಾಡಿದರು.

ಚಾಮುಂಡಿಪುರಂನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ವೇಣುಗೋಪಾಲಸ್ವಾಮಿ ದೇಗುಲ ಸಮೀಪ ಗೋವುಗಳಿಗೆ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಎಳ್ಳು ಬೆಲ್ಲ ವಿತರಿಸಲಾಯಿತು.
ಮಾತು ಮುಂದುವರಿಸಿದ ಮಾ ವಿ ರಾಮಪ್ರಸಾದ್,ಮನುಷ್ಯ ಹುಟ್ಟಿನಿಂದ ಸಾವಿನ ವರೆಗೂ ಹಸು ಹಾಲು ಕುಡಿಯುತ್ತಾನೆ, ಇದರ ಜೊತೆಗೆ ರೈತನ ಒಡನಾಡಿಯಾಗಿಯೂ ಗೋವು ಶ್ರಮಿಸುತ್ತದೆ, ಮನೆಯಲ್ಲಿ ಹಸುವಿದ್ದರೆ ಕಾಮಧೇನು ವಿನಂತೆ ಐಶ್ವರ್ಯ ನೀಡುತ್ತದೆ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಕಡಿಮೆ ಹಾಲು ನೀಡುವ ಕಾರಣ ದಿಂದ ದೇಶೀ ಹಸುಗಳ ಸಾಕಣೆ ಕಡಿಮೆಯಾಗುತ್ತಿದೆ,ಈ ಸಂದರ್ಭದಲ್ಲಿ ಗೋಜನಿತ ವಸ್ತುಗಳ ಬಳಕೆಗೆ ಉತ್ತೇಜನ ನೀಡಿ ಅದರ ಉಳಿವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಚಾಮರಾಜಪೇಟೆಯಲ್ಲಿ ಹಸುಗಳಿಗೆ ಹಿಂಸೆ ನೀಡಿರುವ ಘಟನೆಯ ಬಗ್ಗೆ ತಿಳಿದು ಅತ್ಯಂತ ಆಘಾತವಾಗಿದೆ. ಇದನ್ನು ಕೇವಲ ಗೋವಿನ ಹಿಂಸೆಯಾಗಿ ಪರಿಗಣಿಸುವುದಿಲ್ಲ; ಇದು ಸನಾತನ ಧರ್ಮದ ಅಸ್ತಿತ್ವದ ಪ್ರಶ್ನೆಯಾಗಿದೆ ಎಂದು ರಾಮ ಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ಈ ಕೃತ್ಯವನ್ನು ಮುಂದಿನ ಅಪಾಯದ ಸೂಚನೆ ಎಂದು ಭಾವಿಸುತ್ತೇನೆ.ಇದು ಅತ್ಯಂತ ಖಂಡನೀಯ,ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಿದ್ಯಾ ಅರಸ್, ಸೌಭಾಗ್ಯ ಮೂರ್ತಿ, ಉಮಾಶಂಕರ್, ಮಂಜುನಾಥ್, ಸೋಮೇಶ್, ಸಂದೀಪ್ ಸಿ, ಧರ್ಮೇಂದ್ರ, ಅರವಿಂದ್, ಶಾಂತ ಸೋಮಶೇಖರ್, ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ಪುನೀತ್,
ತೀರ್ಥ, ಬಂಡಿಕೇರಿ ಗೋಪಾಲಕರ ಸಂಘದ ಸದಸ್ಯರು ಹಾಜರಿದ್ದರು.