ಗೌರಿ ಗಣೇಶ ಹಬ್ಬದ ವೇಳೆ ಉಚಿತ ಮಧುಮೇಹ, ರಕ್ತದೊತ್ತಡ ತಪಾಸಣೆ

ಮೈಸೂರು: ಮೈಸೂರಿನ ಕೆಎಚ್ ಬಿ ಕಾಲೋನಿ ಎನ್‍ಹೆಚ್ ಬಿ ನಿವಾಸಿಗಳ ಗಣಪತಿ ಸೇವಾ ಸಮಿತಿ ವತಿಯಿಂದ ಗೌರಿ ಗಣೇಶ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಕಾಲೋನಿಯ ನಿವಾಸಿಗಳ ಅನುಕೂಲಕ್ಕಾಗಿ ಸಮಿತಿ‌ ವತಿಯಿಂದ ಗೀತಾ ಡಯಾಗ್ನೋಸ್ಟಿಕ್ ಸೆಂಟರ್ ಸಹಯೋಗದಲ್ಲಿ ಉಚಿತ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆಯನ್ನು ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ನಿವಾಸಿಗಳು ಹಾಜರಿದ್ದರು.

ಗೌರಿ ಗಣೇಶ ಹಬ್ಬದ ವೇಳೆ ಉಚಿತ ಮಧುಮೇಹ, ರಕ್ತದೊತ್ತಡ ತಪಾಸಣೆ Read More

ಪಿ ಜಿ ಆರ್ ಎಸ್ ಎಸ್ ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮೈಸೂರು,ಆ.2: ಜಿಲ್ಲೆಯ ಹುಣಸೂರು ತಾಲೂಕು ಮನುಗನಹಳ್ಳಿ ಪಂಚಾಯಿತಿಗೆ ಸೇರಿದ ಅಂದರಹಳ್ಳಿ ಗ್ರಾಮದಲ್ಲಿ ವಿವಿಧ ಸಮಿತಿ ವತಿಯಿಂದ ಉಚಿತ ಆರೋಗ್ಯ ಮತ್ತು ಉಚಿತ ಕಣ್ಣಿನ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಯಿತು.

ಪಂಚಾಯಿತಿ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿ, ಮನುಗನಹಳ್ಳಿ ಪಂಚಾಯಿತಿ, ಸಮೃದ್ಧಿ ವಾರ್ತೆ ಪತ್ರಿಕೆ ಹಾಗೂ ಆರ್‌ ಟಿ ಐ ಮಾಹಿತಿ ಪತ್ರಿಕೆ ವತಿಯಿಂದ ನಾರಾಯಣ ಆಸ್ಪತ್ರೆ, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಹಲವಾರು ಗ್ರಾಮಸ್ಥರು ಭಾಗವಹಿಸಿ ತಪಾಸಣೆ ಮಾಡಿಸಿಕೊಂಡರು.

ಪಿ ಜಿ ಆರ್‌ಎಸ್ ಎಸ್ ಅಧ್ಯಕ್ಷರಾದ ಯಾದವ್ ಹರೀಶ್ ಮತ್ತು ಸೌಮ್ಯ ಸ್ವಾಮಿ, ಉಪಾಧ್ಯಕ್ಷರಾದ ಸತ್ಯ,ರಾಜ್ಯ ಸಂಚಾಲಕರಾದ ರಕ್ತದಾನಿ ಮಂಜು, ಖಜಂಚಿ ಮಂಜುಳಾ, ಕಾರ್ಯದರ್ಶಿ ರವೀಂದ್ರ,
ಪಂಚಾಯಿತಿ ಬಿಲ್ ಕಲೆಕ್ಟರ್ ಮಧು, ಅಟೆಂಡರ್ ನಾಗೇಶ್ ಹಾಗೂ ಅಂದರಹಳ್ಳಿ ಗ್ರಾಮದ ಹಿರಿಯ ನಾಗರಿಕರು, ಮಹಿಳೆಯರು ಭಾಗವಹಿಸಿದ್ದರು.

150ಕ್ಕೂ ಹೆಚ್ಚು ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಪಿ ಜಿ ಆರ್ ಎಸ್ ಎಸ್ ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ Read More

ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತಿಲ್ಲ: ಸಂದೇಶ್ ಸ್ವಾಮಿ

ಮೈಸೂರು: ಎಲ್ಲರೂ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಅದಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ,ಉತ್ತಮ ಆರೋಗ್ಯಕ್ಕೆ ಮುಂಜಾಗ್ರತೆಯೇ ಸಂಜೀವಿನಿ ಎಂದು ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ಹೇಳಿದರು.

