ನಾಡಿನಿಂದ ಕಾಡಿನತ್ತ ಗಜಪಡೆ:ಆನೆಗಳನ್ನು ಬೀಳ್ಕೊಡಲು ಬಂದ ಜನಸಾಗರ!

ಮೈಸೂರು: ವಿಶ್ವ ವಿಖ್ಯಾತ ದಸರಾ‌ ಜಂಬೂಸವಾರಿಯಲ್ಲಿ ಭಾಗಿಯಾಗಿದ್ದ ಆನೆಗಳಿಗೆ ಭಾವುಕ ಬೀಳ್ಕೊಡುಗೆ ನೀಡಲಾಯಿತು.

ಮೈಸೂರು ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಬಳಿ ಆನೆಗಳಿಗೆ ಪೂಜೆ ಮಾಡಿ ನಂತರ ಬೀಳ್ಕೊಡಲಾಯಿತು.

ಅಭಿಮನ್ಯು, ಭೀಮ, ಧನಂಜಯ, ಪ್ರಶಾಂತ, ಶ್ರೀಕಂಠ,ಸುಗ್ರೀವ,ಏಕಲವ್ಯ, ಮಹೇಂದ್ರ, ಗೋಪಿ,ಕಂಜನ್,ಹೇಮಾವತಿ,ರೂಪ,ಕಾವೇರಿ,ಲಕ್ಷ್ಮಿ ಆನೆಗಳಿಗೆ ಅರಣ್ಯ ಇಲಾಖೆ‌ ಅಧಿಕಾರಿಗಳು ಪೂಜೆ ಸಲ್ಲಿಸಿದರು.

ದಸರಾ ಜಂಬೂಸವಾರಿ ಯಶಸ್ವಿ ಗೊಳಿಸಿ ಮರಳಿ ತನ್ನ ಶಿಬಿರಗಳಿಗೆ ತೆರಳಿದ
ಅಭಿಮನ್ಯು ನೇತೃತ್ವದ 14 ಆನೆಗಳನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು.

ಎಲ್ಲ ಆನೆಗಳನ್ನು ಖುಷಿಯಿಂದ ಕಣ್ ತುಂಬಿಕೊಂಡ‌ ಜನರು ಮೋಬೈಲ್ ಗಳಲ್ಲಿ ಫೋಟೊ ಕ್ಲಿಕ್ಕಿಸುವುದರಲ್ಲಿ ಮಗ್ನರಾದರು.

ಎಲ್ಲೆಲ್ಲೂ ಭೀಮಾ,ಅಭಿಮನ್ಯು ಎಂದು ಅಭಿಮಾನಿಗಳು ಕೂಗುತ್ತಿದ್ದರು,ಆಗ ಅಸನೆಗಳು ತಮ್ಮ ಸೊಂಡಿಲು ಎತ್ತಿ ನಮಸ್ಕರಿಸಿದವು.ಒಂದು ಕ್ಷಣ‌ ಎಲ್ಲರೂ ಭಾವುಕರಾದರು.

ಒಂದೂವರೆ ತಿಂಗಳಿನಿಂದ ಮೈಸೂರಿನಲ್ಲಿದ್ದ ಆನೆಗಳು ಲಾರಿಗಳ ಮೂಲಕ ತಮ್ಮ,ತಮ್ಮ ಶಿಬಿರಗಳಿಗೆ ತೆರಳಿದವು.

ಆನೆಗಳೊಂದಿಗೆ ಆಗಮಿಸಿದ್ದ ಮಾವುತ ಮತ್ತು ಕವಾಡಿಗಳ ಕುಟುಂಬಸ್ಥರು ವಾಪಸು ಊರಿಗೆ ಹೊರಟರು.ಎಲ್ಲರಿಗೂ ಟಾಟಾ ಮಾಡಿ ಹೊರಟರು.

