ನಿಲ್ಲದ ಗಾಂಜಾ, ಅಕ್ರಮ ಮಧ್ಯ ಮಾರಾಟ: ನಿಯಂತ್ರಣಕ್ಕೆ ಮುಖಂಡರ ಆಗ್ರಹ

(ವರದಿ: ಸಿದ್ದರಾಜು, ಕೊಳ್ಳೇಗಾಲ)


ಕೊಳ್ಳೇಗಾಲ: ಕೊಳ್ಳೇಗಾಲದಲ್ಲಿ ಅಕ್ರಮ ಗಾಂಜಾ ಹಾವಳಿ, ಅಕ್ರಮ ಮಧ್ಯ ಮಾರಾಟ ಹೆಚ್ಚಾಗಿದ್ದು,ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಸಿ/ ಎಸ್.ಟಿ ಹಿತರಕ್ಷಣಾ ಕುಂದು ಕೊರತೆ ಸಭೆಯಲ್ಲಿ ಪ್ರತಿಧ್ವನಿಸಿತು.

ಸಾಕಷ್ಟು ಸಭೆಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಈ ಬಗ್ಗೆ ದೂರುತ್ತಲೆ ಬಂದಿದ್ದಾರೆ. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ನಿಯಂತ್ರಿಸುವಲ್ಲಿ ಇನ್ನೂ ವಿಫಲರಾಗಿದ್ದಾರೆ,ಹಾಗಾಗಿ ಗುರುವಾರ ನಡೆದ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಸಿ/ ಎಸ್.ಟಿ ಹಿತರಕ್ಷಣಾ ಕುಂದು ಕೊರತೆ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

ಈ ಹಿಂದೆ ನಗರಸಭೆಯ ಸಾಮಾನ್ಯ ಸಭೆಯೊಂದರಲ್ಲಿ ಭಾಗವಹಿಸಿದ್ದ ಶಾಸಕರು ಜಿಲ್ಲಾಧಿಕಾರಿಗಳ ಮುಂದೆ ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದ್ದರು, ಆದರೂ ಪಟ್ಟಣದಲ್ಲಿ ಗಾಂಜಾ ಹಾವಳಿ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂಬುದು ನಿನ್ನೆಯ ಸಭೆಯಲ್ಲಿ ಪಾಲ್ಗೊಂಡಿದ್ದ ದಲಿತ ಮುಖಂಡರು ಬೇಸರ ವ್ಯಕ್ತಪಡಿಸಿದ್ದರಿಂದ ದೃಢವಾಗಿದೆ.

ವೃತ್ತ ನಿರೀಕ್ಷಕ ಶಿವಮಾದಯ್ಯ ನೇತೃತ್ವದಲ್ಲಿ ಗುರುವಾರ ಪಟ್ಟಣ ಠಾಣೆ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮುಖಂಡ ಸನತ್ ಕುಮಾರ್, ಪಟ್ಟಣದ ಹೊರವಲಯದಲ್ಲಿರುವ ಬೈಪಾಸ್ ಗಳಲ್ಲಿ ಯುವಕರು ರಾತ್ರಿ ವೇಳೆ ಅಕ್ರಮ ಮಧ್ಯ ಹಾಗೂ ಗಾಂಜಾ ಸೇವನೆಯಿಂದ ಕಿಕ್ಕೇರಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಬಸ್ತಿಪುರ ರವಿ ಮಾತನಾಡಿ ಬಸ್ತಿ ಪುರದ ಶನೇಶ್ವರ ದೇವಸ್ಥಾನದ ಸುತ್ತಮುತ್ತ ಗಾಂಜಾ ಸೇವನೆ ಹಾವಳಿ ಹೆಚ್ಚಾಗಿದೆ ಇದರಿಂದ ಸಣ್ಣ ವಯಸ್ಸಿನ ಯುವಕರು ಗಾಂಜಾ ಸೇವನೆ ಮಾಡುತ್ತಿದ್ದಾರೆ ಈ ಚಟಕ್ಕೆ ಹೆಚ್ಚು ಹೆಚ್ಚು ಯುವಕರು ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಆದಿ ಜಾಂಬವ ತಾಲೂಕು ಸಂಘದ ಅಧ್ಯಕ್ಷ ಬಾಲರಾಜು ಮಾತನಾಡಿ ಅಕ್ರಮ ಮಧ್ಯ ಮಾರಾಟ ಮಾಡುವವರಿಗೆ ಸರಬರಾಜು ಮಾಡುವ ಬಾರ್ ನವರು ರಾಜಾರೋಷವಾಗಿ ತಿರುಗಾಡಿಕೊಂಡಿರುವುದು, ನಾವು ಜೈಲಲ್ಲಿರುವುದು ಎಂದು ಆಸಮಾದಾನ ವ್ಯಕ್ತಪಡಿಸಿದರು

