ರಾಜ್ಯ ಸರ್ಕಾರ ರೈತರನ್ನು ಪೂರ್ಣವಾಗಿ ನಿರ್ಲಕ್ಷಿಸಿದೆ:ಅಶೋಕ್

ಬೆಂಗಳೂರು: ಅಧಿಕಾರ ಹಸ್ತಾಂತರ, ಸಂಪುಟ ವಿಸ್ತರಣೆ, ಆರ್ ಎಸ್ಎಸ್ ನಿಷೇಧ, ಬುರುಡೆ ಪ್ರಕರಣ ಹೀಗೆ ಅನವಶ್ಯಕ ಗೊಂದಲಗಳಲ್ಲೇ ಮುಳುಗಿ ಕಾಲಹರಣ ಮಾಡುತ್ತಾ‌ ರಾಜ್ಯ ಸರ್ಕಾರ ರೈತರನ್ನು ಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಕಾಟಾಚಾರಕ್ಕೆ ವೈಮಾನಿಕ ಸಮೀಕ್ಷೆ ಮಾಡಿ 30 ದಿನಗಳೊಳಗೆ ನೆರೆ ಪರಿಹಾರ ಕೊಡುತ್ತೇವೆ ಎಂದು ಹೇಳಿದಿರಲ್ಲ ಸಿದ್ದರಾಮಯ್ಯ ನವರೇ, ಎಲ್ಲಿ ಹೋಯಿತು ನಿಮ್ಮ ನುಡಿಯಂತೆ ನಡೆಯುವ ಸರ್ಕಾರದ ಬದ್ಧತೆ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಪಾಪ ನೀವು ತಾನೇ ಏನು ಮಾಡುತ್ತೀರಿ ಬಿಡಿ. ಅತ್ತ ರಾಹುಲ್ ಗಾಂಧಿ ಅವರು ಭೇಟಿ ಮಾಡುವುದಕ್ಕೂ ಸಮಯ ಕೊಡುತ್ತಿಲ್ಲ. ಇತ್ತ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಡೆಡ್ ಲೈನ್ ಮೇಲೆ ಡೆಡ್ ಲೈನ್ ಕೊಟ್ಟರೂ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಇನ್ನು ನೆರೆ ಪರಿಹಾರ, ಕಬ್ಬು, ಜೋಳ ಬೆಳೆಗಾರರಿಗೆ ಹೆಚ್ಚುವರಿ ಬೆಂಬಲ ಬೆಲೆ ಕೊಡಬೇಕು ಅಂದರೆ ನಿಮ್ಮ ಮಾತು ಯಾರು ಕೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಅಯ್ಯೋ ಸಿಎಂ ಸಿದ್ದರಾಮಯ್ಯನವರ ಅಸಹಾಯಕತೆ ನೋಡಿದರೆ ನಿಜಕ್ಕೂ ಕನಿಕರ ಮೂಡುತ್ತಿದೆ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.

ರಾಜ್ಯ ಸರ್ಕಾರ ರೈತರನ್ನು ಪೂರ್ಣವಾಗಿ ನಿರ್ಲಕ್ಷಿಸಿದೆ:ಅಶೋಕ್ Read More

ಕಾನೂನು ತೊಡಕು ನಿವಾರಿಸಿ ರೈತರ ಸಭೆ- ಸಿದ್ದರಾಮಯ್ಯ

ಬೆಂಗಳೂರು: ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಂತಿಮ ಅಧಿಸೂಚನೆಯಾಗಿದ್ದು, ಈ ಬಗ್ಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಿ ರೈತರ ಸಭೆ ಕರೆಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ದೇವನಹಳ್ಳಿಯ ಚನ್ನರಾಯಪಟ್ಟಣದ ರೈತ ಹೋರಾಟಗಾರರು, ಸ್ಥಳೀಯ ಮುಖಂಡರು ಹಾಗೂ ಹೋರಾಟ ಒಕ್ಕೂಟದ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಸಿಎಂ ಮಾತನಾಡಿದರು.

