ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿ ನೀರು,ರಸ್ತೆ ಸಮಸ್ಯೆ ಬಗರಿಸಲು ಜಿ.ಟಿ.ಡಿ ಸೂಚನೆ

ಮೈಸೂರು: ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿ ನೀರಿನ ಸಮಸ್ಯೆ ಹಾಗೂ ರಸ್ತೆಯ ಸಮಸ್ಯೆ ಕೂಡಲೇ ಬಗರಿಸುವಂತೆ ಅಧಿಕಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡರು ಖಡಕ್ ಸೂಚನೆ ನೀಡಿದರು.

ಪೊಲೀಸ್ ಗೃಹ ನಿರ್ಮಾಣ ಸಂಘದ ಅಧ್ಯಕ್ಷ, ನಾಗೇಶ್, ಉಪಾಧ್ಯಕ್ಷ ಮರಿಗೌಡ ಹಾಗೂ ಯುವ ಮುಖಂಡ ಗಗನ್ ಅವರುಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿ.ಟಿ.ದೇವೇಗೌಡರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಿದರು.

ಶಾಸಕರು ಬಡಾವಣೆಗೆ ಸಂಬಂಧಪಟ್ಟ ಅಧಿಕಾರಿಗಳೊಡನೆ ಚರ್ಚಿಸಿದರು,ಮತ್ತು ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಿ ಬಡಾವಣೆಯಲ್ಲಿರುವ ನೀರಿನ ಸಮಸ್ಯೆ ಹಾಗೂ ರಸ್ತೆಯ ಸಮಸ್ಯೆ ಕೂಡಲೇ ಬಗರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬಡವಣಿಗೆ ಮೂರು ಬೋರ ಗಳನ್ನು ಹಾಕಿಸಬೇಕು ಕಾವೇರಿ ನೀರನ್ನು ಒಂದೂವರೆ ತಿಂಗಳಲ್ಲಿ ಕೊಡಬೇಕು ಮತ್ತು ಎರಡು ರಸ್ತೆಗಳನ್ನು ಮಾಡಿ ಮೂರು ಹೈಮಾಸ್ಟ್ ದೀಪಗಳನ್ನು ಹಾಕುವಂತೆ ಅಧಿಕಾರಿಗಳಿಗೆ ಜಿಟಿಡಿ ಸೂಚಿಸಿದರು.

ಇದೇ ವೇಳೆ ಜಿ ಟಿ ಗೌಡರ 75ನೇ ವರ್ಷದ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಪೆಟಲ್ಸ್ ಶಾಲೆಯ ಮಕ್ಕಳು ಹಾಡು ಹೇಳುವ ಮೂಲಕ ಆಚರಿಸಿ ಶಾಸಕರಿಗೆ ಶುಭ ಕೋರಿದರು.

ಈ ವೇಳೆ ಮಕ್ಕಳ ಜೊತೆ ಕೇಕ್ ಕತ್ತರಿಸಿ, ಗಿಡಗಳನ್ನು ನೆಡುವ ಮೂಲಕ ಜಿ ಟಿ ದೇವೇಗೌಡರು ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

ಇದೇ ಸಂದರ್ಭದಲ್ಲಿ ಯುವ ಮುಖಂಡ ಗಗನ್ ಅವರು ಮಾಡುತ್ತಿರುವ‌‌ ಸಮಾಜ ಸೇವೆಯನ್ನು ಗುರುತಿಸಿ ಬಡಾವಣೆ ಜನರು ಹಾಗೂ ಶಾಸಕರು ಸನ್ಮಾನ ಮಾಡಿದರು.

ಪೊಲೀಸ್ ಬಡಾವಣೆಯ ಜನತೆಯ ಕಷ್ಟಗಳಿಗೆ ತಕ್ಷಣ ಪರಿಹಾರ ಮಾಡಿಕೊಟ್ಟ ಶಾಸಕ ಜಿ.ಟಿ.ದೇವೇಗೌಡರಿಗೆ ಬಡಾವಣೆಯ ಮುಖಂಡರು, ಹಿರಿಯರು ಹಾಗೂ ನಾಗರಿಕರು ವಂದನೆಗಳನ್ನು ಸಲ್ಲಿಸಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿ ನೀರು,ರಸ್ತೆ ಸಮಸ್ಯೆ ಬಗರಿಸಲು ಜಿ.ಟಿ.ಡಿ ಸೂಚನೆ Read More

ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ- ಜಿ.ಟಿ.ದೇವೇಗೌಡ

ಮೈಸೂರು: ಗ್ರಾಮಾಂತರ ಪ್ರದೇಶದ ಬಡವರು,ಮಧ್ಯಮ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಶಾಲೆಗಳಿಗೆ ಮೂಲ ಸೌಕರ್ಯ ನೀಡಿದರೆ ಹಾಜರಾತಿ ಪ್ರಮಾಣ ಹೆಚ್ಚಾಗಲಿದೆ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡುವಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಮೈಸೂರು ತಾಲ್ಲೂಕಿನ ಮಂಡಕಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ನಿಸರ್ಗ ಮತ್ತು ಮಯೂರಿ ಸಹಯೋಗದಲ್ಲಿ ಆಯೋಜಿಸಿದ್ದ ನೂತನ ಶೌಚಾಲಯ ಕಟ್ಟಡ ಹಾಗೂ ಗ್ರಂಥಾಲಯ ಕಟ್ಟಡದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಡವರ ಮಕ್ಕಳು ಶಿಕ್ಷಣ ಕಲಿಯಲು ಹೆಚ್ಚಾಗಿ ಬರುತ್ತಾರೆ. ಬಡವರು,ಹಿಂದುಳಿದ, ಶೋಷಿತರ ಮಕ್ಕಳು ಶಿಕ್ಷಣ ಕಲಿಯಬೇಕು ಎಂಬ ಆಶಯದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣದ ಮಹತ್ವವನ್ನು ಸಾರಿದರು. ಅಂಬೇಡ್ಕರ್ ಹೇಳಿದಂತೆ ಶಿಕ್ಷಣವೇ ದೊಡ್ಡ ಆಸ್ತಿ ಎನ್ನುವುದನ್ನು ಮರೆಯಬಾರದು ಎಂದು ತಿಳಿಹೇಳಿದರು.

ಹಳ್ಳಿಗಳಲ್ಲಿ ಶಿಕ್ಷಣ ಕಲಿತರೆ ವಿದ್ಯಾವಂತರು, ಪ್ರತಿಭಾವಂತರು, ಉತ್ತಮ ಪ್ರಜೆಗಳಾಗಬಹುದು.ಸಮಾನತೆಯಿಂದ ಇರುವ ಜತೆಗೆ,ಅಸಮಾನತೆಯನ್ನು ನಿವಾರಿಸಿ ಸಮಾನವಾಗಿ ಇರಬಹುದು, ಒಂದು ವೇಳೆ ಶಿಕ್ಷಣ ಸರಿಯಾಗಿ ದೊರೆಯದಿದ್ದರೆ ಸಮಸ್ಯೆಯಾಗಲಿದೆ ಎಂದು ಜಿಟಿಡಿ ಅಭಿಪ್ರಾಯ ಪಟ್ಟರು.

ಹಳ್ಳಿಗಳ ಶಾಲೆಗಳಲ್ಲಿ ಬಡವರು,ಶ್ರೀಮಂತರು ಎನ್ನದೆ ಸಮಾನ ಶಿಕ್ಷಣ ದೊರೆಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣದ ಜತೆಗೆ,ಇಂಗ್ಲಿಷ್ ತರಗತಿ ನಡೆಯಲಿದೆ.ಬೇರೆ ಬೇರೆ ಸರ್ಕಾರಿ ಶಾಲೆಗಳು ಮಂಡಕಳ್ಳಿ ಶಾಲೆಯ ಕಡೆಗೆ ನೋಡುವಂತೆ ಮಾದರಿ ಶಾಲೆಯಾಗಿ ಹೊರಹೊಮ್ಮಬೇಕು ಎಂದು ಹೇಳಿದರು.

ನಮ್ಮ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಗೆ ಶೌಚಾಲಯ ಮತ್ತು ಗ್ರಂಥಾಲಯದ ನಿರ್ವಹಣೆಯ ಹೊಣೆಯನ್ನು ವಹಿಸಲಾಗಿದೆ. ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಶಾಲೆಯನ್ನು ನಿರ್ವಹಣೆ ಮಾಡಲು ಗಮನಹರಿಸಬೇಕು ಎಂದು ಶಾಸಕರು ಹೇಳಿದರು.

