ಗಮನ ಸೆಳೆಯುತಿದೆ ದಸರಾ ಫಲಪುಷ್ಪ ಪ್ರದರ್ಶನ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಸಿಎಂ ಸಿದ್ದರಾಮಯ್ಯ ಅವರು, ದಸರಾ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಗಾಜಿನ ಮನೆಯ ಗಾಂಧಿ ಮಂಟಪದಲ್ಲಿ ಹಸಿರು ಟೇಪ್ ಕತ್ತರಿಸಿ ಉದ್ಘಾಟನೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಮಹದೇವಪ್ಪ, ಶಾಸಕ ಹರೀಶ್ ಗೌಡ, ರವಿಶಂಕರ್, ಸಂಸದ ಸುನೀಲ್ ಬೋಸ್ ಸಾಥ್ ನೀಡಿದರು.

ಮೈಸೂರಿನ ಕುಪ್ಪಣ್ಣ ಪಾರ್ಕ್‌‌ನಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದ್ದು,ಈ ಬಾರಿ ಕನ್ಯಾಕುಮಾರಿಯ ಗಾಂಧಿ ಮ್ಯೂಸಿಯಂ ಮಾದರಿ ನಿರ್ಮಾಣ ಮಾಡಲಾಗಿದೆ.

25ಕ್ಕೂ ಹೆಚ್ಚು ಬಗೆಯ ಲಕ್ಷಾಂತರ ಹೂಗಳಿಂದ ವಿವಿಧ ಕಲಾಕೃತಿಗಳು ಕಣ್ಮನ ಸೆಳೆಯುತ್ತಿದೆ. ಆಪರೇಷನ್ ಸಿಂಧೂರ ನೆನಪಿಸುವ ಕಲಾಕೃತಿಗಳು ನೋಡುಗರ ಗಮನಸೆಳೆಯುತ್ತಿವೆ.

ಭಾರತೀಯ ವಾಯುಪಡೆ, ಭೂಸೇನೆ, ನೌಕಾಪಡೆ ಮಾಡೆಲ್‌ ಬಣ್ಣಬಣ್ಣದ ಹೂಗಳಿಂದ ಅರಳಿವೆ. ಭಾರತೀಯ ಸೇನೆಯ ಹೆಮ್ಮೆಯ ಕಲಾಕೃತಿ ರಚನೆ ಮಾಡಲಾಗಿದೆ.ಇನ್ನು ಕೆಂಪು ಗುಲಾಬಿ, ವಿವಿಧ ಬಣ್ಣದ ಹೂ ಮಿಶ್ರಿತ ಅಂಬಾರಿ ಹೊತ್ತ ಆನೆ ಆಕರ್ಷಣೀಯವಾಗಿದ್ದರೆ,ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಕಲಾಕೃತಿ ನೋಡುಗರ ಗಮನ ಸೆಳೆಯುತ್ತಿದೆ.

ಗಮನ ಸೆಳೆಯುತಿದೆ ದಸರಾ ಫಲಪುಷ್ಪ ಪ್ರದರ್ಶನ Read More

ಶನಿವಾರ ಸಂಜೆಯಿಂದ ಅರಮನೆಯಲ್ಲಿ ಮಾಗಿ ಉತ್ಸವ

ಮೈಸೂರು: ಮೈಸೂರಿನ ಸುಂಧರ ಅರಮನೆಯಲ್ಲಿ ಮಾಗಿ ಉತ್ಸವ ಆರಂಭವಾಗಲಿದೆ.

ಮಾಗಿ ಉತ್ಸವದ ಅಂಗವಾಗಿ ಮೈಸೂರು ಅರಮನೆಯ ಆವರಣದಲ್ಲಿ 11 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಇಂದು ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಅವರು ಚಾಲನೆ ನೀಡಲಿದ್ದಾರೆ.

