ಗಜಪಡೆಗೆ‌ ಎರಡು ದಿನ ಬೆಳಗಿನ ತಾಲೀಮುರದ್ದು

ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆಗೆ ಇಂದಿನಿಂದ ಎರಡು ದಿನಗಳ ಕಾಲ ಬೆಳಗಿನ ತಾಲೀಮು ನಿಲ್ಲಿಸಲಾಗಿದೆ.

ದಸರಾದಲ್ಲಿ ಅಂಬಾರಿ ಹೊರಲು ಸಜ್ಜಾಗುತ್ತಿರುವ ಅಭಿಮನ್ಯು ಪಡೆಗೆ ಎರಡು ದಿನಗಳ ಕಾಲ ಬೆಳಗಿನ ತಾಲೀಮಿಗೆ ಬ್ರೇಕ್ ಕೊಡಲಾಗಿದೆ.

ಪ್ರತಿದಿನ ಸುಮಾರು 12 ಕಿಮೀ ಸಾಗುತ್ತಿರುವ
ಆ‌ನೆಗಳಿಗೆ ಬೆಳಗಿನ ತಾಲೀಮಿಗೆ ವಿರಾಮ ನೀಡಲಾಗಿದೆ.ಆದರೆ ಸಂಜೆ ತಾಲೀಮು ಮುಂದುವರಿಯಲಿದೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.

ಇಂದು ಸಂಜೆ 5.30 ಕ್ಕೆ ಅರಮನೆಯಿಂದ ಆಯುರ್ವೇದಿಕ್ ವೃತ್ತದವರೆಗೂ ಗಜಪಡೆ ಪೆರೇಡ್ ಸಾಗಲಿದೆ.ಭಾನುವಾರ ಬೆಳಗಿನ ತಾಲೀಮು ತಪ್ಪಿಸಿ ಸಂಜೆ 4 ಗಂಟೆಗೆ ತಾಲೀಮು ಅರಮನೆಯಿಂದ ಬನ್ನಿಮಂಟಪದವರೆಗೂ ನಡೆಯಲಿದೆ ಎಂದು ತಿಳಿಸಿದ್ದಾರೆ.

ಕಾಂಕ್ರೀಟ್ ರಸ್ತೆಯಲ್ಲಿ ಆನೆಗಳು ನಡೆಯುವುದರಿಂದ ಪಾದಗಳು ಸವೆದುಹೋಗುವ ಸಾಧ್ಯತೆಗಳು ಇರುವುದರಿಂದ ವೈದ್ಯರ ಸಲಹೆ ಮೇರೆಗೆ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಭುಗೌಡ ಹೇಳಿದ್ದಾರೆ.

ಗಜಪಡೆಗೆ‌ ಎರಡು ದಿನ ಬೆಳಗಿನ ತಾಲೀಮುರದ್ದು Read More

ಅಭಿಮನ್ಯು ಟೀಮ್ ಗೆ ಭಾರ ಹೊರುವ ತಾಲೀಮು

ಮೈಸೂರು: ನಾಡಹಬ್ಬ ದಸರಾ ಮುಖ್ಯ ಆಕರ್ಷಣೆ ಜಂಬೂಸವಾರಿ.ನಾಡ ಅಧಿದೇವತೆ ಚಾಮುಂಡೇಶ್ವರಿ ಮೂರ್ತಿಯನ್ನು ಹೊರಬೇಕಾದ ಗಜಪಡೆಗೆ ಭಾರ ಹೊರುವ ತಾಲೀಮನ್ನು ನಡೆಸಲಾಯಿತು.

ಅರಮನೆ ಆವರಣದಲ್ಲಿನ ಕೋಡಿ ಸೋಮೇಶ್ವರ ದೇವಾಲಯದ ಬಳಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಕ್ಯಾಪ್ಟನ್​ ಅಭಿಮನ್ಯು ಆನೆಗೆ ಭಾರ ಹೊರುವ ತಾಲೀಮನ್ನು ಆರಂಭಿಸಲಾಯಿತು.