ಶಾಲೆಗೆ ಯಾರೂ ದ್ರೋಹ ಮಾಡಬಾರದು. ದೇವಾಲಯ ಇದ್ದಂತೆ. ಪ್ರೀತಿ,ವಿಶ್ವಾಸದಿಂದ ನೋಡಿಕೊಂಡು ಹೋಗಬೇಕು. ಶಾಲೆಯ ಕೊಠಡಿಗೆ ಕಿಡಿಗೇಡಿಗಳು ಕಲ್ಲು ತೂರುತ್ತಾರೆಂದರೆ ಏನರ್ಥ ಅಂತಹವರನ್ನು ನೀವೇ ಹಿಡಿದು ಪೊಲೀಸರಿಗೆ ಒಪ್ಪಿಸಬೇಕು ಎಂದು ಗ್ರಾಮದ ಮುಖಂಡರಿಗೆ ಸೂಚಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಅನೇಕ ಗ್ರಾಮಗಳ ಹಿರಿಯ ಮತ್ತು ಪ್ರೌಢಶಾಲೆಗಳಿಗೆ ಸಿಎಸ್‌ಆರ್ ನಿಧಿ,ಲಯನ್ಸ್,ರೋಟರಿ ಸಂಸ್ಥೆಗಳ ಮೂಲಕ ಶಾಲಾ ಕೊಠಡಿ,ಗ್ರಂಥಾಲಯ,ಶೌಚಾಲಯ ಕಟ್ಟಡವನ್ನು ಒದಗಿಸಲಾಗುತ್ತಿದೆ ಎಂದು ಜಿ.ಟಿ.ದೇವೇಗೌಡ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ.ಎನ್.ಶಾಮರಾವ್, ಕೆ.ಎಲ್.ರಾಜಶೇಖರ್,ಎನ್.ಸುಬ್ರಹ್ಮಣ್ಯ, ಎಂಡಿಡಿಎ ಅಧ್ಯಕ್ಷ ಎಸ್.ಮೂರ್ತಿ, ಜಯಕುಮಾರ್, ಜಯರಾಮು,ವೆಂಕಟೇಶ್, ಎಲ್‌ಸಿಎಂ ನಿಸರ್ಗ ಅಧ್ಯಕ್ಷ ಕುಮಾರ,ಎಲ್‌ಸಿಎಂ ಮಯೂರಿ ಅಧ್ಯಕ್ಷರಾದ ಸುಮಿತ್ರ ಮೂರ್ತಿ ಹಾಜರಿದ್ದರು.

ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ- ಜಿ.ಟಿ.ದೇವೇಗೌಡ Read More

ಕೆರೆ,ಕಟ್ಟೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸಿ- ಜಿಟಿಡಿ ತಾಕೀತು

ಮೈಸೂರು: ಮೈಸೂರು ತಾಲ್ಲೂಕು ವ್ಯಾಪ್ತಿಯಲ್ಲಿ ಕೆರೆ,ಕಟ್ಟೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸಲು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ತಾಕೀತು ಮಾಡಿದರು.

ಏತನೀರಾವರಿ ಯೋಜನೆ ಮೂಲಕ ತುಂಬಿಸಬೇಕಿರುವ ಎಲ್ಲಾ ಕೆರೆಗಳನ್ನೂ ಭರ್ತಿ ಮಾಡಬೇಕು ಎಂದು ಸೂಚಿಸಿದರು. ನಗರಪಾಲಿಕೆ ವಲಯ ಮೂರರ ಕಚೇರಿ ಸಭಾಂಗಣದಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕರು, ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ಕೆರೆಗಳು,ಕಟ್ಟೆಗಳನ್ನು ತುಂಬಿಸಲು ಅನುದಾನ ಬಿಡುಗಡೆ ಮಾಡಿಸಲಾಗಿದೆ. ಸಕಾಲದಲ್ಲಿ ಕಾಮಗಾರಿಗಳನ್ನು ಮುಗಿಸಬೇಕು‌ ಎಂದು ಆದೇಶಿಸಿದರು.

ಉಳಿದ ಕೆರೆಗಳನ್ನು ತುಂಬಿಸಲು ಡಿಪಿಆರ್ ತಯಾರಿಸಿ ಸಲ್ಲಿಸಿ ಎಂದು ಹೇಳಿದ ಜಿಟಿಡಿ, ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸಬೇಕಾದರೆ ಕೆರೆಗಳನ್ನು ತುಂಬಿಸಬೇಕು.ಹಾಗಾಗಿ, ಯಾವುದೇ ಕೆರೆಗಳು ಪೂರ್ಣವಾಗಿ ತುಂಬಿಲ್ಲ ಎಂಬ ದೂರು ಬರಬಾರದು,ಪೈಪ್‌ಲೈನ್ ಕೊನೆಯ ತನಕವೂ ಇರಬೇಕು ಎಂದು ಸೂಚಿಸಿದರು.

ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಅಜರುದ್ದೀನ್ ಮಾತನಾಡಿ,ಗುಂಗ್ರಾಲ್ ಛತ್ರ,ಒಡೆಯರ ಕಟ್ಟೆ, ದೊಡ್ಡೇಗೌಡನಕಟ್ಟೆ, ಹೊನ್ನಯ್ಯನಕಟ್ಟೆ ಕೆರೆಗಳನ್ನು ತುಂಬಿಸಲು ೧೪ ಕೋಟಿ ರೂ.ಮಂಜೂರಾಗಿದೆ, ಶೀಘ್ರದಲ್ಲೇ ಕಾಮಗಾರಿ ಮುಗಿಯಲಿದೆ.ಒಡೆಯರ ಕೆರೆ ದೊಡ್ಡದು,ಏತನೀರಾವರಿ ಯೋಜನೆ ಮೂಲಕ ನೀರು ತುಂಬಿಸಬೇಕಿರುವುದರಿಂದ ಎರಡು-ಮೂರು ದಿನಗಳಲ್ಲಿ ಮೋಟಾರ್ ಅಳವಡಿಸಲಾಗುತ್ತದೆ. ನಂತರ, ಚಾಲನೆ ಕೊಡಬಹುದು ಎಂದು ಅಧಿಕಾರಿಗಳು ಹೇಳಿದರು.

