ಯುವತಿಯ ಫೊನ್ ರಿಸೀವ್ ಮಾಡಿದ್ದಕ್ಕೆ‌ ಸ್ನೇಹಿತನನ್ನೇ ಕೊಂ*ದ ಗೆಳೆಯರು!

ಮೈಸೂರು: ಈ ಹುಡುಗರಿಗೆ ಅದೇನಾಗಿದೆಯೊ ಸಣ್ಣ,ಪುಟ್ಟ ‌ವಿಚಾರಕ್ಕೆಲ್ಲ ಕೊಲೆ ಮಾಡುವ ಮಟ್ಟಕ್ಕೆ ಹೋಗುತ್ತಾರೆ.ನಾಳಿನ ಭವಿಷ್ಯದ ಬಗ್ಗೆ ಅಂಜಿಕೆಯೇ ಇಲ್ಲದಂತಾಗಿದೆ.ಇಂತಹ ಕ್ಷುಲ್ಲಕ ‌ವಿಚಾರಕ್ಕೆ ಒಂದು ಕೊ*ಲೆ ಮಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಗೆಳತಿಯ ಫೋನ್ ರಿಸೀವ್ ಮಾಡಿದಕ್ಕೇ ಗೆಳೆಯನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಕೆಂಪಿಸಿದ್ದನ ಹುಂಡಿ ಗ್ರಾಮದಲ್ಲಿ ನಡೆದಿದೆ.

ಕೇವಲ ಫೋನ್ ರಿಸೀವ್ ಮಾಡಿದ್ದಕ್ಕೆ ಬೈಕ್ ನಲ್ಲಿ ಗುದ್ದಿ ಕಿರಣ್ ಎಂಬ ಯುವಕನನ್ನು
ಕೊಲೆ ಮಾಡಲಾಗಿದೆ‌ ಅಂದರೆ ಯುವಕರು ಯಾವ ಮಟ್ಟಕ್ಕೆ ಹೋಗಿದ್ದಾರೆ ಎಂಬ ಬಗ್ಗೆ ಪೊಷಕರು ಯೋಚಿಸಬೇಕಿದೆ.

ಘಟನೆ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 5 ಸ್ನೇಹಿತರ ವಿರುದ್ದ ಪ್ರಕರಣ ದಾಖಲಾಗಿದ್ದು ಇಬ್ಬರನ್ನ ಪೊಲೀಸರು ವಶಕ್ಕೆ ಪಡೆಯಲಾಗಿದೆ.

ಕೆಂಪಿಸಿದ್ದನಹುಂಡಿ ಗ್ರಾಮದ ವಸಂತ್ ಕುಮಾರ್, ಮಧುಸೂದನ್, ಚಂದ್ರು, ರವಿಚಂದ್ರ, ಸಿದ್ದರಾಜು ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.

ಜುಲೈ 15 ರಂದು ರವಿಚಂದ್ರನ್ ಎಂಬಾತನ ಹುಟ್ಟುಹಬ್ಬ ಇತ್ತು.‌ ಕೊಲೆಯಾದ ಕಿರಣ್ ಬರ್ತ್ ಡೇ ಪಾರ್ಟಿ ಆಚರಿಸಲು 5 ಮಂದಿ ಸ್ನೇಹಿತರ ಜೊತೆ ಹೊರಟಿದ್ದ. ಹೆಜ್ಜಿಗೆ ಸೇತುವೆಯ ತೋಪಿನ ಬಳಿ 6 ಮಂದಿ ಸೇರಿ ಪಾರ್ಟಿ ಶುರುಮಾಡಿದರು.

ವಸಂತ್ ಮೂತ್ರ ವಿಸರ್ಜನೆ ಮಾಡಲು ಸ್ವಲ್ಪದೂರ ಹೋಗಿದ್ದ,ಆಗ ವಸಂತ್ ಫೋನ್ ರಿಂಗ್ ಆಗಿದ್ದರಿಂದ ಕಿರಣ್ ರಿಸೀವ್ ಮಾಡಿದ.

ರಶ್ಮಿ ಎಂಬಾಕೆಯಿಂದ ಫೋನ್ ಬಂದಿತ್ತು.ಅದನ್ನು ನೋಡಿ ಯಾಕೆ ವಸಂತ್ ಮೊಬೈಲ್ ಗೆ ಫೋನ್ ಮಾಡಿದ್ದೀಯ ಎಂದು ಕಿರಣ್ ಪ್ರಶ್ನಿಸಿ ಸುಮ್ಮನಾಗಿಬಿಟ್ಟ.

