ಬೆಳೆಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಸ್ಪರ್ಷಿಸಿ ತಾಯಿ ಮಗ ಸಾವು

ಹುಣಸೂರು: ಬೆಳೆಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಸ್ಪರ್ಷಿಸಿ ತಾಯಿ ಮಗ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಹುಣಸೂರು ತಾಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ತಾಯಿ ನೀಲಮ್ಮ ಮಗ ಹರೀಶ್ ಮೃತಪಟ್ಟ ದುರ್ದೈವಿಗಳು.

ತಾಯಿ ಮಗ ತಮ್ಮದೇ ಜಮೀನಿನಲ್ಲಿ ಬೆಳೆಗೆ ಔಷಧಿ ಸಿಂಪಡಿಸುತ್ತಿದ್ದರು.ಜಮೀನಿಗೆ ಹೊಂದಿಕೊಂಡಿರುವ ಸ್ಮಶಾನದಲ್ಲಿ ಹೈಟೆನ್ಷನ್ ವಿದ್ಯುತ್ ಸಂಪರ್ಕಕ್ಕೆ ಗ್ರೌಂಡಿಂಗ್ ಮಾಡಲಾಗಿದೆ.ಸ್ಮಶಾನಕ್ಕೆ ಅಳವಡಿಸಿರುವ ಬೇಲಿಗೆ ಗ್ರೌಂಡಿಂಗ್ ವೈರ್ ಸಂಪರ್ಕಿಸಿದೆ.

ಔಷಧಿ ಸಿಂಪಡಿಸುವ ವೇಳೆ ಬೇಲಿ ಬಳಿ ಬಂದಾಗ ನೀಲಮ್ಮಗೆ ವಿದ್ಯುತ್ ಸ್ಪರ್ಷಿಸಿದೆ.ತಾಯಿಯ ನೆರವಿಗೆ ಧಾವಿಸಿದ ಹರೀಶ್ ಗೂ ವಿದ್ಯುತ್ ಸ್ಪರ್ಷಿಸಿದೆ.ತಾಯಿ ಮಗ ಇಬ್ಬರೂ ಸಾವನ್ನಪ್ಪಿದ್ದಾರೆ.

ರಾತ್ರಿ 8 ಗಂಟೆ ಆದರೂ ತಾಯಿ ಮಗ ಮನೆಗೆ ಹಿಂದಿರುಗದ ಕಾರಣ ಮನೆಯವರು ಜಮೀನಿಗೆ ತೆರಳಿ ಪರಿಶೀಲಿಸಿದಾಗ ತಾಯಿ ಮಗನ ಮೃತದೇಹ ಕಂಡುಬಂದಿದೆ.

ಸ್ಥಳಕ್ಕೆ ವಿದ್ಯುತ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೆಳೆಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಸ್ಪರ್ಷಿಸಿ ತಾಯಿ ಮಗ ಸಾವು Read More

ಕೌಟುಂಬಿಕ ಕಲಹ:ಇಬ್ಬರ ಮಕ್ಕಳ ಕೊಂದ ಪಾಪಿ ಅಪ್ಪ

ಯಾದಗಿರಿ: ಮಕ್ಕಳಿಗೆ‌ ತಾಯಿ ದೇವತೆಯಾದರೆ ತಂದೆ ಕೂಡಾ‌ ದೇವರ ಸಮಾನ,ಆದರೆ‌ ಅಂತಹ ಸ್ಥಾನದಲ್ಲಿರು ಅಪ್ಪ ತನ್ನ ಇಬ್ಬರು ಮಕ್ಕಳನ್ನು ಕೊಂದ ಹೇಯ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಶರಣಪ್ಪ ದುಗನೂರ ಎಂಬ ವ್ಯಕ್ತಿ ತನ್ನದೇ ಮಕ್ಕಳನ್ನು ನಿರ್ದಯ ವಾಗಿ ಕೊಂದುಬಿಟ್ಟಿದ್ದಾನೆ.

ಈತ ಪತ್ನಿಯ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ.ಅದೇನಾಯಿತೊ ಗುರುವಾರ ಮುಂಜಾನೆ ಪತ್ನಿ ಬಹಿರ್ದೇಸೆಗೆ ಹೋಗಿದ್ದಾಗ ಮಂಚದ ಮೇಲೆ ಸಿಹಿ ನಿದ್ರೆಯಲ್ಲಿದ್ದ ಮೂರೂ ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ.