ಲಿಂಗಾಂಬುದಿಪಾಳ್ಯ,ಅಯ್ಯಜಯ್ಯನಕೆರೆ, ಕೇರ್ಗಳ್ಳಿ ಕೆರೆಯನ್ನು ಶುಚಿಗೊಳಿಸಿ ನೀರು ತುಂಬಿಸಲು ಕೆಲವು ಕಾಮಗಾರಿ ನಡೆಸಬೇಕಿದೆ.ಕೆರೆಗಳಿಗೆ ನೇರವಾಗಿ ಪೈಪ್‌ಲೈನ್ ತೆಗೆದುಕೊಂಡು ಹೋಗಬೇಕಿರುವುದರಿಂದ ಪ್ರತ್ಯೇಕವಾದ ಡಿಪಿಆರ್ ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಟಿ ದೇವೇಗೌಡರು, ಕೆರೆಗಳನ್ನು ಸಂರಕ್ಷಣೆಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು,ನೀವು ಪ್ರಸ್ತಾವನೆ ಸಲ್ಲಿಸುವ ಯೋಜನೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು,ಸಣ್ಣನೀರಾವರಿ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಒಪ್ಪಿಗೆ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಗುತ್ತಿಗೆದಾರರಿಗೆ ಏನಾದರೂ ಬಾಕಿ ಅನುದಾನ ಪಾವತಿಸುವುದು ಇದ್ದರೆ ಕ್ಲಿಯರ್ ಮಾಡಿ. ಶೀಘ್ರದಲ್ಲೇ ಚಾಲನೆ ಕೊಡೋಣ ಎಂದು ಹೇಳಿದರು.

ದೇವಿಕೆರೆಯಲ್ಲಿ ತುಂಬಿರುವ ಹೂಳುತೆಗೆಯಲಾಗಿತ್ತು. ವಿದ್ಯುತ್ ದೀಪ, ರಸ್ತೆ ಮೊದಲಾದ ಕಾಮಗಾರಿಗಳನ್ನು ಮುಂದುವರಿಸಲು ಅರಮನೆ ವತಿಯಿಂದ ಅನುಮತಿ ಪಡೆಯಬೇಕಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರ ಪ್ರಶಾಂತ್, ಕಾರ್ಯಪಾಲಕ ಅಭಿಯಂತರ ಅಜರುದ್ದೀನ್, ಈಶ್ವರ್,ವೇಣುಗೋಪಾಲ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಕೆರೆ,ಕಟ್ಟೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸಿ- ಜಿಟಿಡಿ ತಾಕೀತು Read More

ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ಜಿ.ಟಿ.ದೇವೇಗೌಡ

ಮೈಸೂರು, ಏ.4: ಕಳೆದ ನಾಲ್ಕೈದು ದಶಕಗಳಿಂದ ಸಾಗುವಳಿ ಭೂಮಿ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಹಕ್ಕುಪತ್ರ ಕೊಡಿಸುವ ತನಕ ನೆಮ್ಮದಿ ಇಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಮೈಸೂರು ತಾಲ್ಲೂಕಿನ ಗುಮಚನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೯೪-ಸಿ ಅಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು,ಹಕ್ಕುಪತ್ರ ಕೊಡುವ ಕುರಿತು ಉಂಟಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೇನೆ,ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ‌ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಪ್ರತಿಯೊಂದು ಹಳ್ಳಿ ನನ್ನ ಊರು ಇದ್ದಂತೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ೨೫ ವರ್ಷಗಳ ಕಾಲ ಸಿದ್ದರಾಮಯ್ಯ ಶಾಸಕರಾಗಿದ್ದರೆ,ಮೂರು ಬಾರಿಯಿಂದ ಮತದಾರರು ನನ್ನನ್ನು ಆಯ್ಕೆ ಮಾಡಿಕೊಂಡು ಬಂದಿದ್ದಾರೆ. ಈ ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.
ಜಯಪುರ,ಗುಮಚನಹಳ್ಳಿ,ಹಾರೋಹಳ್ಳಿ,ಚಿಕ್ಕನಹಳ್ಳಿ ಮೊದಲಾದ ಊರುಗಳು ನಮ್ಮ ಊರಿನಂತೆ ಇವೆ. ಎಲ್ಲರೂ ನಮ್ಮ ಅಣ್ಣ-ತಮ್ಮಂದಿರೇ ಆಗಿದ್ದಾರೆ,ನಮ್ಮ ಮನೆಗೆ ದಾಖಲೆ ಇಲ್ಲವೆಂದು ಅನೇಕರು ಬರುತ್ತಿದ್ದರು. ದಾಖಲೆ ಇಲ್ಲದಿದ್ದರೆ ಬ್ಯಾಂಕಿನಲ್ಲಿ ಸಾಲ ಪಡೆಯಲು ಆಗೋದಿಲ್ಲ. ಮಾರಾಟಕ್ಕೆ ಅನಾನುಕೂಲವಾಗುತ್ತಿತ್ತು.ಅದನ್ನು ಮನಗಂಡು ಸರಿಪಡಿಸುವ ಕೆಲಸಕ್ಕೆ ಮುಂದಾಗಿದ್ದೇನೆ ಎಂದು ಜಿಟಿಡಿ ನುಡಿದರು.