ನಗರದ ಹಳೆ ಕೆಸರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಂದನಾ ಚಾರಿಟಬಲ್ ಟ್ರಸ್ಟ್, ವೀನಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ,ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಸಮೃದ್ಧಿ ಟ್ರಸ್ಟ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲೆಡೆ ರಕ್ತದೊತ್ತಡ,ಮಧುಮೇಹ ಸಾಮಾನ್ಯವಾಗಿದೆ. ಇದಕ್ಕೆ ಒತ್ತಡದ ಜೀವನಶೈಲಿ ಕಾರಣ.ಆರೋಗ್ಯದ ಕುರಿತು ಯಾರೂ ನಿರ್ಲಕ್ಷ ಮಾಡಬೇಡಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಎಂದು ಸಲಹೆ ನೀಡಿದರು.

ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಬಡ ಜನರು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ ಎಂದು ಸಂದೇಶ್ ಸ್ವಾಮಿ ಹೇಳಿದರು

ಶುದ್ಧ, ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯವಿದೆ,ಆರೋಗ್ಯ ಪೂರ್ಣ ಜೀವನ ಬಯಸುವವರು ಶುದ್ಧ ಮತ್ತು ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.

ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರು ಉಚಿತ ಕಣ್ಣಿನ ತಪಾಸಣೆ, ಬಿಪಿ, ಮಧುಮೇಹ, ಇಸಿಜಿ ಮತ್ತು ಸ್ತ್ರೀ ಸಂಬಂಧ ಸಮಸ್ಯೆಗಳ ಸ್ತ್ರೀ ಯೋಗ ತಜ್ಞರಿಂದ ಉಚಿತ ವೈದ್ಯಕೀಯ ತಪಾಸಣೆಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಂದನಾ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷರಾದ ಗೀತಾ,
ವೀನಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ. ಹರಿಣಿ, ಸಮೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಸಹನ, ಸಮಾಜ ಸೇವಕರಾದ ಮಾಲಿನಿ ಪಾಲಾಕ್ಷ,ಚಂದ್ರಿಕಾ ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಜರಿದ್ದರು.

ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತಿಲ್ಲ: ಸಂದೇಶ್ ಸ್ವಾಮಿ Read More

ಕಲಿಕೆ ಎಜುಕೇಷನ್‌ ಟ್ರಸ್ಟ್‌ ವಾರ್ಷಿಕೋತ್ಸವ:ಉಚಿತ ಆರೋಗ್ಯ ತಪಾಸಣೆ

ಮೈಸೂರು: ಕಲಿಕೆ ಎಜುಕೇಷನ್‌ ಟ್ರಸ್ಟ್‌
ಮೊದಲನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದುದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಂಡರು.

ಸಮೃದ್ಧಿವಾರ್ತೆ ಪತ್ರಿಕೆ,ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಮತ್ತು ಕೆವಿಸಿ ಆಸ್ಪತ್ರೆಯ ಸಹಯೋಗದೊಂದಿಗೆ ಭಾನುವಾರ ವಿಜಯನಗರ 4 ನೇ ಹಂತ 1 ನೇ ಘಟ್ಟದಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಶಾಸಕರುಗಳಾದ ಜಿ.ಟಿ. ದೇವೇಗೌಡ ಮತ್ತು ದರ್ಶನ್ ಧೃವ ನಾರಾಯಣ ಅವರು ಶಿಬಿರಕ್ಕೆ ಚಾಲನೆ ನೀಡಿದರು.

ಈ ವೇಳೆ ನೂರಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಕಲಿಕೆ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕರಾದ ಮದಕರಿನಾಯಕ, ಅಮೂಲ್ಯ ನಾಗೇಂದ್ರ, ಒಂದು ಹೆಜ್ಜೆ ರಕ್ತದಾನಿಗಳ ಬಳಗದ ಅಧ್ಯಕ್ಷ ರಕ್ತದಾನಿ ಮಂಜು,ಸಮೃದ್ಧಿ ಟ್ರಸ್ಟನ ಸಹನಗೌಡ ಮತ್ತಿತರರು ಉಪಸ್ಥಿತರಿದ್ದರು.