ಇದರಿಂದ ಇಬ್ಬರು ಮಕ್ಕಳು ಮಲಗಿದ್ದಲ್ಲೇ ಮೃತಪಟ್ಟರೆ ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದೆ.

ಪುತ್ರ ಭಾರ್ಗವ(5), ಪುತ್ರಿ ಸಾನ್ವಿ(3) ಮೃತ ದುರ್ದೈವಿಗಳು.

ಗಾಯಗೊಂಡ ಹೇಮಂತ (8) ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ವೈಧ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕಳಿಸಲಾಗಿದೆ.

ಕೊಲೆ ಮಾಡಿ ನಂತರ ಪಾಪಿ ಅಪ್ಪ ಪರಾರಿಯಾಗಿದ್ದಾನೆ.

ಕೆಲವು ವರ್ಷಗಳಿಂದ ಶರಣಪ್ಪ ಹಾಗೂ ಪತ್ನಿ ಪದೇ ಪದೇ ಜಗಳವಾಡುತ್ತಿದ್ದರು, ಇದನ್ನು ಗಮನಿಸಿದ ಪತ್ನಿಯ ತಂದೆ-ತಾಯಿ ಸ್ವಗ್ರಾಮ ಕೊಡ್ಲಾಕ್ಕೆ ೮ ತಿಂಗಳ ಹಿಂದೆ ಮಗಳು ಹಾಗೂ ಇಬ್ಬರು ಮೊಮ್ಮಕ್ಕಳನ್ನು ಕರೆದುಕೊಂಡು ಹೋಗಿದ್ದರು.

ನಂತರ ರಾಜಿ ಪಂಚಾಯಿತಿ ಮಾಡಲಾಗಿತ್ತು.

ಶರಣಪ್ಪನಿಗೆ ಸ್ವಲ್ಪ ಮಾನಸಿಕ ರೋಗವಿದ್ದುದರಿಂದ ಚಿಕಿತ್ಸೆ ಕೊಡಿಸಿ ಸರಿಯಾಗಿರುವುದಾಗಿಯೂ ಪತ್ನಿ ಜೊತೆ ಸಂಸಾರ ಮಾಡುವುದಾಗಿ ತಿಳಿಸಿದ್ದರಿಂದ ಇತ್ತೀಚೆಗೆ ಪತ್ನಿ ಮಕ್ಕಳನ್ನು ಹತ್ತಿಕುಣಿಗೆ ಕರೆ ತರಲಾಗಿತ್ತು.

ಸ್ಥಳಕ್ಕೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಗ್ರಾಮೀಣ ಪಿಎಸ್‌ಐ ಹಣಮಂತ ಬಂಕಲಗಿ ಭೇಟಿ ನೀಡಿ, ಪರಿಶೀಲಿಸಿದರು.

ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಪೊಲೀಸರು ಆರೋಪಿ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಕೌಟುಂಬಿಕ ಕಲಹ:ಇಬ್ಬರ ಮಕ್ಕಳ ಕೊಂದ ಪಾಪಿ ಅಪ್ಪ Read More

ಇನ್ಸ್ಪೆಕ್ಟರ್ ಸಮಯಪ್ರಜ್ಞೆಯಿಂದ ತಂದೆ,ಮಗ ಪ್ರಾಣಾಪಾಯದಿಂದ ಪಾರು

ಮೈಸೂರು: ಸತತ ಮಳೆಯಿಂದ ಕಾವೇರಿ ತುಂಬಿ ಹರಿಯುತ್ತಿದ್ದಾಳೆ, ಕೆಆರ್ ಎಸ್ ಡ್ಯಾಮ್ ಗೆ ಒಳ ಹರಿವು‌ ಜಾಸ್ತಿಯಾಗಿದೆ,,ಜಲಾಶಯದಿಂದ ಹೆಚ್ಚಿನ ನೀರನ್ನು ಹೊರಬಿಡಲಾಗುತ್ತದೆ ನದಿಪಾತ್ರಕ್ಕೆ ಜನ ಬರಬಾರದು ಎಂದು ಎಚ್ಚರಿಕೆ ನೀಡಿದ್ದರೂ ಜನ ಬಂದು ತೊಂದರೆಗೆ ಸಿಲುಕುತ್ತಿದ್ದಾರೆ.

ಏನೋ ಅದೃಷ್ಟವಶಾತ್ ಪೊಲೀಸ್ ಇನ್ಸ್ಪೆಕ್ಟರ್ ಅವರ ಸಮಯಪ್ರಜ್ಞೆಯಿಂದ ತಂದೆ,ಮಗ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ.