ಸಾಗುವಳಿ ಭೂಮಿಯನ್ನು ಉಳುಮೆ ಮಾಡಿಕೊಂಡು ಬಂದಿದ್ದರೂ ಮತ್ತು ದಾಖಲೆಯಲ್ಲಿ ಹೆಸರು ಇದ್ದರೂ ಅರಣ್ಯಭೂಮಿ ಎನ್ನುವುದನ್ನು ತೋರಿಸಲಾಗಿದೆ. ಇದರಿಂದಾಗಿ ಹಕ್ಕು ಪತ್ರ ಕೊಡಲು ಕೆಲವು ಕಡೆ ಸಮಸ್ಯೆಯಾಗಿದೆ. ಇದು ಬರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಸಮಸ್ಯೆಯಾಗಿಲ್ಲ ಅನೇಕ ಕ್ಷೇತ್ರಗಳಲ್ಲಿ ಉಂಟಾಗಿದೆ, ಹಾಗಾಗಿ, ಅರಣ್ಯ ಇಲಾಖೆ ಭೂಮಿ ಅಂತ ತೋರಿಸಿರುವ ಜಮೀನಿನಲ್ಲಿ ರೈತರು ಉಳುಮೆ ಮಾಡಿಕೊಂಡು ಬಂದಿದ್ದರೆ ಹಕ್ಕುಪತ್ರ ಕೊಡಿಸುವುದಕ್ಕೆ ತೀರ್ಮಾನ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಜಯಪುರ ಹೋಬಳಿಯ ಕೆಲವು ಗ್ರಾಮಗಳ ರೈತರು ಉಳುಮೆ ಮಾಡಿಕೊಂಡು ಬಂದಿದ್ದಾರೆ.ಅವರಿಗೆ ಸಾಗುವಳಿ ಚೀಟಿ ಇದ್ದರೂ ಅರಣ್ಯ ಇಲಾಖೆ ಭೂಮಿಯಾಗಿ ಬಿಟ್ಟಿದೆ. ಇಂತಹದನ್ನು ಸರಿಪಡಿಸಿ ಹಕ್ಕುಪತ್ರ ನೀಡಬೇಕೆಂದು ತೀರ್ಮಾನಿಸಿ ಅನೇಕ ತಿಂಗಳಿಂದ ಶ್ರಮ ಪಟ್ಟಿದ್ದೇನೆ ಒಂದು ಒಳ್ಳೆಯ ಕೆಲಸಕ್ಕೆ ನಾನಾ ವಿಘ್ಞಗಳು ಎದುರಾದರೂ ಕೊನೆಗೂ ಒಳ್ಳೆಯದಾಗುತ್ತದೆ ಎನ್ನುವುದಕ್ಕೆ ಇಂದು ಹಕ್ಕುಪತ್ರ ವಿತರಿಸುತ್ತಿರುವುದೇ ಸಾಕ್ಷಿಯಾಗಿದೆ ಎಂದು ಸಂತಸ ಪಟ್ಟರು ಶಾಸಕರು.

