ಸಾಲ ತೀರಿಸಲಾಗದೆ ನೇಣು ಹಾಕಿಕೊಂಡು ರೈತ ಆತ್ಮಹತ್ಯೆ

ಗದಗ: ಸಾಲ ಮಾಡಿ ತೀರಿಸಲಾಗದೆ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ
ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಈ‌ ಘಟನೆ ನಡೆದಿದ್ದು,
ಸಿದ್ದಲಿಂಗಯ್ಯ ವಸ್ತ್ರದ (50) ನೇಣು ಹಾಕಿಕೊಂಡ ರೈತ.

ನಿನ್ನೆ ತಡ ರಾತ್ರಿ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಸಿದ್ದಲಿಂಗಯ್ಯ ವಸ್ತ್ರದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆವಿಜಿ ಬ್ಯಾಂಕ್ 4 ಲಕ್ಷ ಕೃಷಿ ಸಾಲ, ಕೆಸಿಸಿ ಬ್ಯಾಂಕ್ ನಲ್ಲಿ 80 ಸಾವಿರ ಸಾಲ, 2.50 ಚಿನ್ನದ ಸಾಲ, ಟ್ಯಾಕ್ಟರ್ ಸಾಲ 1.50 ಸಾಲ..
ಹೀಗೆ ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದರು.

ನಿರಂತರ ಮಳೆಯಿಂದ ಬೆಳೆ ಹಾನಿಯಾಗಿ ರೈತ ಕಂಗಾಲಾಗಿದ್ದರು.ಸಾಲ ತೀರಿಸುವುದು ಹೇಗೆಂದು ಮನನೊಂದು ರೈತ ಸಿದ್ದಲಿಂಗಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೋಣ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ದೇಹವನ್ನು ಮಹಜರು ಮಾಡಿಸಿ ಕುಟುಂಬದವರಿಗೆ ನೀಡಿದ್ದು ಮನೆಯವರ ದುಃಖದ ಕಟ್ಟೆ ಒಡೆದಿತ್ತು.

ಸಾಲ ತೀರಿಸಲಾಗದೆ ನೇಣು ಹಾಕಿಕೊಂಡು ರೈತ ಆತ್ಮಹತ್ಯೆ Read More

ಅಂಬೇಡ್ಕರ್ ಅವರ ಶಿಕ್ಷಣ-ಸಂಘಟನೆ-ಹೋರಾಟವನ್ನು ಪಾಲಿಸಿ: ಸಿಎಂ ಕರೆ

ಗದಗ: ಅಂಬೇಡ್ಕರ್ ಅವರು ಕೊಟ್ಟಿರುವ ಶಿಕ್ಷಣ-ಸಂಘಟನೆ-ಹೋರಾಟದ ಮಂತ್ರವನ್ನು ಎಲ್ಲರೂ ಪಾಲಿಸಿಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಸಂವಿಧಾನ ಜಾರಿಯಾಗಿ 75 ವರ್ಷವಾದರೂ ಸಂಪೂರ್ಣ ಶಿಕ್ಷಣ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗದಗದ ಕರ್ನಾಟಕ ಕುರುಬರ ಸಂಘ ಆಯೋಜಿಸಿದ್ದ ಕರ್ನಾಟಕ ಕುರುಬರ ಸಹಕಾರ ಪತ್ತಿನ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೂರು ವರ್ಷಗಳ ಹಿಂದೆಯೇ ಕುರುಬ ಸಮಾಜವನ್ನು ಸಂಘಟಿಸಿ ಸಹಕಾರ ಸಂಘ ಸ್ಥಾಪಿಸಿದ್ದು ಅತ್ಯಂತ ಮುಂದಾಲೋಚನೆಯ ಸಾಮಾಜಿಕ ನ್ಯಾಯದ ಕಾರ್ಯ ಎಂದು ಹೇಳಿದರು.

ಶಿಕ್ಷಣ-ಸಂಘಟನೆ-ಹೋರಾಟ ಅಂಬೇಡ್ಕರ್ ಅವರು ದೇಶದ ಹಿಂದುಳಿದವರಿಗೆ ಕೊಟ್ಟಿರುವ ಮಂತ್ರ. ಆದರೆ, ಸಂವಿಧಾನ ಜಾರಿಗೆ ಮೊದಲೇ ಮುಂದಾಲೋಚನೆಯಿಂದ ಪತ್ತಿನ‌ ಸಹಕಾರ ಸಂಘ ಸ್ಥಾಪಿಸಿರುವುದು ಅತ್ಯಂತ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಶೂದ್ರ ವರ್ಗದ ಜನ‌ ಹಿಂದುಳಿಯಲು ಅವರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದೇ ಪ್ರಮುಖ ಕಾರಣ. ಶೂದ್ರರು, ದಲಿತರು ಮಾತ್ರ ಶಿಕ್ಷಣ ಪಡೆಯುವಂತಿರಲಿಲ್ಲ,ಅಂಬೇಡ್ಕರ್ ಅವರ ಜೀವಮಾನದ ಹೋರಾಟವೇ ಈ‌ ಅಸಮಾನತೆಯನ್ನು ಅಳಿಸುವುದಾಗಿತ್ತು. ಇದಕ್ಕೆ ಶಿಕ್ಷಣವೇ ಪ್ರಮುಖ‌ ಅಸ್ತ್ರ ಎಂದು ಅಂಬೇಡ್ಕರ್ ಮನಗಂಡಿದ್ದರು ಎಂದು ಸಿಎಂ ಸ್ಮರಿಸಿದರು.

ಶಿಕ್ಷಣ ದೊರಕದಿದ್ದರೆ ಸ್ವಾಭಿಮಾನಿಗಳಾಗಿ ಇರಲು ಸಾಧ್ಯವೇ ಇಲ್ಲ. ನನಗೆ ರಾಜಪ್ಪ ಮಾಸ್ಟರ್ ಸಿಗದೇ ಹೋಗಿದ್ದರೆ ನನಗೂ ಶಿಕ್ಷಣ ಸಿಗುತ್ತಿರಲಿಲ್ಲ, ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ,ಹಸು ಕಾಯ್ಕೊಂಡು ಇರಬೇಕಾಗಿತ್ತು ಎಂದು ಸಿದ್ದು ಹೇಳಿದರು.

ಅದಕ್ಕೇ ನಮ್ಮ ಸರ್ಕಾರ ಶಿಕ್ಷಣ-ಆರೋಗ್ಯ-ಅನ್ನಕ್ಕೆ ಪ್ರಮುಖ ಆಧ್ಯತೆ ನೀಡುತ್ತಿದೆ, ಅಂಬೇಡ್ಕರ್, ಬಸವಣ್ಣ, ಮಹಾತ್ಮ ಗಾಂಧಿಯವರ ಆಶಯಗಳು ಈಡೇರಬೇಕಾದರೆ ಸರ್ವರಿಗೂ ಶಿಕ್ಷಣ ಸಿಗಬೇಕು,ಎಲ್ಲರಿಗೂ ಆರ್ಥಿಕ ಶಕ್ತಿ ಬರಬೇಕು ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

ಅಂಬೇಡ್ಕರ್ ಅವರ ಶಿಕ್ಷಣ-ಸಂಘಟನೆ-ಹೋರಾಟವನ್ನು ಪಾಲಿಸಿ: ಸಿಎಂ ಕರೆ Read More