ನದಿಯಲ್ಲಿ ಸಿಲುಕಿದ್ದವರ ರಕ್ಷಣೆಗೆ ಬನ್ನೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮನೋಜ್ ಕುಮಾರ್ ಧಾವಿಸಿದ್ದರಿಂದ ತಂದೆ ಮಗ ಬದುಕುಳಿದಿದ್ದಾರೆ.

ಬನ್ನೂರಿನ ಕಾವೇರಿ ನದಿಯಲ್ಲಿ ಈ ಘಟನೆ ನಡೆದಿದ್ದು,ಬನ್ನೂರಿನ ಕೃಷ್ಣೆಗೌಡ ಹಾಗೂ ಅವರ ಪುತ್ರ ಪ್ರವೀಣ್ ಅವರನ್ನು ರಕ್ಷಿಸಲಾಗಿದೆ.

ಹಸು ಮೇಯಿಸಲು ತೆರಳಿದ್ದ ತಂದೆ ಮಗ ನದಿಯಲ್ಲಿ ಸಿಲುಕಿದ್ದಾರೆ, ಈ ವೇಳೆ ಕೆಆರ್ ಎಸ್ ಡ್ಯಾಮ್ ನಿಂದ ನದಿಗೆ ನೀರು ಬಿಟ್ಟ ಪರಿಣಾಮ ನೀರಿನ ಸೆಳೆತಕ್ಕೆ ಸಿಲುಕಿ ತಂದೆ ಮಗ ತೊಂದರೆಗೊಳಗಾದರು.

ಇದನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ಮನೋಜ್ ಕುಮಾರ್‌ ಅವರು ತೆಪ್ಪ ನಡೆಸುವವರ ಸಹಾಯದಿಂದ ನದಿಯಲ್ಲಿ ಸಿಲುಕಿದ್ದ ಅಪ್ಪ ಮಗನನ್ನು ರಕ್ಷಣೆ ಮಾಡಿದ್ದಾರೆ.

ಇನ್ಸ್ಪೆಕ್ಟರ್ ಮನೋಜ್ ಕುಮಾರ್ ಸಮಯಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ಸ್ಪೆಕ್ಟರ್ ಸಮಯಪ್ರಜ್ಞೆಯಿಂದ ತಂದೆ,ಮಗ ಪ್ರಾಣಾಪಾಯದಿಂದ ಪಾರು Read More

ತಂದೆ,ತಾಯಿಯನ್ನ ಕೊಂದ ನೀಚ ಪುತ್ರ

ಪುಣೆ: ಚೆನ್ನಾಗಿ ಓದಿ ಪರೀಕ್ಷೆ ಪಾಸು ಮಾಡಿ ಮುಂದಕ್ಕೆ ಬಾ ಎಂದು ಬುದ್ದಿ ಮಾತು ಹೇಳಿದ ತಂದೆ,ತಾಯಿಯನ್ನೇ ನೀಚ ಮಗ ಹಣದ

ಇಂಜಿನಿಯರಿಂಗ್ ಎಕ್ಸಾಂನಲ್ಲಿ ಫೇಲ್ ಆಗಿದ್ದ ಮಗನಿಗೆ ಚೆನ್ನಾಗಿ ಓದಿ ಮುಂದೆ ಬಾ ಎಂದು ಬುದ್ದಿ ಹೇಳಿದ್ದಕ್ಕೆ ಕೋಪಗೊಂಡ ಮಗ ತಂದೆ ತಾಯಿಯನ್ನೆ ಕೊಲೆ ಮಡಿರುವ ಅತ್ಯಂತ ಹೇಯ ಘಟನೆಮಹಾರಾಷ್ಟ್ರದ ನಾಗುರದಲ್ಲಿ
ನಡೆದಿದೆ.

ಲೀಲಾತ್ಕರ್ ದಾಕೋಲೆ ಹಾಗೂ ಅರುಣಾ ದಾಕೋಲೆ ಮಗನಿಂದ ಕೊಲೆಯಾದ ತಂದೆ,ತಾಯಿ.