ತಹಸಿಲ್ದಾರ್ ಮಹೇಶ್ ಕುಮಾರ್ ಅವರು ಒಂದು ವರ್ಷದಿಂದ ಶ್ರಮಪಟ್ಟು ಹಕ್ಕುಪತ್ರ ಕೊಡಲು ರೆಡಿಮಾಡಿದ್ದರು. ಆದರೆ,ಕೋರ್ಟ್ ಇರುವುದರಿಂದ ಮುಂದೊಂದು ದಿನ ಮಾಡುವಂತೆ ಹೇಳಿದರು. ಆದರೆ, ಒಂದಲ್ಲಾ ಒಂದು ಕಾರಣಕ್ಕಾಗಿ ವಿಳಂಬವಾಗುತ್ತಿದೆ. ನಿಮ್ಮ ಬದಲಿಗೆ ಉಪ ತಹಸಿಲ್ದಾರ್ ಅವರನ್ನೇ ಕಳುಹಿಸುವಂತೆ ಹೇಳಿದ್ದೆ.ಅದೇ ರೀತಿ ತಾಪಂ ಕಾರ್ಯ ನಿರ್ವಹಣಾಧಿಕಾರಿಗೆ ವಿಡೀಯೋ ಕಾನ್ಫರೆನ್ಸ್ ಇದ್ದ ಕಾರಣಕ್ಕಾಗಿ ಬರಲು ಸಾಧ್ಯವಾಗಿಲ್ಲ.ಆದರೆ, ಉಳಿದ ಅಧಿಕಾರಿಗಳ ಸಮ್ಮುಖದಲ್ಲೇ ಕಾರ್ಯಕ್ರಮ ಮಾಡಿ ಹಕ್ಕುಪತ್ರ ನೀಡಲಾಗಿದೆ ಎಂದು ನುಡಿದರು.

ಉದ್ಬೂರು,ಗುಮಚನಹಳ್ಳಿ ಮೊದಲಾದ ಗ್ರಾಮಗಳಿಗೆ ಕುಡಿಯುವ ನೀರು,ರಸ್ತೆ,ಚರಂಡಿ,ವಿದ್ಯುತ್‌ ದೀಪದ ವ್ಯವಸ್ಥೆ ಮಾಡಲಾಗಿದೆ. ಆಶ್ರಯ ಬಡಾವಣೆಗಾಗಿ ಇದ್ದ ತೊಡಕುಗಳನ್ನು ನಿವಾರಿಸಲು ಗಮನಹರಿಸಿದ್ದೇನೆ. ಆಶ್ರಯ ಫಲಾನುಭವಿಗಳ ಆಯ್ಕೆಯನ್ನು ಗ್ರಾಮಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಸಲ್ಲಿಸಿದರೆ ತಕ್ಷಣವೇ ಮಂಜೂರಾತಿ ದೊರೆಯಲಿದೆ ಎಂದು ಆಶ್ವಾಸನೆ ನೀಡಿದರು.

ಇದೇ ವೇಳೆ ಮಂಡನಹಳ್ಳಿ ಗ್ರಾಮದಲ್ಲಿ ೩೮ ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ, ಶಾಸಕರ ವಿಶೇಷ ಅನುದಾನದಲ್ಲಿ ಮಂಡನಹಳ್ಳಿ-ಕಾಡನಹಳ್ಳಿ ರಸ್ತೆ ಕಾಮಗಾರಿ,ಶಾಲಾ ಕೊಠಡಿಗಳನ್ನು ಉದ್ಘಾಟನೆಯನ್ನು ಜಿ.ಟಿ.ದೇವೇಗೌಡ ನೆರವೇರಿಸಿದರು.

ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ಜಿ.ಟಿ.ದೇವೇಗೌಡ Read More

ಸಾವಿತ್ರಿಬಾಯಿ ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಸ್ಫೂರ್ತಿ: ಜಿ.ಟಿ.ದೇವೇಗೌಡ

ಮೈಸೂರು: ಮಹಿಳೆಯೊಬ್ಬರು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂಬ ಭಾವನೆ ಇದ್ದ ಸಮಾಜದಲ್ಲಿ ದಿಟ್ಟತನದಿಂದ ಶಿಕ್ಷಕ ತರಬೇತಿ ಪಡೆದು ಅಂದುಕೊಂಡಿದ್ದನ್ನು ಸಾಧಿಸಿದ ಗಟ್ಟಿಗಿತ್ತಿ ಸಾವಿತ್ರಿಬಾಯಿ ಫುಲೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಮೈಸೂರಿನ ಶ್ರೀರಾಂಪುರದಲ್ಲಿರುವ ಟಿ.ಎಸ್. ಕನ್ವೆನ್ಷನ್ ಹಾಲ್‌ನಲ್ಲಿ ಕರ್ನಾಟಕ ಸಾವಿತ್ರಿಬಾಯಿಫುಲೆ ಶೀಕ್ಷಕಿಯರ ಸಂಘದವತಿಯಿಂದ ನಡೆದ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ, ಸಾವಿತ್ರಿಬಾಯಿಫುಲೆ ವಿಚಾರ ಸಂಕಿರಣ ಮತ್ತು ರಾಜ್ಯ ಕಾರ್ಯಕಾರಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾವಿತ್ರಿಬಾಯಿ ಫುಲೆ ಅವರು ಭಾರತದ ಮೊಟ್ಟಮೊದಲ ಶಿಕ್ಷಕಿ, ಆಧುನಿಕ ಶಿಕ್ಷಣದ ಜನನಿ. ಸಾಮಾಜಿಕ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಜೊತೆಗೆ ಸಾಹಿತಿ. ಮಹಾರಾಷ್ಟ್ರದಲ್ಲಿ ತರಬೇತಿ ಹೊಂದಿದ ಮೊದಲ ಶಿಕ್ಷಕಿ ಎಂದು ತಿಳಿಸಿದರು.