ಈಗಾಗಲೇ ಕ್ಯಾಪ್ಟನ್​ ಅಭಿಮನ್ಯು ನೇತೃತ್ವದ 14 ಗಜಪಡೆ ಅರಮನೆ ಆವರಣಕ್ಕೆ ಆಗಮಿಸಿ ತಾಲೀಮು ಹಾಗೂ ಪೌಷ್ಟಿಕ ಆಹಾರದ ಜೊತೆಗೆ ಅರಮನೆಯ ವಾತಾವರಣಕ್ಕೆ ಹೊಂದಿಕೊಂಡಿವೆ.

ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಅರಮನೆಯಿಂದ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ತಾಲೀಮು ನಡೆಸಲಾಗುತ್ತಿದೆ.

ಎರಡನೇ ಹಂತವಾಗಿ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿಗೆ ಚಿನ್ನದ ಅಂಬಾರಿ ಹೊರುವುದಕ್ಕಾಗಿ ನಡೆಸುವ ತಾಲೀಮಾದ ಮರಳು ಮೂಟೆ ಹೊರುವುದನ್ನು ಅಭ್ಯಾಸ ಮಾಡಿಸಲಾಗುತ್ತಿದೆ.

ಕೋಡಿ ಸೋಮೇಶ್ವರ ದೇವಾಲಯದ ಬಳಿ ಅರ್ಚಕ ಪ್ರಹ್ಲಾದ್ ರಾವ್ ಅವರು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ತಾಲೀಮಿಗೆ ಚಾಲನೆ ನೀಡಿದರು.

ದಸರಾ ಗಜಪಡೆಯ ಎರಡನೇ ತಾಲೀಮು ಭಾರ ಹೊರುವುದು. ಆ ತಾಲೀಮಿಗೆ ಪೂಜೆ ಸಲ್ಲಿಸುವ ಮೂಲಕ ಆರಂಭ ನೀಡಲಾಯಿತು.

ಅಭಿಮನ್ಯು ಆನೆಗೆ 200 ಕೆ.ಜಿ ತೂಕದ ಗಾದಿ, ನಮ್ದ, ಚಾರ್ಮ (ಕಬ್ಬಿಣದ ತೊಟ್ಟಿಲು) ಹಾಗೂ 300 ಕೆ.ಜಿ ತೂಕದಷ್ಟು ಮರಳಿನ ಮೂಟೆಯನ್ನು ಹಾಕಿ ಸುಮಾರು 500 ಕೆ.ಜಿ ಭಾರವನ್ನು ಹೊರಿಸಿ ತಾಲೀಮು ನೀಡಲಾಗಿದೆ,ಆನೆಯ ಪಕ್ಕ ಕುಮ್ಕಿ ಆನೆಯಾಗಿ ಕಾವೇರಿ ಹಾಗೂ ಹೇಮಾವತಿ ಸಾಥ್​ ನೀಡಿದವು.

ಮುಂದಿನ ದಿನಗಳಲ್ಲಿ ಮಹೇಂದ್ರ, ಧನಂಜಯ, ಭೀಮ ಹಾಗೂ ಏಕಲವ್ಯ ಆನೆಗಳಿಗೂ ಭಾರ ಹೊರುವ ತಾಲೀಮನ್ನು ನಡೆಸಲಾಗುವುದು.

ಈಗಾಗಲೇ 14 ಆನೆಗಳು ತಾಲೀಮಿನಲ್ಲಿ ಭಾಗವಹಿಸಿದ್ದು, ಮುಂದಿನ ದಿನಗಳಲ್ಲಿ ಭಾರ ಹೊರುವ ತಾಲೀಮಿನ ಜೊತೆಗೆ ಮರದ ಅಂಬಾರಿ ಹೊರುವ ತಾಲೀಮನ್ನು ನಡೆಸಲಾಗುವುದು ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದರು.

