ಗ್ಯಾಸ್ ಗೀಸರ್ ಸೋರಿಕೆ:ಸಹೋದರಿಯರ ದುರ್ಮರಣ
ಮೈಸೂರು: ಸ್ನಾನದ ಮನೆಯಲ್ಲಿದ್ದ ಗ್ಯಾಸ್ ಗೀಸರ್ ಸೋರಿಕೆಯಾಗಿ ಉಸಿರುಗಟ್ಟಿ ಸಹೋದರಿಯರು ಮೃತಪಟ್ಟ ದಾರುಣ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿ ದುರಂತ ಸಂಭವಿಸಿದೆ.
ಪಿರಿಯಾಪಟ್ಟಣದ ಕಾವಾಡಗೇರಿಯಲ್ಲಿ ಈ ಘಟನೆ ನಡೆದಿದ್ದು,ಗುಲ್ಫರ್ಮ್ ತಾಜ್ (23), ಸಿಮ್ರಾನ್ ತಾಜ್ (20) ಮೃತಪಟ್ಟ ಸಹೋದರಿಯರು.
ಗುಲ್ಫಾರ್ಮ್, ಸಿಮ್ರಾನ್ ತಾಜ್ ಇಬ್ಬರೂ ಒಟ್ಟಿಗೆ ಸ್ನಾನದ ಕೋಣೆಗೆ ಹೋದಾಗ ಘಟನೆ ನಡೆದಿದೆ.ಸ್ನಾನದ ಕೋಣೆಗೆ ಹೋದವರು ಬಹಳ ಸಮಯವಾದರೂ ಹೊರಗೆ ಬಂದಿಲ್ಲ.
ಅನುಮಾನಗೊಂಡ ತಂದೆ ಅಲ್ತಾಫ್ ಬಾಗಿಲು ಬಡಿದಿದ್ದಾರೆ.ಆಗಲೂ ಬಾಗಿಲು ತೆಗೆದಿಲ್ಲ ತೆರೆದು ನೋಡಿದಾಗ ಮಕ್ಕಳಿಬ್ಬರು ಅರೆಪ್ರಜ್ಞಾವಸ್ಥೆಯಲ್ಲಿದ್ದುದು ಗೊತ್ತಾಗಿದೆ.
ತಕ್ಷಣ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆದರೆ ಇಬ್ಬರೂ ಸಹೋದರಿಯರು ಮೃತಪಟ್ಟಿದ್ದಾರೆ.
ಗ್ಯಾಸ್ ಗೀಸರ್ ಸೋರಿಕೆ:ಸಹೋದರಿಯರ ದುರ್ಮರಣ Read More