ಮಹಿಳೆಯರು ಮನೆಯಿಂದ ಹೊರಬಂದು ಸಾಮಾಜಿಕ ಚಳವಳಿಯಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಿದ್ದ ಕಾಲದಲ್ಲಿ ಪತಿ ಜ್ಯೋತಿ ಬಾ ಫುಲೆ ಅವರ ಜೊತೆಗೂಡಿ ಹದಿನಾಲ್ಕು ಶಾಲೆಗಳನ್ನು ಸ್ಥಾಪಿಸಿದವರು.
ಸಾವಿತ್ರಿ ಬಾಯಿ ಪುಲೆ ವರು ಪಾಠ ಮಾಡಲು ಶಾಲೆಗೆ ಹೊರಟಾಗ ಊರಿನ ಜನರು ಲೇವಡಿ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಕಲ್ಲು ತೂರುವುದು, ಸಗಣಿ ಎರಚುವುದು, ಮೈಮೇಲೆ ಕೆಸರು ಸುರಿಯುವುದು ಹೀಗೆ ಕಿರುಕುಳ ಕೊಟ್ಟಿದ್ದನ್ನು ಸಹಿಸಿಕೊಂಡು ಕೈಚೀಲದಲ್ಲಿ ಇನ್ನೊಂದು ಸೀರೆ ಇಟ್ಟುಕೊಂಡು ಮಕ್ಕಳು ಬರುವ ಮೊದಲೇ ಶಾಲೆಗೆ ಹೋಗಿ ಸೀರೆ ಬದಲಾಯಿಸಿ ಪಾಠ ಮಾಡಲು ಸಿದ್ಧರಾಗುತ್ತಿದ್ದರು. ಅವರ ಈ ಎಲ್ಲಾ ಹೋರಾಟದಲ್ಲೂ ಭುಜಕ್ಕೆ ಭುಜ ಕೊಟ್ಟು ನಿಂತವರು ಪತಿ ಜ್ಯೊತಿಬಾ ಪುಲೆ ಅವರು ಎಂದು ಜಿ.ಟಿ.ಡಿ ಹೇಳಿದರು.

ಬ್ರಿಟಿಷ್ ಸರ್ಕಾರ ಅವರ ಕಾರ್ಯವನ್ನು ಮೆಚ್ಚಿ ಭಾರತದ ಮೊದಲ ಶಿಕ್ಷಕಿ ಎಂಬ ಮನ್ನಣೆ ನೀಡಿತು. ಸ್ತ್ರೀಯರು ಸಹ ಪುರುಷರಂತೆ ಶಿಕ್ಷಣ ಪಡೆಯಬೇಕು ಎಂಬುದು ಈ ದಂಪತಿಗಳ ಹಂಬಲವಾಗಿತ್ತು. ಬಾಲ್ಯವಿವಾಹ, ಸತಿ ಸಹಗಮನ, ವಿಧವೆಯರಿಗೆ ಕೇಶಮುಂಡನ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ ನಡೆಸಿದ ಅವರು, ಮಹಿಳೆಯರಿಗಾಗಿಯೇ ಶಾಲೆಗಳು, ಅಬಲಾಶ್ರಮಗಳನ್ನು ಸ್ಥಾಪಿಸಿದರು ಎಂದು ವಿವರಿಸಿದರು.

ಪ್ಲೇಗ್ ರೋಗಿಗಳ ಸೇವೆ ಮಾಡುತ್ತಲೇ ಸ್ವತಃ ಆ ರೋಗಕ್ಕೆ ಬಲಿಯಾದರು ಸಾವಿತ್ರಿ ಬಾಯಿ ಫುಲೆ.ಅವರು ನಮ್ಮೆಲ್ಲರಿಗೂ ಆದರ್ಶ ತೋರಿದ ಧೀಮಂತ ಮಹಿಳೆ.

ಸಮಾರಂಭದಲ್ಲಿ ಉಪ ನಿರ್ದೇಶಕ ಜವರೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು, ರಾಷ್ಟ್ರೀಯ ಅಧ್ಯಕ್ಷೆ ಡಾ. ಲತಾ ಎಸ್. ಮುಳ್ಳೂರು, ಜಿಲ್ಲಾಧ್ಯಕ್ಷೆ ಸರಸ್ವತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರಕಾಶ್, ಮಹೇಶ್, ಮಹದೇವ್, ರವಿಪ್ರಸನ್ನ, ರವಿಪ್ರಸನ್ನ, ಶಿವಮೂರ್ತಿ ಮತ್ತಿತರರು ಹಾಜರಿದ್ದರು.