ಡಿ.26 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಗ ಉತ್ಕರ್ಶ್ ದಾಕೋಲೆ ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉತ್ಕರ್ಶ್ ಕೆಲವು ಸಭೆಕ್ಟ್ ನಲ್ಲಿ ಫೇಲ್ ಆಗಿದ್ದ. ಚೆನ್ನಾಗಿ ಓದುವಂತೆ ಪೋಷಕರು ಹೇಳುತ್ತಿದ್ದರು.ಜತೆಗೆ ಮಗ ಓದುತ್ತಿರುವ ಕಾಲೇಜು ಬದಲಾವಣೆ ಮಾಡುವಂತೆ ಸೂಚಿಸಿದ್ದರು. ಇದಕ್ಕೆ ಕೋಪಗೊಂಡಿದ್ದ ಉತ್ಕರ್ಶ್ ಚಾಕುವಿನಿಂದ ಇರಿದು ಅಪ್ಪ ಹಾಗೂ ಅಮ್ಮನನ್ನು ಕೊಲೆ ಮಾಡಿದ.

ತಂಗಿಯನ್ನ ಸಂಬಂಧಿಕರ ಮನೆಗೆ ಕಳುಹಿಸಿ,ಅಒ್ಪ,ಅಮ್ಮ ಮೆಡಿಟೇಶನ್ ತರಬೇತಿಗೆ ಬೇರೆಕಡೆ ಹೋಗಿದ್ದಾರೆ ಎಂದು ಹೇಳುದ್ದ.

ಆದರೆ ಒಂದೆರಡು ದಿನದಲ್ಲಿ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡು ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ‌ ಬಂದಾಗ ಕೊಲೆ ವಿಷಯ ಬೆಳಕಿಗೆ ಬಂದಿದೆ‌.

ತಂದೆ,ತಾಯಿಯನ್ನ ಕೊಂದ ನೀಚ ಪುತ್ರ Read More

ನಾಲ್ವರು ಪುತ್ರಿಯರೊಂದಿಗೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ನವದೆಹಲಿ: ವ್ಯಕ್ತಿಯೊಬ್ಬ ತನ್ನ ನಾಲ್ಕು ಪುತ್ರಿಯರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವದೆಹಲಿಯ ರಂಗಪುರಿ ಪ್ರದೇಶದಲ್ಲಿ ನಡೆದಿದೆ.

ಮನೆಯೊಳಗಿಂದ ಕೆಟ್ಟ ವಾಸನೆ ಬರುತ್ತಿದ್ದನ್ನು ಸಹಿಸಲಾಗದೆ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತರು ರಂಗಪುರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಎಲ್ಲರೂ ಮೂಲತಃ ಬಿಹಾರದ ಛಪ್ರಾ ಜಿಲ್ಲೆಯ ನಿವಾಸಿಗಳು.

ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ ಹೀರಾಲಾಲ್ ಶರ್ಮಾ (46) ಮತ್ತು ಅವರ ಪುತ್ರಿಯರಾದ ನೀತು (26), ನಿಕ್ಕಿ (24), ನೀರೂ( 23), ಮತ್ತು ನಿಧಿ (20) ಎಂದು ಗುರುತಿಸಲಾಗಿದೆ.

ನಾಲ್ಕೂ ಹೆಣ್ಣು ಮಕ್ಕಳು ಜತೆಗೆ ಅವರಲ್ಲಿ ಇಬ್ಬರು ವಿಕಲಚೇತನರು,ಮಕ್ಕಳ ತಾಯಿ ಈಗಾಗಲೇ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದು ತಂದೆ ಮಕ್ಕಳನ್ನು ಮದುವೆ ಮಾಡಲಾಗದೆ‌ ಅವರ‌ ಔಷಧಿಗೆ‌ ಹಣ ಹೊಂದಿಸಲಾಗದೆ ಅಸಹಾಯಕನಾಗಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ

ಪೊಲೀಸರು ಮನೆಯ ಬೀಗ ಒಡೆದು ಎಲ್ಲಾ ಶವಗಳನ್ನು ಹೊರತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮನೆಯ ಒಂದು ರೂಮ್ ನಲ್ಲಿ ತಂದೆಯ ಶವ‌ ಪತ್ತೆಯಾಗಿದೆ.ಮತ್ತೊಂದು ಕೊಠಡಿಯಲ್ಲಿ ನಾಲ್ಕು ಹೆಣ್ಣು ಮಕ್ಕಳ ದೇಹ ಪತ್ತೆಯಾಗಿದೆ.

ಜತೆಗೆ ಮೂರು ಪ್ಯಾಕೆಟ್‌ ಸಲ್ಫರ್,ಒಂದು‌ ಗ್ಲಾಸ್,ಸ್ಪೂನ್ ಸಿಕ್ಕಿದ್ದು ವಿಷ‌ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ವರು ಪುತ್ರಿಯರೊಂದಿಗೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ Read More