ಹಲವು ವೈಶಿಷ್ಟಗಳೊಂದಿಗೆ ಆಯೋಜಿಸಲಾಗಿರುವ ಮಾಗಿ ಉತ್ಸವದಲ್ಲಿ 25,000 ಹೂವಿನ ಕುಂಡಗಳಲ್ಲಿ ಮೇರಿ ಗೋಲ್ಡ್, ಸಾಲ್ವಿಯ, ಡೇಲಿಯ, ಕೋಲಿಯಸ್, ಸೇವಂತಿಗೆ, ಪಿಟೋನಿಯ ಸಿಲೋಶಿಯ, ಜಿರೇನಿಯಂ, ಕಾಶಿಗೊಂಡೆ ಸೇರಿದಂತೆ 35ಕ್ಕೂ ಹೆಚ್ಚು ವಿವಿಧ ಬಗೆಯ ಹೂವಿನ ಗಿಡಗಳನ್ನು ಬೆಳೆಸಿ ಜೋಡಿಸಲಾಗಿದೆ.

ಅಲಂಕಾರಿಕ ಹೂಗಳಿಂದ ವಿವಿಧ ಆಕೃತಿಗಳನ್ನು ಸಿದ್ಧಗೊಳಿಸಲಾಗಿದೆ.

ಸಾವಿರಾರು ಹೂಗಳಿಂದ ಅಕ್ಷರಧಾಮ ಮಾದರಿಯನ್ನು ಸಿದ್ಧಪಡಿಸಲಾಗಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಆಕೃತಿ, ನಂಜುಂಡೇಶ್ವರ ದೇವಾಲಯ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ಮಾದರಿಯ ಆಕೃತಿಗಳು, ಆನೆ, ಆಮೆ, ರಾಜವಂಶದ ಲಾಂಛನ ಗಂಡಭೇರುಂಡ ಸೇರಿದಂತೆ ಇನ್ನೂ ಹಲವು ಮಾದರಿಗಳನ್ನು ಹೂಗಳಿಂದ ಸಿದ್ಧಪಡಿಸಲಾಗಿದೆಲ್ದು ಮನಸಳೆಯುತ್ತಿವೆ.

ಈ ಫಲಪುಷ್ಪ ಪ್ರದರ್ಶನದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಶುಲ್ಕವನ್ನು ನಿಗಧಿ ಗೊಳಿಸಲಾಗಿದ್ದು ಭಾರತೀಯ ಹಾಗೂ ವಿದೇಶ ವಯಸ್ಕರಿಗೆ 30 ರೂ., 10 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ, ಹತ್ತರಿಂದ ಹದಿನಾರು ವರ್ಷದ ಮಕ್ಕಳಿಗೆ ರೂ. 10 ಪ್ರವೇಶ ದರವನ್ನು ನಿಗಧಿಗೊಳಿಸಲಾಗಿದೆ.

ಶನಿವಾರ ಸಂಜೆಯಿಂದ ಅರಮನೆಯಲ್ಲಿ ಮಾಗಿ ಉತ್ಸವ Read More

ಡಿ.21ರಿಂದ ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನ;ಸಾಂಸ್ಕೃತಿಕ ಕಾರ್ಯಕ್ರಮ

ಮೈಸೂರು: ವರ್ಷದ ಕೊನೆ ವಾರದಲ್ಲಿ ಮೈಸೂರಿನ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ, ವಿವಿಧ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ

ಅರಮನೆ ಮಂಡಳಿ ವತಿಯಿಂದ ಡಿ. 21ರಿಂದ ಡಿ. 31ರ ವರೆಗೆ 11 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಜೊತೆಗೆ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮುದ ನೀಡಲಿವೆ.

ಡಿ. 21ರ ಸಂಜೆ 5 ಗಂಟೆಗೆ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಚಾಲನೆ ನೀಡಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಉಪಸ್ಥಿತರಿರುವರು.

ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆವರೆಗೆ ಅವಕಾಶವಿದೆ. ವಯಸ್ಕರು ಹಾಗೂ ವಿದೇಶಿಯರಿಗೆ 30 ರೂ. ಹಾಗೂ 10ರಿಂದ 18 ವರ್ಷದೊಳಗಿನ ಮಕ್ಕಳಿಗೆ 20 ರೂ. ಪ್ರವೇಶ ದರ ಇದೆ, 10 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಸುಮಾರು 25,000 ವಿಭಿನ್ನ ರೀತಿಯ ಅಲಂಕಾರಿಕ ಹೂವಿನ ಕುಂಡಗಳು, ಮೆರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯ, ನಸ್ಪರ್‌ಸಿಯಂ, ಆಂಟಿರೈನಂ, ವರ್ಬಿನ, ಜಿರೇನಿಯಂ, ಕಾಶಿಗೊಂಡೆ, ಆಸ್ಟರ್, ಗೈರಾಲ್ಡಿಯಾ, ಸೈಡರ್, ಬೋನ್ಸಾಯ್ ಗಿಡಗಳು ಸೇರಿದಂತೆ 35 ಜಾತಿಯ ಹೂವಿನ ಗಿಡಗಳು ಹಾಗೂ ಅಂದಾಜು 6 ಲಕ್ಷ ವಿವಿಧ ಹೂವುಗಳಾದ ಗುಲಾಬಿಗಳು, ಕ್ರೈಸಾಂಥಿಮಮ್, ಪಿಂಗ್ ಪಾಂಗ್, ಕಾರ್ನೆಷನ್, ಆಸ್ಟಮೇರಿಯ, ಜರ್ಬೆರಾ, ಆಂಥೋರಿಯಮ್, ಆರ್ಕಿಡ್ಸ್, ಬ್ಲೂಡೈಸಿ ಮತ್ತಿತರ ಅಲಂಕಾರಿಕ ಹೂವುಗಳು ಹಾಗೂ ಊಟಿ ಕಟ್ ಪ್ಲವರ್‌ ಗಳಿಂದ ಅಲಂಕರಿಸಲಾಗಿರುತ್ತದೆ.

ನವದೆಹಲಿಯ ಅಕ್ಷರಧಾಮ, ಮುಮ್ಮಡಿ ಕೃಷ್ಣರಾಜ ಒಡೆಯರ್, ನಂಜನಗೂಡಿನ ನಂಜುಂಡೇಶ್ವರ, ಹದ್ದು, ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳು, ಮರಿಯಾನೆ, ಗಂಡಭೇರುಂಡ, ಆಮೆ, ವನ್ಯಜೀವಿಗಳು, ಕಾರ್ಗಿಲ್ ಯುದ್ಧ ಸ್ಮಾರಕ, ನವಿಲು, ಸಂವಿಧಾನ ಪೀಠಿಕೆ ಮಾದರಿ ಚಿತ್ರಗಳನ್ನು ಹೂವಿನಿಂದ ಅಲಂಕರಿಸಲಾಗುತ್ತದೆ.
ಡಿ. 22ರಿಂದ ನಿತ್ಯ 7ರಿಂದ 9ರವರೆಗೆ ಅರಮನೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿದೆ.

ಡಿ. 31ರಂದು ರಾತ್ರಿ 11ರಿಂದ 12ರವರೆಗೆ ಪೊಲೀಸ್ ಬ್ಯಾಂಡ್ ವಾದ್ಯ ಸಂಗೀತ ಇರಲಿದೆ. ಅಂದು ಮಧ್ಯರಾತ್ರಿ 12ರಿಂದ 12.15ರವರೆಗೆ ಹಸಿರು ಪಟಾಕಿಯ ಬಾಣ- ಬಿರುಸುಗಳಿಂದ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ.