ಸಾವಿತ್ರಿಬಾಯಿ ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಸ್ಫೂರ್ತಿ: ಜಿ.ಟಿ.ದೇವೇಗೌಡ Read More

ಸಿದ್ದು ಪರ ‌ಜಿ.ಟಿ.ದೇವೇಗೌಡ ಬ್ಯಾಟಿಂಗ್

ಮೈಸೂರು: ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದ ವೇಳೆ ಜೆಡಿಎಸ್ ಶಾಸಕ‌ ಜಿ.ಟಿ.ದೇವೇಗೌಡ ಅವರು‌ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸುವ ಮೂಲಕ ದೋಸ್ತಿಗಳಿಗೆ ಟಾಂಗ್ ನೀಡಿದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ, ಜೆಡಿಎಸ್ ದೋಸ್ತಿ ನಾಯಕರಿಗೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರೂ ಆಗಿರುವ ಜಿ.ಟಿ ದೇವೇಗೌಡ ನೇರ ಶಾಕ್ ಕೊಟ್ಟರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ರಾಜೀನಾಮೆ ಕೋಡೋದೆ ಆದರೆ ಎಫ್ಐಆರ್ ಆಗಿರೋ ಎಲ್ಲಾ ನಾಯಕರು ಕೊಡಲಿ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯೂ ಕೊಡಲಿ ಎಂದು ಹೇಳುವ ಮೂಲಕ ಸ್ವಪಕ್ಷದ ನಾಯಕ ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಎಲ್ಲಾ ಗಾಜಿನ ಮನೆಯಲ್ಲಿ ಕೂತಿದ್ದಾರೆ
ರಾಜೀನಾಮೆ ಕೊಡಿ,ರಾಜೀನಾಮೆ ಕೊಡಿ ಎಂದು ಒಂದೇ‌ ಸಮನೆ ಕೇಳುತ್ತಿದ್ದಾರಲ್ಲಾ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲು ನ್ಯಾಯಾಲಯ ಹೇಳಿದೆಯಾ, ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡವಾ, ಕುಮಾರಸ್ವಾಮಿಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ ಎಂದು ಕಾರವಾಗಿಯೇ ಪ್ರಶ್ನಿಸಿದರು.

136 ಸ್ಥಾನ ಗೆದ್ದು ಸಿಎಂ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಆಗುತ್ತಾ,ರಾಜೀನಾಮೆ ಕೊಡಿ ರಾಜೀನಾಮೆ ಕೊಡಿ ಅಂದರೆ ಕೊಡೋದಕ್ಕೆ ಸಾದ್ಯಾನಾ, ಒಂದು ಅತ್ಯಾಚಾರ, ಕೊಲೆ ಮೂರು ತಿಂಗಳು ಮಾಧ್ಯಮ ತೋರಿಸುತ್ತೆ, ಒಂದು ಎಫ್ ಐ ಆರ್ ನಾ ಎಷ್ಟು ದಿನ ತೋರಿಸುತ್ತಿರಾ, ಯಾರ ಯಾರ ಮೇಲೆ ಎಫ್ ಐ ಆರ್ ಆಗಿದೆ ಎಲ್ಲರೂ ರಾಜೀನಾಮೆ ಕೊಡಿ ಎಂದು ಜಿಟಿಡಿ ಸವಾಲು ಹಾಕಿದರು.

ಶಾಸಕ ಜಿ ಟಿ ದೇವೇಗೌಡ ಭಾಷಣಕ್ಕೆ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಸಚಿವರು ಶಾಸಕರು ಫುಲ್ ಖುಷ್.

ಭಾಷಣ ಮುಗಿಸಿ ಬಂದ ಜಿ.ಟಿ ದೇವೇಗೌಡರಿಗೆ ಶಾಸಕರಾದ ರಮೇಶ್ ಬಂಡೀಸಿದ್ದೇಗೌಡ, ತನ್ವೀರ್ ಸೇಠ್‌ ಎದ್ದು ನಿಂತು ಗೌರವ ಸಲ್ಲಿಸಿದರೆ, ಸಚಿವ ಹೆಚ್. ಕೆ ಪಾಟೀಲ್, ವೆಂಕಟೇಶ್‌ ಹಸ್ತಲಾಘವ ಕೊಟ್ಟು ಅಭಿನಂದನೆ ಸಲ್ಲಿಸಿದ್ದು ವಿಶೇಷ.

ಸಿದ್ದು ಪರ ‌ಜಿ.ಟಿ.ದೇವೇಗೌಡ ಬ್ಯಾಟಿಂಗ್ Read More