ನಾಡಿನಿಂದ ಕಾಡಿನತ್ತ ಗಜಪಡೆ:ಆನೆಗಳನ್ನು ಬೀಳ್ಕೊಡಲು ಬಂದ ಜನಸಾಗರ! Read More

ಅರಮನೆಗೆ ಬಂದ ಗಜಪಡೆ:ಭವ್ಯ ಸ್ವಾಗತ

ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಅರಮನೆಗೆ ಆಗಮಿಸಿ ವಿಶ್ರಾಂತಿ ಪಡೆಯುತ್ತಿವೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ನೇತೃತ್ವದಲ್ಲಿ ಜನಪ್ರತಿನುಧಿಗಳು,ಅಧಿಕಾರಿಗಳು ಗಜಪಡೆಯನ್ನು ಅರಮನೆಯ ಪೂರ್ವ ದಿಕ್ಕಿನಲ್ಲಿರುವ ಜಯಮಾರ್ತಾಂಡ ದ್ವಾರದಲ್ಲಿ ಅಂಬಾವಿಲಾಸ ಅರಮನೆಗೆ ಸ್ವಾಗತಿಸಿದರು.

ಈ ವೇಳೆ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಶ್ರೀವತ್ಸ, ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್, ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಅಪರ ಜಿಲ್ಲಾಧಿಕಾರಿ ಡಾ ಪಿ. ಶಿವರಾಜು, ಡಿಸಿಪಿ ಸುಂದರ್ ರಾಜ್ ಮತ್ತಿತರರು ಭವ್ಯ ಅರಮನೆಗೆ‌ ಗಜಪಡೆಯನ್ನು ಬರಮಾಡಿಕೊಂಡರು.

ಅರಮನೆಗೆ ಬಂದ ಗಜಪಡೆ:ಭವ್ಯ ಸ್ವಾಗತ Read More

ನಾಡಿನಿಂದ‌ ಕಾಡಿನತ್ತ‌ ಹೊರಟ ‌ಗಜಪಡೆ:ಭಾವುಕರಾದರು ಜನತೆ

ಮೈಸೂರು: ಕಾಡಿನಿಂದ ನಾಡಿಗೆ ಬಂದು ಮೈಸೂರಿಗರ ಮನ ಸೂರೆಗೊಂಡಿದ್ದ‌ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ‌ದಸರಾ ಗಜಪಡೆ‌ ಮತ್ತೆ ಕಾಡಿಗೆ ಮರಳಿತು.

ಗಜಪಡೆಯನ್ನು ಲಾರಿಗೆ ಹತ್ತಿಸುವಾಗ ಅಧಿಕಾರಿಗಳು,ಅಭಿಮಾನಿಗಳು ಹಾಗೂ ಅಲ್ಲಿ ನೆರೆದಿದ್ದವರ‌ ಕಣ್ಣುಗಳು ತುಂಬಿಬಂದವು.

ಅದರಲ್ಲೂ ಅಭಿಮನ್ಯು ‌ಎಲ್ಲರತ್ತ‌ ಸೊಂಡಿಲು‌ ಎತ್ತಿ ನಮಸ್ಕರಿಸಿದ ಪರಿಗೆ‌ ಎಲ್ಲರೂ‌ ಭಾವುಕರಾದರು.

ಜಿಲ್ಲಾಧಿಕಾರಿ ಲಕ್ಷ್ಮೀ ಕಾಂತರೆಡ್ಡಿ ಮತ್ತಿತರ ಅಧಿಕಾರಿಗಳು‌ ಅಭಿಮನ್ಯುವಿನ ಸೊಂಡಿಲು‌‌ ಹಿಡಿದು‌ ಪ್ರೀತಿ ತೋರಿದರು.ಇದಕ್ಕೆ ಅಭಿಮನ್ಯು ಕೂಡಾ ಸೊಂಡಿಲು ಎತ್ತಿ ತನ್ನ ಪ್ರೀತಿ ಪ್ರಕಟಿಸಿದ.

ಲಾರಿಗೆ‌ ಅಭಿಮನ್ಯು ಮತ್ತಿತರ‌ ಆನೆಗಳನ್ನು ಹತ್ತಿಸುತ್ತಿದ್ದಾಗ ಎಲ್ಲರೂ ಅಭಿಮನ್ಯು ವಿಗೆ ಜೈಕಾರ ಕೂಗಿದರು,ಟಾಟಾ ಮಾಡಿದರು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು, ಕೆಲವರಂತೂ ಆನೆಗಳನ್ನು ಕಳಿಸಲಾಗದೆ ದುಃಖಿತರಾದರು.