ಡಿ. 21ರಂದು ಸಂಜೆ 5.30ಕ್ಕೆ ಸಿ.ಆರ್.ರಾಘವೇಂದ್ರ ರಾವ್ ಅವರಿಂದ ವಾದ್ಯಸಂಗೀತ, ಸಂಜೆ 7ಕ್ಕೆ ಎ.ಆರ್.ಕಲಾ ಅವರಿಂದ ನಾಡಗೀತೆ ಸಂಸ್ಥಾನ ಗೀತೆ ಗಾಯನ 7.30ರಿಂದ ಮಧುಬಾಲಕೃಷ್ಣನ್ ಅವರಿಂದ ಸಂಗೀತ ಸಂಜೆ

ಡಿ.22ರಂದು ಸಂಜೆ 6ಕ್ಕೆ ರಘು ಮತ್ತು ತಂಡದಿಂದ ಗೀತ ಗಾಯನ 6.45ಕ್ಕೆ ಭಾರತೀಯ ವಿದ್ಯಾಭವನ ವಿದ್ಯಾರ್ಥಿಗಳಿಂದ ನೃತ್ಯ ರೂಪಕ 7.30ರಿಂದ ವಿಜಯಪ್ರಕಾಶ್ ಅವರಿಂದ ಸಂಗೀತ ರಸಸಂಜೆ.

ಡಿ.23ರಂದು ಸಂಜೆ 6ಕ್ಕೆ ಎಂ.ಡಿ.ಆಯುಷ್ ಮತ್ತು ತಂಡದಿಂದ ಶಾಸ್ತ್ರೀಯ ಸಂಗೀತ, 7ರಿಂದ ಆನೂರು ಅನಂತಕೃಷ್ಣಶರ್ಮ ಅವರಿಂದ ‘ಲಯ- ಲಾವಣ್ಯ’

ಡಿ.24ರಂದು ಸಂಜೆ 6ಕ್ಕೆ ಷಡಜ್ ಗೋಡ್ಬಂಡಿ- ಅಪೂರ್ವ ಕೃಷ್ಣ ಅವರಿಂದ ಕೊಳಲು- ವಯಲಿನ್ ಪ್ಯೂಷನ್ ಸಂಗೀತ, 7ಕ್ಕೆ ಹಿಂದೂಸ್ಥಾನಿ ಸಂಗೀತ- ಸಿದ್ದಾರ್ಥ ಬೆಲ್ಮಣ್ಣು ಗಂಜೀಫ ರಘುಪತಿ ಭಟ್ ಅವರಿಂದ ‘ದಾಸವಾಣಿ ಚಿತ್ರಣ’ 8ಕ್ಕೆ ಚಂಪಕ ಅಕಾಡೆಮಿ ಅವರಿಂದ ನೃತ್ಯರೂಪಕ

ಡಿ.25ರಂದು ಸಂಜೆ 5.45ರಿಂದ ನಾಹರ್ ಗುರುದತ್ತ ಅವರಿಂದ ಶಾಸ್ತ್ರೀಯ ಸಂಗೀತ, ಕೇಶವಚಂದ್ರ ಅವರಿಂದ ದ್ವಂದ್ವ ವೇಣುವಾದನ. ಸಂಜೆ 7ರಿಂದ 9ರವರೆಗೆ ಗಾಯಕರಾದ ದರ್ಶನ್ ನಾರಾಯಣ್ ಐಶ್ವರ್ಯ ರಂಗರಾಜನ್ ಸುನಿಲ್ ಗುಜಗೊಂಡ್ ವಸುಶ್ರೀ ಹಳೆಮನೆ ಜ್ಞಾನಗುರುರಾಜ್ ಅವರಿಂದ ‘ಸಂಗೀತ ಯಾನ’

ಡಿ.31ರಂದು ರಾತ್ರಿ 11ಕ್ಕೆ ಪೊಲೀಸ್ ಬ್ಯಾಂಡ್ ವಾದ್ಯ ಸಂಗೀತ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.

ಡಿ.21ರಿಂದ ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನ;ಸಾಂಸ್ಕೃತಿಕ ಕಾರ್ಯಕ್ರಮ Read More