ಸ್ವಚ್ಚತಾ ಕಾರ್ಮಿಕರಿಗೆ ಗಣಪತಿ ವಿತರಿಸಿದಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ,ವಿ ಹೆಚ್ ಪಿ

ಮೈಸೂರು: ಮೈಸೂರಿನ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ
ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಸ್ವಚ್ಚತಾ ಕಾರ್ಮಿಕರಿಗೆ ಗಣಪತಿ ವಿತರಿಸಲಾಯಿತು ‌

ಪ್ರತಿ ನಿತ್ಯ ಬಡಾವಣೆಯ ಸ್ವಚ್ಛತಾ ಸೇವಾ ಕಾರ್ಯ ಮಾಡುವ ಮುತ್ತುರಾಜ್ ಮತ್ತು ಸಂಗಡಿಗರಿಗೆ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಗಣಪತಿ ವಿತರಿಸಿ ಗಣಪತಿ ಹಬ್ಬದ ಶುಭಾಶಯ ತಿಳಿಸಿದರು.

ಈ‌ ವೇಳೆ ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ಪ್ರಮುಖ್ ಪುನೀತ್ ಮಾತನಾಡಿ ಗಣಪತಿಯೊಂದಿಗೆ ಪೂಜಾ ಸಾಮಾಗ್ರಿಗಳನ್ನು ನೀಡಲಾಗಿದೆ ಲೋಕ ಮಾನ್ಯ ಬಾಲಗಂಗಾಧರ ತಿಲಕರು ಗಣಪತಿಯನ್ನು ಸಾರ್ವಜನಿಕ ಹಬ್ಬವಾಗಿ ಆಚರಿಸಿದರು ಆದರೆ ಪೌರಕಾರ್ಮಿಕರು ಹಬ್ಬದ ಕೆಲಸದ ಒತ್ತಡದಲ್ಲಿ ಪೂಜೆಗಳನ್ನು ಮಾಡುವುದಕ್ಕೆ ಸಮಯವಿಲ್ಲ ಅನ್ನುತ್ತಾರೆ ಅವರೂ ಸಹ ಎಲ್ಲರಂತೆ ಮನೆಯಲ್ಲಿ ಗಣಪತಿ ಪೂಜೆ ಮಾಡಿ ಕೆಲಸಕ್ಕೆ ಹಾಜರಾಗುವಂತೆ ಆಗಲಿ ಎಂದು ಗಣಪತಿ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಎ ನ್ ರಾಮಕೃಷ್ಣ ಪೂಜಾ ಕಾಣಿಕೆಗಳನ್ನು ನೀಡಿದರು.

ರಾ. ಸ್ವ. ಸಂಘದ ಪ್ರಮುಖರಾದ ಕೇಶವ ಕುಲಕರ್ಣಿ ಹಾಗೂ ಡಾ. ಪೃಥು ಪಿ ಅದ್ವೈತ್ ಎಲ್ಲರಿಗೂ ರಾಕಿ ಕಟ್ಟಿದರು.

ಈ ಸಂದರ್ಭದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆ.ಆರ್. ಗಣೇಶ್, ವಿಶ್ವ ಹಿಂದೂ ಪರಿಷತ್ ನ ಪುನೀತ್ ಜಿ, ರಾಮಕೃಷ್ಣ, ಕೇಶವ ಕುಲಕರ್ಣಿ, ಪೃಥು ಪಿ ಅದ್ವೈತ್, ಸರಸ್ವತಿ ಸೇರಿದಂತೆ ಹಲವು ಜನ ಉಪಸ್ಥಿತರಿದ್ದರು.

ಸ್ವಚ್ಚತಾ ಕಾರ್ಮಿಕರಿಗೆ ಗಣಪತಿ ವಿತರಿಸಿದಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ,ವಿ ಹೆಚ್ ಪಿ Read More

ಮಸೀದಿ ಆವರಣದಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ಜನತೆ

ಕೊಪ್ಪಳ: ರಾಜ್ಯದೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ,ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿ ಕೊಪ್ಪಳದಲ್ಲಿ ಮಸೀದಿ ಆವರಣದಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಸಾರ್ವಜನಿಕರು ಭಾವೈಕ್ಯತೆ ಮೆರೆದಿರುವುದು ವಿಶೇಷ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿ ಹಿಂದೂ-ಮುಸ್ಲಿಮರು ಒಟ್ಟಿಗೆ ಸೇರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಮಸೀದಿ ಆವರಣದಲ್ಲೇ‌ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿ ಭಾವೈಕ್ಯತೆ ಸಾರಿದ್ದಾರೆ.