ಅಭಿಮನ್ಯು ಕೂಡಾ‌ ಮೈಸೂರನ್ನು ಬಿಟ್ಟಿರಲಾರದವನಂತೆ‌ ಮೌನವಾಗಿ ಲಾರಿ ಹತ್ತಿ ಮುಂದೆ‌ ಸಾಗಿದ.ಅಭಿಮನ್ಯು ಬಾ,ಮತ್ತೆ‌ ಬಾ ಎಂಬ ಕೂಗು ಕೇಳುತ್ತಲೇ‌ ಲಾರಿ ಮುಂದೆ‌ ಸಾಗಿತು.

ಈ‌‌ ವೇಳೆ‌ ಲಕ್ಷ್ಮೀ ಕಾಂತ ರೆಡ್ಡಿ ‌ಅವರು‌ ಮಾವುತರು,ಕಾವಾಡಿಗರಿಗೆ‌ ಅವರ‌‌ ಗೌರವಧನದ ಚೆಕ್ ನೀಡಿ ಅಭಿನಂದಿಸಿ ಕೃತಜ್ಞತೆ‌ ಸಲ್ಲಿಸಿದರು.

ನಾಡಿನಿಂದ‌ ಕಾಡಿನತ್ತ‌ ಹೊರಟ ‌ಗಜಪಡೆ:ಭಾವುಕರಾದರು ಜನತೆ Read More

ಕ್ಯಾಪ್ಟನ್ ಅಭಿಮನ್ಯು ಬಹು ಬಲಶಾಲಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ ಗಜಪಡೆಗೆ‌ ಮತ್ತೆ ‌ತೂಕ‌ ಮಾಡಲಾಗಿದ್ದು,ಈ‌ ಬಾರಿ ‌ಕೂಡಾ ಕ್ಯಾಪ್ಟನ್ ಅಭಿಮನ್ಯು ಬಹುಶಾಲಿಯಾಗಿದ್ದಾನೆ.

ಗಜಪಡೆ ಮೈಸೂರಿಗೆ ಬಂದಾಗ ಕೂಡಾ ತೂಕ ಮಾಡಿಸಲಾಗಿತ್ತು.ಅವುಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು ಸೋಮವಾರ ಮತ್ತೆ ತೂಕ ಮಾಡಲಾಯಿತು.

ಅಭಿಮನ್ಯು ಗಜಪಡೆಯ ಉಳಿದೆಲ್ಲ ಆನೆಗಳಿಗಿಂತ ಹೆಚ್ಚು ತೂಕ ಇದ್ದಾನೆ.

ದಸರಾ ಆನೆಗಳ ತೂಕ: ಅಭಿಮನ್ಯು 5820,
ಲಕ್ಷ್ಮಿ 2625,ಭೀಮಾ 5380,ಏಕಲವ್ಯ 5095,
ರೋಹಿತ್ 3930,ಲಕ್ಷ್ಮಿ ದೊಡ್ಡಹರವೆ 3570,
ಕoಜನ್ 4725,ಪ್ರಶಾಂತ್ 5240,ಸುಗ್ರೀವ 5545,ಗೋಪಿ 5280,ವರಲಕ್ಷ್ಮಿ 3555,
ಮಹೇಂದ್ರ 5150,ಹಿರಣ್ಯ 3160 ಹಾಗೂ
ಧನಂಜಯ 5255.

ಅ. 12ರಂದು ನಡೆಯಲಿರುವ ವಿಜಯ ದಶಮಿ ಹಿನ್ನೆಲೆಯಲ್ಲಿ ಆನೆಗಳಿಗೆ ಮತ್ತೊಮ್ಮೆ ತೂಕ ಮಾಡಲಾಯಿತು.

ಕ್ಯಾಪ್ಟನ್ ಅಭಿಮನ್ಯು ಬಹು ಬಲಶಾಲಿ Read More

ಸೌಹಾರ್ದ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ದಸರಾ ಉತ್ಸವ ಸಹಕಾರಿ- ಪುಷ್ಪ ಅಮರನಾಥ್

ಮೈಸೂರು: ಎಲ್ಲರನ್ನೂ ಒಗ್ಗೂಡಿಸಿ ಸೌಹಾರ್ದ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ದಸರಾ ಮಹೋತ್ಸವ ಸಹಕಾರಿ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಬಿ. ಪುಷ್ಪ ಅಮರನಾಥ್ ಹೇಳಿದರು.