ಸಿಎಲ್.7, ಸಿ ಎಲ್. 2 ವೈನ್ ಶಾಪ್ ಗಳಿಗೆ ಇಲ್ಲಿ ವ್ಯತ್ಯಾಸವಿಲ್ಲ ಎಲ್ಲಾ ವೈನ್ ಶಾಪ್, ಗಳಲ್ಲೂ ಕುಡಿಯಲು ಅವಕಾಶ ನೀಡುತ್ತಾರೆ ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಮಾತ್ರ ಕುಡಿಯಲು ಅವಕಾಶ ನೀಡಬೇಕು ಆದರೆ ಇಲ್ಲಿ ವೈನ್ ಶಾಪ್ ಗಳಲ್ಲಿ ಜನ ನಿಂತು ಕುಡಿಯುತ್ತಾರೆ. ದೀಪಾ ವೈನ್ಸ್ ಸುತ್ತ ಕುಳಿತು ಕುಡಿಯುತ್ತಾರೆ, ಅದೇ ರೀತಿ ಶ್ರೀನಿವಾಸ್ ಬಾರ್ ನ ಮುಂದಿನ ಕಟ್ಟಡದ ಮುಂದೆಯೂ ಕುಳಿತು ಕುಡಿಯುತ್ತಾರೆ ಎಂದು ಮುಖಂಡ ಸಿದ್ದಪ್ಪಾಜಿ ಆರೋಪಿಸಿದರು.

ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಅದರ ಮೊಗ್ಗುಲಲ್ಲಿ ಇರುವ ಪೌರಕಾರ್ಮಿಕರ ಕಾಲೋನಿಗೆ ಇಂದಿನ ಜಿಲ್ಲಾಧಿಕಾರಿಗಳು ಮನವಿ ಮೇರಿಗೆ 30 ಅಡಿ ರಸ್ತೆ ಬಿಡಲು ಆದೇಶ ನೀಡಿದ್ದು ಅದರಂತೆ 30 ಅಡಿ ಜಾಗ ಬಿಟ್ಟು ಕಾಂಪೌಂಡ್ ನಿರ್ಮಿಸಲಾಗಿದೆ ಸರ್ಕಾರದಿಂದ ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾಗಿ ಶಾಸಕರು ಗುದ್ದಲಿ ಪೂಜೆ ನಡೆಸಿದ್ದಾರೆ ಆದರೂ ಕೂಡ ಕೆಲವರು ತೊಂದರೆ ಕೊಡುತ್ತಿದ್ದಾರೆ ಆ ಸಮಾಜದ ರಕ್ಷಣೆಗೆ ನೀವು ನಿಲ್ಲಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ದಿಲೀಪ್ ಸಿದ್ದಪ್ಪಾಜಿ ಪೊಲೀಸರನ್ನು ಅಗ್ರಹಿಸಿದರು. ಹಾಗೂ ವಯಸ್ಸಾದ ಮತ್ತು ಸನ್ನಡತೆಯುಳ್ಳ ವ್ಯಕ್ತಿಗಳನ್ನು ರೌಡಿ ಶೀಟ್ ನಿಂದ ಕೈಬಿಡಬೇಕೆಂದು ಮನವಿ ಮಾಡಿದರು.