ಕಲಿಕೆ ಎಜುಕೇಷನ್‌ ಟ್ರಸ್ಟ್‌ ವಾರ್ಷಿಕೋತ್ಸವ:ಉಚಿತ ಆರೋಗ್ಯ ತಪಾಸಣೆ Read More

ಕಲಿಕೆ ಶಿಕ್ಷಣ ಟ್ರಸ್ಟ್ ವಾರ್ಷಿಕೋತ್ಸವ:ಫೆ.23ಕ್ಕೆಉಚಿತ ವೈದ್ಯಕೀಯ ಶಿಬಿರ

ಮೈಸೂರು: ಮೈಸೂರಿನ ಕಲಿಕೆ ಶಿಕ್ಷಣ ಟ್ರಸ್ಟ್ ತನ್ನ ಮೊದಲ ವಾರ್ಷಿಕೋತ್ಸವವನ್ನು
ಉಚಿತ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳುವ ಮೂಲಕ ವಿಶೇಷವಾಗಿ ಆಚರಿಸುತ್ತಿದೆ,

ಶಿಬಿರವು ಫೆ.23 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮೈಸೂರಿನ ವಿಜಯನಗರ 4 ನೇ ಹಂತ, 1 ನೇ ಹಂತದಲ್ಲಿರುವ ಕಲಿಕೆ ಶಿಕ್ಷಣ ಟ್ರಸ್ಟ್ ಕಚೇರಿಯಲ್ಲಿ ನಡೆಯಲಿದೆ.

ಕಲಿಕೆ ಟ್ರಸ್ಟ್, ಅಗತ್ಯವಿರುವವರಿಗೆ ಉಚಿತ ಶೈಕ್ಷಣಿಕ ಕಾರ್ಯಾಗಾರಗಳು, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ವಿದ್ಯಾರ್ಥಿವೇತನಗಳು, ಆರ್ಥಿಕ ನೆರವು ಮತ್ತು ವೈದ್ಯಕೀಯ ನೆರವು ನೀಡಲು ಬದ್ಧವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ‌ ಕಲಿಕೆ ಎಜುಕೇಶನ್ ಟ್ರಸ್ಟ್ ನ ಮುಖ್ಯಸ್ಥರಾದ ಶಿವು ಮತ್ತು ಅಮೂಲ್ಯ ತಿಳಿಸಿದರು

ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ‌ ಶಾಸಕರುಗಳಾದ ಜಿ.ಟಿ. ದೇವೇಗೌಡ,
ಕೆ. ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ,ಮಾಜಿ ಸಂಸದ
ಪ್ರತಾಪ್ ಸಿಂಹ ಮತ್ತಿತರರು ಭಾಗವಹಿಸುವರು.

ಉಚಿತ ವೈದ್ಯಕೀಯ ಶಿಬಿರದಲ್ಲಿ
ಕೆವಿಸಿ ಆಸ್ಪತ್ರೆ ವೈದ್ಯಕೀಯ ಸಮಾಲೋಚನೆಗಳ ಜೊತೆಗೆ ಬಿಪಿ, ಸಕ್ಕರೆ ಮತ್ತು ಸ್ತ್ರೀರೋಗ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್‌ನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಕಣ್ಣಿನ ತಪಾಸಣೆ ಮತ್ತು ಕಡಿಮೆ ವೆಚ್ಚದ ಶಸ್ತ್ರಚಿಕಿತ್ಸೆಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಮೊದಲ 30 ಜನರಿಗೆ ಅರ್ಹರಿಗೆ ಕನ್ನಡಕಗಳನ್ನು ನೀಡಲಾಗುವುದು ಮತ್ತು ಸುಮಾರು 10-12 ವ್ಯಕ್ತಿಗಳಿಗೆ ಕಡಿಮೆ ವೆಚ್ಚದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ‌ ಎಂದು ತಿಳಿಸಿದ್ದಾರೆ.

ಉಚಿತ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಲು ಮತ್ತು ಆರೋಗ್ಯ ಸೇವೆಗಳ ಪ್ರಯೋಜನವನ್ನು ಎಲ್ಲರೂ ಪಡೆಯಬೇಕೆಂದು ಟ್ರಸ್ಟ್ ನ ಶಿವು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷರಾದ ರಕ್ತದಾನಿ ಮಂಜು ಅವರೊಂದಿಗೆ ಶಿವು ಮತ್ತು ಅಮೂಲ್ಯ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು.