ಶ್ರೀ ದುರ್ಗಾ ಫೌಂಡೇಶನ್ ಹಾಗೂ ಡಾಕ್ಟರ್ ಎಂ ಶಾಂತ ರಾಮಕೃಷ್ಣ ಅಭಿಮಾನಿ ಬಳಗದ ವತಿಯಿಂದ ‌ಹಮ್ಮಿಕೊಂಡಿದ್ದ ದಸರಾ ಗಜಪಡೆಯ ಮಾವುತ ಮತ್ತು ಕಾವಡಿಗಳ ಕುಟುಂಬದ ಮಹಿಳೆಯರಿಗೆ ಅರಮನೆ ಆವರಣದಲ್ಲಿ ಅರಿಶಿನ ಕುಂಕುಮ, ವಿಳೆದೆಲೆ, ಬಾಳೆಹಣ್ಣು, ಹಾಗೂ ತೆಂಗಿನಕಾಯಿ, ಸೀರೆ ವಿತರಿಸುವ
ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲರ ಒಗ್ಗೂಡುವಿಕೆಯ ಮೂಲಕ ಸಂಸ್ಕೃತಿ ಹಾಗೂ ಬದುಕಿನ ಸಂದೇಶವನ್ನು ಎಲ್ಲರಿಗೂ ತಲು ಪಿಸುವುದೇ ಈ ಉತ್ಸವದ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಮಾತನಾಡಿ,ನವರಾತ್ರಿಗೆ ಅಪಾರ ಶಕ್ತಿ ಇದ್ದು 9 ದಿನಗಳ ಕಾಲ ಆಂತರಿಕ ದ್ವೇಷ, ಅಸೂಯೆ ತೊಲಗಿಸಿ ದೈವೀ ಪ್ರಜ್ಞೆಯನ್ನು ಜಾಗೃತಿಗೊಳಿಸುವುದೇ ನವರಾತ್ರಿಯ ವಿಶೇಷತೆ ಎಂದು ಬಣ್ಣಿಸಿದರು.

ವನ್ಯಜೀವಿ ವಿಭಾಗದ ಡಿ ಸಿ ಎಫ್ ಡಾಕ್ಟರ್ ಐ ಬಿ ಪ್ರಭುಗೌಡ, ಸಮಾಜ ಸೇವಕರಾದ ಡಾಕ್ಟರ್ ಎಂ ಶಾಂತ ರಾಮಕೃಷ್ಣ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ನಾಗಮಣಿ ಜೆ, ದರ್ಶನ್,ರೇಣುಕಾ ಹೊರಕೇರಿ,ಸವಿತಾ ಘಾಟ್ಕೆ,ಸಂತೋಷ್ ಕಿರಾಳು, ಶಾರದಾ ಮತ್ತಿತರರು ಹಾಜರಿದ್ದರು.

ಸೌಹಾರ್ದ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ದಸರಾ ಉತ್ಸವ ಸಹಕಾರಿ- ಪುಷ್ಪ ಅಮರನಾಥ್ Read More

ದಸರಾ ಆನೆಗಳಿಗೆ ಕುಶಾಲು ತೋಪು ಪೂರ್ವಭಾವಿ ಅಭ್ಯಾಸ

ಮೈಸೂರು: ದಸರಾ ಅಂಗವಾಗಿ ನಗರದಲ್ಲಿರುವ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆನೆಗಳು ಮತ್ತು ಕುದುರೆಗಳಿಗೆ ಕುಶಾಲತೋಪು ಪೂರ್ವಭಾವಿ ಅಭ್ಯಾಸವನ್ನು ನಡೆಸಲಾಯಿತು.

ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಗಜಪಡೆಗೆ ಇಂದು 21 ಕುಶಾಲ ತೋಪು ಹಾರಿಸುವ ಮೂಲಕ‌‌ ಮಾಡಲಾಯಿತು.

ಮೈಸೂರು ದಸರಾದ ಆಕರ್ಷಣೆಯ ಜಂಬುಸವಾರಿ ದಿನದಂದು ಅರಮನೆ ಆವರಣದಲ್ಲಿ ನಾಡ ಅದಿದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮುನ್ನ 21 ಕುಶಾಲತೋಪನ್ನು ಹಾರಿಸಲಾಗುತ್ತದೆ. ಆನೆಗಳು ಕುದುರೆಗಳು ಈ ವೇಳೆ ಹೆದರಬಾರದು ಎಂಬ ಹಿನ್ನೆಲೆಯಲ್ಲಿ ಗುರುವಾರ ಕುಶಾಲತೋಪು ಅಭ್ಯಾಸವನ್ನು ನಡೆಸಲಾಯಿತು.