ಈ ಸಂಬಂಧ ಕಾನೂನು ಸಮಸ್ಯೆ ನಿವಾರಿಸಲು ಸರ್ಕಾರಕ್ಕೆ ಹತ್ತು ದಿನಗಳ ಕಾಲಾವಕಾಶ ಬೇಕಿದೆ, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಂಡು ಜುಲೈ 15 ರಂದು ರೈತ ಹೋರಾಟಗಾರರೊಂದಿಗೆ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಎಂ ಎಲ್ ಸಿ ರವಿಕುಮಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ,ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕಾನೂನು ತೊಡಕು ನಿವಾರಿಸಿ ರೈತರ ಸಭೆ- ಸಿದ್ದರಾಮಯ್ಯ Read More

ಹಕ್ಕಿಗಾಗಿ ಹೋರಾಡುತ್ತಿರುವ ರೈತರ ಬಂಧನ ಅಮಾನವೀಯ- ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ದೇವನಹಳ್ಳಿ ಚಲೋ ಪ್ರತಿಭಟನೆ ವೇಳೆ ರೈತರನ್ನು ಏಕಾಏಕಿ ಬಂಧಿಸಿರುವ ಪೊಲೀಸರ ಕ್ರಮ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದ ಅಮಾನವೀಯ ನಡೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಖಂಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ನಾಡಿನ ಎಲ್ಲ ಜನತೆ ಖಂಡಿಸಬೇಕಾಗುತ್ತದೆ ಎಂದು ಹೇಳಿದರು.

ದೇವನಹಳ್ಳಿಯಲ್ಲಿ ಸಾವಿರಾರು ರೈತರು ತಮ್ಮ ವಂಶಾನುಗತ ಕೃಷಿ ಭೂಮಿ ಹಕ್ಕಿಗಾಗಿ ಸಾವಿರ ದಿವಸಗಳಿಂದ ಹೋರಾಟ ನಡೆಸುತ್ತಿದ್ದಾರೆ. ಮಹಿಳೆಯರು ವೃದ್ಧರು ಎಂಬುದನ್ನು ಸಹ ಪರಿಗಣಿಸದೆ ಪೊಲೀಸರು ಬಂಧನದ ವೇಳೆಯಲ್ಲಿ ನಡೆಸಿದ ದೌರ್ಜನ್ಯ ಯಾವುದೇ ನಾಗರೀಕ ಸಮಾಜ ತಲೆತಗ್ಗಿಸುವಂಥದ್ದು ಎಂದು ಚಂದ್ರು ಕಿಡಿಕಾರಿದರು.

ಈ ಹಿಂದೆ ಯಡಿಯೂರಪ್ಪನವರಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸಿದ್ದಾರೆ. ಈಗ ಸಿದ್ದರಾಮಯ್ಯನವರಿಗೊ ಸಹ ರಾಜ್ಯದ ಜನ ತಕ್ಕಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ. ಈ ಘಟನೆಗೆ ಸರ್ಕಾರ ಉತ್ತರದಾಯಿತ್ವವಾಗಿರುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವ ಎಲ್ಲ ರೈತಾಪಿ ವರ್ಗಗಳ ಮೇಲೆ ಈ ರೀತಿಯ ದೌರ್ಜನ್ಯವನ್ನು ಪಕ್ಷವು ಖಂಡಿಸುತ್ತದೆ ಮತ್ತು ಅವರ ಹೋರಾಟದಲ್ಲಿ ಸದಾಕಾಲ ನಿಲ್ಲುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಭರವಸೆ ನೀಡಿದರು.

ಹಕ್ಕಿಗಾಗಿ ಹೋರಾಡುತ್ತಿರುವ ರೈತರ ಬಂಧನ ಅಮಾನವೀಯ- ಮುಖ್ಯಮಂತ್ರಿ ಚಂದ್ರು Read More

೧೧ ರಿಂದ ೬ ಗಂಟೆವರೆಗೆ ವಿದ್ಯುತ್ ಪೂರೈಕೆ:ಮೇಲಾಧಿಕಾರಿಗಳ ಜತೆ ಚರ್ಚಿಸಿ ಕ್ರಮ-ತಬಸ್ಸುಮ್

ಕೊಳ್ಳೇಗಾಲ: ಕೃಷಿ ಸಂಬಂಧ ರೈತರು ಕೇಳಿದಂತೆ ೧೧ ರಿಂದ ೬ ಗಂಟೆಯವರೆಗೆ ವಿದ್ಯುತ್ ಪೂರೈಕೆ ಬಗ್ಗೆ ಮೇಲಾಧಿಕಾರಿಗಳ ಜೊತೆ ಮಾತನಾಡಿ ಮುಂದಿನ ದಿನಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಚೆಸ್ಕಾಂ ಕಾರ್ಯಪಾಲಕ ಅಭಿಯಂತರರಾದ ತಬಸ್ಸುಮ್ ಭರವಸೆ ನೀಡಿದರು.