ನಾಗರಿಕ ಹಿತ ರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ನಟರಾಜು ಮಾಳಿಗೆ ಮಾತನಾಡಿ ಪಟ್ಟಣ ಠಾಣೆ ಕೂಗುಳತೆ ದೂರದಲ್ಲಿರುವ ಶಕ್ತಿ ವೈನ್ಸ್ ಅನ್ನು ಸ್ಥಳಾಂತರಿಸಿ ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳು ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವೃತ್ತ ನಿರೀಕ್ಷಕ ಶಿವಮಾದಯ್ಯ ಮುಖಂಡರುಗಳಿಂದ ಕೇಳಿ ಬಂದ ದೂರುಗಳನ್ನು ಆಲಿಸಿ ಮಾತನಾಡಿ ಗಾಂಜಾ ಹಾಗೂ ಮಧ್ಯ ಅಕ್ರಮ ಮಾರಾಟ ಮಾಡುವವರ ವಿರುದ್ಧ ಈಗಾಗಲೇ ಠಾಣೆಗಳಲ್ಲಿ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಪೊಲೀಸ್ ಇಲಾಖೆಯಿಂದ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಅಂತವರ ವಿರುದ್ಧ ಯಾವುದೇ ಮುಲಾಜಿಲ್ಲದೆ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಗ್ರಾಮಾಂತರ ಠಾಣೆಯ ಪಿಎಸ್ಐ ಹಾಗೂ ಪಟ್ಟಣ ಠಾಣೆ ಪ್ರಭಾರ ಪಿಎಸ್ಐ ಸುಪ್ರೀತ್,ಮುಖಂಡರುಗಳಾದ ನಟರಾಜ್ ಮಾಳಿಗೆ, ಸಿದ್ದಾರ್ಥ್, ಬಾಲರಾಜು, ರಾಜಶೇಖರ ಮೂರ್ತಿ, ಬಸ್ತೀಪುರ ರವಿ, ದಿಲೀಪ್, ಸಿದ್ದಪ್ಪಾಜಿ, ಸ್ವಾಮಿ ನಂಜಪ್ಪ, ಚಿಕ್ಕಮಾದು, ಶಂಕರ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ನಿಲ್ಲದ ಗಾಂಜಾ, ಅಕ್ರಮ ಮಧ್ಯ ಮಾರಾಟ: ನಿಯಂತ್ರಣಕ್ಕೆ ಮುಖಂಡರ ಆಗ್ರಹ Read More

ಗಾಂಜಾ ಮಾರಾಟ: ಪೊಲೀಸರ ದಾಳಿ-6 ಕೆಜಿ ಒಣ ಗಾಂಜಾ ಗೂಡ್ಸ್ ಆಟೋ ವಶ

ಮೈಸೂರು,ಏ.3: ಮೈಸೂರಿನ ಸೆನ್ ಕ್ರೈಂ ಹಾಗೂ ಕೆ ಆರ್ ನಗರ ಠಾಣೆ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿ, 6 ಕೆಜಿ ಒಣ ಗಾಂಜಾ ಮತ್ತು ಗೂಡ್ಸ್ ಆಟೋ ವಶಪಡಿಸಿಕೊಂಡಿದ್ದಾರೆ.

ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕಿನ ಮುಸ್ಲಿಂ ಬ್ಲಾಕ್ ವಾರ್ಡ್ 20 ರಲ್ಲಿ ಮೈಸೂರಿನ ಸೆನ್ ಕ್ರೈಂ ಠಾಣೆಯ ಡಿವೈಎಸ್ಪಿ ಎನ್.ರಘು ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ದಾಳಿ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಪರಾರಿಯಾಗಿಬಿಟ್ಟಿದ್ದಾನೆ.ಆದರೆ ಸ್ಥಳದಲ್ಲಿ ಸಿಕ್ಕಿದ 6 ಕೆಜಿ ಒಣ ಗಾಂಜಾ ಮತ್ತು ಗೂಡ್ಸ್ ಆಟೋ ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಕೆ ಆರ್ ನಗರ ಠಾಣೆ ಇನ್ಸ್ಪೆಕ್ಟರ್ ಶಿವಪ್ರಕಾಶ್, ಪೊಲೀಸ್ ಸಿಬ್ಬಂದಿ ಪರಶುರಾಮ ಗೌಡ, ಸೆನ್ ಠಾಣೆಯ ಪಿಎಸ್ಐ ಸುರೇಶ್ ಬೋಪಣ್ಣ, ಮೋಹನ್, ಮಹೇಶ್‌ಕುಮಾರ್, ಅಭಿಷೇಕ್, ಮಹೇಶ್, ಪಾಲ್ಗೊಂಡಿದ್ದರು.

ಕೆ ಆರ್ ನಗರ ಪೊಲೀಸರು ಪ್ರಕರಣ ದಾಖಲಾಗಿಸಿದ್ದಾರೆ.

ಗಾಂಜಾ ಮಾರಾಟ: ಪೊಲೀಸರ ದಾಳಿ-6 ಕೆಜಿ ಒಣ ಗಾಂಜಾ ಗೂಡ್ಸ್ ಆಟೋ ವಶ Read More

ಅಬಕಾರಿ ಅಧಿಕಾರಿಗಳ ದಾಳಿ:ರೈಲಿನಲ್ಲಿ ೧ ಕೆಜಿ ೬೯೨ ಗ್ರಾಂ ಗಾ* ವಶ

ಮೈಸೂರು: ಅಪರಿಚಿತ ವ್ಯಕ್ತಿ ರೈಲಿನಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ೧ ಕೆಜಿ ೬೯೨ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಇಲಾಖೆ ನಿರೀಕ್ಷಕಿ ಪೂಜಾ ರಾಮು ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದ್ದು,
ದರ್ಬಾಂಗ್‌ನಿಂದ ಮೈಸೂರಿಗೆ ಬಂದ ಸೂಪರ್ ಫಾಸ್ಟ್ ರೈಲಿನಲ್ಲಿ ಗಾಂಜಾ ಸಾಗಣೆ ಮಾಡುವ ಮಾಹಿತಿ ತಿಳಿದು
ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.

ಉಪನಿರೀಕ್ಷಕ ರವಿಕುಮಾರ್, ಸಿಬ್ಬಂದಿಗಳಾದ ಎನ್.ಅಜಯ್, ಸಿ.ಮಂಜುನಾಥ್ ಹಾಗೂ ರೈಲ್ವೆ ಭದ್ರತಾ ಪಡೆ ಅಧಿಕಾರಿಗಳು, ಪೊಲೀಸರು ಕಾರ್ಯಾಚರಣೆ ನಡೆಸಿ ಬೋಗಿಗಳನ್ನು ತಪಾಸಣೆ ನಡೆಸಿದಾಗ ಎಸಿ ಸಾಮಾನ್ಯ ಕೋಚ್‌ನಲ್ಲಿ ವಾರಸುದಾರರು ಇಲ್ಲದ ನೀಲಿಬಣ್ಣದ ಸೂಟ್‌ಕೇಸ್‌ನಲ್ಲಿ ಗಾಂಜಾ ಪತ್ತೆಯಾಗಿದೆ.

ಗಾಂಜಾ ವಶಪಡಿಸಿಕೊಂಡು ಎನ್‌ಡಿಎಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ,ಆರೋಪಿ ಪತ್ತೆಗೆ ತಲಾಶಿ ಪ್ರಾರಂಭಿಸಿದ್ದಾರೆ.

ಅಬಕಾರಿ ಅಧಿಕಾರಿಗಳ ದಾಳಿ:ರೈಲಿನಲ್ಲಿ ೧ ಕೆಜಿ ೬೯೨ ಗ್ರಾಂ ಗಾ* ವಶ Read More