ಮೊದಲ ಸುತ್ತಿನ ಕುಶಾಲತೋಪು ಅಭ್ಯಾಸವನ್ನು ನಡೆಸಲಾಗಿದೆ. ಇನ್ನು ಎರಡು ಬಾರಿ ಅಂದರೆ ಸೆ. 29 ಹಾಗೂ ಅ. 1ರಂದು ಕುಶಾಲ ತೋಪು ಅಭ್ಯಾಸವನ್ನು ನಡೆಸಲಾಗುವುದು.

ಕುಶಾಲು ತೋಪು ಅಭ್ಯಾಸಕ್ಕೆ ಬಂದ ಆನೆಗಳಿಗೆ ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ಭವ್ಯ ಸ್ವಾಗತ ಕೋರಲಾಯಿತು.

ದಸರಾ ಆನೆಗಳಿಗೆ ಕುಶಾಲು ತೋಪು ಪೂರ್ವಭಾವಿ ಅಭ್ಯಾಸ Read More

ಗಣೇಶ‌ ಹಬ್ಬದಲ್ಲಿ ಗಜಪಡೆಗೆ ವಿಶೇಷ ಪೂಜೆ:21ಬಗೆಯ ಭಕ್ಷ್ಯ ಅರ್ಪಣೆ

ಮೈಸೂರು: ನಾಡಿನೆಲ್ಲೆಡೆ ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದ್ದು,ಇತ್ತ ದಸರಾ ಆನೆಗಳಿಗೂ ವಿಶೇಷ ಪೂಜೆ ನೆರವೇರಿಸಲಾಯಿತು.

ನಾಡಹಬ್ಬ ದಸರಾ ಮಹೋತ್ಸವಕ್ಕಾಗಿ ಮೈಸೂರಿಗೆ ಆಗಮಿಸಿರುವ ಆನೆಗಳಿಗೆ ಅರಮನೆಯ ಆವರಣದಲ್ಲಿ ಪೂಜೆ ಸಲ್ಲಿಸಲಾಯಿತು.

ಜಿಟಿ,ಜಿಟಿ ಮಳೆಯ ನಡುವೆಯೇ
ಆನೆಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ನೆರವೇರಿಸಲಾಯಿತು.

ಗಣಪತಿಗೇ ಇಷ್ಟವಾದ ಮೋದಕ, ಬೆಲ್ಲ, ಕಬ್ಬು ಹೀಗೆ 21 ಬಗೆಯ
ಅನೇಕ ಭಕ್ಷ್ಯಗಳನ್ನು ಗಜಪಡೆಗೆ ನೈವೇದ್ಯವಾಗಿ ಅರ್ಪಿಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಸಿಸಿಎಫ್ ಮಾಲತಿ ಪ್ರಿಯಾ, ಡಿಸಿಎಫ್ ಡಾ.ಪ್ರಭುಗೌಡ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಸುಗ್ರೀವ, ಮಹೇಂದ್ರ, ಗೋಪಿ, ಭೀಮ, ಲಕ್ಷ್ಮಿ, ವರಲಕ್ಷ್ಮಿ ಸೇರಿದಂತೆ ಎಲ್ಲ 14 ಆನೆಗಳಿಗೂ ಪೂಜೆ ಸಲ್ಲಿಸಲಾಯಿತು.

ಗಣೇಶ‌ ಹಬ್ಬದಲ್ಲಿ ಗಜಪಡೆಗೆ ವಿಶೇಷ ಪೂಜೆ:21ಬಗೆಯ ಭಕ್ಷ್ಯ ಅರ್ಪಣೆ Read More

ಎರಡನೆ ಹಂತದ ಗಜಪಡೆಗೆ ತೂಕ:ಸುಗ್ರೀವನೆ ಬಲವಾನ್

ಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಎರಡನೇ ಹಂತದ ಗಜಪಡೆಗೆ ಶುಕ್ರವಾರ ತೂಕ ನಡೆಸಲಾಯಿತು.