ನಿರಂತರ ಜ್ಯೋತಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗದಂತೆ ಜಾಗೃತಿ ವಹಿಸುವಂತೆ ಲೈನ್ ಮೆನ್ ಗಳಿಗೆ ತಿಳಿಸಲಾಗುವುದು ಎಂದು ತಿಳಿಸಿದರು.

ಪಟ್ಟಣದ ಚೆಸ್ಕಾಂ ಉಪವಿಭಾಗ ಕಚೇರಿ ಸಭಾಂಗಣದಲ್ಲಿ ನಡೆದ ನಾಲ್ಕನೇ ತ್ರೈಮಾಸಿಕ ಅವಧಿಯ ಸಾರ್ವಜನಿಕ ಸಂಪರ್ಕ ಸಭೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿರು ಹಾಗೂ ರೈತರು, ಕೃಷಿ ಅವಲಂಬಿತ ರೈತರಿಗೆ ವಿದ್ಯುತ್ ಪೂರೈಕೆ ಕೊರತೆ, ಬೀದಿ ದೀಪ ನಿರ್ವಹಣೆ, ನಿರಂತರ ಜ್ಯೋತಿ ಯೋಜನೆಯಲ್ಲಿನ ವಿದ್ಯುತ್ ಕೊರತೆ ಬಗ್ಗೆ ಮತ್ತು ಗ್ರಾಮಗಳಿಗೆ ನಿಯೋಜಿಸಿರುವ ಲೈನ್ ಮೆನ್ ಗಳ ಕರ್ತವ್ಯ ಲೋಪದ ಬಗ್ಗೆ ಆರೋಪಗಳು ಕೇಳಿಬಂದವು. ಕೃಷಿಗೆ ಅನುಕೂಲವಾಗುವಂತೆ ವಿದ್ಯುತ್ ಪೂರೈಕೆ ಮಾಡಿಕೊಡಬೇಕೆಂದು ರೈತರಿಂದ ಬೇಡಿಕೆಗಳು ಕೇಳಿಬಂದವು.

ಈ ವೇಳೆ ಸಭೆಯ ನೇತೃತ್ವ ವಹಿಸಿದ್ದ ತಬಸ್ಸುಮ್ ಅವರು ಮಾತನಾಡಿ, ಎಲ್ಲೆಲ್ಲಿ ಸಮಸ್ಯೆಗಳಿವೆ ಎಂಬುದರ ಬಗ್ಗೆ ನಮ್ಮ ಇಲಾಖೆ ಸಿಬ್ಬಂದಿಗಳಿಂದ ತಪಾಸಣೆ ನಡೆಸಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು, ಹಾಗೂ ರೈತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುವುದು ಬೀದಿ ದೀಪಗಳ ನಿರ್ವಹಣೆಯ ಬಗ್ಗೆ ಆಯಾ ಗ್ರಾಮ ಪಂಚಾಯಿತಿಗಳಿಗೆ ಕ್ರಮವಹಿಸುವಂತೆ ಮಾರ್ಗದರ್ಶನ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ರಾಜು ಅವರು ಮಾತನಾಡಿ ಸಭೆಯಲ್ಲಿ ರೈತರಿಂದ ಬಂದಿರುವ ದೂರುಗಳು ಮತ್ತು ಸಮಸ್ಯೆಗಳ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳು ತಿಳಿಸಿದಂತೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು ಹಾಗೂ ಇಲಾಖೆ ಲೈನ್ ಮೆನ್ ಗಳಿಂದ ಮುಂದಿನ ದಿನಗಳಲ್ಲಿ ಕರ್ತವ್ಯಲೋಪವಾಗದಂತೆ ಕ್ರಮ ವಹಿಸುತ್ತೇವೆ, ರೈತರ ಕೃಷಿ ಜಮೀನುಗಳಿಗೆ ಟಿಸಿ ಹಾಕುವುದಕ್ಕೆ ಸ್ಥಳ ಪರಿಶೀಲನೆ ನಡೆಸಿ ಒಂದು ಅಥವಾ ಎರಡು ಪಂಪ್ ಸೆಟ್ ಗೆ ಎಷ್ಟು ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ಕಂಬಗಳು ಬೇಕಾಗುತ್ತವೆ. ಎರಡಕ್ಕಿಂತ ಹೆಚ್ಚು ಪಂಪ್ ಸೆಟ್ ಗಳಿಗೆ ಎಷ್ಟು ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ಕಂಬಗಳು ಬೇಕಾಗುತ್ತವೆ. ಎಂಬ ಬಗ್ಗೆ ಅಕ್ಕಪಕ್ಕದ ಜಮೀನುಗಳಲ್ಲಿ ಕಂಬಗಳನ್ನು ಹಾಕಿಸಿ ವಿದ್ಯುತ್ ಪೂರೈಕೆ ಮಾಡಿಕೊಡಲಾಗುವುದು ಇಲಾಖೆ ನಿಗದಿ ಪಡಿಸಿದ ಮೊತ್ತವನ್ನು ಬಿಟ್ಟು ಬೇರೆ ಯಾರಿಗೂ ಹಣ ಕೊಡಬೇಕಾಗಿಲ್ಲ ಒಂದು ವೇಳೆ ಯಾರಾದರು ನಿಮ್ಮ ಬಳಿ ಹಣ ಕೇಳಿದರೆ ನಮಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

