ಗೆಜ್ಜಗಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಗ್ಗಿ ಹಬ್ಬ ಆಚರಣೆ
(ವರದಿ:ನಾಗರಾಜು)
ಮೈಸೂರು: ಮೈಸೂರು ಜಿಲ್ಲೆಯ ಗೆಜ್ಜಗಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಗ್ಗಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಸುಗ್ಗಿ ಹಬ್ಬವನ್ನು ಭಾರತ ದೇಶದಾದ್ಯಂತ ಅನೇಕ ಹೆಸರಲ್ಲಿ ಆಚರಿಸಲಾಗುತ್ತದೆ ಹಾಗೆಯೇ ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಯಂದು ಆಚರಿಸುವ ಈ ಹಬ್ಬವು ವರ್ಷದ ಮೊದಲ ಹಬ್ಬವಾಗಿದೆ.
ರೈತರು ತಾವು ಬೆಳೆದ ಬೆಳೆಗಳನ್ನು ಒಂದೆಡೆ ಹರವಿ ಸುತ್ತಲೂ ಬಳಸುವ ಸುಗ್ಗಿ ಸಲಕರಣೆಗಳನ್ನು ಇಟ್ಟು ಪೂಜೆ ಮಾಡುತ್ತಾರೆ.
ಅದೇ ರೀತಿಯಲ್ಲೇ ಈ ಶಾಲೆಯಲ್ಲಿ ಮಕ್ಕಳು ದವಸ,ಧನ್ಯಗಳನ್ನು ರಾಶಿ ಮಾಡಿ ಪೂಜಿಸಿದರು.

ಎಲ್ಲರಿಗೂ ಸಮೃದ್ಧ ಫಸಲನ್ನು ನೀಡಿ,ಹಸಿವನ್ನು ನೀಗಿಸಲು ನೆರವಾಗುವ ದೇವತೆಗಳಿಗೆ ಕೃತಜ್ಞತೆಯನ್ನು ಸೂಚಿಸುವ ಹಬ್ಬವಾಗಿ ಆಚರಿಸಲಾಗುತ್ತದೆ.ಅದರಂತೆ ವದ್ಯಾರ್ಥಿನಿಯರು ಒಲೆ ಸಿದ್ದಪಡಿಸಿ ಅದಕ್ಕೆ ಪೂಜೆ ಮಾಡಿ ಸಿಹಿ ತಯಾರಿಸಿ
ಕೃತಜ್ಞತೆ ಸಲ್ಲಿಸಿದರು.

ಹೆಣ್ಣು – ಗಂಡು ಮಕ್ಕಳು ಸಾಂಪ್ರದಾಯಿಕ ಉಡುಪು ಧರಿಸಿ ಈ ಹಬ್ಬದಲ್ಲಿ ಪಾಲು ಗೊಂಡಿದ್ದರು.ಕೆಲ ವಿದ್ಯಾರ್ಥಿನಿಯರು ಅಕ್ಕಿ,ಬೇಳೆಯನ್ನು ಮೊರದಲ್ಲಿ ಹಾಕಿ ಕೇರುತ್ತಾ ಖುಷಿಪಟ್ಟರು.

ಮಕ್ಕಳಲ್ಲಿ ಈ ವಿಶಿಷ್ಟ ಹಬ್ಬದ ಹಿನ್ನೆಲೆ ಮತ್ತು ಪ್ರಾಮುಖ್ಯತೆಯ ಅರಿವು ಮೂಡಿಸಲು ಗೆಜ್ಜಗಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಂಭ್ರಮದಿಂದ ಸುಗ್ಗಿ ಹಬ್ಬವನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳು ಖುಷಿಯಿಂದ ಪಾಲ್ಗೊಂಡು ಸಂಭ್ರಮಿಸಿದುದನ್ನು ನೋಡಿ ಸ್ಥಳೀಯರು ಕೂಡಾ ಸಂತಸ ವ್ಯಕ್ತಪಡಿಸಿದರು.
ಗೆಜ್ಜಗಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಗ್ಗಿ ಹಬ್ಬ ಆಚರಣೆ Read More