ಭಾರ ಹೊತ್ತು ಸಾಗಿದ ಅಭಿಮನ್ಯು : ಕಳೆದ ಐದು ವರ್ಷಗಳಿಂದ ಸುಮಾರು 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ಸಾಗುತ್ತಿರುವ 59 ವರ್ಷದ ಅಭಿಮನ್ಯು ಆನೆ 500 ಕೆ.ಜಿ ತೂಕದ ಮರಳಿನ ಮೂಟೆ ಹಾಗೂ ಇತರ ವಸ್ತುಗಳನ್ನು ಹೊತ್ತು ಅರಮನೆಯ ಬಲರಾಮ ದ್ವಾರದ ಮೂಲಕ ಹೊರಟು ಜಂಬೂಸವಾರಿ ಸಾಗುವ ಮಾರ್ಗವಾದ ಕೆ.ಆರ್.ವೃತ್ತ, ಸಯ್ಯಾಜಿರಾವ್ ವೃತ್ತ, ಆಯುರ್ವೇದಿಕ್ ಆಸ್ಪತ್ರೆ, ಹಳೆಯ ಆರ್.ಎಂ.ಸಿ ವೃತ್ತ, ಹೈವೇ ವೃತ್ತ ಮಾರ್ಗವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಸಾಗಿತು. ಪುನಃ ಅದೇ ಮಾರ್ಗವಾಗಿ ವಾಪಸ್ ಅರಮನೆಗೆ ಅಭಿಮನ್ಯು ನೇತೃತ್ವದ ಗಜಪಡೆ ಬಂದಿತು. ಮೊದಲ ದಿನದ ಭಾರ ಹೊರುವ ತಾಲೀಮು ಯಶಸ್ವಿಯಾಗಿ ನಡೆಯಿತು.

ಅಭಿಮನ್ಯು ಟೀಮ್ ಗೆ ಭಾರ ಹೊರುವ ತಾಲೀಮು Read More

ದಸರಾ ಗಜಪಡೆ ಪರಿವಾರಕ್ಕೆ ಉಪಹಾರ ನೀಡಿದ ಶಾಸಕ ಹರೀಶ್ ಗೌಡ

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಯ ಮಾವುತರು, ಕವಾಡಿಗಳು ಮತ್ತು ಅವರ ಪರಿವಾರಕ್ಕೆ ಸಾಂಪ್ರದಾಯದಂತೆ ಶಾಸಕ ಹರೀಶ್ ಗೌಡ ಉಪಹಾರ ವಿತರಿಸಿದರು.

ಈ‌ ವೇಳೆ ಹರೀಶ್ ಗೌಡ ಮಾತನಾಡಿ, ಕಾವಾಡಿ ಹಾಗೂ ಮಾವುತರ ಕುಟುಂಬದವರು ಆರೋಗ್ಯದ ಕಡೆ ಗಮನ ನೀಡಬೇಕು, ಹಾಗೂ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು ನಿಮ್ಮ ಜೊತೆ ಸದಾ ನಾವು ಇರುತ್ತೇವೆ ಎಂದು ಅಭಯ ನೀಡಿದರು.

ಅರಣ್ಯ ಸಂಪತ್ತು ನಾಡಿನ ಸಂಪತ್ತು, ಕಾಡಿನ ಸಂರಕ್ಷಕರಾದ ನೀವು, ಅರಣ್ಯ ಸಂಪತ್ತಿನ ಭಾಗವೇ ಆಗಿದ್ದೀರಿ, ನಿಮಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಸರ್ಕಾರದಿಂದ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಅಧಿಕಾರಿಗಳಾದ ಡಿಎಫ್ಒ ಪ್ರಭು ಗೌಡ, ಆರ್ ಎಫ್ ಸಂತೋಷ, ಸ್ವಾತಿ ಎಂ ಗೌಡ ,ನಗರ ಪಾಲಿಕೆ ಮಾಜಿ ಸದಸ್ಯ ಗೋಪಿ, ಡೆಲ್ಲಿ ರವಿ, ಪ್ರಮೋದ್, ರವಿಚಂದ್ರ, ಸಂತೋಷ್, ಪ್ರಶಾಂತ್, ಸಂದೀಪ್, ವಿನೋದ್ ಅರಸ್, ನಿತಿನ್ ,ಶಿವಕುಮಾರ್, ಪ್ರಜ್ವಲ್, ಗಗನ್, ಜೈ ಶೀಲ್, ಲೋಕೇಶ್, ಗುರುರಾಜ್ ಶೆಟ್ಟಿ, ಮಂಜುನಾಥ್, ನವೀನ್, ಧನುಷ್ , ಶುಭ,ಮಾನ್ಯ ಮತ್ತಿತರರು ಹಾಜರಿದ್ದರು.

ದಸರಾ ಗಜಪಡೆ ಪರಿವಾರಕ್ಕೆ ಉಪಹಾರ ನೀಡಿದ ಶಾಸಕ ಹರೀಶ್ ಗೌಡ Read More