೧೧ ರಿಂದ ೬ ಗಂಟೆವರೆಗೆ ವಿದ್ಯುತ್ ಪೂರೈಕೆ:ಮೇಲಾಧಿಕಾರಿಗಳ ಜತೆ ಚರ್ಚಿಸಿ ಕ್ರಮ-ತಬಸ್ಸುಮ್ Read More

ಸದಾ ರೈತ ಕುಲದ ಪರವಾಗಿ ಇರುತ್ತೇನೆ- ಸಿಎಂ ಭರವಸೆ

ಬೆಂಗಳೂರು: ರೈತರ ಬೇಡಿಕೆಗಳನ್ನು ನಿರಂತರವಾಗಿ ಹಂತ ಹಂತವಾಗಿ ಈಡೇರಿಸುತ್ತಲೇ ಇದ್ದೇವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿಗಳು ರೈತ ಸಂಘದ ಮುಖಂಡರುಗಳೊಂದಿಗೆ 2025-26ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಅತಿ ಹೆಚ್ಚು ಉದ್ಯೋಗ ಅವಲಂಭನೆ ಇರುವುದು ಕೃಷಿಯಲ್ಲೇ ಆದ್ದರಿಂದ ರೈತರ ಬೇಡಿಕೆಗಳಿಗೆ ನಮ್ಮದು ಪ್ರಥಮ ಆಧ್ಯತೆ, ನಾನು ಸದಾ ರೈತ ಕುಲದ ಪರವಾಗಿ ಇರುತ್ತೇನೆ ಎಂದು ಭರವಸೆ ನೀಡಿದರು.

ಸಭೆಯ ಪ್ರಾರಂಭಕ್ಕೂ ಮುನ್ನ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ರೈತ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಸುಗ್ರೀವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್ ಗಳ ಬಲವಂತದ ವಸೂಲಿಗೆ ಕಡಿವಾಣ ಹಾಕಿದ್ದಕ್ಕಾಗಿ ರೈತ ಮುಖಂಡರು ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರವನ್ನು ಅಭಿನಂಧಿಸಿದರು.

ಸದಾ ರೈತ ಕುಲದ ಪರವಾಗಿ ಇರುತ್ತೇನೆ- ಸಿಎಂ ಭರವಸೆ Read More

ರೈತರಿಗೆ ನೀಡಿದ್ದ ನೋಟೀಸ್ ಹಿಂಪಡೆಯಲು ಆದೇಶಿಸಿದ ಸಿಎಂ ನಡೆ ಸ್ವಾಗತಾರ್ಹ: ತೇಜಸ್ವಿ

ಮೈಸೂರು: ರಾಜ್ಯಾದ್ಯಂತ ವಕ್ಫ್ ಮಂಡಳಿ ರೈತರ ಜಮೀನುಗಳಿಗೆ ನೀಡಿದ್ದ ನೋಟೀಸ್ ಹಿಂಪಡೆಯಲು ಆದೇಶಿಸಿದ ಸಿದ್ದರಾಮಯ್ಯ ಅವರ ನಡೆ ಸ್ವಾಗತಾರ್ಹ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.