ನಂತರ ಮತ್ತೆ ರಶ್ಮಿಯಿಂದ ಬಂದ ಫೋನ್ ವಸಂತ್ ರಿಸೀವ್ ಮಾಡಿದಾಗ ಕಿರಣ್ ರಿಸೀವ್ ಮಾಡಿದ್ದ ವಿಚಾರ ಗೊತ್ತಾಗಿದೆ.ಅಷ್ಟಕ್ಕೇ ಇಬ್ಬರ ನಡುವೆ ಜಗಳ ವಾಗಿದೆ.ವಸಂತ್ ಜೊತೆ ಸೇರಿದ ನಾಲ್ವರು ಸ್ನೇಹಿತರು ಕಿರಣ್ ಮೇಲೆ ಹಲ್ಲೆ ನಡೆಸಿ, ಸ್ಕೂಟರ್ ನಿಂದ ಗುದ್ದಿ ಕೆಳಗೆ ಬೀಳಿಸಿ ಹಲ್ಲೆ ಮಾಡಿ ಪರಾರಿಯಾದರು.

ಮಾಹಿತಿ ಅರಿತ ಸಹೋದರ ಸ್ಥಳಕ್ಕೆ ಧಾವಿಸಿ ಅಣ್ಣನನ್ನ ಆಸ್ಪತ್ರೆಗೆ ದಾಖಲಿಸಿದ. ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಮೃತಪಟ್ಟಿದ್ದಾರೆ.

ಯುವತಿಯ ಫೋನ್ ರಿಸೀವ್ ಮಾಡಿದ ಕಾರಣಕ್ಕೆ ಸ್ನೇಹಿತ ಎನ್ನುವುದನ್ನ ಮರೆತು ಗೆಳೆಯನನ್ನ ಕೊಲ್ಲುತ್ತಾರೆ ಎಂದರೆ ಗೆಳೆತನಕ್ಕೆ‌ ಬೆಲೆ ಎಲ್ಲಿದೆ ?ಇಂತಹ ಹುಡುಗರಿಗೆ ಬುದ್ದಿ ಹೇಳುವವರು ಯಾರು?.

ಯುವತಿಯ ಫೊನ್ ರಿಸೀವ್ ಮಾಡಿದ್ದಕ್ಕೆ‌ ಸ್ನೇಹಿತನನ್ನೇ ಕೊಂ*ದ ಗೆಳೆಯರು! Read More

ಪಾರ್ಟಿ ಮಾಡಿದ ಮತ್ತಿನಲ್ಲಿ ಸ್ನೇಹಿತರೇ ಸೇರಿ ಗೆಳೆಯನ ಕೊಂದರು

ಮೈಸೂರು,ಏ. 2: ಕುಡಿದ ಮತ್ತಿನಲ್ಲಿ ಗೆಳೆಯರೆ ಸೇರಿಕೊಂಡು ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಹೇಯ ಘಟನೆ ಮೈಸೂರು ಜಿಲ್ಲೆ ಬನ್ನೂರಿನಲ್ಲಿ ನಡೆದಿದೆ.

ವರುಣ್ (23)ಕೊಲೆಯಾದ ಯುವಕ. ಪೋಷಕ್ ಹಾಗೂ ಇತರರು ಕೊಲೆ ಮಾಡಿದ ಆರೋಪಿಗಳು.

ವರುಣ್ ಮತ್ತು ಪೋಷಕ್ ಮತ್ತಿತರ ಸ್ನೇಹಿತರು ತಡರಾತ್ರಿ ಪಾರ್ಟಿ ಮಾಡಿದ್ದಾರೆ,ಆಗ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ.

ಮನೆಗೆ ಹೋಗುವ ವೇಳೆ ವರುಣ್ ಗೆ ಪೋಷಕ್ ಹಾಗೂ ಆತನ ಸ್ನೇಹಿತರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಇದನ್ನೆಲ್ಲ ನೋಡಿದರೆ ಸ್ನೇಹಕ್ಕೂ ಬೆಲೆ ಇಲ್ಲ‌ ಎಂದಂತಾಯಿತು.

ಯಾವ ಉದ್ದೇಶಕ್ಕೆ ಕೊಲೆ ಮಾಡಿದ್ದಾರೆ ಎಂಬುದೇ ಗೊತ್ತಿಲ್ಲ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಕೊಲೆ ಮಾಡಿರುವ ನಾಲ್ಕು ಜನ ಆರೋಪಿಗಳನ್ನ ಬಂಧಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪಾರ್ಟಿ ಮಾಡಿದ ಮತ್ತಿನಲ್ಲಿ ಸ್ನೇಹಿತರೇ ಸೇರಿ ಗೆಳೆಯನ ಕೊಂದರು Read More