ಕಲಿಕೆ ಎಜುಕೇಷನ್ ಟ್ರಸ್ಟ್ ವಾರ್ಷಿಕೋತ್ಸವ:ಉಚಿತ ಆರೋಗ್ಯ ತಪಾಸಣೆ
ಮೈಸೂರು: ಕಲಿಕೆ ಎಜುಕೇಷನ್ ಟ್ರಸ್ಟ್
ಮೊದಲನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದುದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಂಡರು.
ಸಮೃದ್ಧಿವಾರ್ತೆ ಪತ್ರಿಕೆ,ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಮತ್ತು ಕೆವಿಸಿ ಆಸ್ಪತ್ರೆಯ ಸಹಯೋಗದೊಂದಿಗೆ ಭಾನುವಾರ ವಿಜಯನಗರ 4 ನೇ ಹಂತ 1 ನೇ ಘಟ್ಟದಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಶಾಸಕರುಗಳಾದ ಜಿ.ಟಿ. ದೇವೇಗೌಡ ಮತ್ತು ದರ್ಶನ್ ಧೃವ ನಾರಾಯಣ ಅವರು ಶಿಬಿರಕ್ಕೆ ಚಾಲನೆ ನೀಡಿದರು.

ಈ ವೇಳೆ ನೂರಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಕಲಿಕೆ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕರಾದ ಮದಕರಿನಾಯಕ, ಅಮೂಲ್ಯ ನಾಗೇಂದ್ರ, ಒಂದು ಹೆಜ್ಜೆ ರಕ್ತದಾನಿಗಳ ಬಳಗದ ಅಧ್ಯಕ್ಷ ರಕ್ತದಾನಿ ಮಂಜು,ಸಮೃದ್ಧಿ ಟ್ರಸ್ಟನ ಸಹನಗೌಡ ಮತ್ತಿತರರು ಉಪಸ್ಥಿತರಿದ್ದರು.
ಕಲಿಕೆ ಎಜುಕೇಷನ್ ಟ್ರಸ್ಟ್ ವಾರ್ಷಿಕೋತ್ಸವ:ಉಚಿತ ಆರೋಗ್ಯ ತಪಾಸಣೆ Read More