ವಿನಾಕಾರಣ ವಕ್ಫ್ ಮಂಡಳಿ ಸರಿಯಾದ ದಾಖಲಾತಿ ಇಲ್ಲದೆ ರಾಜ್ಯಾದ್ಯಂತ ಬಡ ರೈತರ‌ ಜಾಮೀನು ಮತ್ತು ಮಠ ಮಾನ್ಯಗಳ ಮೇಲೆ ನೋಟೀಸ್ ನೀಡಿ ಸಮಾಜದಲ್ಲಿ ಗೊಂದಲ ಉಂಟುಮಾಡಿ ಅಶಾಂತಿ ಉಂಟು ಆಗುತ್ತಿದೆ.

ಇದನ್ನು ಮನಗಂಡು ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ನೋಟಿಸ್ ನೀಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಆದೇಶಿಸಿರುವುದು ರೈತರ ಮತ್ತು ಮಠಮಾನ್ಯಗಳ ಮೇಲಿರುವ ಪ್ರೀತಿ ಮತ್ತು ಗೌರವ ವನ್ನು ತೋರುತ್ತದೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ದೇಶದ ಬೆನ್ನೆಲುಬು ಮತ್ತು ಅನ್ನದಾತ ರೈತರಿಗೆ ಸಮಸ್ಯೆ ಆಗದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪರಿಹಾರ ನೀಡುತ್ತಾರೆ ಎಂದು ತೇಜಸ್ವಿ ವಿಶ್ವಾದ ವ್ಯಕ್ತಪಡಿಸಿದ್ದಾರೆ.

ರೈತರಿಗೆ ನೀಡಿದ್ದ ನೋಟೀಸ್ ಹಿಂಪಡೆಯಲು ಆದೇಶಿಸಿದ ಸಿಎಂ ನಡೆ ಸ್ವಾಗತಾರ್ಹ: ತೇಜಸ್ವಿ Read More

ಹೆಲ್ಮೆಟ್ ವಿರೋಧಿಸಿ ರೈತರ ಪ್ರತಿಭಟನೆ

ಮೈಸೂರು: ಹೆಲ್ಮೆಟ್ ಧರಿಸುವ ವ್ಯವಸ್ಥೆಯನ್ನ ಕೈಬಿಡುವಂತೆ ಆಗ್ರಹಿಸಿ ಬನ್ನೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಹೆಲ್ಮೆಟ್ ಧರಿಸದ ವಾಹನ ಸವಾರರ ಮೇಲೆ ದಂಡ ವಿಧಿಸಲಾಗಿದೆ.ಸಾವಿರಾರು ರೂಗಳನ್ನ ಪಾವತಿಸುವಂತೆ ವಾಹನ ಸವಾರರಿಗೆ ನೋಟೀಸ್ ಬಂದಿದೆ ಇದರಿಂದ ಬಡಜನರಿಗೆ ತೊಂದರೆ ಆಗುತ್ತಿದೆ ಎಂದು ಪ್ರತಿಭಟನಾ ನಿರತರು ದೂರಿದರು.

ಹೆಲ್ಮೆಟ್ ವ್ಯವಸ್ಥೆಯನ್ನ ಕೈಬಿಡುವಂತೆ ಆಗ್ರಹಿಸಿ ರೈತ ಮುಖಂಡ ಬನ್ನೂರು ನಾರಾಯಣ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ವೃತ್ತಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳನ್ನ ತೆರುವುಗೊಳಿಸಬೇಕು,ದಂಡದಿಂದ ಮುಕ್ತಗೊಳಿಸಬೇಕೆಂದು ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶಿವರಾಮು,ಪಾರ್ಥ, ಮಹದೇವು,ಚಂದ್ರು ರಾಜು,ಚೇತನ್, ಜೈರಾಮ್, ಜೈರಾಮ್, ಪುಟ್ಟಸ್ವಾಮಿ,ಆಮದ್ ಬಾಬು,ದೊರೆಸ್ವಾಮಿ, ನಾಗಣ್ಣ,ಸ್ವಾಮೀರಾಜು, ಎತ್ತಿನ ಗಾಡಿ ಕೆಂಚ ಕುಮಾರ,ಉಮೇಶ, ಲಕ್ಷ್ಮಣ,ನಾಗಣ್ಣ ಮತ್ತಿತರರು ಭಾಗವಹಿಸಿದ್ದರು.

ಹೆಲ್ಮೆಟ್ ವಿರೋಧಿಸಿ ರೈತರ ಪ್ರತಿಭಟನೆ Read More