ಕಲಿಕೆ ಶಿಕ್ಷಣ ಟ್ರಸ್ಟ್ ವಾರ್ಷಿಕೋತ್ಸವ:ಫೆ.23ಕ್ಕೆಉಚಿತ ವೈದ್ಯಕೀಯ ಶಿಬಿರ Read More

ರೋಗ ಬರುವ ಮನ್ನ ಎಚ್ಚರ ವಹಿಸಿದರೆ ಒಳಿತು:ಹರೀಶ್ ಗೌಡ ಸಲಹೆ

ಮೈಸೂರು: ರೋಗಗಳು ಬರುವ ಮನ್ನ ಎಚ್ಚರ ವಹಿಸಿದರೆ ಆಸ್ಪತ್ರೆ ಮತ್ತು ಔಷಧಿಗಳಿಂದ ದೂರವಿರಬಹುದು ಎಂದು ಶಾಸಕ‌ ಹರೀಶ್ ಗೌಡ ಹೇಳಿದರು.

ನಗರದ ಭಾವಸಾರ‌ ಕ್ಷತ್ರಿಯ ಶ್ರೀ ಪಾಂಡುರಂಗ ವಿಠಲ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ಏಡ್ಸ್
ಪ್ರಿವೆನ್‌ಷನ್ ಸೊಸೈಟಿ, ಹಾಗೂ ಜಿಲ್ಲಾ ಪಂಚಾಯತ್, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಮೈಸೂರು ಸೇರಿದಂತೆ ವಿವಿಧ ಆಸ್ಪತ್ರೆಗಳು ಸಂಘ,ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯವಾಗಿದ್ದರೆ ಸುಖವಾಗಿ ಬಾಳಬಹುದು, ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ಸುರಿಯಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಎಂದು ಕಿವಿಮಾತು‌ ಹೇಳಿದರು.

ಉಚಿತ ಆರೋಗ್ಯ ಶಿಬಿರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಇಂತಹ ಶಿಬಿರಗಳನ್ನು ನಗರದಲ್ಲಿ ಹೆಚ್ಚಾಗಿ ಆಯೋಜಿಸಬೇಕು ಎಂದು ಹರೀಶ್ ಗೌಡ ಸಲಹೆ ನೀಡಿದರು.

ಶಿಬಿರದಲ್ಲಿ 300ಕ್ಕೂ ಹೆಚ್ಚು ಮಂದಿ ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯ ಪಡೆದುಕೊಂಡರು

ಈ ಸಂದರ್ಭದಲ್ಲಿ ಜಿಲ್ಲಾ ಏಡ್ಸ್ ಹಾಗೂ ನಿಯಂತ್ರಣ ಅಧಿಕಾರಿ ಡಾ. ಜಯಂತ್, ಜಿಲ್ಲಾ ಮೇಲ್ವಿಚಾರಕರಾದ ಸವಿತಾ ಬಿ,
ಇಎಸ್ಐ ಆಸ್ಪತ್ರೆಯ ವೈದ್ಯಾಧಿಕಾರಿ ಕೆ ಟಿ ಅನಿತಾ,ಆಪ್ತ ಸಮಾಲೋಚಕರು ಚಂದ್ರಕಲಾ, ವಿ ಬಿ ನಾಗೇಂದ್ರ ಪ್ರಸಾದ್, ಎಸ್ ಗೋಪಾಲ್, ಸಿದ್ದೇಶ್ವರಪ್ಪ, ಭಾವಸಾರ ಕ್ಷತ್ರಿಯ ಮಂಡಳಿಯ ಪಾಂಡುರಂಗ ವಿಠಲ ದೇವಸ್ಥಾನದ ಅಧ್ಯಕ್ಷರಾದ ಶಿವಾಜಿ ರಾವ್, ಕಾರ್ಯದರ್ಶಿ ಗಿರೀಶ್,
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸ್ಥಳೀಯ ಮುಖಂಡರಾದ ರಾಜಕೀಯ ರವಿ, ರಾಕೇಶ್ ನಾಯಕ್, ಶ್ರೀನಿವಾಸ್ ಪತಂಗೆ, ನಾಗರಾಜ್ ಪತಂಗೆ, ರಮೇಶ್ , ಉಮಾ ಶಂಕರ್, ಚಂದ್ರಪ್ಪ, ಮನ್ ಕಿ ಬಾತ್ ಸಂತೋಷ್, ಅಶೋಕ್, ಪಿಪಿ ತೇಜಾವತಿ, ಕೆ ವೈ ರಾಧಾಮಣಿ, ಯಶೋದಮ್ಮ ಮತ್ತಿತರರು ಹಾಜರಿದ್ದರು.

ರೋಗ ಬರುವ ಮನ್ನ ಎಚ್ಚರ ವಹಿಸಿದರೆ ಒಳಿತು:ಹರೀಶ್ ಗೌಡ ಸಲಹೆ Read More