ಕಳೆದ ಮೂರು ವರ್ಷಗಳಿಂದ ಇಲ್ಲಿ ಹಿಂದೂ-ಮುಸ್ಲಿಂಮರು ಒಟ್ಟಿಗೆ ಸೇರಿ ಮಸೀದಿ ಆವರಣದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸುತ್ತಿದ್ದಾರೆ.

ಮುಸ್ಲಿಂ ಬಾಂಧವರೇ 5 ದಿನಗಳ ಕಾಲ ಪೂಜಾ ಕೈಂಕರ್ಯವನ್ನು ನೆರವೇರಿಸುವುದು ಇನ್ನೂ ವಿಶೇಷ.

ಗಣೇಶ ವಿಸರ್ಜನೆಗೂ ಮುನ್ನಾ ದಿನ ಅನ್ನಸಂತರ್ಪಣೆ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತದೆ.

ಮಸೀದಿ ಆವರಣದಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ಜನತೆ Read More

ಗಣಪತಿ ತಯಾರಕರ ಪ್ರಾಧಿಕಾರ ರಚಿಸಲುನಜರ್ಬಾದ್ ನಟರಾಜ್ ಮನವಿ

ಮೈಸೂರು: ಮೈಸೂರಿನ ಕುಂಬಾರಗೇರಿ ಯಲ್ಲಿ ಹೊಯ್ಸಳ ಟ್ರಸ್ಟ್ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹಿರಿಯ ಮೂರ್ತಿ ತಯಾರಕರನ್ನು ಸನ್ಮಾನಿಸಲಾಯಿತು.

ಚಿತ್ರಶಿಲ್ಪ ಕಲಾ ಕುಟೀರದ ಡಿ. ರೇವಣ್ಣ, ನಿಂಗಮ್ಮ, ಎವರ್ ಗ್ರೀನ್ ಮಾಡಲ್ ವರ್ಕ್ಸ್‌ ನ ರಾಘವೇಂದ್ರ ಎಸ್, ವಿದ್ಯಾ ಗಣಪತಿ ಕಲಾ ನಿಲಯದ ಯಶವಂತ್ ಅವರುಗಳನ್ನು ಸನ್ಮಾನಿಸಲಾಯಿತು.

ಈ‌ ವೇಳೆ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಮಾತನಾಡಿ, ಪಾರಂಪರಿಕ ಶೈಲಿಯಲ್ಲಿ ನೈಸರ್ಗಿಕ ಮಣ್ಣಿನ ಮೂರ್ತಿ ತಯಾರಿಕೆ ಕಲೆ ಉಳಿಯಬೇಕಿದೆ ಎಂದು ಹೇಳಿದರು.

ದೇಶಾದ್ಯಂತ ಮಣ್ಣಿನ ಗಣಪತಿ ತಯಾರಕರು ಕಲಾಕೃತಿ ಕಲಾವಿದರ ಕಲೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಗಣಪತಿ ತಯಾರಕರ ಪ್ರಾಧಿಕಾರ ರಚಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು ‌

ಹೊಯ್ಸಳ ಟ್ರಸ್ಟ್ ಅಧ್ಯಕ್ಷರಾದ ರಾಜೇಶ್ ಪಳನಿ, ಜಿ ರಾಘವೇಂದ್ರ, ನಿರೂಪಕ ಅಜಯ್ ಶಾಸ್ತ್ರಿ,ವರುಣ ಮಹಾದೇವ್, ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜ್, ಕಡಕೋಳ ಶಿವಲಿಂಗ, ಲೋಕೇಶ್, ಸೈಯದ್, ಕಿರಣ್, ದುರ್ಗಾ ಪ್ರಸಾದ್ ಮತ್ತಿತರರು ಹಾಜರಿದ್ದರು.

ಗಣಪತಿ ತಯಾರಕರ ಪ್ರಾಧಿಕಾರ ರಚಿಸಲುನಜರ್ಬಾದ್ ನಟರಾಜ್ ಮನವಿ Read More