ಗುರುವಾರ ಸಂಜೆ ಹುಣಸೂರಿನಿಂದ ಆಗಮಿಸಿದ ಗಜಪಡೆಯನ್ನು ಅರಮನೆಯ ದ್ವಾರದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಮಾಡಿ ಬರಮಾಡಿಕೊಳ್ಳಲಾಯಿತು.

ಶುಕ್ರವಾರ ಬೆಳಗ್ಗೆ ಮೊದಲನೇ ಗಜಪಡೆಯ ಜೊತೆಗೆ ಎರಡನೇ ಗಜ ಪಡೆಯನ್ನು ಕೆಆರ್ ಸರ್ಕಲ್ ಮಾರ್ಗವಾಗಿ ವೇ ಬ್ರಿಡ್ಜ್ ಗೆ ಕರೆತರಲಾಯಿತು.

ಎರಡನೇ ಹಂತದಲ್ಲಿ ಆಗಮಿಸಿರುವ ಆನೆಗಳಲ್ಲಿ ಪ್ರಶಾಂತ 4875 ಕೆ.ಜಿ, ಹಿರಣ್ಯ 2930, ಮಹೇಂದ್ರ 4910, ದೊಡ್ಡ ಲಕ್ಷ್ಮಿ 3485 ಮತ್ತು ಸುಗ್ರೀವ 5190 ಕೆಜಿ ತೂಗುತ್ತಿವೆ.ಸುಗ್ರೀವ ಹೆಚ್ಚು ತೂಕ ಹೊಂದಿರುವ ಆನೆ.

ತೂಕ ಮಾಡಿಸಿದ ನಂತರ ಎಲ್ಲಾ ಆನೆಗಳನ್ನು ಮತ್ತೆ ಅರಮನೆ ಆವರಣಕ್ಕೆ ಕರೆತರಲಾಯಿತು.

ಈ ವೇಳೆ ರಸ್ತೆಗಳ ಎರಡು ಬದಿ ನಿಂತು ಸಾರ್ವಜನಿಕರು ಮೈಸೂರು ದಸರಾ ಆನೆಗಳನ್ನು ಕಣ್ತುಂಬಿ ಕೊಂಡು ಸಂಭ್ರಮಿಸಿದರು.

ಎರಡನೆ ಹಂತದ ಗಜಪಡೆಗೆ ತೂಕ:ಸುಗ್ರೀವನೆ ಬಲವಾನ್ Read More

ದಸರಾ‌ ಗಜಪಡೆಗೆ ಭಾರ ಹೊರುವ ತಾಲೀಮು ಪ್ರಾರಂಭ

ಮೈಸೂರು,ಸೆ.1:ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಆನೆಗಳಿಗೆ ಭಾರ ಹೊರುವ ತಾಲೀಮು ಭಾನುವಾರದಿಂದ ಆರಂಭಿಸಲಾಯಿತು.

ದಸರಾ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆ ದಿನ ಕ್ಯಾಪ್ಟನ್ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡ ದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಐದು ಕಿಲೋಮೀಟರ್ ದೂರ ಸಾಗಲಿದ್ದಾನೆ.

ಹಾಗಾಗಿ ಅಭಿಮನ್ಯು ಸೇರಿದಂತೆ ಇತರ ಆನೆಗಳಿಗೂ ಇಂದಿನಿಂದ ಭಾರ ಹೊರುವ ತಾಲೀಮು ಆರಂಭಿಸ ಲಾಯಿತು.

ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆ ಶೆಡ್ ನಲ್ಲಿ ಬೆಳಿಗ್ಗೆ 7.30ಕ್ಕೆ ಪೂಜೆ ಸಲ್ಲಿಸಿ ಆನಂತರ ಅಭಿಮನ್ಯು ಮೇಲೆ 600 ಕೆಜಿ ತೂಕದ ಮರಳಿನ ಮೂಟೆಯನ್ನು ಹೊರಿಸಿ ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೂ ತಾಲೀಮು ನಡೆಸಲಾಯಿತು.

ಮುಂದಿನ ದಿನಗಳಲ್ಲಿ ಇನ್ನುಳಿದ ಆನೆಗಳಿಗೂ ಭಾರ ಹೊರುವ ತಾಲೀಮು ನಡೆಸಲಾಗುತ್ತದೆ.

ದಸರಾ‌ ಗಜಪಡೆಗೆ ಭಾರ ಹೊರುವ ತಾಲೀಮು ಪ್ರಾರಂಭ Read More