ಸ್ವಾತಂತ್ರ್ಯ ಹೋರಾಟಗಾರರ ಸಂಘದಿಂದ ಹುತಾತ್ಮ ದಿನ ಆಚರಣೆ

ಮೈಸೂರು: ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನ ಭವನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವತಿಯಿಂದ ಹುತಾತ್ಮ ದಿನ ಆಚರಿಸಲಾಯಿತು.

ಮಹಾತ್ಮ ಗಾಂಧಿ ಹುತಾತ್ಮ ದಿನ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷರಾದ ವೈ ಸಿ ರೇವಣ್ಣ ಅವರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ಸಂಘದ ಗೌರವಾಧ್ಯಕ್ಷರಾದ ಯೋಗಾನಂದ, ರವಿ,ನಗರಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್, ಹಾಗೂ ಸಂಘದ ಸದಸ್ಯರು ಮತ್ತಿತರರು ಹಾಜರಿದ್ದರು.

ಸ್ವಾತಂತ್ರ್ಯ ಹೋರಾಟಗಾರರ ಸಂಘದಿಂದ ಹುತಾತ್ಮ ದಿನ ಆಚರಣೆ Read More

ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಗಾಂಧಿ ಜಯಂತಿ

ಮೈಸೂರು: ಚಾಮುಂಡೇಶ್ವರಿ ಬಳಗ ಹಾಗೂ ಎಸ್ ಕೆ ಫೌಂಡೇಶನ್ ವತಿಯಿಂದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಮಹಾತ್ಮ ಗಾಂಧೀಜಿ ರವರ 155ನೇ ಜಯಂತಿ‌ ಆಚರಿಸಲಾಯಿತು.

ಈ ವೇಳೆ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಗಾಂಧಿ ಸ್ಮರಣೆ ಮಾಡಲಾಯಿತು.

ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್,ಸುಬ್ಬರಾಯನಕೆರೆ ರವಿಚಂದ್ರ, ಎಸ್ ಕೆ ಫೌಂಡೇಶನ್ ಅಧ್ಯಕ್ಷ ಸಂತೋಷ್ ಕಿರಾಳು, ರಾಕೇಶ್, ದುರ್ಗಾ ಪ್ರಸಾದ್, ಕಡಕೋಳ ಶಿವಲಿಂಗು, ಲೋಕೇಶ್, ಚೇತನ್, ಶಫೀ, ವರುಣ ಮಹದೇವ್, ಜಿ ರಾಘವೇಂದ್ರ,ಎಸ್ ಎನ್ ರಾಜೇಶ್, ರಾಜೇಶ್ ಪಳನಿ, ವಿನಯ್ ಕಣಗಾಲ್, ಹರೀಶ್ ನಾಯ್ಡು ಮತ್ತಿತರರು ಹಾಜರಿದ್ದರು.

ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಗಾಂಧಿ ಜಯಂತಿ Read More